ಬಳ್ಳಪದವು ಮಾಧವ ಉಪಾಧ್ಯಾಯರಿಗೆ ಇಂದು ಸಾರ್ವಜನಿಕ ಸಮ್ಮಾನ
Team Udayavani, Feb 18, 2018, 11:17 AM IST
ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಸುತ್ತುಮುತ್ತಲ ಪರಿಸರದಲ್ಲಿ ವ್ಯಾಪಿಸಿಕೊಂಡಿರುವ ಕರಾಡ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವೈದಿಕ ವಿದ್ವಾಂಸ ವೇ|ಮೂ| ಬಳ್ಳಪದವು ಮಾಧವ ಉಪಾಧ್ಯಾಯರಿಗೆ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ಇತ್ತೀಚೆಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದೆ. ಈ ನಿಮಿತ್ತ ಫೆ. 18ರಂದು ಅಗಲ್ಪಾಡಿ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಅವರನ್ನು ಸಾರ್ವಜನಿಕವಾಗಿ ಸಮ್ಮಾನಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ.
ತೊಂಬತ್ತರ ಇಳಿವಯಸ್ಸಿನಲ್ಲೂ ಮಾರ್ಗದರ್ಶನ ಬಯಸಿ ಬರುವವರನ್ನು ನಿರಾಶೆಗೊಳಿಸದ ಬಳ್ಳಪದವು ಉಪಾಧ್ಯಾಯರು ಅಪಾರ ಸಂಖ್ಯೆಯ ಶಿಷ್ಯರ ಪರಂಪರೆಯೊಂದನ್ನು ಹುಟ್ಟು ಹಾಕಿದ್ದಾರೆ. ಇಳಿ ವಯಸ್ಸಿನಲ್ಲೂ ಪೌರೋಹಿತ್ಯ ಮತ್ತು ಆಳವಾದ ಅಧ್ಯಯನ ಮತ್ತು ಪರಿಣತಿಯನ್ನು ಬಯ ಸುವ ತಾಂತ್ರಿಕ ಪೂಜಾ ವಿಧಿ ವಿಧಾನಗಳ ಕ್ಷೇತ್ರದಲ್ಲಿ ತಮ್ಮ ಸೇವಾ ಕೈಂಕರ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ವೈದಿಕ ಪರಂಪರೆಯ ಪಂಡಿತಾರಾಧ್ಯರೆನಿಸಿಕೊಂಡಿರುವ ಮಾಧವ ಉಪಾಧ್ಯಾಯರಿಂದ ಜಾತಿ, ಮತ ಭೇದವಿಲ್ಲದೆ ಸಮಾಜದ ಎಲ್ಲ ಸ್ತರಗಳ ಮಂದಿಯೂ ಉಪಕೃತರಾಗಿದ್ದಾರೆ. ಧಾರ್ಮಿಕ ವಿಧಿ ವಿಧಾನಗಳು, ಪೂಜೆ ಪುನಸ್ಕಾರಗಳು ಹಾಗೂ ಯಜ್ಞಯಾಗಾದಿಗಳ ಬಗ್ಗೆ ಇದ ಮಿತ್ಥಂ ಎಂಬಂತೆ ಅಧಿಕಾರ ವಾಣಿಯಿಂದ ಮಾತನಾಡಬಲ್ಲ ವಿದ್ವತ್ ಅವರದ್ದು.
1928, ಜ.14ರಂದು ವೇ|ಮೂ| ಬ್ರಹ್ಮಶ್ರೀ ವಾಸುದೇವ ಉಪಾಧ್ಯಾಯ ಮತ್ತು ದುರ್ಗಾಂಬಾ ದಂಪತಿಯ ಮಗನಾಗಿ ಹುಟ್ಟಿದ ಮಾಧವ ಉಪಾಧ್ಯಾಯರು ಬಳ್ಳ ಪದವು ಮನೆತನದ ಕಟ್ಟಾ ಧಾರ್ಮಿಕ ಪರಂಪರೆಯ ಚೌಕಟ್ಟಿನೊಳಗೆ ಬೆಳೆದರು. ಚಿಕ್ಕಂದಿನಲ್ಲಿಯೇ ಸಂಸ್ಕೃತಾಭ್ಯಾಸದ ಕಡೆಗೆ ವಿಶೇಷ ಒಲವನ್ನು ಹೊಂದಿದ್ದ ಅವರು ಏಳನೆಯ ವಯಸ್ಸಿಗೆ ಬ್ರಹ್ಮೋಪದೇಶ ದೀಕ್ಷೆ ಪಡೆದು ತಂದೆಯ ಮಾರ್ಗದರ್ಶನದಲ್ಲಿ ಋಗ್ವೇದ, ಪೌರೋಹಿತ್ಯ ಮತ್ತು ತಾಂತ್ರಿಕ ಪೂಜಾ ವಿಧಿವಿಧಾನಗಳನ್ನು ಅಭ್ಯಸಿಸ ತೊಡಗಿದರು.
ಹದಿನೈದರ ವಯಸ್ಸಿಗೆ ಸಂಸ್ಕೃತ ಭಾಷೆ ಮತ್ತು ಸಾಹಿತ್ಯವನ್ನು ಕರಗತ ಮಾಡಿಕೊಂಡು ಅಗಲ್ಪಾಡಿಯ ಶ್ರೀ ಅನ್ನ ಪೂರ್ಣೇಶ್ವರಿ ಪ್ರೌಢಶಾಲೆಯಲ್ಲಿ ಅಧ್ಯಾಪನ ವೃತ್ತಿಗೆ ಸೇರಿದರು. ಅನಂತರದ ವರ್ಷಗಳಲ್ಲಿ ಅಧ್ಯಾಪನದೊಂದಿಗೆ ಅಧ್ಯಯನವನ್ನೂ ತಪಸ್ಸಿನಂತೆ ಮಾಡಿದ ಅವರು ಮಧ್ಯಮ ಮತ್ತು ಪ್ರೌಢ ಸಂಸ್ಕೃತ ಸಾಹಿತ್ಯದಲ್ಲಿ ಶಿರೋಮಣಿ ಎನಿಸಿಕೊಂಡರು. ಬೆಂಗಳೂರಿನ ಶೃಂಗೇರಿ ಮಠದಲ್ಲಿದ್ದುಕೊಂಡು ಅದ್ವೆ„ತ, ವೇದಾಂತವನ್ನು ಕರಗತ ಮಾಡಿಕೊಂಡರು.
ವೇದ ಮೂರ್ತಿ ಬ್ರಹ್ಮಶ್ರೀ ಪಂಡಿತರಾಜ, ವೇದಮೂರ್ತಿ ಬ್ರಹ್ಮಶ್ರೀ ಬೋಳೂರು ರಾಮ ಭಟ್ಟ, ಘನಪಾಠಿ ದಳಿ ಭೀಮ
ಭಟ್ಟ, ವೇದಮೂರ್ತಿ ತಲೇಕ ರಾಮಚಂದ್ರ ಭಟ್ಟ, ಕೇರಳದ ಆಗಮ ಶಾಸ್ತ್ರಜ್ಞರಾದ ದಿವಾಕರನ್ ನಂಬೂದಿರಿ, ವೇದಬ್ರಹ್ಮ
ಖರೆ ಗಣಪತಿ ಶಾಸ್ತ್ರಿ ಮುಂತಾದ ಗುರುಬ್ರಹ್ಮರ ಗರಡಿಯಲ್ಲಿ ಪಳಗಿ ಆಗಮ ಗಳು, ಮೀಮಾಂಸೆ, ಶೌತ್ರ ವಿಜ್ಞಾನ ಮತ್ತಿತರ ಶಾಸ್ತ್ರ ಗ್ರಂಥಗಳನ್ನು ಅಧ್ಯಯನ ಮಾಡಿದರು. ಡಾ| ಜಿ.ಎನ್. ಭಿಡೆಯವರಲ್ಲಿ ಆಯು ರ್ವೇದ ವೈದ್ಯಶಾಸ್ತ್ರವನ್ನು ಅಭ್ಯಾಸ ಮಾಡಿ ರುವ ಅವರು ಸಮಕಾಲೀನ ಧಾರ್ಮಿಕ ಸೇವಾಕಾಂಕ್ಷಿಗಳ ಜತೆ ವಿದ್ವತ್ಪೂರ್ಣವಾದ ಚರ್ಚೆ-ಚಿಂತನೆಗಳನ್ನು ಮಾಡಿ ಜ್ಞಾನ ಗಳಿಸಿಕೊಂಡರು.
ಶಿಕ್ಷಕ ವೃತ್ತಿಗೆ ವಿದಾಯ ಹೇಳಿದ ಬಳಿಕ ಜೀವನೋಪಾಯಕ್ಕಾಗಿ ಪೌರೋಹಿತ್ಯವನ್ನು ಕಾಯಕವನ್ನಾಗಿ ಮಾಡಿ ಕೊಂಡರು. ತಾಂತ್ರಿಕ ವಿಧಿಯಾಧಾರಿತ ಪೌರೋಹಿತ್ಯ ಮತ್ತು ಪೂಜಾ ವಿಧಾನಕ್ಕೆ ಇನ್ನೊಂದು ಹೆಸರಾಗಿದ್ದರು. ಶೃಂಗೇರಿ ಮಠದ ಪ್ರತಿಯೊಂದು ಧಾರ್ಮಿಕ ಚಟುವಟಿಕೆಯಲ್ಲೂ ಮುಂಚೂಣಿಯಲ್ಲಿದ್ದುಕೊಂಡು ಅಲ್ಲಿನ ಮಠಾಧೀಶರ ಆಪ್ತವಲಯದಲ್ಲಿ ಗುರುತಿಸಿಕೊಂಡು ಬಿಡುವಿಲ್ಲದೆ ದುಡಿದರು. ಅವರ ಧರ್ಮ-ಕರ್ಮ -ಸಂಸರ್ಗದಿಂದ ಸಂತಸಗೊಂಡ ಶೃಂಗೇರಿ ಮಠದ ಸ್ವಾಮೀಜಿಯವರು ‘ಪಂಡಿತ ಪ್ರವರ’ ಬಿರುದನ್ನು ನೀಡಿ ಗೌರವಿಸಿದ್ದಾರೆ.
ಇದೆಲ್ಲದರ ನಡುವೆಯೇ ಉಪಾಧ್ಯಾಯರು ಸಂಗೀತ ವಿದ್ವಾನ್ ವೆಂಕಟೇಶಯ್ಯ ಮತ್ತು ಶೃಂಗೇರಿ ಲಕ್ಷ್ಮಣ ಶಾಸ್ತ್ರಿಯವರಿಂದ ಕರ್ನಾಟಕ ಸಂಗೀತವನ್ನು ಕಲಿತರು. ದೇವಸ್ಥಾನಗಳ ಜಾತ್ರೆ, ಉತ್ಸವಗಳ ದಿನಗಳಲ್ಲಿ ಸಂಗೀತ ಕಛೇರಿಗಳನ್ನು ಸಂಘಟಿಸಿ, ಹಾಡಿ ರಂಜಿಸಿದರು. ಸಂಗೀತ ಪ್ರತಿಭೆಯನ್ನು ಬಳುವಳಿಯಾಗಿ ಪಡೆದ ಉಪಾಧ್ಯಾಯರ ಪುತ್ರ ನಟರಾಜ ಶರ್ಮಾ ಸಿನೆಮಾಗಳಲ್ಲಿ ಹಿನ್ನೆಲೆ ಗಾಯಕರಾಗಿ ಹೆಸರು ಮಾಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತ ಭಾಷೆ ಹಾಗೂ ಸಾಹಿತ್ಯದಲ್ಲಿ ವಿಶೇಷ ಪಾಂಡಿತ್ಯವನ್ನು ಹೊಂದಿದ್ದ ಪ್ರಾಧ್ಯಾಪಕ ಉಪ್ಪಂಗಳ ನಾರಾಯಣ ಶರ್ಮಾ ಮತ್ತು ಗುರು ಮನೆತನದ ಹಿರಿಯ ವಿದ್ವಾಂಸ ದಿವಂಗತ ಪೆರ್ಲ ಕೃಷ್ಣ ಭಟ್ಟರೊಂದಿಗೆ ನಿಕಟ ಒಡನಾಟ ಹೊಂದಿದ್ದರು.
ಮಾಧವ ಉಪಾಧ್ಯಾಯರು ಸಂಸ್ಕೃತ ಭಾಷೆಯಲ್ಲಿ ರಚಿಸಿದ ಸುಮಾರು 35 ಗ್ರಂಥಗಳು ಅವರ ಪಾಂಡಿತ್ಯದ ಪ್ರತಿಬಿಂಬದಂತಿವೆ. ಪ್ರಚಾರ ಬಯಸದೆ ತೆರೆಮರೆ ಕಾಯಿಯಾಗಿಯೇ ಉಳಿದ ಉಪಾಧ್ಯಯರಿಗೆ ಗೌರವ ಡಾಕ್ಟರೇಟ್ ಅರ್ಹವಾಗಿ ಸಂದಿದೆ.
ರಾಮಭಟ್ಟ ಸಜಂಗದ್ದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
Sullia: ಪರಾರಿಯಾಗುತ್ತಿದ್ದ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು
Puttur: ಬಸ್ ನಿಲ್ದಾಣದಲ್ಲಿ ಕಿರುಕುಳ; ಯುವಕನಿಗೆ ಗೂಸಾ
MUST WATCH
ಹೊಸ ಸೇರ್ಪಡೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.