ಪೊಲೀಸರ ಮೊರೆ ಹೋದ ಯುವ ಜೋಡಿ
Team Udayavani, Feb 17, 2018, 12:49 PM IST
ನಂಜನಗೂಡು: ಪರಸ್ಪರ ಪ್ರೀತಿಸಿ ದೇವಾಲಯದಲ್ಲಿ ಮದುವೆಯಾದ ಯುವ ಜೋಡಿಗಳು ರಕ್ಷಣೆಗಾಗಿ ಪೊಲೀಸರ ಮೋರೆ ಹೋದ ಘಟನೆಗೆ ನಂಜನಗೂಡು ವೃತ್ತ ನಿರೀಕ್ಷಕರ ಕಾಯಾಲಯದಲ್ಲಿ ನಡೆದಿದೆ. ತಾಲೂಕಿನ ಕುರಿಹುಂಡಿಯ ಚೈತ್ರಾ ಹಾಗೂ ಅದೇ ಗ್ರಾಮದ ಕೃಷ್ಣಮೂರ್ತಿ ಶುಕ್ರವಾರ ಪಟ್ಟಣದ ಪರುಶುರಾಮ ದೇವಾಯದಲ್ಲಿ ಮದುವೆಯಾದ ಯುವ ಜೋಡಿ.
ತಾವಿಬ್ಬರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ದೇವಾಲಯದಲ್ಲಿ ಮದುವೆಯಾಗಿದ್ದೇವೆ, ನಮ್ಮ ಪ್ರೀತಿಗೆ ಮನೆಯವರ ವಿರೋಧವಿರುವುದರಿಂದ ನಮ್ಮಿಬ್ಬರಿಗೆ ರಕ್ಷಣೆ ನೀಡಿ ಎಂದ ಯುವತಿ ಚೈತ್ರಾ ಪೊಲೀಸರಿಗೆ ತಿಳಿಸಿದ್ದಾರೆ.
ಕಂದೇಗಾಲದ ವರನೊಂದಿಗೆ ಬಲವಂತವಾಗಿ ತನಗೆ ನಿಶ್ಚಿತಾರ್ಥ ಇಟ್ಟುಕೊಂಡಿದ್ದು ಅದನ್ನು ವಿರೋಧಿಸಿದ ನಾನು ಮನೆಯಿಂದ ಹೊರಬಂದು ಕೃಷ್ಣಮೂರ್ತಿಯೊಂದಿಗೆ ಮದುವೆಯಾಗಿರುವುದಾಗಿ ಹೇಳಿದ ಚೈತ್ರಾ ತಮ್ಮ ಮುಂದಿನ ಜೀವನಕ್ಕೆ ನೀವೆ ದಾರಿ ತೋರಿಸಬೇಕೆಂದು ಸಿಪಿಐ ಗೋಪಾಲಕೃಷ್ಣರಿಗೆ ಮನವಿ ಮಾಡಿದ್ದಾರೆ.
ಒಂದೇ ಗ್ರಾಮ ಹಾಗೂ ಜಾತಿಯವರಾದ ಇಬ್ಬರ ಕುಟುಂಬದ ಹಿರಿಯರನ್ನು ಕರೆಸಿ ಮಾತಾನಾಡಿ ಇಬ್ಬರ ಪ್ರೀತಿ ಪ್ರೇಮದ ವೈವಾಹಿಕ ಜೀವನದ ಕನಸನ್ನು ನನಸು ಮಾಡಲು ಪ್ರಯತ್ನಿಸುವುದಾಗಿ ಸಿಪಿಐ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.