ಮಾನವ ಮಂಗನಾದಾಗಲೇ ಜೀವ ವಿಕಾಸ


Team Udayavani, Feb 19, 2018, 9:08 AM IST

3-aa.jpg

ಕೂತಲ್ಲಿ ಕೂರಲಾಗದ, ಸದಾ ಚಡಪಡಿಸುತ್ತಾ, ಏನನ್ನಾದರೂ ಜಗಿಯುತ್ತಾ, ವಿಶಿಷ್ಟ ಸಂಜ್ಞೆಗಳನ್ನು ಮಾಡುತ್ತಲೇ ಕಾಲ ಕಳೆ ಯುವ ಮಂಗ, ಮಾನವನ ಒಂದು ಮುಖವನ್ನು ನಮಗೆ ನೆನಪಿ ಸುತ್ತಲೇ ಇರುತ್ತದೆ. ಅದರ ಅಂಗಚೇಷ್ಟೆಗಳನ್ನು ಗಮನಿಸಿದಾಗ ಮಾನವನಿಗೂ ಅದಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ ಅನಿಸದೇ ಇರದು. ಆದರೆ ಆ ಹೋಲಿಕೆ ಎಲ್ಲಿಯವರೆಗೆ?

ಬ್ರಿಟನ್‌ ವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌ ಅಂದು ತನ್ನ ಜೀವ ಸಂಕುಲದ ಉಗಮ ಮಹಾಪ್ರಬಂಧವನ್ನು ಮಂಡಿಸುವಾಗ ಆತಂಕದ ಅಧೈರ್ಯಕ್ಕೆ ಒಳಗಾಗಿದ್ದ. ಅದು ವಿಜ್ಞಾನದ ಸಹಜ ಗುಣ. ಅಪನಂಬಿಕೆಯ ಜೀವದ್ರವ್ಯದೊಂದಿಗೆ ಜಗವನ್ನು ಜಾಲಾ ಡುವ ಅದಕ್ಕೆ ಮನುಷ್ಯನ ಅಂತರಂಗಕ್ಕೆ ಧೈರ್ಯವನ್ನು ತುಂಬುವ ಸಾಮರ್ಥಯವೇನೂ ಹೆಚ್ಚಿಲ್ಲ. ಭೂಮಿಯ ನಕಾಶೆಯನ್ನು ಕಿಸೆಯ ಲ್ಲಿಟ್ಟುಕೊಂಡು ಜಗತ್ತೆಲ್ಲಾ ಸುತ್ತಿಬಂದ ಡಾರ್ವಿನ್‌ ಲೆಕ್ಕವಿಲ್ಲದಷ್ಟು ಪಳೆಯುಳಿಕೆಗಳನ್ನು ತನ್ನ ಮಸೂರದ ಬೆಳಕಿನಲ್ಲಿ ಕಂಡಿದ್ದ. ಅವನ್ನು ಅಕ್ಕಪಕ್ಕ ಜೋಡಿಸಿ ಆಸ್ಥೆಯಿಂದ ಅಧ್ಯಯನ ಮಾಡಿದ್ದ. ಮನುಷ್ಯ ಮರದಿಂದಲೇ ಜಿಗಿದು ನೆಲಕ್ಕೆ ಬಂದನೆಂಬ ಸತ್ಯದ ಕಡೆಗೇ ಅವನ ಸಂಶೋಧನೆಗಳು ಬೊಟ್ಟುಮಾಡುತ್ತಿದ್ದವು. ಮಂಗನಿಂದಲೇ ಮಾನವನಾದದ್ದು ಎಂಬ ಅವನ ಸತ್ಯವನ್ನು ಜಗಕ್ಕೆ ಕೂಗಿ ಹೇಳಲು ಹೊರಡುವ ಮುನ್ನ ಭೂಮಿ ಸೂರ್ಯನ ಸುತ್ತಲೂ ತಿರುಗುತ್ತದೆ ಎಂದು ಪ್ರತಿಪಾದಿಸಿದ ಗೆಲಿಲಿಯೋ ಮರಣದಂಡನೆಗೆ ಒಳಗಾದ ಉದಾಹರಣೆ ಅವನನ್ನು ಬೆವರೊಡೆಸುತ್ತಿತ್ತು. ಇಂದಿನಂತೆಯೇ ಅಂದಿನ ಧರ್ಮ ಗುರುಗಳು, ರಾಜಕಾರಣಿಗಳು ಸಮಾಜವನ್ನು ನಿಯಂತ್ರಿಸುತ್ತಿದ್ದರು. ಅವರನ್ನು ಎದುರುಹಾಕಿಕೊಂಡು ತಾನು ಕಂಡ ಸತ್ಯ ನುಡಿಯಲು ಬೇಕಾದ ಧೈರ್ಯ, ತಾಕತ್ತುಗಳು ಡಾರ್ವಿನ್‌ಗೆ ಇರಲಿಲ್ಲ. ಹಾಗಾಗಿ origin of species ಮಹಾ ಗ್ರಂಥದಲ್ಲಿ ಡಾರ್ವಿನ್‌ ತಾನು ಸಂಶೋಧಿಸಿದ ಪಳೆಯುಳಿಕೆಗಳ ಆಧಾರದಲ್ಲಿ ಲಕ್ಷಾಂತರ ವರ್ಷಗಳಿಂದ ನಿರಂತರವಾಗಿ ರೂಪಾಂತರಗೊಳ್ಳುತ್ತಿರುವ, ಪರಿಸರದೊಂದಿಗೆ ಬದಲಾಗುತ್ತಾ ಜೀವ ವಿಕಾಸ ಒಳಗಾಗುವ ಒತ್ತಡಗಳಿಂದ ಜೀವ ಸಂಕುಲ ರೂಪುಗೊಂಡಿದೆ ಹಾಗೂ ಇದು ನಿರಂತರ ಮತ್ತು ಜೀವ ಸಂಕುಲದ ವಿಕಾಸದ ಆಧಾರದಲ್ಲಿಯೇ ಮನುಷ್ಯನ ಮೂಲದ ಮೇಲೂ ಅಲೋಚಿಸಬಹುದಾಗಿದೆ ಎಂದಷ್ಟೇ ಹೇಳಿ ಸುಮ್ಮನಾದ.

ತೇಜಸ್ವಿಯವರು ತಮ್ಮ ಮಿಸ್ಸಿಂಗ್‌ ಲಿಂಕ್‌ ಪುಸ್ತಕದಲ್ಲಿ Darwin’s Bulldog ಎಂದೇ ಕರೆಯಲಾಗುತ್ತಿದ್ದ ಥಾಮಸ್‌ ಹಕ್ಸ್‌ ಲಿಯ ಬಗ್ಗೆ ದಾಖಲಿಸಿದ್ದಾರೆ. ಡಾರ್ವಿನ್‌ನ ಮೇಲಿನ ಅಭಿಮಾನಕ್ಕೆ ಆತ ಸಾರ್ವಜನಿಕ ಪ್ರತಿಭಟನೆಗಳನ್ನು ಧೈರ್ಯದಿಂದ ಎದುರು ಹಾಕಿಕೊಂಡ. ಸಾಮಾಜಿಕ ತಿಳಿವಳಿಕೆಗಳು, ಧಾರ್ಮಿಕ ನಂಬಿಕೆಗಳು ಎಂಥ ಆಧಾರರಹಿತವಾದುವೆಂದು ಸಾಬೀತು ಮಾಡುವ ಧೈರ್ಯ ಮಾಡಿ ತನ್ನ ಸಹೋದ್ಯೋಗಿಯ ಸಂಶೋಧನೆಯನ್ನು ಬಹುಪಾಲು ಜನ ಒಪ್ಪಲು ಕಾರಣನಾದ. ಗೊರಿಲ್ಲಾ, ಚಿಂಪಾಂಜಿ, ಗಿಬನ್‌ನಂತಹ ವಾನರ ಸಮೂಹಕ್ಕೂ ಮೂಲವಾದ ಪ್ರಾಣಿ ಯೊಂದರಿಂದಲೇ ಮಾನವ ವಿಕಾಸವಾಗಿರಬೇಕೆಂದು ವಾದಿಸಿದ. ಅವನಿಂದಲೇ ಡಾರ್ವಿನ್‌ನ ಮಂಗನಿಂದ ಮಾನವ ಸಿದ್ಧಾಂತ ಜನಮಾನಸದಲ್ಲಿ ಬೇರೂರಿತು. ಮನುಷ್ಯನಿಗೆ ಮಂಗನೇ ಮೂಲ ಎಂದು ಅಧಿಕೃತವಾಗಿ ಡಾರ್ವಿನ್‌ ಎಲ್ಲಿಯೂ ಹೇಳಿರದಿದ್ದರೂ ಅವನು ಬಯಸಿದ್ದು ಅದನ್ನೇ.

ಡಾರ್ವಿನ್‌ನ ಈ ಪ್ರತಿಪಾದನೆ ವಿಜ್ಞಾನದ ಹಲವು ಕ್ಷೇತ್ರಗಳಲ್ಲಿ ಇಂದಿಗೂ ಸಂಘರ್ಷವನ್ನು ಜಾರಿಯಲ್ಲಿಟ್ಟಿವೆ. ಮಾನವಶಾಸ್ತ್ರದ ಈ ಪ್ರತಿಪಾದನೆ ತಾತ್ವಿಕ, ವೈಜ್ಞಾನಿಕ ಕ್ಷೇತ್ರಗಳಲ್ಲಿ ಇಂದಿಗೂ ಬಗೆಹರಿಯದ ತರ್ಕಗಳಿಗೆ ಕಾರಣವಾಗಿದೆ. ಮಿಸ್ಸಿಂಗ್‌ ಲಿಂಕ್‌ನಲ್ಲಿ ತೇಜಸ್ವಿಯವರು ಒಂದು ಕಡೆ ಈಗಲೂ ಚಿಂಪಾಂಜಿಗಳು ನಿಧಾನ ವಾಗಿ ಮಾನವನಾಗಬಹುದೇ? ಬಹುಶಃ ಇಲ್ಲ. ಏಕೆಂದರೆ ವಿಕಾಸ ಪಥದ ಯಾವುದೋ ಹಂತದಲ್ಲಿ ಅವು ಮನಸ್ಸು ಮಾಡಬೇಕಿತ್ತು. 

ಮಾನವನಾಗಬಹುದಿದ್ದ ಕವಲು ದಾರಿ, ತೀರ್ಮಾನದ ಗಳಿಗೆ ಲಕ್ಷಾಂತರ ವರ್ಷಗಳ ಹಿಂದಿನ ಕಾಲಗರ್ಭದಲ್ಲಿ ಹುಗಿದು ಹೋಗಿದೆ. ಕಾಲ ಮತ್ತೆ ಪುನರಾವರ್ತನೆಯಾಗುವುದೇ ಇಲ್ಲ ಎಂದು ಬರೆದ ಸಾಲುಗಳು ವಿಜ್ಞಾನದ ಮಿತಿ ಹಾಗೂ ಸಾಧ್ಯತೆಗಳನ್ನು ಸೂಚಿಸುವುದರ ಜೊತೆ ಜೊತೆಗೇ ಸೃಷ್ಟಿಯ ಅಗಾಧತೆಯನ್ನು ಹರವಿಡುತ್ತದೆ. ಮೃಗೀಯ ಪರಂಪರೆಯಿಂದ ಪಾರಾಗದ ಮಾನವ, ಡಾರ್ವಿನ್‌ನ ಪ್ರತಿಪಾದನೆಯನ್ನು ನಿಜವೆನಿಸುವ ನಿಟ್ಟಿನಲ್ಲಿ ಒಂದಷ್ಟು ದೂರವೂ ಸಾಗುತ್ತಾನೆ. ಆದರೆ ಡಾರ್ವಿನ್‌ ಬಯಸಿದ ಸತ್ಯ, ಇತರೆ ಸಮುದಾಯಗಳು ನಿರಾಕರಿಸುವ ತಥ್ಯಗಳ ಎದುರು-ಬದುರಾಗಿ ಕೂತಾಗ, ಯಾವುದೋ ಪ್ರತಿಫ‌ಲನಗಳು ನಮ್ಮಲ್ಲಿ ಇಣುಕುತ್ತಾ ವಿಚಲತೆಗೆ ಅಣಿ ಮಾಡುತ್ತವೆ.

ಮೊದಲು, ಜೀವ ವಿಕಾಸ ನಿಸರ್ಗದ ಸೃಷ್ಟಿಯ ಪರಿಕಲ್ಪನೆಗೆ ವಿರುದ್ಧವಾಗಿದೆ ಎನ್ನುವುದು. ಏಕೆಂದರೆ ವಿಕಾಸ ಎನ್ನುವುದು ಸೃಷ್ಟಿಯ ಇಡೀ ಸಾಧ್ಯತೆಯನ್ನು ನಿರಾಕರಿಸುತ್ತದೆ. ಮನುಷ್ಯ ವಿಕಾಸದ ಫ‌ಲವೆನ್ನುವಾಗ ಧಾರ್ಮಿಕ, ತಾತ್ವಿಕ ಹಾಗೂ ಒಂದು ದೃಷ್ಟಿಕೋನದಿಂದ ವೈಜ್ಞಾನಿಕವಾದ ನಂಬಿಕೆಯನ್ನು ಸಹಾ ಅಲ್ಲಗಳೆದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಆಲೋಚಿಸಿದಾಗ ಮಂಗನನ್ನು ಸೃಷ್ಟಿಸಿದ ನಿಸರ್ಗದ ಉದ್ದೇಶವೇನು ಎಂಬ ಪ್ರಶ್ನೆ ಸಹಜವಾಗುತ್ತದೆ. ಮಾನವನೇ ನೇರವಾಗಿ ಸೃಷ್ಟಿಯಾಗಬಹು ದಿತ್ತು. ಲಕ್ಷಾಂತರ ಮಂಗಗಳು ಇನ್ನೂ ಮಾನವರಾಗಲು ಸರದಿ ಯಲ್ಲಿ ಕಾಯುತ್ತಿವೆಯಾ? ಅಥವಾ ಅವನ ಯೋಗ್ಯತೆಯನ್ನು ಕಂಡು ಮಾನವನಾಗಲು ಹಿಂಜರಿಯುತ್ತಿವೆಯಾ? ಇಲ್ಲವಾದರೆ ದೇವರು ಮಾನವನ ಸಾವರ್ಥ್ಯಕ್ಕೆ ರೋಸಿಹೋಗಿ ಮಂಗಗಳನ್ನು ಮಂಗಗಳನ್ನಾಗಿಯೇ ಉಳಿಯಲು ಬಿಟ್ಟಿದ್ದಾನಾ?! ಅಂದಹಾಗೆ ಮಂಗಗಳೇ ಏಕೆ ಮಾನವನಾದದ್ದು? ಆನೆಗಳು, ಮೊಸಳೆಗಳು, ಜಿಂಕೆಗಳು ಏಕೆ ಮಾನವನಾಗಲಿಲ್ಲ? ಹುಲಿ, ಸಿಂಹಗಳು ಸಹಾ ತಮ್ಮ ಅಸ್ಮಿತೆಯನ್ನು ಹಾಗೆಯೇ ಉಳಿಸಿಕೊಂಡಿವೆ. ಅಸಂಖ್ಯ ಪ್ರಾಣಿ, ಪಕ್ಷಿ, ಕ್ರಿಮಿಕೀಟಗಳು ಹೊಂದದ ಜೀವವಿಕಾಸ ಕೆಲವು ಪ್ರಬೇಧಗಳ ಮಂಗಗಳಲ್ಲಿ ಮಾತ್ರ ಸಾಧ್ಯವಾ? ಜೀವ ವಿಕಾಸ ವೆನ್ನುವುದು ನಿಜವಾದಲ್ಲಿ ಜಗತ್ತಿನ ಪ್ರತಿ ಜೀವಿಯೂ ವಿಕಾಸ ಹೊಂದಬೇಕಿತ್ತಲ್ಲವೇ? ಆನೆ, ಹುಲಿ, ಸಿಂಹಗಳು ಕನಿಷ್ಠ ಪಕ್ಷ ಹೆಚ್ಚು ಸಂವೇದನಾಶೀಲವಾಗಬೇಕಿತ್ತು. ಮಾಂಸಾಹಾರಿಗಳು ಸಸ್ಯಾಹಾರಿ ಗಳಾಗಿ, ಸಸ್ಯಾಹಾರಿಗಳು ಸರ್ವ ಸಂಗ ಪರಿತ್ಯಾಗಿಗಳಾಗಿ, ಮರ ಗಿಡಗಳ ಬೇರುಗಳು ಕಾಲುಗಳಾಗಿ, ಮನುಷ್ಯನು ಅತಿಮಾನವ ನಾಗಿ ವಿಕಾಸ ಹೊಂದಲೇಬೇಕಿತ್ತು. ಮಿಲಿಯಾಂತರ ವರ್ಷಗಳಿಂದ ಈ ಬದಲಾವಣೆಗಳೇನೂ ಆಗಿಲ್ಲದಿರುವ ಬಗ್ಗೆ ವೈಜ್ಞಾನಿಕ ಆಧಾರಗಳು ಸಹಾ ನಮ್ಮ ಮುಂದೆಯೇ ಇವೆ.

ಆದರೆ ಡಾರ್ವಿನ್‌ನ ಜೀವ ವಿಕಾಸದ ಪರಿಕಲ್ಪನೆಯನ್ನು ಸಮಗ್ರತೆಯ ನೆಲೆಗಟ್ಟಿನಲ್ಲಿ ಗ್ರಹಿಸಿದಾಗ ಇನ್ನೊಂದು ಆಯಾ ಮವೂ ನಮ್ಮನ್ನು ತಟ್ಟುತ್ತದೆ. ವಿಕಾಸವೆನ್ನುವುದರ ಅರ್ಥ ಏನು? ದೈಹಿಕ, ಬೌದ್ಧಿಕ ವಿಕಾಸಗಳ ಬಗೆಗಿನ ಡಾರ್ವಿನ್‌ ಆಲೋಚನೆಯ ಮಿತಿ ಯಾವುದು? ಮಂಗನಿಂದ ಮಾನವನಾಗುವುದೇ ಜೀವ ವಿಕಾಸವೆನ್ನುವುದಾದರೆ ನಮ್ಮ ಮನಸ್ಸುಗಳಲ್ಲಿ ಮೃಗವನ್ನು ಎಂದು ಹೊರಗೆ ದಬ್ಬಿದ್ದೇವೆ? ನಮ್ಮ ನಡತೆಯಲ್ಲಿ ಮಾನವೀಯ ತೆಯು ಎಂದು ನೆಲೆಯಾಗಿದೆ? ಸಣ್ಣ ಗಾಯವೊಂದು ಸಾಕು - ನಮ್ಮಲ್ಲಿನ ವ್ಯಗ್ರತೆ ಹೊರಚಿಮ್ಮುತ್ತದೆ. ಸಣ್ಣ ಅವಮಾನ ಸಾಕು- ನಮ್ಮಲ್ಲಿನ ಕೊಲೆಗಾರನನ್ನು ಉದ್ದೀಪಿಸುತ್ತದೆ. ಸಣ್ಣ ಹಂಬಲ ಸಾಕು- ನಮ್ಮ ನಂಬಿಕೆಗಳು, ಸಿದ್ಧಾಂತಗಳು ಕಿವುಚಿಕೊಂಡು ನೂರು ಗಾವುದ ಎಸೆಯಲ್ಪಡುತ್ತವೆ. ಪರಮಾಣು ಬಾಂಬ್‌ಗಳನ್ನು ನಾವು ಹುಟ್ಟು ಹಾಕಿದ್ದೇವೆ. ದೇಶ ಪ್ರೇಮದ ಹೆಸರಿನಲ್ಲಿ ಲಕ್ಷ ಜನರ ಉಸಿರು ಗಟ್ಟಿಸಿದ್ದೇವೆ. ಜಾತಿ ಧರ್ಮಗಳ ಸೋಗಿನಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಾದರೂ ಮಾರಣಹೋಮ ಮಾಡಲು ನಾವು ಅಂಜುವುದಿಲ್ಲ. ಜಗತ್ತಿನ ಅತಿ ಮುಂದುವರೆದ ದೇಶ ಅಮೆರಿಕ ತನ್ನ ಕೇವಲ 300 ವರ್ಷಗಳ ಇತಿಹಾಸದಲ್ಲಿ ದೇಶವನ್ನಾಳಿದ ಶೇ.20 ಅಧ್ಯಕ್ಷರನ್ನು ಗುಂಡಿಕ್ಕಿದೆ. ಆ ಪಟ್ಟಿಯಲ್ಲಿ ಅಮೆರಿಕವನ್ನು ಅತ್ಯಂತ ನಿಸ್ಪೃಹವಾಗಿ, ಪ್ರಾಮಾಣಿಕವಾಗಿ ಮುನ್ನಡೆಸಿದ ಅಬ್ರಹಾಂ ಲಿಂಕನ್‌, ಕೆನಡಿ ಇದ್ದಾರೆ. ಅಂದ ಹಾಗೆ, ರೇಗನ್‌, ಟ್ರಂಪ್‌ರಂಥವರೇ ನಮಗೆ ಬೇಕು. ಗಾಂಧಿಯ ತತ್ವಗಳು ನಮಗೇಕೆ? ಅವರು ಕೊಲೆಯಾಗಲೇಬೇಕು.

ಇನ್ನು, ಮಂಗಗಳು. ಅವು ಈವರೆಗೆ ಯಾವ ಜಾಗತಿಕ ಯುದ್ಧಕ್ಕೂ ವಿಚಾರ ಮಾಡಿಲ್ಲ. ತಮ್ಮ ನಡುವಿನ ದ್ವೇಷಕ್ಕೆ ಇತರೆ ಜೀವಜಂತುಗಳ ಮಾರಣಹೋಮಕ್ಕೆ ಕಾರಣವಾಗಿಲ್ಲ. ವೈಯಕ್ತಿಕ ವಾದ ರೋಗಿಷ್ಠ ಮನಸ್ಥಿತಿಗೆ ಸಾಮಾಜಿಕ ಅಸಹ್ಯಗಳನ್ನು ಅವು ಸೃಷ್ಟಿಸಿಲ್ಲ. ಅಡಾಲ್ಫ್  ಹಿಟ್ಲರ್‌, ಮುಸ್ಸೊಲಿನಿಯರಿಗೆ ಅವು ಜನ್ಮ ನೀಡಿಲ್ಲ. ಕಾವೇರಿ, ಮಹದಾಯಿಗಳ ವಿವಾದ ಸೃಷ್ಟಿಸುವ ರಾಜ ಕಾರಣಿ ಗಳನ್ನು ಸಹಾ ಅವು ಹುಟ್ಟಿಸಿಲ್ಲ. ನೀರು ಬೇಕೆಂದು ಜಗಳ ಮಾಡಿ ಸುಪ್ರೀಂ ಕೋರ್ಟುಗಳನ್ನು ಕೂಡಾ ಸೃಷ್ಟಿಸಿಕೊಂಡಿಲ್ಲ. ಸೃಷ್ಟಿ ಅವನ್ನು ಸಂಕೀರ್ಣಗೊಳಿಸಿಲ್ಲ. ಕಾಲ ಅವನ್ನು ಭ್ರಷ್ಟಗೊಳಿಸಿಲ್ಲ. ಅಸ್ಮಿತೆಯ ದುಷ್ಟ ನವಿರೂ ಅವುಗಳನ್ನು ಅಂಟಿ ವಿರೂಪಗೊಳಿಸಿಲ್ಲ. ಅವು ಸಾಯಬೇಕಾದರೆ ಸಾಯುತ್ತವೆ. ಬದುಕಬೇಕಾದಾಗ ಮರದಿಂದ ಮರಕ್ಕೆ ಹಾರುತ್ತಾ ಕುಶಾಲಾಗಿ ಬದುಕುತ್ತವೆ.

ಹೀಗಿರುವಾಗ ಮಂಗನಿಂದ ಮಾನವನಾದರೆ ಅದು ಜೀವ ವಿಕಾಸ ಹೇಗಾಗುತ್ತದೆ? ಮರದಿಂದ ಕೆಳಗೆ ಬಿದ್ದ ಮಾನವ, ಮಾನವನಿಗಿಂತಾ ಮೇಲ್ಮಟ್ಟದ ಮರದಲ್ಲಿರುವ ಮಂಗ! ವಿಕಾಸ ಯಾವುದು? ನೆನಪುಗಳು ಸೃಷ್ಟಿಸುವ ವಿಚಲತೆಗಳಿಲ್ಲದೆಯೇ, ಕಲ್ಪನೆಗಳು ಕೊಡುವ ಏರಿಳಿತಗಳಿಲ್ಲದೆಯೇ ವರ್ತಮಾನದಲ್ಲಿ ಸರಳವಾಗಿ, ಸಹಜವಾಗಿ ಸುಮ್ಮನೇ ಬದುಕಿ ಸಾಗಿ ಹೋಗುವ ಮಂಗ ಮಾನವನ ಅಂತರಂಗದಲ್ಲಿ ಹೊಸ ತಲ್ಲೀನತೆಯನ್ನು ಸೃಷ್ಟಿಸ ಬೇಕಲ್ಲವೇ? Survival of the Fittest ಎನ್ನುವ ಸ್ಪರ್ಧಾತ್ಮಕತೆ ಯನ್ನು ಸಂಶೋಧಿಸುವ ವಿಜ್ಞಾನಕ್ಕೆ ಎಲ್ಲವನ್ನೂ ಸ್ವೀಕರಿಸುವ ಮೌನದ ದಿವ್ಯ ಸಂಭ್ರಮ ಸಿಕ್ಕುವುದು ಹೇಗೆ? ವಿಜ್ಞಾನದ ನಿರಂತರ ಸಂಶೋಧನಾತ್ಮಕ ಮಂಥನಗಳ ನಡುವೆ ಡಾರ್ವಿನ್‌ ಸಿದ್ಧಾಂತ ಮುಂದೆ ಸುಳ್ಳಾದರೆ ವಿಶೇಷವೇನಲ್ಲ. ಆದರೆ ಇಂದಿನ ನಾಗರಿಕ ತೆಯ ಕರಾಳ ಹೆಜ್ಜೆಗುರುತುಗಳನ್ನು ನೋಡುತ್ತಾ ನಿಂತಾಗ ಮಾನವ ಮಂಗನಾಗುವುದೇ ನಿಜವಾದ ವಿಕಾಸ ಮತ್ತು ಮಂಗನಿಂದ ಮಾನವನಾಗಿದ್ದರೆ ಅದು ವಿನಾಶ – ಎನಿಸದೇ ಇರದು.

ಇದೇ ಫೆಬ್ರವರಿಯಲ್ಲಿ ಜನಿಸಿದ್ದ (ಫೆಬ್ರುವರಿ 12, 1809) ಡಾರ್ವಿನ್‌ ಮರೆಗೆ ಸರಿದು ಎರಡು ಶತಮಾನಗಳು ಸಂದರೂ ಅವನು ಸೃಷ್ಟಿಸಿದ ಕಂಪನಗಳನ್ನು ನಾವು ನಮ್ಮ ಅಸ್ಮಿತೆಯ ನೆಪದಲ್ಲಿ ಸ್ಪರ್ಶಿಸುತ್ತಲೇ ಇದ್ದೇವೆ. ಕಾದಾಡುತ್ತಲೇ ಇದ್ದೇವೆ. ಇತ್ತೀಚೆಗೆ ಕೇಂದ್ರ ಸಚಿವ ಸತ್ಯಪಾಲ್‌ ಸಿಂಗ್‌, ಡಾರ್ವಿನ್‌ ವಾದವನ್ನು ನಿರಾಕ ರಿಸಿ ಒಂದಷ್ಟು ಸಾಮಾಜಿಕ ಹೊಯ್ದಾಟಕ್ಕೆ ಕಾರಣರಾದ ಸಂದರ್ಭ ದಲ್ಲಿ ಬದುಕನ್ನು ಏಳುಬೀಳುಗಳ ಆಸ್ಥೆಯಿಲ್ಲದೇ ಉತ್ಕಟವಾಗಿ ಗ್ರಹಿಸುತ್ತಾ ಮಂಗನಂತಿರಬೇಕಾದ ತುಡಿತ ಮನಸ್ಸನ್ನು ತಟ್ಟಿತು.

 ಫ‌ಣಿಕುಮಾರ್‌.ಟಿ.ಎಸ್‌

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.