ಜಿಎಸ್ಬಿ ಸೇವಾ ಸಂಘದ ವಾರ್ಷಿಕೋತ್ಸವ
Team Udayavani, Feb 15, 2018, 3:02 PM IST
ಕದ್ರಿ : ಭಾರತದಲ್ಲಿ ಸಂಗೀತ, ನೃತ್ಯ, ಚಿತ್ರಕಲೆಗಳಂತಹ ಲಲಿತಕಲೆಗಳು ಸಮೃದ್ಧವಾಗಿದ್ದು ವೃತ್ತಿ ಜೀವನಕ್ಕೆ ಇವುಗಳಲ್ಲಿ ವಿಪುಲ ಅವಕಾಶಗಳಿವೆ. ಈಗಿನ ತಲೆಮಾರಿನ ಯುವಜನರು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಪ್ರೊ| ಡಾ| ಕಸ್ತೂರಿ ಮೋಹನ ಪೈ ಹೇಳಿದರು. ಸುಜೀರ್ ಸಿ.ವಿ. ನಾಯಕ್ ಸಭಾಗೃಹದಲ್ಲಿ ನಡೆದ ಜಿಎಸ್ಬಿ ಸೇವಾ ಸಂಘದ 80ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು.
ಹವ್ಯಾಸ ಬೆಳೆಸಿಕೊಳ್ಳಿ
ಮುಖ್ಯ ಅತಿಥಿ, ಸಿತಾರ ಕಲಾವಿದ ಅಂಕುಶ್ ಎನ್. ನಾಯಕ್ ಮಾತನಾಡಿ, ಭಾರತೀಯ ಕಲಾ ಪ್ರಾಕಾರಗಳು ಬಹಳ ಶ್ರೀಮಂತವಾಗಿದ್ದು, ವಿದ್ಯಾರ್ಥಿ ಜೀವನದಲ್ಲೇ ಕಲೆಯ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಅದು ಶಿಕ್ಷಣಕ್ಕೆ ಸಹಕಾರಿಯಾಗುತ್ತದೆ ಎಂದರು.
ಸಾಂಸ್ಕೃತಿಕ ಕಲಾ ಮಿಲನ ಉದ್ಘಾಟನೆ
ಹಿರಿಯ ಚಿತ್ರಕಲಾವಿದ ವಿಷ್ಣು ಶೇವಗೂರ ಸಾಂಸ್ಕೃತಿಕ ಕಲಾ ಮಿಲನ ಉದ್ಘಾಟಿಸಿದರು. 150ಕ್ಕೂ ಅಧಿಕ ಮಂದಿ ಎಳೆಯರಿಗಾಗಿ ಹಿಂದೂಸ್ಥಾನಿ, ಕರ್ನಾಟಕ್, ವಾದ್ಯ ಸಂಗೀತ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಿ ಆಡಳಿತ ಮಂಡಳಿಯ ಪಂಡಿತ್ ಸುರೇಂದ್ರ ಆಚಾರ್ಯ, ವಿಜಯಚಂದ್ರ ಕಾಮತ್, ಮಾಧವರಾಯ ಪ್ರಭು, ವೆಂಕಟೇಶ ಬಾಳಿಗ, ಪ್ರೇಮಾನಂದ ಮಲ್ಯ ಬಹುಮಾನ ವಿತರಿಸಿದರು.
ಗೌರವ ಖಜಾಂಚಿ ಜಿ. ವಿಶ್ವನಾಥ ಭಟ್ ಸೇವಾ ಕಾರ್ಯದ ವಿವರ ನೀಡಿದರು. ಸಂಯೋಜಕ ಯು. ಪ್ರಕಾಶ ಶೆಣೈ
ನೇತೃತ್ವದಲ್ಲಿ ಸಾಧನಾ ಬಳಗ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ‘ಮಧುರ ಕೊಂಕಣಿ’ ಸಮೂಹ ಗಾನ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ನಡೆಯಿತು. ಡಾ| ರಮೇಶ ಪೈ ಸ್ವಾಗತಿಸಿದರು. ಉಷಾ ಪೈ ಅತಿಥಿಗಳನ್ನು ಪರಿಚಯಿಸಿದರು. ಅಶ್ವಿನ್ ಭಟ್, ಶಿಕ್ಷಕಿ ಪ್ರತಿಮಾ ಪ್ರಭು, ಸ್ಮಿತಾ ಶೆಣೈ, ಭಾರತಿ ಶೇವಗೂರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.