ಮಾರ್ಚ್‌ನಲ್ಲಿ “ಓ ಪ್ರೇಮವೇ’
Team Udayavani, Feb 18, 2018, 11:03 AM IST
“ಓ ಪ್ರೇಮವೇ’ ಎಂಬ ಚಿತ್ರವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಆ ಚಿತ್ರ ಮಾರ್ಚ್ 9ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಅದಕ್ಕೂ ಮೊದಲು ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ. ನಟ ದರ್ಶನ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಈ ಚಿತ್ರದ ಮೂಲಕ ಮನೋಜ್ ನಾಯಕರಾಗಿ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ.
ಕೇವಲ ನಾಯಕರಾಗಿಯಷ್ಟೇ ಅಲ್ಲ, ಚಿತ್ರದ ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿ ಕೂಡಾ ಅವರದೇ. “ಚಿತ್ರದ ಟ್ರೇಲರ್ ಅನ್ನು ದರ್ಶನ್ ಅವರು ಬಿಡುಗಡೆ ಮಾಡಿದ್ದಾರೆ. ಟ್ರೇಲರ್ ಬಗ್ಗೆಯೂ ಮೆಚ್ಚುಗೆ ಸೂಚಿಸಿದ್ದಾರೆ. ಆರಂಭದಲ್ಲಿ ನಾವು ಮೂರು ಟ್ರೇಲರ್ ಕಟ್ ಮಾಡಿದೆವು. ಅಂತಿಮವಾಗಿ ಅದರಲ್ಲಿ ಯಾವುದು ಬೆಸ್ಟ್ ಎನಿಸಿತೋ ಅದನ್ನು ಆಯ್ಕೆ ಮಾಡಿದೆವು. ಈ ಟ್ರೇಲರ್‌ನಲ್ಲಿ ಸಿನಿಮಾಕ್ಕೆ ಸಂಬಂಧಪಟ್ಟ ಎಲ್ಲಾ ಅಂಶಗಳೂ ಇವೆ’ ಎಂಬುದು ಅವರ ಮಾತು.
ಮೊದಲ ಬಾರಿಗೆ ನಟನೆ, ನಿರ್ದೇಶನ, ನಿರ್ಮಾಣ ಎಲ್ಲವನ್ನು ಒಟ್ಟಿಗೆ ವಹಿಸಿಕೊಂಡ ಮನೋಜ್‌ಗೆ ಆರಂಭದಲ್ಲಿ ಪ್ಲ್ರಾನಿಂಗ್ ಮಾಡೋದು ತುಂಬಾ ಕಷ್ಟವಾಯಿತಂತೆ. ಆದರೆ, ಪಾತ್ರದ ಬಗ್ಗೆ ಸರಿಯಾದ ಕಲ್ಪನೆ ಇದ್ದಿದ್ದರಿಂದ ನಟನೆ ಸುಲಭವಾಯಿತಂತೆ. ಸ್ವಿಟ್ಜರ್ಲೆಂಡ್ ಸೇರಿದಂತೆ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ನಿಕಿ ಗರ್ಲಾನಿ ನಾಯಕಿ. ಆದರೆ, ಚಿತ್ರದ ಪ್ರಮೋಶನ್‌ನಿಂದ ದೂರವೇ ಉಳಿದಿದ್ದಾರೆ.
ಈ ಬಗ್ಗೆ ಮನೋಜ್ ಅವರನ್ನು ಕೇಳಿದರೆ, “ಅವರು ಪ್ರಭುದೇವ ಅವರ ಸಿನಿಮಾದಲ್ಲಿ ಬಿಝಿ ಇದ್ದಾರಂತೆ’ ಎಂಬ ಉತ್ತರ ಬರುತ್ತದೆ. ಚಿತ್ರಕ್ಕೆ ಕಿರಣ್ ಹಂಪಾಪುರ ಛಾಯಾಗ್ರಹಣವಿದೆ. “ಸಿನಿಮಾ ತುಂಬಾ ಕಲರ್‌ಫುಲ್ ಆಗಿದೆ. ನಿರ್ದೇಶಕರು ತುಂಬಾ ಗಮನಹರಿಸಿ ಈ ಸಿನಿಮಾ ಮಾಡಿದ್ದಾರೆ. ಯಾವ ಭಾಗದ ಚಿತ್ರೀಕರಣ ಮಾಡುತ್ತಾರೋ ಆ ಅದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ಇಡೀ ಸಿನಿಮಾವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ’ ಎನ್ನುವುದು ಅವರ ಮಾತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.