ಅಸ್ಸಾಂ: Microlight aircraft ಪತನ: ಇಬ್ಬರು ಪೈಲಟ್ ಸಾವು
Team Udayavani, Feb 15, 2018, 5:04 PM IST
ಜೋರ್ಹಾಟ್ : ಅಸ್ಸಾಮಿನ ಜೋರ್ಹಾಟ್‌ನಲ್ಲಿ ಇಂದು ಗುರುವಾರ ಮೈಕ್ರೋ ಲೈಟ್ ಏರ್ ಕ್ರಾಫ್ಟ್ ಪತನಗೊಂಡು ಅದರೊಳಗಿದ್ದ ವಾಯು ಪಡೆಯ ಇಬ್ಬರು ಸಿಬಂದಿಗಳು ಮೃತಪಟ್ಟರು.
ಲಘು ವಿಮಾನ ತನ್ನ ದೈನಂದಿನ ಹಾರಾಟದಲ್ಲಿ ನಿರತವಾಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿತು. ಇಬ್ಬರು IAF ಸಿಬಂದಿಗಳು ವೈರಸ್ ಎಸ್‌ಡಬ್ಲ್ಯು80 ಮೈಕ್ರೋಲೈಟ್ ವಿಮಾನವನ್ನು ಚಲಾಯಿಸುತ್ತಿದ್ದರು.
ಜೋರ್ಹಾಟ್ ವಾಯು ನೆಲೆಯಿಂದ ಟೇಕಾಫ್ ಆದ ತತ್‌ಕ್ಷಣವೇ ವಿಮಾನ ಪತನಗೊಂಡಿತು. ಇಬ್ಬರೂ ಪೈಲಟ್‌ಗಳು IAF ವಿಂಗ್ ಕಮಾಂಡರ್ ಗಳಾಗಿದ್ದರು.
ಈ ಅಪಘಾತ ಹೇಗೆ ಉಂಟಾಯಿತು ಎಂಬ ಬಗ್ಗೆ ಸದ್ಯಕ್ಕೆ ವಿವರಗಳು ಸಿಕ್ಕಿಲ್ಲ. ಈ ಪತನಕ್ಕೆ ಸಂಬಂಧಿಸಿ ತನಿಖೆಗೆ ಆದೇಶ ನೀಡಲಾಗಿದೆ.
ಮಾಜೂಲಿ ನದೀ ದ್ವೀಪದ ಸಮೀಪದಲ್ಲಿರುವ ಸುಮೋಯಿಮರಿ ಎಂಬ ಗ್ರಾಮದಲ್ಲಿ ಪತನಗೊಂಡ ವಿಮಾನದ ಅವಶೇಷಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.