ಸ್ಕಂದಗಿರಿ ಹತ್ತೋಣ  ಸೂರ್ಯೋದಯ ನೋಡೋಣ


Team Udayavani, Feb 17, 2018, 3:25 AM IST

 ತಂಗಾಳಿಯಲ್ಲಿ ನಡೆಯುವುದೇ ವಿಶಿಷ್ಟ ಅನುಭವ. ಬೆಟ್ಟ ಹತ್ತುತ್ತ, ಹಿಂದೆ ತಿರುಗಿ ನೋಡಿದಾಗ ದೂರದಲ್ಲಿ ಪಟ್ಟಣದ ಬೀದಿದೀಪಗಳು ಫ‌ಳ ಫ‌ಳ ಹೊಳೆಯುವುದು ನೋಡಲು ಬಲು ಸೊಗಸಾಗಿತ್ತು. ದಾರಿಯಲ್ಲಿ ನಮಗೆ ಯಾವುದೇ ಕೀಟಗಳು, ವಿಷ ಜಂತುಗಳು ಕಾಣಲಿಲ್ಲ. ಕೀಟಗಳ ಸದ್ದೂ ಕೇಳಿರಲಿಲ್ಲ. ಸದ್ದೆಲ್ಲ ಮನುಜರದ್ದೇ. ನಮ್ಮ ಮುಂದೆ ಸುಮಾರು ಮಂದೆ ಹತ್ತುತ್ತಿದ್ದವರ ಮಾತು ಬೊಬ್ಬೆ ಕೇಳುತ್ತಲಿತ್ತು. 

ಯಾಂತ್ರಿಕ ಜೀವನದ ಜಂಜಡದಿಂದ ಒಮ್ಮೊಮ್ಮೆಯಾದರೂ ಹೊರಬಂದು ಗಿರಿಬೆಟ್ಟಗಳನ್ನು ಸುತ್ತಿದರೆ ಜೀವನೋಲ್ಲಾಸಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಬೆಂಗಳೂರಿನಿಂದ ಸುಮಾರು 70ಕಿಮೀ. ಹಾಗೂ ಚಿಕ್ಕಬಳ್ಳಾಪುರದಿಂದ ಮೂರು ಕಿಮೀ ದೂರವಿರುವ ಸ್ಕಂದಗಿರಿ ಅಥವಾ ಕಾಲರವ ದುರ್ಗ ಹತ್ತಲು ನಾವು 20 ಮಂದಿ ಮೈಸೂರಿನಿಂದ ಹೊರಟು ಯರಗನಹಳ್ಳಿ ಗ್ರಾಮದ ಪಾಪಾಗ್ನಿಮಠ ತಲಪಿದೆವು. ಎಲ್ಲರೂ ಸೇರಿ ಬೆಳಗಿನ ಜಾವ 3.30ಕ್ಕೆ ಬೆಟ್ಟದತ್ತ ನಡಿಗೆ ಪ್ರಾರಂಭಿಸಿದೆವು. ಈ ಚಾರಣದ ರೂವಾರಿಯಾಗಿ ಮೈಸೂರಿನ ಯೂಥ್‌ ಹಾಸ್ಟೇಲ್‌ನ ನಾಗೇಂದ್ರ ಪ್ರಸಾದ್‌, ವೈದ್ಯನಾಥ್‌ ಇದ್ದರು.  ಸಮುದ್ರ ಮಟ್ಟದಿಂದ ಸುಮಾರು 1,530 ಮೀಟರ್‌ ಎತ್ತರದಲ್ಲಿರುವ, ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಸ್ಕಂದಗಿರಿಗೆ ಕಳವಾರ ಗ್ರಾಮದ ಪಾಪಾಗ್ನಿ ಮಠದ ಹಿಂಬದಿಯಿಂದ ನಡೆಯಲು ಪ್ರಾರಂಭಿಸಬೇಕು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಇರುವ ಮರದ ಮನೆ ಎದುರು ತಲಪಿ, ಅಲ್ಲಿ  ಶುಲ್ಕ ಪಾವತಿಸಿ ಅವರಿಂದ ಅನುಮತಿ ಪಡೆದು ಸಾಗಿದೆವು. ಒಂದು ದಿನಕ್ಕೆ ನೂರಕ್ಕಿಂತ ಹೆಚ್ಚು ಮಂದಿಗೆ ಪ್ರವೇಶ ಕೊಡುವುದಿಲ್ಲವಂತೆ. ಪಾಪಾಗ್ನಿಮಠದಿಂದ ಕೇವಲ ಎರಡು ಕಿ.ಮೀ ದೂರದಲ್ಲಿ ಸ್ಕಂದಬೆಟ್ಟವಿದೆ. ಅಂಥಾ ಕಷ್ಟದ ದಾರಿಯೇ ನಲ್ಲ,  ಬೆಟ್ಟದ ತುದಿ ತಲುಪಲು  2 ಗಂಟೆ ಸಾಕು  ಎಂದು ಅರಣ್ಯ ಇಲಾಖೆಯ ಫ‌ಲಕ ಹೇಳುತ್ತಿತ್ತು.

ಎಲ್ಲರ ಕೈಯಲ್ಲಿ ಟಾರ್ಚ್‌ ಬೆಳಗುತ್ತಿತ್ತು. ಹಿಂದೆ, ಮುಂದೆ ಯಾರಿದ್ದಾರೆ? ದಾರಿ ಹೇಗಿದೆ? ಕಾಣುತ್ತಿರಲಿಲ್ಲ. ಟಾರ್ಚ್‌ ಬೆಳಕು ಬಿದ್ದ ದಾರಿಯಷ್ಟೇ ಗೋಚರ. ಟಾರ್ಚ್‌ ಬೆಳಕಿನಲ್ಲಿ ಅಲ್ಲಲ್ಲಿ ಸಣ್ಣಕಲ್ಲು , ದೊಡªಕಲ್ಲುಗಳಷ್ಟೇ ನಮಗೆ ಕಾಣುತ್ತಿದ್ದುದು. ಕೆಲವೆಡೆ ಬಂಡೆ ಏರಬೇಕಿತ್ತು, ಇನ್ನು ಕೆಲವುಕಡೆ ಬಂಡೆಗಳ ನಡುವೆ ನುಸುಳಬೇಕಿತ್ತು. ನಡೆದಷ್ಟೂ ಗಮ್ಯ ಸ್ಥಾನ ಸಿಗಲೊಲ್ಲದು. ಅಲ್ಲಲ್ಲಿ ನಿಲ್ಲುತ್ತ, ವಿಶ್ರಮಿಸುತ್ತ, ಹಿಂದಿದ್ದವರು ಬಂದಮೇಲೆ ಮುಂದೆ ನಡೆದೆವು. ಇನ್ನೂ ಎಷ್ಟು ಬಂಡೆಗಳನ್ನು ಹತ್ತಿ ಇಳಿಯಬೇಕಪ್ಪಾ  ಎಂಬ ಭಾವ ಆಗಾಗ ಮನದಲ್ಲೇಳುತ್ತಲಿತ್ತು. ದಾರಿಯಲ್ಲಿ ಅಲ್ಲಲ್ಲಿ ಬಂಡೆಗಲ್ಲುಗಳ ಮೇಲೆ ಬಾಣದ ಗುರುತುಗಳಿದ್ದುದರಿಂದ  ದಾರಿ ತಪ್ಪುವ ಸಂಭವ ಎದುರಾಗಲಿಲ್ಲ.

ತಂಗಾಳಿಯಲ್ಲಿ ನಡೆಯುವುದೇ ವಿಶಿಷ್ಟ ಅನುಭವ. ಬೆಟ್ಟ ಹತ್ತುತ್ತ, ಹಿಂದೆ ತಿರುಗಿ ನೋಡಿದಾಗ ದೂರದಲ್ಲಿ ಪಟ್ಟಣದ ಬೀದಿದೀಪಗಳು ಫ‌ಳ ಫ‌ಳ ಹೊಳೆಯುವುದು ನೋಡಲು ಬಲು ಸೊಗಸಾಗಿತ್ತು. ದಾರಿಯಲ್ಲಿ ನಮಗೆ ಯಾವುದೇ ಕೀಟಗಳು, ವಿಷ ಜಂತುಗಳು ಕಾಣಲಿಲ್ಲ. ಕೀಟಗಳ ಸದ್ದೂ ಕೇಳಿರಲಿಲ್ಲ. ಸದ್ದೆಲ್ಲ ಮನುಜರದ್ದೇ. ನಮ್ಮ ಮುಂದೆ ಸುಮಾರು ಮಂದೆ ಹತ್ತುತ್ತಿದ್ದವರ ಮಾತು ಬೊಬ್ಬೆ ಕೇಳುತ್ತಲಿತ್ತು. ನಾವು ತಲುಪಬೇಕಿರುವ ಗಮ್ಯದ ಅಂತರ ಎರಡು ಕಿಮೀ.ಅಲ್ಲವೇ ಅಲ್ಲ. ಎಷ್ಟು ದೂರವಿದೆಯೋ ಗೊತ್ತಿಲ್ಲ.  ಇದಂತೂ ಸುಲಭದ ದಾರಿಯಲ್ಲ ಎಂದು ಕೆಲವರು ಉದ್ಗರಿಸಿದರು. ನಾವು ನಡೆದೆವು, ನಡೆದೆವು. ಕಾಲುದಾರಿಯುದ್ದಕ್ಕೂ ಎರಡೂ ಬದಿಗಳಲ್ಲಿ ಸಣ್ಣಪುಟ್ಟ ಪೊದೆಗಿಡಗಂಟಿಗಳಿವೆ. ಅಲ್ಲಲ್ಲಿ ಸಿಗುವ ಬೃಹತ್‌ ಬಂಡೆಗಲ್ಲುಗಳ ಮೇಲೆ ನಿಂತು ವಿರಮಿಸಬಹುದು.  ಅಂತೂ  ಬೆಳಗ್ಗೆ ಆರು ಗಂಟೆಗೆ ಸ್ಕಂದಬೆಟ್ಟದ ತುದಿ ತಲಪಿದೆವು.

ಬೆಳಕು ಇನ್ನೂ ಪಸರಿಸಿರಲಿಲ್ಲ. ಬೆಟ್ಟದಮೇಲೆ ಪಾಳುಬಿದ್ದ ಗುಡಿ ಇದೆ. ಗುಡಿಯೊಳಗೆ ಶಿವಲಿಂಗ, ಬಸವನ ಮೂರ್ತಿಗಳಿವೆ. ನಮಗಿಂತ ಮೊದಲು ಬಂದ ಬೇರೆ ಊರಿನವರು ಚಳಿ ತಡೆಯಲಾರದೆ  ಶೂ ಧರಿಸಿಯೇ ಗುಡಿಯೊಳಗೆ ಕೂತಿದ್ದರು. ಬಾಳೆಹಣ್ಣು ತಿಂದು ಸಿಪ್ಪೆ ಕೂಡ ಅಲ್ಲೇ ಎಸೆದಿದ್ದನ್ನು ನೋಡಿ ವಿಷಾದವಾಯಿತು.

ಬೆಟ್ಟದ ಮೇಲೆ ಕುಳಿರ್ಗಾಳಿ ಬೀಸಿ ನರನಾಡಿಗಳಲ್ಲಿ ಸಂವೇದನೆ ಮೂಡಿಸುತ್ತಿತ್ತು. ಅಲ್ಲಿ  ಕೆಲವರು ಅಲ್ಲಲ್ಲಿ ಬೆಂಕಿ ಹಾಕಿ ಚಳಿ ಕಾಯಿಸುತ್ತ ಕೂತಿದ್ದರು. ನಮ್ಮಲ್ಲೂ ಚಳಿ ತಡೆಯಲಾಗದವರು ಬೆಂಕಿ ಬಳಿ ಕೂತರು.    ಬೆಳಗಿನ ಝಾವದಲ್ಲಿ ಬೆಟ್ಟದ ತುದಿಯಲ್ಲಿ ನಿಂತು ಸುತ್ತಲೂ ನೋಡುವುದು ನಿಜಕ್ಕೂ ಸುಂದರ ಅನುಭವ.  ಸೂರ್ಯನ ದರ್ಶನ ಇನ್ನೂ  ಆಗಿರಲಿಲ್ಲ. ಆಗಸ ನಸು ಕೆಂಬಣ್ಣದಲ್ಲಿ ಕಾಣುವಾಗ ಭಾಸ್ಕರ ಏಳಲು ತಯಾರಿ ನಡೆಸುತ್ತಿ¨ªಾನೆಂದು ಅರ್ಥ!  ಆರೂವರೆಯಾಯಿತು. ಇನ್ನೂ ಸೂರ್ಯ ಮೇಲೇರಿರಲಿಲ್ಲ. ಯಾಕೋ ಸತಾಯಿಸುತ್ತೀಯಾ? ನಿನ್ನ ನೋಡಲೆಂದು ನಾವು ನಿದ್ರೆ  ಬಿಟ್ಟು ಕಷ್ಟಪಟ್ಟು ರಾತ್ರೆ ಬೆಟ್ಟ ಹತ್ತಿ ಬಂದಿದ್ದೇವೆ. ಬೇಗ ಬಾರೋ ಎಂದು  ಎಲ್ಲರೂ ಬೊಬ್ಬೆ ಹಾಕಿದರು. ಅಂತೂ 6.55ಕ್ಕೆ ಸೂರ್ಯ ಕೆಂಪುಚೆಂಡಿನಂತೆ ಕಂಡು ಮೆಲ್ಲನೆ ಇಣುಕಿ ನೋಡಲು ಶುರುಮಾಡಿದ. ಎಂಥ ಚಂದದ ನೋಟವದು.  ಸಣ್ಣ ಮಗುವನ್ನು ನಿ¨ªೆಯಿಂದ ತಾಯಿ ಎಬ್ಬಿಸಿದಾಗ ಕಣ್ಣುಜ್ಜುತ್ತ ಮೇಲೆ ಏಳುತ್ತಲ್ಲ… ಹಾಗೆಯೇ ಈ ಬಾಲಸೂರ್ಯನೂ ಕಣ್ಣುಜ್ಜುತ್ತ ಎದ್ದಂತೆ ಭಾಸವಾಯಿತು. ಆಗಸದ ಬಣ್ಣ ಕ್ಷಣಕ್ಕೊಮ್ಮೆ ಬದಲಾಗುತ್ತ, ಸೂರ್ಯ ಸ್ವಲ್ಪ ಸ್ವಲ್ಪವೇ ಮೇಲೇರಿ ಬರುವ, ಮೇಲೆಬಂದಂತೆ ಪ್ರಖರತೆ ಜಾಸ್ತಿ ಆಗುತ್ತ ಹೋಗುವ ದೃಶ್ಯ ನೋಡುವುದೇ ಬಲು ಸೊಗಸು.

ಹೀಗೆ ರಾತ್ರಿ ನಿ¨ªೆಕೆಟ್ಟು, ಟಾರ್ಚ್‌ ಹಿಡಿದು  ಬೆಟ್ಟ ಏರಿ ಸೂರ್ಯೋದಯ ನೋಡಲು ಹೋಗಬೇಕಾ? ನಿಮ್ಮೂರÇÉೇ ಸೂರ್ಯ ಉದಯ ಕಾಣುವುದಿಲ್ಲವೆ? ಎಂಬ ಪ್ರಶ್ನೆ ಬರಬಹುದು. ಆದರೆ, ತಂಗಾಳಿಯಲ್ಲಿ ನಡುಗುತ್ತ, ಹೀಗೆ ಒಟ್ಟಿಗೆ ನಿಂತು, ಹರಟುತ್ತ ಭಾಸ್ಕರನ ಆಗಮನಕ್ಕೆ ಕಾಯುವುದಿದೆಯಲ್ಲ? ಅದರಲ್ಲಿ ಸಿಗುವ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ. ಬೆಟ್ಟದ ತುದಿಯಲ್ಲಿ ಕುಳಿತು ಬೆಟ್ಟದ ಕೆಳಗೆ, ಸುತ್ತಲಿನ ಪ್ರಕೃತಿ ವೈವಿಧ್ಯವನ್ನು ನೋಡುತ್ತ ಕಾಲ ಕಳೆದೆವು.

ಭಾನು  ಮೆಲ್ಲಮೆಲ್ಲನೆ ಮೇಲೆಬಂದು ತನ್ನ ಪ್ರಖರತೆಯನ್ನು ಹೆಚ್ಚುಗೊಳಿಸಿದ. ತೀಕ್ಷ$ಗೊಂಡ ಸೂರ್ಯನನ್ನು ನೋಡಲು ಯಾರಿಗೂ ಉಮೇದಿಲ್ಲ.

ಇನ್ನು ಹೊರಡೋಣವೆಂದು ಆಯೋಜಕರು ಎಲ್ಲರನ್ನೂ ಹೊರಡಿಸಿದರು. ನಮ್ಮ ತಂಡದ ಚಿತ್ರ ತೆಗೆಸಿಕೊಂಡು 7.30ಕ್ಕೆ ಬೆಟ್ಟ ಇಳಿಯಲು ತೊಡಗಿದೆವು. ಬೆಳಕು ಹರಿದಾಗ ನಾವು  ಬಂದ ದಾರಿಯನ್ನು ನೋಡಿ ಓಹೋ ನಾವು ಇಂಥ ಸ್ಥಳದಲ್ಲಿ ಹತ್ತಿ ಬಂದಿದ್ದೇವಲ್ಲ ಎಂಥ ದೊಡ್ಡ ದೊಡ್ಡ ಬಂಡೆಗಲ್ಲುಗಳಿವೆ ಎಂದು ಉದ್ಧರಿಸಿದೆವು. ಕುರುಚಲು ಪೊದೆಗಳಿಂದ ಕೂಡಿದ ಸಸ್ಯಗಳಿದ್ದವು. ಬಂಡೆಗಳನ್ನು ಇಳಿಯಲು ಕೆಲವರಿಗೆ ತುಸು ಕಷ್ಟವಾಯಿತು.  9 ಗಂಟೆಗೆ ನಾವು ಪಾಪಾಗ್ನಿಮಠ ತಲಪಿದೆವು.

ರುಕ್ಮಿಣಿ ಮಾಲಾ     

ಟಾಪ್ ನ್ಯೂಸ್

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.