ಗುರುಪುರ ನಾಡ ಕಚೇರಿ ಎದುರು ಪ್ರತಿಭಟನೆ
Team Udayavani, Feb 16, 2018, 1:44 PM IST
ಕೈಕಂಬ: ನಾವು ಹಣ ಕಟ್ಟಿ ಒಂದು ವರ್ಷವಾಗಿದೆ. ನಮಗೆ ಹಕ್ಕುಪತ್ರ ನೀಡಿ, ಕೊಡದಿದ್ದರೆ ಇಲ್ಲಿಯೇ ಕುಳಿತು ಧರಣಿ ಮಾಡುತ್ತೇವೆ ಎಂದು ಕುಪ್ಪೆಪದವು ಗ್ರಾಮದ ಮಹಿಳೆಯರು ಗುರುಪುರ ನಾಡಕಚೇರಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಗುರುಪುರ ಕೈಕಂಬದಲ್ಲಿ ಬುಧವಾರ ನಡೆದ ಹಕ್ಕುಪತ್ರ ವಿತರಣೆ ವೇಳೆ ಗುರುಪುರ ನಾಡಕಚೇರಿ ವ್ಯಾಪ್ತಿಯ ಸುಮಾರು 1,200 ಮಂದಿಗೆ ಹಕ್ಕುಪತ್ರ ವಿತರಣೆಯಾಗಬೇಕಾದಲ್ಲಿ ಕಂದಾಯ ಸಚಿವರು ಸಾಂಕೇತಿಕವಾಗಿ ಕೆಲವರಿಗೆ ಮಾತ್ರ ವಿತರಿಸಿದ್ದಾರೆ. ಉಳಿದವರು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ಕಾಯುವಂತೆ ಮಾಡಿ, ಬರಿಗೈಯಲ್ಲಿ ವಾಪಾಸು ಕಳಿಸಿದ ಬಗ್ಗೆ ಆಕ್ರೋಶಗೊಂಡ ಫಲಾನುಭವಿಗಳು ಹಕ್ಕುಪತ್ರ ನೀಡುವಂತೆ ಗುರುಪುರ ನಾಡಕಚೇರಿಯ ಉಪ ತಹಶೀಲ್ದಾರ ಶಿವಪ್ರಸಾದ್ ಅವರಲ್ಲಿ ಆಗ್ರಹಿಸಿದರು.
ಬುಧವಾರ ಹಕ್ಕುಪತ್ರ ನೀಡುವುದಾಗಿ ಮಧ್ಯಾಹ್ನವೇ ದೂರದಿಂದ ಬಂದಿದ್ದೇವೆ. ಕೆಲವರ ಕೈಯಲ್ಲಿ ಮಗು ಕೂಡ ಇತ್ತು. ಆದರೆ ಕಂದಾಯ ಸಚಿವರು ಆರೇಳು ಮಂದಿಗೆ ಮಾತ್ರ ಹಕ್ಕುಪತ್ರ ವಿತರಿಸಿ ತೆರಳಿದ್ದಾರೆ. ಅ ಬಳಿಕ ಬಾಕಿ ಉಳಿದವರಿಗೆ ಹಕ್ಕುಪತ್ರ ನೀಡಬಹುದಿತ್ತು ಎಂದು ಧರಣಿ ನಿರತ ಮಹಿಳೆಯರು ತಿಳಿಸಿದರು.
ಗುರುವಾರ ಹಕ್ಕುಪತ್ರ ತೆಗೆದುಕೊಂಡು ಹೋಗಲು ನಾಡ ಕಚೇರಿಗೆ ಬಂದಿದ್ದೇವೆ. ಪಡೆಯದೇ ನಾವು ಮನೆಗೆ ಹೋಗುವುದಿಲ್ಲ. ಕೆಲವು ಮನೆಗಳು ಬೀಳುವ ಪರಿಸ್ಥಿತಿಯಲ್ಲಿವೆ. ಹಕ್ಕು ಪತ್ರ ಇದ್ದರೆ ಯಾವುದಾದರೂ ಯೋಜನೆಯಲ್ಲಿ ಮನೆ ಕಟ್ಟಬಹುದಾಗಿದೆ ಎಂದು ಕುಪ್ಪೆಪದವು ಗ್ರಾಮದ ಮಹಿಳೆಯರು ತಿಳಿಸಿದರು.
ಪುಕ್ಕಟೆಯಾಗಿ ಅಲ್ಲ
ನಾವು ಹಕ್ಕುಪತ್ರಕ್ಕಾಗಿ 10,055 ರೂ. ಪಾವತಿಸಿದ್ದೇವೆ. 1 ವರ್ಷದಿಂದ ನಮ್ಮನ್ನು ಹಕ್ಕುಪತ್ರ ನೀಡದೇ ಸತಾಯಿಸುತ್ತಿದ್ದಾರೆ ಎಂದು ಮಹಿಳೆಯರು ತಮ್ಮ ಸಮಸ್ಯೆ ತೋಡಿಕೊಂಡರು. ವಾಮಂಜೂರಿನಲ್ಲಿಯೂ 94ಸಿಸಿ ಹಕ್ಕುಪತ್ರ ನೀಡುವಂತೆ ಧರಣಿ ನಡೆದಿದೆ. ಇಷ್ಟು ಧರಣಿಯಾದರೂ ಗುರುಪುರ ಹೋಬಳಿಯ ಕಂದಾಯ ನಿರೀಕ್ಷಕ ಆಸಿಫ್ ಅವರು ಎಲ್ಲಿಯೂ ಕಾಣದ ಬಗ್ಗೆ ಗ್ರಾಮಸ್ಥರು ಅಕ್ರೋಶಗೊಂಡಿದ್ದಾರೆ.
ನಾಡಕಚೇರಿ ಎದುರು ಧರಣಿ ನಿರತ ಮಹಿಳೆಯರು ಹಕ್ಕುಪತ್ರ ನೀಡುವ ತನಕ ಅಲ್ಲಿಂದ ಕದಲುದಿಲ್ಲ ಎಂದು ಆಕ್ರೋಶ
ವ್ಯಕ್ತಪಡಿಸಿದಾಗ ಉಪತಹಶೀಲ್ದರರು ಅವರನ್ನು ಸಮಾಧಾನ ಪಡಿಸುತ್ತಿದ್ದು ಕಂಡು ಬಂತು. ಬಜಪೆ ಇನ್‌ಸ್ಪೆಕ್ಟರ್ ಪರಶಿವ ಮೂರ್ತಿ ಹಾಗೂ ಸಿಬಂದಿ ಯಾವುದೇ ಅಹಿತಕರ ಘಟನೆ ಯಾಗದಂತೆ ನೋಡಿಕೊಂಡರು. ಗುರುಪುರ ನಾಡಕಚೇರಿಯ ವ್ಯಾಪ್ತಿಯಲ್ಲಿ 13 ಗ್ರಾಮ ಪಂಚಾಯತ್ ಗಳು ಅದರಲ್ಲಿ ಕುಪ್ಪೆಪದವು ಗ್ರಾಮ ಪಂಚಾಯತ್ 94ಸಿ ಬಾಕಿ ಉಳಿದ ಗ್ರಾಮ ಪಂಚಾಯತ್‌ಗಳಿಗೆ 94ಸಿಸಿ ಹಕ್ಕುಪತ್ರ ವಿತರಣೆಯಾಗಿಬೇಕಾಗಿದೆ.
ಶಾಸಕರೇ ನೀಡುತ್ತಾರೆ
ಸಾಂಕೇತಿಕವಾಗಿ ಹಕ್ಕುಪತ್ರ ನೀಡು ವುದಾಗಿ ಹೇಳಲಾಗಿತ್ತು. ಸುಮಾರು 1,200 ಫಲಾನುಭವಿಗೆ ಈ ಕಾರ್ಯ ಕ್ರಮದಲ್ಲಿ
ಬರಲು ಹೇಳಲಾಗಿತ್ತು. ನಾವು ರಜಾದಿನಗಳಲ್ಲಿ ಕಾರ್ಯ ನಿರ್ವಹಿಸಿ ಎಲ್ಲ ಹಕ್ಕುಪತ್ರಗಳನ್ನು ಸಿದ್ಧ ಪಡಿಸಿದ್ದೇವೆ. ಜನರು ವಾಪಸಾದ ಬಗ್ಗೆ ಬೇಸರ ಇದೆ. ಬುಧವಾರ ರಾತ್ರಿ ಕಚೇರಿಯಲ್ಲಿಯೇ ಮಲಗಿದ್ದೆ, ಹಕ್ಕುಪತ್ರವನ್ನು ಶಾಸಕರೇ ಬಂದು ನೀಡುತ್ತಾರೆ ಎಂದು ಹೇಳಿದ್ದಾರೆ. ಇದರಿಂದಾಗಿ ನಾನು ನೀಡುವಂತಿಲ್ಲ.
-ಶಿವಪ್ರಸಾದ್,ಉಪತಹಶೀಲ್ದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.