ಕರಾವಳಿಯಲ್ಲಿ ಮಲಯಾಳಂನ ತ್ರೀ ಸೂಪರ್ಸ್ಟಾರ್..!
Team Udayavani, Feb 15, 2018, 3:45 PM IST
ಮಲಯಾಳಂನ ಎರಡು ಪ್ರತಿಷ್ಠಿತ ಸಿನೆಮಾದಲ್ಲಿ ಭಾಗವಹಿಸುವ ಕಾರಣದಿಂದ ಮೂರು ಸೂಪರ್ಸ್ಟಾರ್ಗಳು ಕೋಸ್ಟಲ್ವುಡ್ ನೆಲದಲ್ಲಿ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಂಗಳೂರು ವ್ಯಾಪ್ತಿಯಲ್ಲಿಯೇ ಉಳಿದುಕೊಂಡು ಮಲಯಾಳಂನ ಬಹುನಿರೀಕ್ಷಿತ “ಕಾಯಂಕುಳಂ ಕೊಚ್ಚುನ್ನಿ’ ಚಿತ್ರದ ಶೂಟಿಂಗ್ ನಡೆಸುತ್ತಿರುವ ಖ್ಯಾತ ನಟ ನಿವಿನ್ ಪೌಳಿ ಇನ್ನೂ ಕೂಡ ಕರಾವಳಿ ಬಿಟ್ಟು ಹೋಗಿಲ್ಲ. ವಿಶೇಷವೆಂದರೆ, ಇದೇ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಲು ಮಲಯಾಳಂನ ಸೂಪರ್ಸ್ಟಾರ್ ಮೋಹನ್ಲಾಲ್ ಈಗ ಕರಾವಳಿಗೆ ಬಂದಿದ್ದಾರೆ. ಅಂದಹಾಗೆ, ಪುತ್ತೂರು ಕಡಬ ವ್ಯಾಪ್ತಿಯಲ್ಲಿ ಮೋಹನ್ಲಾಲ್ ಸದ್ಯ ಶೂಟಿಂಗ್ನಲ್ಲಿದ್ದಾರೆ. ಈ ಮಧ್ಯೆ ಅಚ್ಚರಿಯ ಸಂಗತಿ ಎಂದರೆ, ಮಲಯಾಳಂನ ಇನ್ನೊಬ್ಬ ಸೂಪರ್ಸ್ಟಾರ್ ಮಮ್ಮುಟ್ಟಿ ಅಭಿನಯದ “ಮಾಮಾಂಕಮ್’ ಸಿನೆಮಾದ ಶೂಟಿಂಗ್ ಕೂಡ ಇದೇ ವ್ಯಾಪ್ತಿಯಲ್ಲಿ ಆರಂಭವಾಗಿದೆ. ಖ್ಯಾತ ನಿರ್ದೇಶಕ ಸಜೀವ್ ಪಿಳ್ಳೈ ನಿರ್ದೇಶನದಲ್ಲಿ ಈ ಸಿನೆಮಾ ರೆಡಿಯಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.