ಬ್ಲಾಕ್‌ಚೈನ್‌ ತಂತ್ರಜ್ಞಾನ ಬಳಕೆಗೆ ನೀಲನಕ್ಷೆ

Team Udayavani, Feb 16, 2018, 12:51 PM IST

black-chain.jpg

ಬೆಂಗಳೂರು: ಕ್ರಾಂತಿಕಾರಿ “ಬ್ಲಾಕ್‌ ಚೈನ್‌’ ತಂತ್ರಜ್ಞಾನವನ್ನು ಆಡಳಿತದಲ್ಲಿ ಬಳಸಲು ನೀಲನಕ್ಷೆ ಸಿದ್ಧಪಡಿಸುತ್ತಿದ್ದು, ಪಾರದರ್ಶಕ ಹಾಗೂ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಈ ತಂತ್ರಜ್ಞಾನ ಬಳಕೆ ಸಾಧ್ಯತೆ ಅರಿತು ಮುಂದುವರಿಯುವುದಾಗಿ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ರಾಜ್ಯ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಬ್ಲಾಕ್‌ ಚೈನ್‌’ ತಂತ್ರಜ್ಞಾನ ಕುರಿತ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಜನ ಕೇಂದ್ರಿತ ಬ್ಲಾಕ್‌ ಚೈನ್‌ ತಂತ್ರಜ್ಞಾನವು ಉಪಯುಕ್ತವೆನಿಸಿದ್ದು, ಆಡಳಿತದಲ್ಲಿ ಅಳವಡಿಕೆಗೆ ಪ್ರಯತ್ನ ನಡೆದಿದೆ ಎಂದು ಹೇಳಿದರು.

ಈ ಹೊಸ ತಂತ್ರಜ್ಞಾನವನ್ನು ತಕ್ಷಣ ಅಳವಡಿಸಲು ಸಾಧ್ಯವಾಗದಿದ್ದರೂ ಅದನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಲಾಗಿದೆ. ಕಳೆದ ಜನವರಿಯಲ್ಲಿ ಐದು ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನ ಅಳವಡಿಕೆ ಸಾಧ್ಯತೆ ತಿಳಿಯುವ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ದೊರಕಿತ್ತು ಎಂದು ತಿಳಿಸಿದರು.

ಬೆಂಗಳೂರು ನಾಯಕತ್ವ: ಜಾಗತಿಕ ಮಟ್ಟದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. ಸ್ಟಾರ್ಟ್‌ಅಪ್‌ಗ್ಳಿಗೆ ಪೂರಕ ವಾತಾವರಣವಿರುವ ನಗರಗಳ ಪೈಕಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಈ ಎರಡೂ ಕ್ಷೇತ್ರ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಅನ್ವೇಷಣೆ ಕ್ಷೇತ್ರದ ನಾಯಕತ್ವ ಬೆಂಗಳೂರು ವಹಿಸಬೇಕು ಎಂಬ ಗುರಿಯಿದ್ದು, ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆದಿದೆ. ಹೊಸ ತಂತ್ರಜ್ಞಾನಗಳ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.

ಎಸ್‌ಎಪಿ ಲ್ಯಾಬ್ಸ್ನ ವ್ಯವಸ್ಥಾಪಕ ನಿರ್ದೇಶಕ ದಿಲೀಪ್‌ಕುಮಾರ್‌ ಖಂಡೇಲ್ವಾಲ್‌ ಮಾತನಾಡಿ, ಇತ್ತೀಚೆಗಷ್ಟೇ ಪ್ರಚಲಿತಕ್ಕೆ ಬರುತ್ತಿರುವ ಬ್ಲಾಕ್‌ ಚೈನ್‌ ತಂತ್ರಜ್ಞಾನವನ್ನು ಆಡಳಿತದಲ್ಲಿ ಬಳಸುವ ರಾಜ್ಯ ಸರ್ಕಾರದ ಪ್ರಯತ್ನ, ಸರ್ಕಾರದ ದೂರದೃಷ್ಟಿ ಹಾಗೂ ಸರಿಯಾದ ದಿಕ್ಕಿನತ್ತ ಸಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಐಟಿಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ, ಐಟಿಬಿಟಿ ಇಲಾಖೆ ನಿರ್ದೇಶಕಿ ಸಲ್ಮಾ ಕೆ. ಫಾಹಿಂ, ಅರ್ನ್ಸ್ಟ್‌ ಆ್ಯಂಡ್‌ ಯಂಗ್‌ ಪಾಲುದಾರ ಪ್ರಕಾಶ್‌ ಜಯರಾಂ ಇತರರು ಉಪಸ್ಥಿತರಿದ್ದರು.

ಕೆಲ ರಾಜ್ಯಗಳು ಹೂಡಿಕೆದಾರರಿಗೆ ಭೂಮಿ, ನೀರು ಇತರೆ ಸೌಲಭ್ಯವನ್ನು ಉಚಿತವಾಗಿ ನೀಡಬಹುದು. ಆದರೆ ರಾಜ್ಯ ಅನ್ವೇಷಣೆ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ, ನುರಿತ ಮಾನವ ಸಂಪನ್ಮೂಲ, ವೃತ್ತಿಪರರ ಲಭ್ಯತೆ ಬೇರೆಲ್ಲೂ ಸಿಗದು. ಇದು ರಾತ್ರೋರಾತ್ರಿ ಸೃಷ್ಟಿಯಾದುದಲ್ಲ. ಹಲವು ದಶಕಗಳ ಪ್ರಯತ್ನ, ದೂರದೃಷ್ಟಿ, ಬದ್ಧತೆಯ ಕಾರ್ಯ ನಿರ್ವಹಣೆ ಫ‌ಲ.
-ಪ್ರಿಯಾಂಕ್‌ ಖರ್ಗೆ, ಐಟಿಬಿಟಿ ಸಚಿವ

ಟಾಪ್ ನ್ಯೂಸ್

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

1-saddasd

Heavy Rain ಅಬ್ಬರ; ಜು.9 ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

Devara-Mane

Banakal: ದೇವರಮನೆಯಲ್ಲಿ ಮೋಜು-ಮಸ್ತಿಗೆ ಕಡಿವಾಣ

1-BC

Shivamogga:ಅಳಿಯನ ಸಾವಿನ ಕುರಿತು ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

Panaji ಭಾರೀ ಮಳೆ; ಗೋಡೆ ಕುಸಿದು ಮೂವರು ಕಾರ್ಮಿಕರ ಸಾವು

1-dsadsad

Corruption ತಡೆಯುವಲ್ಲಿ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ವಿಫಲ: ಚಾಮರಸ ಮಾಲಿ ಪಾಟೀಲ್

Militants opened fire on an army vehicle at Kathua

Kathua; ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಶಾಸಕರಿಗೆ ಶುಭ ಕೋರಿ ಹಾಕಿದ್ದ ಫ್ಲೆಕ್ಸ್‌ ಬಿದ್ದು ವೃದ್ಧ ಕೋಮಾಕ್ಕೆೆ

Bengaluru: ಶಾಸಕರಿಗೆ ಶುಭ ಕೋರಿ ಹಾಕಿದ್ದ ಫ್ಲೆಕ್ಸ್‌ ಬಿದ್ದು ವೃದ್ಧ ಕೋಮಾಕ್ಕೆೆ

Bengaluru: ನಿಯಂತ್ರಣ ತಪ್ಪಿದ ಬುಲೆಟ್‌ ತಡೆಗೋಡೆಗೆ ಡಿಕ್ಕಿ: ಸವಾರ ಸಾವು

Bengaluru: ನಿಯಂತ್ರಣ ತಪ್ಪಿದ ಬುಲೆಟ್‌ ತಡೆಗೋಡೆಗೆ ಡಿಕ್ಕಿ: ಸವಾರ ಸಾವು

Bengaluru: ರಾಜಕಾಲುವೆಗೆ ಬಿದ್ದಿದ್ದ ದ್ವಿಚಕ್ರ ಸವಾರನ ಶವ 3 ದಿನ ಬಳಿಕ ಪತ್ತೆ

Bengaluru: ರಾಜಕಾಲುವೆಗೆ ಬಿದ್ದಿದ್ದ ದ್ವಿಚಕ್ರ ಸವಾರನ ಶವ 3 ದಿನ ಬಳಿಕ ಪತ್ತೆ

Nandini Milk: ನಂದಿನಿ ಹಾಲು, ಮೊಸರಿನ ಜತೆ ಶೀಘ್ರ ದೋಸೆ ಹಿಟ್ಟು 

Nandini Milk: ನಂದಿನಿ ಹಾಲು, ಮೊಸರಿನ ಜತೆ ಶೀಘ್ರ ದೋಸೆ ಹಿಟ್ಟು 

Arrested: ಪಿಜಿ ಬಗ್ಗೆ ಕೆಟ್ಟ ವಿಮರ್ಶೆ ಮಾಡಿದ್ದಕ್ಕೆ ಯುವತಿಗೆ ಕಿರುಕುಳ; ಮಾಲೀಕ ಸೆರೆ

Arrested: ಪಿಜಿ ಬಗ್ಗೆ ಕೆಟ್ಟ ವಿಮರ್ಶೆ ಮಾಡಿದ್ದಕ್ಕೆ ಯುವತಿಗೆ ಕಿರುಕುಳ; ಮಾಲೀಕ ಸೆರೆ

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

Thirthahalli ಜಮೀನಿನಲ್ಲಿ ನೀರು ಹೋಗುವ ವಿಚಾರ: ಸಹೋದರರಿಂದ ಆತ್ಮಹತ್ಯೆ ಯತ್ನ

1-saddasd

Heavy Rain ಅಬ್ಬರ; ಜು.9 ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ

1-weewq

Hindus ಹೇಳಿಕೆ ;ರಾಹುಲ್ ಗಾಂಧಿಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಬೆಂಬಲ

1-wewewq

Ullal: ಕಾರಿನ ಮೇಲೆ ಉರುಳಿ ಬಿದ್ದ ಬೃಹತ್ ಮರ

Devara-Mane

Banakal: ದೇವರಮನೆಯಲ್ಲಿ ಮೋಜು-ಮಸ್ತಿಗೆ ಕಡಿವಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.