ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಸದಸ್ಯೆಯರಿಂದ ಭಜನೆ
Team Udayavani, Feb 16, 2018, 10:20 AM IST
ಮುಂಬಯಿ: ಕರ್ನಾಟಕ ವಿಶ್ವಕರ್ಮ ಅಸೋಸಿ ಯೇಶನ್ ಮುಂಬಯಿ ಇದರ ಡೊಂಬಿವಲಿ ಪರಿಸರದ ಮಹಿಳೆಯರಿಂದ ಪ್ರಥಮ ಭಜನ ವಾರ್ಷಿಕೋತ್ಸವವು ಇತ್ತೀಚೆಗೆ ಡೊಂಬಿವಲಿ ಪಶ್ಚಿಮದ ಜಾನಕೀ ಬಾಯಿ ಸಭಾಗೃಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಪುರೋಹಿತ ಗೋಪಾಲಕೃಷ್ಣ ಆಚಾರ್ಯ ಅವರು ಪ್ರಾರ್ಥನೆಗೈದರು. ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಸಂಘದ ಉಪಾಧ್ಯಕ್ಷರಾದ ರವೀಶ್ ಜಿ. ಆಚಾರ್ಯ, ಜನಾರ್ದನ ವಿ. ಆಚಾರ್ಯ, ಎಂ. ವಿ. ಆಚಾರ್ಯ, ಶ್ರೀನಿವಾಸ ಆಚಾರ್ಯ, ಸುನೀತಾ ಶಿವರಾಮ್ ಶೆಟ್ಟಿ, ನೇತ್ರಾ ಚಂದ್ರಶೇಖರ್ ಆಚಾರ್ಯ ಅವರು ಚಾಲನೆ ನೀಡಿದರು.
ಭಜನ ಕಾರ್ಯಕ್ರಮದಲ್ಲಿ ಡೊಂಬಿವಲಿ ವಿಶ್ವಕರ್ಮ ಮಹಿಳಾ ಬಳಗ ಡೊಂಬಿವಲಿ ಪಶ್ಚಿಮ ವಿಭಾಗ ನವರಾತ್ರಿ ಉತ್ಸವ ಮಂಡಳಿಯ ಮಹಿಳಾ ವಿಭಾಗ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಜೈ ವಿಶ್ವಕರ್ಮ ಭಜನ ವೃಂದ ಹಾಗೂ ಸಂಸ್ಥೆಯ ಗೋರೆಗಾಂವ್, ಬೊರಿವಲಿ ಪ್ರಾದೇಶಿಕ ಸಮಿತಿಗಳು ಭಾಗವಹಿಸಿದ್ದವು.
ವೇದಿಕೆಯಲ್ಲಿ ಡೊಂಬಿವಲಿ ಮಹಿಳಾ ವಿಶ್ವಕರ್ಮ ಅಸೋಸಿಯೇಶನ್ ಅಧ್ಯಕ್ಷ ಕಲ್ಯಾಣು³ರ ಸದಾನಂದ ಆಚಾರ್ಯ, ಮುಖ್ಯ ಅತಿಥಿಯಾಗಿ ಪಶ್ಚಿಮ ವಿಭಾಗ ನವರಾತ್ರಿ ಉತ್ಸವ ಮಂಡಳಿಯ ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ, ಜಿ. ಟಿ. ಆಚಾರ್ಯ, ಜನಾರ್ಧನ ಆಚಾರ್ಯ, ವಿಜಯ ಎಸ್. ಆಚಾರ್ಯ, ನೇತ್ರಾ ಚಂದ್ರಶೇಖರ್ ಆಚಾರ್ಯ, ಸುನೀತಾ ಶಿವರಾಮ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಅತಿಥಿ ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ ಇವರು ಮಾತನಾಡಿ,
ಜಗತ್ತಿನ ಪಾಶ್ಚಿಮಾತ್ಯ ಭಾಷೆಯ ಎದುರಿನಲ್ಲಿ ಅಳಿಯುತ್ತಿರುವ ನಮ್ಮ ಭಜನೆ, ಇತ್ಯಾದಿಗಳನ್ನು ದಿನನಿತ್ಯ ಬಳಸುವಂತಹ ಪ್ರಯತ್ನವನ್ನು ಮಾಡಬೇಕು ಎಂದರು. ಸುನೀತಾ ಎಸ್. ಶೆಟ್ಟಿ ಅವರು ಸಮ್ಮಾನ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.
ಜೈ ವಿಶ್ವಕರ್ಮ ಭಜನ ವೃಂದದ ಸದಸ್ಯೆ ಶ್ರೀಮತಿ ಕೆ. ಆಚಾರ್ಯ ಅವರು ಮಾತನಾಡಿ, ಪಾಶ್ಚಾತ್ಯ ಭಾಷೆಯನ್ನು ಅಳವಡಿಸಿಕೊಂಡು ಬರುತ್ತಿರುವ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ, ಧಾರ್ಮಿಕತೆಯ ಅಡಿಪಾಯವನ್ನು ಹೊಂದಿಸುವ ಭಜನೆಯ ಮುಖೇನ ತಿಳಿ ಹೇಳಬೇಕು. ನಮ್ಮ ತಾಯ್ನಾಡಿನ ಮಣ್ಣಿನ ಪರಂಪರೆಯನ್ನು ಜೀವಂತವಾಗಿಡಲು ಭಜನೆಯ ಮೂಲಕ ಪ್ರಯತ್ನಿಸಬೇಕು ಎಂದರು. ಜಿ. ಟಿ. ಆಚಾರ್ಯ ಅವರು ಮಾತನಾಡಿ, ಭಜನೆಯನ್ನು ಹಾಡುವಾಗ ಅದನ್ನು ಅರ್ಥಮಾಡಿಕೊಂಡು ಹಾಡಿದರೆ ಸಾರ್ಥಕತೆಯನ್ನು ಪಡೆಯಬಹುದು ಎಂದರು.
ಡೊಂಬಿವಲಿ ಮಹಿಳಾ ವಿಶ್ವಕರ್ಮ ಅಸೋಸಿಯೇಶನ್ ಅಧ್ಯಕ್ಷ ಕಲ್ಯಾಣಪುರ ಸದಾನಂದ ಆಚಾರ್ಯ ಅವರು ಮಾತನಾಡಿ, ಡೊಂಬಿವಲಿ ಮತ್ತು ಪರಿಸರದ ವಿಶ್ವಕರ್ಮ ಮಹಿಳೆಯರು ಹಮ್ಮಿಕೊಂಡಂತಹ ಈ ಕಾರ್ಯಕ್ರಮವನ್ನು ಕಂಡಾಗ ಸಂತೋಷವಾಗುತ್ತಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದರು. ಪವಿತ್ರಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಪ್ರಭಾಕರ ಎಸ್. ಆಚಾರ್ಯ ಅವರು ಸಭಾ ಕಾರ್ಯಕ್ರಮ ನಿರ್ವಹಿಸಿದರು. ಕು| ಭಾರತಿ ಚಂದ್ರಶೇಖರ್ ಆಚಾರ್ಯ ವಂದಿಸಿದರು. ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.