ವಿಜಯಪುರಕ್ಕೆ ಸಿದ್ದು ಬಜೆಟ್‌ನಲ್ಲಿ ಬಂಪರ್‌ ಭಾಗ್ಯ


Team Udayavani, Feb 17, 2018, 5:07 PM IST

sidd.jpg

ವಿಜಯಪುರ: ದಾಖಲೆಯ ಬಜೆಟ್‌ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಅವರು ಮುಂಬರುವ ಆರ್ಥಿಕ ವರ್ಷದಲ್ಲಿ
ವಿಜಯಪುರ ಜಿಲ್ಲೆಗೂ ಬಂಪರ್‌ ಕೊಡುಗೆ ನೀಡಿದ್ದಾರೆ. ಬಜೆಟ್‌ನಲ್ಲಿ ವಿಜಯಪುರ ಜಿಲ್ಲೆಗೆ ಹಲವು ಕೊಡುಗೆ ಲಭ್ಯವಾಗಿದೆ. ಪ್ರಮುಖವಾಗಿ ಶತಮಾನ ಕಂಡಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಶತಮಾನ ಭವನ ನಿರ್ಮಾಣಕ್ಕೆ ಸರ್ಕಾರ ಹಾಗೂ ಅಫೆಕ್ಸ್‌ ಬ್ಯಾಂಕ್‌ ಐದು ಕೋಟಿ ರೂ. ಸಹಾಯಧನ ಘೋಷಿಸಿದೆ.

ಇಂಡಿ ತಾಲೂಕಿನ ರೋಡಗಿ ಕ್ರಾಸ್‌ ಹಾಗೂ ತಾಳಿಕೋಟೆ ಬಳಿ ವಿದ್ಯುತ್‌ ಉಪ ಕೇಂದ್ರಗಳ ಸ್ಥಾಪನೆ, ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ, ಕುರಿಗಾರರ ಅನುಕೂಲಕ್ಕಾಗಿ ಕುರಿ ರೋಗ ತಪಾಷಣಾ ಕೇಂದ್ರ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ಮುದ್ದೇಬಿಹಾಳದಲ್ಲಿ ಒಳಚರಂಡಿ ಯೋಜನೆಯ ಭಾಗ್ಯಗಳು ಲಭಿಸಿವೆ.

ಆದರೆ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಪ್ರವಾಸೋದ್ಯಮಕ್ಕೆ ವಿಶೇಷ ಯೋಜನೆ ಘೋಸಿಷದೇ ಮತ್ತೆ ಕಡೆಗಣಿಸಲಾಗಿದೆ. ಹೆಲಿಕಾಪ್ಟರ್‌-ಹೆಲಿ ಸೇವೆ ಅನುಷ್ಠಾನಕ್ಕೆ ಮುಂದಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಬಹುದಿನಗಳ ಕನಸಾಗಿರುವ ವಿಮಾನ ನಿಲ್ದಾಣದ ಯೋಜನೆ ನೆನೆಗುದಿಗೆ ಬಿದ್ದಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸಕ್ತ ತಮ್ಮ
ಅಧಿಕಾರವಧಿಯ ಬಜೆಟ್‌ನಲ್ಲಿ ಏನನ್ನೂ ಹೇಳಿಲ್ಲ.

ಬಜೆಟ್‌ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ.ಪಾಟೀಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ರಾಜ್ಯದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಒಣಭೂಮಿ ರೈತರಿಗೆ ಹಲವು ನೆರವಿಗೆ ಯೋಜನೆ ಪ್ರಕಟಿಸಿರುವುದ ಕ್ರಾಂತಿಕಾರಕ ಹೆಜ್ಜೆ. ಭೀಕರ ಬರ ಎದುರಿಸುವ ಒಣ ಪ್ರದೇಶದ ರೈತರಿಗೆ ಗರಿಷ್ಠ 10 ಸಾವಿರ ರೂ. ನೆರವು, ರಾಜ್ಯದ ಹಲವು ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಜಲಸಂಪನ್ಮೂಲ ಇಲಾಖೆಗೆ 58,393 ಕೋಟಿ ರೂ. ಅನುದಾನ ನೀಡಿದ್ದಾರೆ. ಉಳವಿ ಸುತ್ತಲಿನ ಕೆರೆ ತುಂಬಿಸಲು ನಬಾರ್ಡ್‌ನಿಂದ 14 ಕೋಟಿ ರೂ. ಅನುದಾನ ನೀಡಿರುವುದು ರಾಜ್ಯದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿರುವ ಐತಿಹಾಸಿಕ ಬಜೆಟ್‌ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮುದ್ದೇಬಿಹಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಮುದ್ದೇಬಿಹಾಳಕ್ಕೆ ನೂತನ ಕೃಷಿ ಸಂಶೋಧನಾ ಕೇಂದ್ರ ಮಂಜೂರು ಮಾಡಿರುವುದಕ್ಕೆ ಇಲ್ಲಿ ವ್ಯಾಪಕ ಹರ್ಷ ವ್ಯಕ್ತವಾಗಿದ್ದು, ಮುಖ್ಯಮಂತ್ರಿಗಳ ಕಾಳಜಿ ಸ್ವಾಗತಿಸಿ ಇಲ್ಲಿನ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮುಖಂಡರಾದ ಎಸ್‌.ಜಿ. ಪಾಟೀಲ, ಗುರಣ್ಣ ತಾರನಾಳ, ಬಸನಗೌಡ ಪಾಟೀಲ, ಎ. ನಾರಾಯಣಸ್ವಾಮಿ, ಮಹಿಬೂಬ ಗೊಳಸಂಗಿ, ಪಿಂಟೂ ಸಾಲಿಮನಿ, ಸಾಹೇಬಲಾಲ ಬಾವೂರ, ಸಂತೋಷ ನಾಯ್ಕೋಡಿ, ಗೋಪಿ ಮಡಿವಾಳರ, ವೈ.ಎಚ್‌. ವಿಜಯಕರ್‌, ರಾಮಣ್ಣ ರಾಜನಾಳ, ಅಶೋಕ ಅಜಮನಿ, ಅಪ್ಪು ದೆಗಿನಾಳ, ರಾಜು ವಡ್ಡರ, ರಾಜು ದೇಸಾಯಿ, ನಾಗೇಶ ಭಜಂತ್ರಿ, ಅಶೋಕ ಪಾದಗಟ್ಟಿ ಸೇರಿದಂತೆ ಹಲವರು ಇದ್ದರು.

ಹಸಿ ಸುಳ್ಳಿನ ಬಜೆಟ್‌ ಬಜೆಟ್‌ ಹಸಿ ಸುಳ್ಳಿನ ಹುಸಿ ಬಜೆಟ್‌. ರಾಜ್ಯ ವಿಧಾನಸಭಾ ಚುನಾವಣೆಯನ್ನೇ ಗಮನದಲ್ಲಿ ಇರಿಸಿಕೊಂಡು 2,09,181 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸಿರುವುದು ಬೊಕ್ಕಸದ ಮೇಲೆ 1 ಲಕ್ಷ ಕೋಟಿ ರೂ. ಹೊರೆ ಹೇರಿದೆ. ರಾಜ್ಯದಲ್ಲಿ ನಿರುದ್ಯೋಗ ನಿವಾರಣೆಗೆ ಕ್ರಮ ಕೈಗೊಳ್ಳದ ನೀರಸ ಬಜೆಟ್‌.
ಕೃಷ್ಣಾ ಗುನ್ನಾಳಕರ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ

ಮುದ್ದೇಬಿಹಾಳಕ್ಕೆ ಕೆಎಸ್‌ಕೆ ಬಜೆಟ್‌ನಲ್ಲಿ ಮುದ್ದೇಬಿಹಾಳಕ್ಕೆ ಕೃಷಿ ಸಂಶೋಧನಾ ಕೇಂದ್ರದ ಭಾಗ್ಯ ಕಲ್ಪಿಸಿದ್ದು, ಸ್ವಾಗತಾರ್ಹ ಕ್ರಮ. ಇದರಿಂದ ಜಿಲ್ಲೆಯ ರೈತರಿಗೆ, ಅದರಲ್ಲೂ ಮುದ್ದೇಬಿಹಾಳ ಭಾಗದ ರೈತರು ಮಾಹಿತಿ, ಸೌಲಭ್ಯ ಪಡೆಯಲು ಸಾಕಷ್ಟು ಅನುಕೂಲವಾಗಲಿದೆ. 
ಮಲ್ಲಪ್ಪ ಬಿದರಿ, ಅಧ್ಯಕ್ಷರು, ಪ್ರಕೃತಿ ಕೃಷಿಕರ ಸಂಸ್ಥೆ

ಸಾವಯವ ಕೃಷಿಗೆ ಪ್ರೋತ್ಸಾಹ ಕೃಷಿ ಪೂರಕ ಅತ್ಯುತ್ತಮ ಬಜೆಟ್‌ ಎನಿಸಿದೆ. ಕೃಷಿ-ತೋಟಗಾರಿಕೆ ಮಾತ್ರವಲ್ಲದೇ ಸಿರಿಧಾನ್ಯಗಳ ಬೆಳೆಗೆ ಪ್ರೋತ್ಸಾಹಕ್ಕೆ ಮುಂದಾಗಿರುವುದು ರೈತರಿಗೆ ಅನುಕೂಲವಾಗಲಿದೆ. ಜೊತೆಗೆ ಜಿಲ್ಲೆಗೆ ಹಲವು ಕೊಡುಗೆ ನೀಡಿದ್ದು, ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ ಭಾಗ್ಯ ನೀಡಿರುವುದು ಸಾವಯವ ಬೆಳೆ ಉತ್ಪಾದಿಸಲು ನೆರವಾಗಲಿದೆ.
ದೀಪಾ ಮಲ್ಲಿಕಾರ್ಜುನ, ಪ್ರಗತಿಪರ ಕೃಷಿ ಮಹಿಳೆ

ವಿದ್ಯಾರ್ಥಿಪರ ಬಜೆಟ್‌ ಶೈಕ್ಷಣಿಕ ವರ್ಷದಿಂದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವ, ವಿದ್ಯಾರ್ಥಿನಿಯರಿಗೆ ಸ್ನಾತ್ತಕೋತ್ತರ ಪದವಿ ಉಚಿತ ಶಿಕ್ಷಣ ನೀಡುವ ಘೋಷಣೆಗಳು ಸ್ವಾಗತಾರ್ಹವಾಗಿವೆ. ವಿದ್ಯಾರ್ಥಿ ಪರವಾಗಿರುವ ಈ ಬಜೆಟ್‌ ಅನುಷ್ಠಾನಕ್ಕೆ ಬರಬೇಕು.
ಸುನೀಲ ಸಿದ್ರಾಮಶಟ್ಟಿ, ಎಐಡಿಎಸ್‌ಒ ವಿಜಯಪುರ

ರೈತ ಕುಟುಂಬಕ್ಕೆ ನೆರವು ಚುನಾವಣೆ ಪೂರ್ವದಲ್ಲಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲಿ ಅನುಷ್ಠಾನ ಅಸಾಧ್ಯವಾದ ಅನುಮಾನದ ಬಜೆಟ್‌. ಇದರ ಹೊರತಾಗಿಯೂ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳ ನೆರವಿಗೆ ಧಾವಿಸುವ ಯೋಜನೆ ಪ್ರಕಟಿಸಿದ್ದು ಸ್ವಾಗತಾರ್ಹ. ನೀರಾವರಿಗೆ 16 ಸಾವಿರ ಕೋಟಿ ರೂ. ಮೀಸಲಿರಿಸಿದ್ದು, ಕೃಷಿ ಸಹಕಾರಿ ಬ್ಯಾಂಕ್‌ನಲ್ಲಿ ರೈತರ ಸಾಲ ಮನ್ನಾ ಮಾಡಿರುವುದು ಸಂತಸದ ಸಂಗತಿ. 
ರೇಶ್ಮಾ ಪಡೇಕನೂರ, ಜೆಡಿಎಸ್‌ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ

ಪ್ರಗತಿಪರ-ಜನಪರ
ಬಜೆಟ್‌ ಎಲ್ಲ ವರ್ಗದ ಹಾಗೂ ಹಲವು ರಂಗಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿರುವ ಪ್ರಗತಿಪರ ಹಾಗೂ ಜನಪರ ಬಜೆಟ್‌. ಸಮಾಜದಲ್ಲಿರುವ ಶೋಷಿತರು, ರೈತರು, ಮಹಿಳೆಯರು, ವಿದ್ಯಾರ್ಥಿ ಹೀಗೆ ಎಲ್ಲರನ್ನೂ ಗಮನದಲ್ಲಿರಿಸಿ ಮಂಡಿಸಿದ ಬಜೆಟ್‌.
ವಸಂಗ ಹೊನಮೋಡೆ,ಪ್ರಧಾನ ಕಾರ್ಯದರ್ಶಿ,

ಜಿಲ್ಲಾ ಕಾಂಗ್ರೆಸ್‌ ಸಮಿತಿ ಗೊತ್ತು-ಗುರಿ ಇಲ್ಲ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ ಜನವಿರೋಧಿ  ಬಜೆಟ್‌. ಗೊತ್ತು ಗುರಿ ಇಲ್ಲದ ನಿರಾಸೆಯ ಬಜೆಟ್‌ ಇದಾಗಿದೆ.
ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವ  

ಸಂವಿಧಾನ ಆಶಯ ಈಡೇರಿಸಿದ ಬಜೆಟ್‌ ಬಜೆಟ್‌ ರೈತ, ದಲಿತ, ಮಹಿಳೆ ಹಾಗೂ ಎಲ್ಲ ಸಣ್ಣಪುಟ್ಟ ಜಾತಿಗಳನ್ನೊಳಗೊಂಡು ಅಭಿವೃದ್ಧಿಗೆ ಆದ್ಯತೆ ನೀಡಿ ಸಂವಿಧಾನದ ಆಶಯ ಈಡೇರಿಸಿದ ಬಜೆಟ್‌. ಜಿಲ್ಲೆಗೂ ಹಲವು ಸೌಲಭ್ಯ ಕಲ್ಪಿಸಿರುವುದು ಅಭಿನಂದನಾರ್ಹ ಕ್ರಮ.
ಅಡಿವೆಪ್ಪ ಸಾಲಗಲ್‌, ರಾಜ್ಯಾಧ್ಯಕ್ಷ, ದಲಿತ ಸಮನ್ವಯ ಸಮಿತಿ

ನಿರಾಶಾದಾಯಕ 
ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ ನಿರಾಶಾದಾಯಕವಾಗಿದೆ. ರಾಜ್ಯದ ರೈತರ ಸಾಲ ಮನ್ನಾ ಆಸೆಗೆ ತಣ್ಣೀರೆರಚಿದಂತಾಗಿದೆ. ರಾಜ್ಯದ ಯುವಕರಿಗೆ ಉದ್ಯೋಗ ಭಾಗ್ಯವಿಲ್ಲ. ಸಾಮಾನ್ಯ ಪ್ರಜೆಗಳಿಗೆ ಯಾವುದೇ ಲಾಭವಾಗಿಲ್ಲ. 
ಬಾಬುಗೌಡ ಬಿರಾದಾರ,  ಬಿಜೆಪಿ ಮುಖಂಡ 

ಟಾಪ್ ನ್ಯೂಸ್

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.