ಕಲರ್ ಕಲರ್ ಮ್ಯಾಜಿಕ್, ನಿಮ್ಮಿಷ್ಟದ ಬಣ್ಣ ಯಾವುದು?
Team Udayavani, Feb 15, 2018, 12:10 PM IST
ಮನೆಗೆ ಅತಿಥಿಗಳು ಬಂದಾಗ ಸಾಧಾರಾಣವಾಗಿ ಅಪ್ಪ-ಅಮ್ಮ ನಿಮ್ಮ ಬಗ್ಗೆ ಹೊಗಳುತ್ತಾರೆ. ನನ್ನ ಮಗ ಹಾಡುತ್ತಾನೆ, ಮಗಳು ಚೆನ್ನಾಗಿ ಡ್ಯಾನ್ಸ್ ಮಾಡುತ್ತಾಳೆ ಅಂತೆಲ್ಲಾ. ಆಗ ನಿಮಗೆ ಖುಷಿಯಾಗುತ್ತೆ ಅಲ್ವಾ? ಹಾಗೇ ಬಂದ ಅತಿಥಿಗಳ ಮುಂದೆ ಜಾದೂ ಮಾಡಿ ಅವರಿಂದ ಮತ್ತಷ್ಟು ಪ್ರಶಂಸೆ ಗಿಟ್ಟಿಸಿಕೊಳ್ಳೋಕೆ ಇಲ್ಲೊಂದು ಜಾದೂ ಇದೆ. ಮಾಡಿ ನೋಡ್ತೀರ ತಾನೇ?
ಬೇಕಾಗುವ ವಸ್ತುಗಳು: ಪ್ಲಾಸ್ಟಿಕ್ ಕಪ್‌ಗ್ಳು, ಐಸ್‌ಕ್ಯೂಬ್, ಫುಡ್ ಕಲರ್ ಲಿಕ್ವಿಡ್‌ಗಳು, ಸ್ಪ್ರೆ„ಟ್, ಸೋಡಾ ಅಥವಾ ನೀರಿನ ಬಣ್ಣದ ಯಾವುದೇ ಜ್ಯೂಸ್.
ಪ್ರದರ್ಶನ: ಪ್ರೇಕ್ಷಕರ ಮುಂದೆ ಜಾದೂಗಾರ ಪ್ಲಾಸ್ಟಿಕ್ ಲೋಟಗಳನ್ನು ತಂದಿಡುತ್ತಾನೆ. ಅದರಲ್ಲಿ ಐಸ್ ಕ್ಯೂಬ್‌ಗಳಿರುತ್ತವೆ. ಬಾಯಲ್ಲಿ ಮಂತ್ರ ಜಪಿಸುತ್ತಾ ಸೋಡಾವನ್ನು ಲೋಟಕ್ಕೆ ಸುರಿಯುತ್ತಾನೆ. ನಿಧಾನಕ್ಕೆ ಒಂದೊಂದು ಲೋಟದ ಬಣ್ಣವೂ ಬದಲಾಗುತ್ತದೆ!
ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಪ್ಲಾಸ್ಟಿಕ್ ಲೋಟದ ತಳದಲ್ಲಿ. ಅಂದರೆ, ಲೋಟಗಳಿಗೆ ಐಸ್ ಕ್ಯೂಬ್ ಹಾಕುವ ಮುಂಚೆ ಫುಡ್ ಕಲರ್ ಲಿಕ್ವಿಡ್‌ನ್ನು ಹಾಕಿ, ಒಣಗಲು ಬಿಡಿ. ಒಣಗಿದ ನಂತರ ಐಸ್ ಕ್ಯೂಬ್‌ಗಳನ್ನು ಹಾಕಿ. ಅತಿಥಿಗಳ ಮುಂದೆ ಆ ಲೋಟಗಳನ್ನಿಟ್ಟು, ಅವರವರ ಭವಿಷ್ಯ ಹೇಗಿರುತ್ತದೋ ಹಾಗೆ ಲೋಟದ ಬಣ್ಣ ಬದಲಾಗುತ್ತದೆ ಎಂದು ಹೇಳಿ. ಬಣ್ಣ ಹಸಿರಾದರೆ ಅವರ ಆರೋಗ್ಯ ಚೆನ್ನಾಗಿರುತ್ತದೆಂದೂ, ಹಳದಿಯಾದರೆ ಒಬ್ಬ ಒಳ್ಳೆಯ ಸ್ನೇಹಿತ ಸಿಗುತ್ತಾನೆಂದೂ, ನೀಲಿಯಾದರೆ ಧನಲಾಭ…ಹೀಗೆ ಅವರಲ್ಲಿ ಕುತೂಹಲ ಮೂಡಿಸಿ. ಅವರ ಎದುರಿಗೇ ಲೋಟಕ್ಕೆ ಸ್ಪ್ರೆ„ಟ್ ಸುರಿಯಿರಿ. ನಿಧಾನಕ್ಕೆ ಐಸ್ ಕರಗಿ, ಅದರಡಿಯ ಬಣ್ಣ ಎಲ್ಲೆಡೆ ಹರಡಿ ಜ್ಯೂಸ್‌ನ ಬಣ್ಣ ಬದಲಾಗುತ್ತದೆ.
ಅತಿಥಿಗಳಿಗೆ ಜ್ಯೂಸ್ ಕೊಡುವ ಒಂದೆರಡು ನಿಮಿಷಗಳ ಮುಂಚೆ ಐಸ್ ಕ್ಯೂಬ್ ಹಾಕಬೇಕು. ಇಲ್ಲದಿದ್ದರೆ ಐಸ್ ಕರಗಿ ಜಾದೂವಿನ ರಹಸ್ಯ ಬಯಲಾಗುವ ಸಂಭವವಿರುತ್ತದೆ. ಪ್ರದರ್ಶನಕ್ಕೂ ಮುನ್ನ ಒಂದೆರಡು ಬಾರಿ ಪ್ರಯೋಗ ಮಾಡಿ ನೋಡಿ. ಆರೋಗ್ಯಕರ ಬಣ್ಣಗಳನ್ನಷ್ಟೇ ಬಳಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.