ಕ್ಯಾಚ್ ಪಡೆದು ಲಕ್ಷಾಧಿಪತಿಯಾದ ವೀಕ್ಷಕ!
Team Udayavani, Feb 18, 2018, 6:40 AM IST
ಆಕ್ಲೆಂಡ್: ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಂದ ಕ್ರಿಕೆಟ್ ಅಭಿಮಾನಿಯೊಬ್ಬ ಕ್ರೀಡಾಂಗಣದಿಂದ ಹೊರಬರುವಾಗ ಲಕ್ಷಾಧಿಪತಿಯಾಗಿದ್ದಾನೆ!
ಇದು ಆಕ್ಲೆಂಡ್‌ನ “ಈಡನ್ ಪಾರ್ಕ್’ ಕ್ರೀಡಾಂಗಣದಲ್ಲಿ ಶುಕ್ರವಾರದ ಟಿ20 ಪಂದ್ಯದ ವೇಳೆ ನಡೆದ ಘಟನೆ. ಹೌದು, ಕಿವೀಸ್-ಆಸೀಸ್ ನಡುವಿನ ತ್ರಿಕೋನ ಸರಣಿಯ ಪಂದ್ಯ ವೀಕ್ಷಿಸಲು ಮಿಚೆಲ್ ಗ್ರಿಮ್ಸ್‌ಟೋನ್ ತನ್ನ ಸ್ನೇಹಿತರೊಂದಿಗೆ ಸ್ಟೇಡಿಯಂಗೆ ಆಗಮಿಸಿದ್ದ. ಪಂದ್ಯದ ವೇಳೆ ಕಿವೀಸ್ ಬ್ಯಾಟ್ಸ್‌ಮನ್ ರಾಸ್ ಟಯ್ಲರ್ ಸ್ಕ್ವೇರ್ ಲೆಗ್ ಮೂಲಕ ಚೆಂಡನ್ನು ಸಿಕ್ಸರ್‌ಗೆ ಬಾರಿಸಿದರು. ಚೆಂಡು ಪ್ರೇಕ್ಷಕರ ಗ್ಯಾಲರಿ ಬಳಿ ನುಗ್ಗಿ ಬಂತು. ಈ ವೇಳೆ ಮಿಚೆಲ್ ಒಂದೇ ಕೈನಲ್ಲಿ ಕ್ಯಾಚ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಕೂಡಲೇ ಹತ್ತಿರವಿದ್ದ ಕ್ರಿಕೆಟ್ ಅಭಿಮಾನಿಗಳೆಲ್ಲ ಮಿಚೆಲ್‌ಗೆ ಅಭಿನಂದನೆ ಸಲ್ಲಿಸಿದರು. ಬಳಿಕ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಮಿಚೆಲ್‌ಗೆ 24 ಲಕ್ಷ ರೂ. ನೀಡಿತು.
ಪಂದ್ಯದ ಆರಂಭಕ್ಕೂ ಮೊದಲೇ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಕ್ಯಾಚ್ ಪಡೆಯುವ ಪ್ರೇಕ್ಷಕರಿಗೆ 24 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಅದರಂತೆ ಮಿಚಲ್‌ಗೆ ಅದೃಷ್ಟ ಒಲಿದು ಬಂತು ಎನ್ನುವುದು ವಿಶೇಷ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.