ಧೂಳಿನ ಗೋಳು ಕೇಳ್ಳೋರ್ಯಾರು?


Team Udayavani, Feb 15, 2018, 12:57 PM IST

blore-7.jpg

ಬೆಂಗಳೂರು: ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮುಂಚೂಣಿಯಲ್ಲಿರುವ ಸಿಲಿಕಾನ್‌ ಸಿಟಿ ಬೆಂಗಳೂರು ವ್ಯಾಪ್ತಿ ಸುಮಾರು 800 ಚ.ಕಿ.ಮೀ. ನಷ್ಟು ವಿಸ್ತಾರವಾಗಿದೆ. ನಿತ್ಯ 50 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುವ ನಗರದಲ್ಲಿ ಸಂಚಾರ ನಿರ್ವಹಣೆಗಿರುವುದು 3000 ಸಿಬ್ಬಂದಿ ಮಾತ್ರ! ಸುಮಾರು ಒಂದು ಕೋಟಿಗೂ ಹೆಚ್ಚು ಜನರು ನೆಲೆಸಿರುವ ಬೆಂಗಳೂರಿನಲ್ಲಿ ಸಂಚಾರ ನಿರ್ವಹಣೆಗೆ ನಗರ ಸಂಚಾರಿ ಪೊಲೀಸ್‌ ವಿಭಾಗಕ್ಕೆ ಮಂಜೂರಾಗಿರುವ ಹುದ್ದೆ 5122. ಈ ಪೈಕಿ 3000 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರೆ, 700 ಸಿಬ್ಬಂದಿ ತರಬೇತಿಯಲ್ಲಿದ್ದಾರೆ. ನಾನಾ ಹಂತದ 1200ಕ್ಕೂ ಅಧಿಕ ಹುದ್ದೆಗಳು ಖಾಲಿ ಉಳಿದಿವೆ. ಪರಿಣಾಮ ಹಾಲಿ ಕರ್ತವ್ಯದಲ್ಲಿರುವ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಿದೆ.

ನಗರದಲ್ಲಿರುವ ಸಂಚಾರ ಪೊಲೀಸ್‌ ಠಾಣೆಗಳಿಗೆ ಮಂಜೂರಾದ ಹುದ್ದೆಗಳು ಪೂರ್ಣಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಹಾಲಿ ಸಿಬ್ಬಂದಿಯಲ್ಲಿ ಹಳೆ ಕರಣಗಳ ತನಿಖೆ, ಕೋರ್ಟ್‌, ಠಾಣಾ ನಿರ್ವಹಣೆಗೆ ಒಂದಿಷ್ಟು ಮಂದಿ ನಿಯೋಜನೆಗೊಂಡಿರುತ್ತಾರೆ. ಉಳಿದಂತೆ ಆಗಾಗ್ಗೆ ನಡೆಯುವ ರಾಜಕೀಯ ಪಕ್ಷಗಳ ರ್ಯಾಲಿ, ಸಮಾವೇಶ, ಪ್ರತಿಭಟನೆ, ಬಂದೋಬಸ್ತ್, ರಾಜ್ಯದ ವಿವಿಧೆಡೆ ನಡೆಯುವ ವಿಶೇಷ ಕಾರ್ಯಕ್ರಮಗಳಿಗೂ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ. ಸದ್ಯ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೂ ನಗರದ ಸಂಚಾರ ಪೊಲೀಸ್‌ ವಿಭಾಗದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಈ ಪರಿಸ್ಥಿತಿ ಪ್ರತಿದಿನ ಇಲ್ಲದಿದ್ದರೂ ತಿಂಗಳಿಗೆ ಎರಡು -ಮೂರು ಬಾರಿಯಾದರೂ ಪುನರಾವರ್ತನೆಯಾಗುತ್ತದೆ. ಆ ಸಂದರ್ಭದಲ್ಲಿ ಹಾಲಿ ಸಿಬ್ಬಂದಿ ಮೇಲೆಯೇ ಒತ್ತಡ ಬೀಳಲಿದೆ. ಕೆಲವೊಮ್ಮೆ ವಾರದ ರಜೆಯನ್ನು ನಿಯಮಿತವಾಗಿ ಪಡೆಯಲು ಸಾಧ್ಯವಾಗದ ಸ್ಥಿತಿ ಇದೆ. ನಿಗದಿತ 8 ಗಂಟೆಗಿಂತಲೂ ಹೆಚ್ಚುವರಿ ಅವಧಿಯಲ್ಲಿ ಬೆಂಗಳೂರು: ಶರವೇಗದಲ್ಲಿ ಬೆಳೆಯುತ್ತಿರುವ ಸಿಲಿಕಾನ್‌ ಸಿಟಿ ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಪ್ರತಿದಿನ ಸರಿಸುಮಾರು 50 ಲಕ್ಷ ವಾಹನಗಳು ಸಂಚರಿಸಲಿವೆ. ಆದರೆ, ಸಂಚಾರ ನಿರ್ವಹಣೆಯ ಪೊಲೀಸರ ಸಂಖ್ಯೆ ಮಾತ್ರ ಹೆಚ್ಚಳವಾಗಲಿಲ್ಲ!

ಟೇಶನ್‌ ಡ್ನೂಟಿ ಇಲ್ಲ!: ಟ್ರಾಫಿಕ್‌ ಪೊಲೀಸರಿಗೆ ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಣೆ ಇರುತ್ತದೆ.  ಸಮಸ್ಯೆಯೆಂದರೆ ಸಂಚಾರ ನಿರ್ವಹಣೆಗೆ ನಿಯೋಜನೆಗೊಳ್ಳುವ ಸಿಬ್ಬಂದಿಗೆ ಹೆಚ್ಚು ಆಯಾಸ, ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಯಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಿಗದಿತ ಜಂಕ್ಷನ್‌ ಗಳಲ್ಲಿ ಕರ್ತವ್ಯ ನಿರ್ವಹಿಸಬೇಕು. ಪಾಳಿ ಮುಗಿ ಯುವ ತನಕ ಅದೇ ಜಂಕ್ಷನ್‌ನಲ್ಲಿರುವುದು ಕಡ್ಡಾಯ.

ಒಂದೇ ಕಡೆ ನಿಂತಿರಬೇಕು. ಕೆಲವೆಡೆ ಚೌಕಿಗಳನ್ನು ಹಾಕಲಾಗಿದೆ. ಅವುಗಳಿಗೆ ಗ್ಲಾಸ್‌ ಅಳವಡಿಸಿಲ್ಲ. ಹೀಗಾಗಿ ವಾಹನಗಳು ಉಗುಳುವ ಕಾರ್ಬನ್‌ ಡೈ ಆಕ್ಸೆ„ಡ್‌ ಹಾಗೂ ಧೂಳು ಸೇವನೆಯ ಗೋಳು ತಪ್ಪಿದ್ದಲ್ಲ. ಹೀಗಾಗಿ, ಸಂಚಾರ ನಿರ್ವಹಣೆಗೆ ನಿಯೋಜನೆಗೊಳ್ಳುವ ಸಿಬ್ಬಂದಿಯನ್ನು ರೊಟೇಶನ್‌ ಆಧಾರದಲ್ಲಿ ಠಾಣೆಯ ಕೆಲಸ, ಪ್ರಕರಣಗಳ ತನಿಖೆ, ಕೋರ್ಟ್‌ ಪ್ರಕರಣಗಳ ನಿರ್ವಹಣೆಗೆ ನಿಯೋಜಿಸಬೇಕು. ಆಗ ನಮಗೂ ಕೆಲವು ಕೆಲಕಾಲ ಆರೋಗ್ಯ ಸಂರಕ್ಷಿಸಿಕೊಳ್ಳಲು ಅನುಕೂಲವಾಗಲಿದೆ. ಜತೆಗೆ ಇನ್ನಿತರ ಕರ್ತವ್ಯ ನಿರ್ವಹಣೆ ಕಲಿಕೆಗೂ ಸಹಕಾರಿಯಾಗಲಿದೆ. ಆದರೆ ರೋಟೇಶನ್‌ ಪದ್ಧತಿ ಸಮರ್ಪಕವಾಗಿ ಆಗುತ್ತಿಲ್ಲ. ಪರಿಣಾಮ ಕೆಲವು ಸಿಬ್ಬಂದಿ ವರ್ಷಾನುಗಟ್ಟಲೇ ಟ್ರಾಫಿಕ್‌ ನಿರ್ವಹಣೆಯಲ್ಲಿಯೇ ಇರುವಂತಾಗಿದೆ ಎಂಬುದು ಪೇದೆಯೊಬ್ಬರ ಅಳಲು. 

ಎಎಸ್‌ಐಗೆ ಸಹಾಯಕ್ಕೆ ಒಬ್ಬ ಸಿಬ್ಬಂದಿ!: ನಾಲ್ಕು ತಿಂಗಳಿಂದೀಚೆಗೆ ಸಂಚಾರ ವಿಭಾಗದ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ಗೆ ಒಬ್ಬ ಸಹಾಯಕ ಸಿಬ್ಬಂದಿ ಜೊತೆಗಿರಬೇಕು ಎಂಬ ನಿಯಮ ಜಾರಿಯಾಯಿತು. ಇದರಿಂದ ಸಿಬ್ಬಂದಿ ಕೊರತೆಯ ನಡುವೆಯೂ ಅವರ ಜೊತೆ ಒಬ್ಬ ಪೇದೆ ತೆರಳುತ್ತಾರೆ. ಇದರಿಂದ ಸಂಚಾರ ನಿರ್ವಹಣೆ ಸಿಬ್ಬಂದಿ ಸಂಖ್ಯೆ ಇನ್ನಷ್ಟು ಇಳಿಕೆಯಾಯಿತು ಎನ್ನುತ್ತಾರೆ ಪೊಲೀಸ್‌ ಪೇದೆ. 

ಪಿಎಸ್‌ಐ ಪರೀಕ್ಷೆ ಬರೆಯುವ ಅವಕಾಶ ತಪ್ಪಿತು! ಕಳೆದ ವರ್ಷ ರಾಜ್ಯದ ಪ್ರಭಾವಿ ರಾಜಕಾರಣಿ ಯೊಬ್ಬರ ನಿವಾಸದ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಮೂರು ದಿನ ರಾಜಕಾರಣಿಯ ನಿವಾಸದಲ್ಲಿ ಐಟಿ ಶೋಧ ಕಾರ್ಯಾಚರಣೆ ನಡೆಸಿತು. ಈ ವೇಳೆ ಅಲ್ಲಿ ವಿಶೇಷ ಸೇವೆಗೆ ನನ್ನನ್ನು ನಿಯೋಜನೆಗೊಳಿಸಲಾಗಿತ್ತು. ಆ ಮೂರು ದಿನಗಳಲ್ಲಿ ಒಂದು ದಿನ ನನಗೆ ಪಿಎಸ್‌ಐ ಪರೀಕ್ಷೆ ಇತ್ತು. ಈ ಮೊದಲು ಪರೀಕ್ಷೆಗೆ ಹಾಜರಾಗಲು ಇಲಾಖೆ ವತಿಯಿಂದ ಅನುಮತಿ ದೊರೆತಿತ್ತು. ಆದರೆ, ವಿಶೇಷ ಸೇವೆಗೆ ನಿಯೋಜನೆಯಾಗಿದ್ದರಿಂದ, ನನ್ನ ಬದಲಿಗೆ ಮತ್ತೂಬ್ಬ ಸಿಬ್ಬಂದಿ ಇರಲಿಲ್ಲ. ಹೀಗಾಗಿ ನಾನೇ ಕರ್ತವ್ಯ ಮುಂದುವರಿಸಬೇಕಾಯಿತು ಎಂಬುದು ಉತ್ತರ ವಿಭಾಗದ ಸಂಚಾರ ಠಾಣೆಯ ಪೇದೆಯೊಬ್ಬರು ಅಳಲು ತೋಡಿಕೊಂಡರು

ಆರೋಗ್ಯ ತಪಾಸಣೆ ಮಾಡ್ತಾರೆ; ಸಮಸ್ಯೆ ಏನೆಂದು ಹೇಳಲ್ಲ! ಸಂಚಾರ ಪೊಲೀಸರಿಗೆ ವರ್ಷಕ್ಕೊಮ್ಮೆ ಇಲಾಖೆಯಿಂದಲೇ ಆರೋಗ್ಯ ತಪಾಸಣೆ ಆಯೋಜಿಸಲಾಗುತ್ತದೆ. ಆಯಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿನ ಖಾಸಗಿ ಆಸ್ಪತ್ರೆಗೆ ಆರೋಗ್ಯ ತಪಾಸಣೆಯ ಜವಾಬ್ದಾರಿ ವಹಿಸಲಾಗಿರುತ್ತದೆ.

ಐದು ನಿಮಿಷ ಕೌನ್ಸಿಲಿಂಗ್‌ ಮೂಲಕ ತಪಾಸಣೆ ನಡೆಸುವ ವೈದ್ಯರು, ಬಳಿಕ ಠಾಣೆಗೆ ವೈಯಕ್ತಿಕ ವರದಿ ಕೊಟ್ಟು ಕಳುಹಿಸುತ್ತಾರೆ. ಆದರೆ, ಯಾವ ಸಮಸ್ಯೆಯಿದೆ ಎಂಬುದನ್ನು ಖಚಿತವಾಗಿ ತಿಳಿಸುವುದಿಲ್ಲ. ಹೀಗಾಗಿ ನಾವೇ ಆಗಾಗ್ಗೆ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳುವುದು ಅನಿವಾರ್ಯ ಎಂದು ಪೇದೆ ಯೊಬ್ಬರು ಅಳಲು ತೋಡಿಕೊಂಡರು. ಒಟ್ಟಿನಲ್ಲಿ ಮಂಜೂರಾದ ಹುದ್ದೆಯಲ್ಲಿ ಶೇ 30ರಷ್ಟು ಸಿಬ್ಬಂದಿ ಕೊರತೆಯಿಂದಾಗಿ ಹಾಲಿ ಸಿಬ್ಬಂದಿ ಕಾರ್ಯಭಾರದಿಂದ ಬಳಲುವಂತಾಗಿದೆ. ಕಳೆದ ಎರಡು ವರ್ಷದಿಂದ ಇದೇ ಸ್ಥಿತಿಯಿದ್ದು, ಹೊಸ ನೇಮಕಾತಿ ಪ್ರಕ್ರಿಯೆ ನಡೆಯದ ಕಾರಣ ಸಿಬ್ಬಂದಿಯ ಆತಂಕ ಮತ್ತಷ್ಟು ಹೆಚ್ಚಿಸಿದೆ. ಈ ವಿಳಂಬ ಪ್ರಕ್ರಿಯೆ ಸಹಜವಾಗಿ ಅವರ ಆರೋಗ್ಯದ ಮೇಲೆಯೂ ಪರಿಣಾಮ ಬೀರಲಿದೆ.

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.