ಎನ್‌ಆರ್‌ಐ ಗಂಡನ ಆಸ್ತಿ ಜಪ್ತಿ


Team Udayavani, Feb 15, 2018, 8:50 AM IST

nri.jpg

ಪಂಜಾಬ್‌ ರಾಜ್ಯ ವೊಂದರಲ್ಲೇ 35,000 ಅನಿವಾಸಿ ಭಾರತೀಯ ಗಂಡಂದಿರಿಂದ ಪರಿತ್ಯಕ್ತರಾದ ಪತ್ನಿಯರಿದ್ದಾರೆ. ಗುಜರಾತ್‌, ಕೇರಳ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲೂ ಈ ಪಿಡುಗು ವ್ಯಾಪಕವಾಗಿದೆ.

ಮದುವೆಯ ಬಳಿಕ ಪತ್ನಿಯನ್ನು ಭಾರತದಲ್ಲೇ ತ್ಯಜಿಸಿ ಕಾನೂನಿನ ಕೈಗೆ ಸಿಗದಂತೆ ನಾಪತ್ತೆಯಾಗುವ ಎನ್‌ಆರ್‌ಐ ಗಂಡಂದಿರಿಗೆ ತಕ್ಕ ಪಾಠ ಕಲಿಸುವ ಸಲುವಾಗಿ ಅವರ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳುವ ಪ್ರಸ್ತಾವ ಸಮಯೋಚಿತವಾಗಿದೆ. ಮನೇಕಾ ಗಾಂಧಿ ನೇತೃತ್ವದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಇಟ್ಟಿರುವ ಈ ನಡೆಯಿಂದ ಶೋಷಿತ ಮಹಿಳೆಯರಿಗೆ ಭಾರೀ ಪ್ರಯೋಜನವಾಗಲಿದೆ. ಬಹಳ ಕಾಲದಿಂದ ನನೆಗುದಿಗೆ ಬಿದ್ದಿದ್ದ ಈ ಸಮಸ್ಯೆಯನ್ನು ಮನೇಕಾ ಗಾಂಧಿ ಆದ್ಯತೆಯಲ್ಲಿ ಪರಿಗಣಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ನಮ್ಮಲ್ಲಿ ವಿದೇಶಿ ವರ ಎಂದರೆ ಏನೋ ಒಂದು ರೀತಿಯ ವಿಚಿತ್ರ ಆಕರ್ಷಣೆ. ವಿದೇಶದಲ್ಲಿರುವ ಗಂಡಿನ ಮದುವೆ ಪ್ರಸ್ತಾವ ಬಂದರೆ ಹಿಂದೆಮುಂದೆ ವಿಚಾರಿಸದೆ ಒಪ್ಪಿಕೊಂಡು, ಸಾಲಸೋಲ ಮಾಡಿಯಾದರೂ ಅದ್ದೂರಿಯಾಗಿ ಮದುವೆ ಮಾಡಿಕೊಡುವ ತಂದೆ-ತಾಯಿ ಇದ್ದಾರೆ. ಅಳಿಯ ಎನ್‌ಆರ್‌ಐ ಆದರೆ ಸಮಾಜದಲ್ಲೊಂದು ಪ್ರತಿಷ್ಠೆ ಎಂಬ ಭಾವನೆಯೇ ಇದಕ್ಕೆ ಕಾರಣ.

ಈ ಪ್ರತಿಷ್ಠೆಯ ಧಾವಂತದಲ್ಲಿ ಹುಡುಗನಿಗೆ ವಿದೇಶದಲ್ಲಿರುವ ನೌಕರಿ ಏನು, ಆದಾಯವೆಷ್ಟು ಇತ್ಯಾದಿ ಮಾಹಿತಿಗಳನ್ನು ವಿಚಾರಿಸುವ ಗೋಜಿಗೆ ಹೋಗುವುದಿಲ್ಲ. ಹೆತ್ತವರ ಈ ಪ್ರತಿಷ್ಠೆಯನ್ನು ಬಳಸಿಕೊಂಡು ಸುಳ್ಳು ಹೇಳಿ ಮದುವೆಯಾಗಿರುವ ಅನೇಕ ಪ್ರಕರಣಗಳಿವೆ. ಇಂತಹ ಪ್ರಕರಣಗಳಲ್ಲಿ ಮದುವೆಯಾದ ಬಳಿಕ ಮೋಸ ಹೋದದ್ದು ಅರಿವಾಗಿ ಅಸಹಾಯಕತೆ ಯಿಂದ ಕಣ್ಣೀರಿಡುತ್ತಿರುವ ಅನೇಕ ನತದೃಷ್ಟ ಹೆಣ್ಣು ಮಕ್ಕಳಿಗೆ ಈ ಕಾನೂನಿಂದ ಪರಿಹಾರ ಸಿಗಬಹುದು. 

ಹೆಚ್ಚಿನ ಪ್ರಕರಣಗಳಲ್ಲಿ ಮದುವೆ ಯಾದ ಬಳಿಕ ಹೆಂಡತಿಯನ್ನು ಗಂಡ ತನ್ನ ಜತೆಗೆ ಕರೆದುಕೊಂಡು ಹೋಗದೆ ಭಾರತದಲ್ಲೇ ಬಿಟ್ಟು ಹೋಗುತ್ತಾನೆ. ಅನಂತರ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದರೂ ಸಮನ್ಸ್‌ಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ತಪ್ಪಿಸಿಕೊಳ್ಳು ತ್ತಾನೆ. ಇಂತಹ ಪ್ರಕರಣಗಳಲ್ಲಿ 3 ಸಮನ್ಸ್‌ಗೆ ಪ್ರತಿಸ್ಪಂದನ ಬಾರದಿದ್ದರೆ ಗಂಡನ ಅಥವಾ ಅವನ ಹತ್ತಿರ ಸಂಬಂಧಿಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಹೆಂಡತಿಗೆ ಪರಿಹಾರ ನೀಡಬೇಕು ಎನ್ನುತ್ತದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಇಟ್ಟಿರುವ ಪ್ರಸ್ತಾವ. ಇದಕ್ಕಾಗಿ ಅಪರಾಧ ದಂಡ ಸಂಹಿತೆಗೆ ತಿದ್ದುಪಡಿ ಮಾಡುವ ಅಗತ್ಯವಿದೆ. 

ಕಳೆದ ಸುಮಾರು ಎರಡು ದಶಕಗಳಿಂದೀಚೆಗೆ ಎನ್‌ಆರ್‌ಐ ಕೌಟುಂಬಿಕ ಸಮಸ್ಯೆ ಎನ್ನುವುದು ಕಳವಳಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದಕ್ಕೆ ಅಂಕಿಅಂಶಗಳೇ ಸಾಕ್ಷಿ ಹೇಳುತ್ತಿವೆ. ಪಂಜಾಬ್‌ ರಾಜ್ಯವೊಂದರಲ್ಲೇ ಸುಮಾರು 35,000 ಅನಿವಾಸಿ ಭಾರತೀಯ ಗಂಡಂದಿರಿಂದ ಪರಿತ್ಯಕ್ತರಾದ ಪತ್ನಿಯರಿದ್ದಾರೆ. ಗುಜರಾತ್‌, ಕೇರಳ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲೂ ಈ ಪಿಡುಗು ವ್ಯಾಪಕವಾಗಿದೆ ಎನ್ನುತ್ತದೆ ಒಂದು ಎನ್‌ಜಿಒ ನಡೆಸಿದ ಅಧ್ಯಯನ. ಎನ್‌ಆರ್‌ಐ ಮದುವೆಗಳ ಬಗ್ಗೆ ಸರಕಾರದ ಬಳಿಕ ಖಚಿತ ಅಂಕಿಅಂಶಗಳು ಇಲ್ಲದಿದ್ದರೂ 2015ರಲ್ಲಿ ವಿದೇಶಗಳ ದೂತವಾಸ ಕಚೇರಿಗಳಿಗೆ ಭಾರತೀಯ ಪತ್ನಿಯರಿಂದ 3000ಕ್ಕೂ ಅಧಿಕ ಕೌಟುಂಬಿಕ ಕಲಹ ದೂರುಗಳು ಬಂದಿರುವುದನ್ನು ಸರಕಾರ ಕಳೆದ ವರ್ಷ ಬಹಿರಂಗಪಡಿಸಿದೆ. ಮದುವೆಯಾದ ಬಳಿಕ ಹೆಂಡತಿಯನ್ನು ಬಿಟ್ಟು ವಿದೇಶಕ್ಕೆ ಪಲಾಯನ ಮಾಡುವಂತೆಯೇ ವಿದೇಶಕ್ಕೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡುವುದು ಇಲ್ಲವೇ ಅನಾಥರನ್ನಾಗಿ ಮಾಡುವುದು ಕೂಡ ಗಂಭೀರ ಸಮಸ್ಯೆಯೇ. ಇದರ ನಿವಾರಣೆಗೂ ಕಠಿಣ ಕಾನೂನು ರಚನೆಯಾಗುವ ಅಗತ್ಯವಿದೆ.  ಜಸ್ಟಿಸ್‌ ಅರವಿಂದ್‌ ಗೋಯಲ್‌ ನೇತೃತ್ವದ ಆಯೋಗ ಕಳೆದ ವರ್ಷ ಎಲ್ಲ ಎನ್‌ಆರ್‌ಐ ಮದುವೆಗಳ ನೋಂದಣಿಗೆ ಆಧಾರ್‌ ಕಡ್ಡಾಯ ಮಾಡಬೇಕು ಮತ್ತು ಮದುವೆಯಾದ ಒಂದು ವಾರದೊಳಗೆ ನೋಂದಣಿ ಮಾಡುವ ನಿಯಮ ಜಾರಿಗೆ ಬರಬೇಕು ಎಂದು ಶಿಫಾರಸು ಮಾಡಿತ್ತು. ಈ ಶಿಫಾರಸು ಕಾರ್ಯರೂಪಕ್ಕೆ ಬಂದರೆ ಎನ್‌ಆರ್‌ಐ ಮದುವೆಯಲ್ಲಾ ಗುವ ಬಹಳಷ್ಟು ವಂಚನೆಗಳನ್ನು ತಡೆಯ ಬಹುದು. ಹೊಸ ನಿಯಮ ರೂಪಿಸುವ ಸಾಧ್ಯತೆಯಿದ್ದರೆ ಈ ನಿಯಮವನ್ನು ಸೇರಿಸಿಕೊಳ್ಳುವ ಕುರಿತು ಚಿಂತಿಸಬೇಕು. ಇದೇ ವೇಳೆ ಎನ್‌ಆರ್‌ಐ ಪತಿಯನ್ನು ಶಿಕ್ಷಿಸುವ ಕಾನೂನು ದುರುಪಯೋಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಇದೆ. ವರದಕ್ಷಿಣೆ ಕಾಯಿದೆ ಮತ್ತು ಕೌಟುಂಬಿಕ ಹಿಂಸಾಚಾರವನ್ನು ತಡೆಯುವ ಕಾಯಿದೆಗಳು ಗಂಡ ಮತ್ತು ಅತ್ತೆಮನೆಯವರನ್ನು ಕಾನೂನಿನ ಬಲೆಗೆ ಕೆಡವಿ ಕಿರುಕುಳ ನೀಡಲು ಬಳಕೆಯಾಗುತ್ತಿರುವ ಕುರಿತು ಸ್ವತಹ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿತ್ತು. ಎನ್‌ಆರ್‌ಐ ಗಂಡನ ಬಹುತೇಕ ಆಸ್ತಿಗಳು ತಂದೆ ತಾಯಿಯ ಹೆಸರಿನಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಾಗ ಸಮಸ್ಯೆಗಳು ಉದ್ಭವಾಗ ಬಹುದು. ಹೊಸ ಕಾಯಿದೆಯಲ್ಲಿ ಈ ರೀತಿಯ ಲೋಪಗಳಿಗೆ ಆಸ್ಪದ ಇರಬಾರದು.

ಟಾಪ್ ನ್ಯೂಸ್

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

16-uv-fusion

Discipline: ಬದುಕಿನಲ್ಲಿ ಶಿಸ್ತಿರಲಿ

15-

Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

14-uv-fusion

Mother: ಅಮ್ಮನ ಜೀವನವೇ ಆದರ್ಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.