ಒಟ್ಟಿನಲ್ಲಿ ದುಡ್ಡು ಮಾಡೋದು ಮುಖ್ಯ ಎಂಬ ಕುಖ್ಯಾತ ಚಿಂತನೆ 


Team Udayavani, Feb 20, 2018, 6:00 AM IST

roopa-aiyar.jpg

ದುಡ್ಡಿನ ಆಸೆ ಹೆಚ್ಚಿದಷ್ಟೂ ಜಗತ್ತು ಹೆಚ್ಚೆಚ್ಚು ಕ್ರೂರಿಯಾಗುತ್ತಿದೆ. ಇಲ್ಲಿ ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲ. ಹತ್ತು ಸಾವಿರ  ರೂಪಾಯಿ ಸುಪಾರಿ ಪಡೆದು ಕೊಲೆ ಮಾಡುವವರಿದ್ದಾರೆ. ಬರೀ ಐದು ಸಾವಿರ ರೂ.ಗೆ ಕಿಡ್ನಾಪ್‌ ಮಾಡುವವರಿದ್ದಾರೆ. ದುಡ್ಡು ಕೊಡ್ತೀನಿ, ಒಂದು ಹುಡುಗಿಯನ್ನು ರೇಪ್‌ ಮಾಡಬೇಕು ಅಂದರೆ ಅದಕ್ಕೂ ತಯಾರಿರುವವರಿದ್ದಾರೆ. ಇದನ್ನೆಲ್ಲ ಮಾಡಿ ಅವರು ಸಾಧಿಸುವುದೇನು?

ನಾವೆಲ್ಲ ಹೊಟ್ಟೆಪಾಡಿಗಾಗಿ ಯಾವುದಾದರೂ ಒಂದು ಕೆಲಸ ಮಾಡುತ್ತೇವೆ. ಹೊಟ್ಟೆಗೆ, ಬಟ್ಟೆಗೆ ನ್ಯಾಯವಾಗಿ ದುಡಿದುಕೊಂಡು ಬದುಕಿದರೆ ಸಾಕಪ್ಪಾ ಎಂದು ಕೆಲವರು ಯೋಚಿಸಿದರೆ, ಇನ್ನು ಕೆಲವರು ದುಡ್ಡು ಮಾಡೋದು ಮುಖ್ಯ, ಸರಿ-ತಪ್ಪು ನನಗೆ ಬೇಕಿಲ್ಲ. ಏನಾದ್ರೂ ಮಾಡ್ತೀನಿ, ಒಟ್ಟಿನಲ್ಲಿ ನಾನು ಚೆನ್ನಾಗಿರಬೇಕು ಎಂದು ಯೋಚಿಸುತ್ತಾರೆ.

ಮನುಷ್ಯನ ಚಿಂತನಾ ಲಹರಿ ಹರಿಯುವುದು ಮುಖ್ಯವಾಗಿ ಈ ಎರಡು ರೀತಿಯಲ್ಲಿ. ಒಂದು ವರ್ಗದವರು ನೈತಿಕತೆಗೆ 
ಬಹಳ ಬೆಲೆ ಕೊಟ್ಟರೆ, ಇನ್ನೊಂದು ವರ್ಗದವರು ನೈತಿಕತೆ ಬಗ್ಗೆ ತಲೆಕೆಡಿಸಿ  ಕೊಳ್ಳದೆ ದುಡ್ಡು ಮಾಡುವುದನ್ನೇ ಮುಖ್ಯ ಎಂದುಕೊಂಡಿರುತ್ತಾರೆ. ದುರಂತ ಏನು ಅಂದರೆ, ಪ್ರಾಪಂಚಿಕ ಸುಖವೇ ದೊಡ್ಡದು ಎಂದುಕೊಂಡಿರುವ 21ನೇ ಶತಮಾನದ ಸೋಕಾಲ್ಡ್‌ ಮಾಡರ್ನ್ ಜನರು ಈ ಎರಡನೇ ರೀತಿಯಲ್ಲೇ ಹೆಚ್ಚಾಗಿ ಯೋಚಿಸುತ್ತಿದ್ದಾರೆ. ದೊಡ್ಡ ಉದ್ಯಮಿಗಳಿಂದ ಹಿಡಿದು ಸಣ್ಣ ವ್ಯಾಪಾರಿಗಳ ತನಕ, ಸರ್ಕಾರಿ ನೌಕರರಿಂದ ಹಿಡಿದು ಸಣ್ಣ ಪುಟ್ಟ ಕಮಿಷನ್‌ ದಂಧೆ ಮಾಡಿಕೊಂಡಿರುವವರ ತನಕ ಬಹುತೇಕ ಎಲ್ಲರೂ ದುಡ್ಡು ಮಾಡೋದು ಮುಖ್ಯ ಎಂಬ ಧಾಟಿಯಲ್ಲೇ ತಮ್ಮ ಮನಸ್ಸನ್ನು ಹರಿ ಬಿಡುತ್ತಿದ್ದಾರೆ. ಅದರಿಂದಾಗಿಯೇ ಸಮಾಜದಲ್ಲಿಂದು ಅವೆಷ್ಟೋ ಅನೈತಿಕ ದಂಧೆಗಳು, ಕೊಲೆ ಸುಲಿಗೆಗಳು ಹೆಚ್ಚಿರುವುದು.

ಹೀಗೆ ಅನೈತಿಕತೆಗೆ ಅತಿಯಾಗಿ ತೆರೆದುಕೊಂಡ ಸಮಾಜ ದಿಂದಾಗಿಯೇ ನಾವು ಹೆಣ್ಮಕ್ಕಳ ಮಾರಾಟದಂತಹ ಹೇಯ ಕೃತ್ಯವನ್ನು ನೋಡಬೇಕಾಗಿ ಬಂದಿದೆ. ಹೆಣ್ಮಕ್ಕಳನ್ನು ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳುವುದು, ಹದಿಹರೆಯದ ಹುಡುಗಿಯರ ಮೇಲೆ ಅತ್ಯಾಚಾರ ನಡೆಸಿ, ಅವರನ್ನು ಗರ್ಭಿಣಿ ಮಾಡಿ, ಅವರಿಗೆ ಹುಟ್ಟುವ ಮಕ್ಕಳನ್ನು ಮಾರಿ ಹಣ ಸಂಪಾದಿಸುವುದು ಅಥವಾ ಆ ಮಕ್ಕಳನ್ನೇ ಬೀದಿಯಲ್ಲಿ ಭಿಕ್ಷೆ ಬೇಡಲು ನಿಲ್ಲಿಸಿ ಹಣ ಸಂಪಾದಿಸುವುದು/ ಅವರಿಗೆ ಕಳ್ಳತನ ಹೇಳಿಕೊಟ್ಟು ಹಣ ಸಂಪಾದಿಸುವುದು ಹೀಗೆ ನಾಗರಿಕ ಸಮಾಜದ ಮುಗ್ಧರಿಗೆ ಗೊತ್ತೇ ಇಲ್ಲದಂತಹ ನಟೋರಿಯಸ್‌ ಲೋಕವೊಂದು ಭೂಗತವಾಗಿ ನಮ್ಮ ನಡುವೆಯೇ ಬೆಳೆಯುತ್ತಿದೆ. ಈ ಲೋಕ ನಮ್ಮೆದುರಿಗೇ ಇದ್ದರೂ ನಮಗೆ ಕಾಣಲ್ಲ.

ರಸ್ತೆಯಲ್ಲಿ ಭಿಕ್ಷೆ ಬೇಡುವ ಚಿಕ್ಕ ಮಕ್ಕಳು ಅಥವಾ ಮಹಿಳೆಯರನ್ನು ನೋಡಿ ನಾವು ಅಯ್ಯೋ ಪಾಪ ಎಂದುಕೊಳ್ಳುತ್ತೇವೆ. ಆದರೆ ಅವರ ಹಿಂದೆ ಹೆಚ್ಚಿನ ಪ್ರಕರಣಗಳಲ್ಲಿ ದೊಡ್ಡ ಮಾಫಿಯಾವೇ ಇರುತ್ತದೆ. ಇದು ಒಂದು ರೀತಿಯ ಅನೈತಿಕ ವ್ಯಾಪಾರ ಎಂಬುದು ನಮಗೆ ಗೊತ್ತೇ ಆಗುವುದಿಲ್ಲ. ಒಂದು ಸಣ್ಣ ಪರೀಕ್ಷೆ ಮಾಡಿ ನೋಡಿ, ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವ ಮಕ್ಕಳನ್ನು ಬಾ ನನ್ನ ಜೊತೆ ಶಾಲೆಗೆ ಸೇರಿಸ್ತೀನಿ, ನಿನ್ನ ಅಪ್ಪ ಅಮ್ಮ ಎಲ್ಲಿದ್ದಾರೆ ತೋರಿಸು ಅಂತ ಕೇಳಿ. ಅವರು ಓಡಿಹೋಗುತ್ತಾರೆ. ಭಿಕ್ಷಾಟನೆಗೆ ಮಕ್ಕಳನ್ನು ತಳ್ಳುವ ಮಾಫಿಯಾದವರು ಇಲ್ಲಿನ ಸ್ಥಳೀಯ ಭಾಷೆ ಗೊತ್ತಿಲ್ಲದ ಉತ್ತರ ಭಾರತದ ಮಕ್ಕಳನ್ನು ಅಪಹರಿಸಿ ತಂದು ಭಿಕ್ಷಾಟನೆಗೆ ಬಿಟ್ಟಿರುತ್ತಾರೆ. 

ದಕ್ಷಿಣ ಭಾರತದ ಮಕ್ಕಳನ್ನು ಉತ್ತರ ಭಾರತಕ್ಕೆ ಸಾಗಿಸಿರುತ್ತಾರೆ. ಭಾಷೆ ಗೊತ್ತಿಲ್ಲದಿದ್ದರೆ ಈ ಮಕ್ಕಳು ತಮ್ಮಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂಬುದು ಅವರ ಲೆಕ್ಕಾಚಾರ. ಈ ಮಕ್ಕಳು ಭಿಕ್ಷೆ ಬೇಡಿ ತೆಗೆದುಕೊಂಡು ಹೋದ ಹಣದಲ್ಲಿ ಭಿಕ್ಷಾಟನೆ ಮಾಫಿಯಾದ ಡಾನ್‌ಗಳು ಶ್ರೀಮಂತಿಕೆಯ ಬದುಕು ನಡೆಸುತ್ತಾರೆ. ಅವರು ಇಂತಹದ್ದೊಂದು ಹೇಯ ದಂಧೆಯಲ್ಲಿ ತೊಡಗಿದ್ದಾ ರೆಂಬುದು ಅವರನ್ನು ನೋಡಿದರೆ ಮೇಲ್ನೋಟಕ್ಕೆ ತಿಳಿಯುವುದೇ ಇಲ್ಲ. ಗಣ್ಯ ವ್ಯಕ್ತಿಗಳಂತೆ ಪೋಸು ಕೊಡುತ್ತಿರುತ್ತಾರೆ. 

ಇತ್ತೀಚೆಗೆ ಒಂದು ಸುದ್ದಿ ಬಂತು. ಕೆಲ ಶ್ರೀಮಂತರ ಮನೆಗಳಲ್ಲಿ ಕೆಲಸ ಮಾಡುವ ಆಯಾಗಳು ಆ ಮನೆಯ ಗಂಡ-ಹೆಂಡತಿ ಕೆಲಸಕ್ಕೆ ಹೋದಾಗ ಮಗುವಿಗೆ ನಿದ್ರೆ ಮಾತ್ರೆ ನುಂಗಿಸಿ ಅದನ್ನು ಭಿಕ್ಷೆ ಬೇಡುವ ಹೆಂಗಸರಿಗೆ ಬಾಡಿಗೆಗೆ ಕೊಡುತ್ತಿದ್ದರಂತೆ. ದಿನಕ್ಕೆ 100-200 ರೂ. ಬಾಡಿಗೆ ತೆಗೆದುಕೊಳ್ಳಲು ಇಂಥ ನೀಚ ಕೆಲಸ ಮಾಡುವವರೂ ನಮ್ಮ ನಡುವೆಯೇ ಇದ್ದಾರೆಂಬುದು ನಿಜಕ್ಕೂ ಭೀಕರ ಸಂಗತಿ.

ಜಗತ್ತೇಕೆ ಕ್ರೂರಿಯಾಗುತ್ತಿದೆ?
ದುಡ್ಡಿನ ಆಸೆ ಹೆಚ್ಚಿದಷ್ಟೂ ಜಗತ್ತು ಹೆಚ್ಚೆಚ್ಚು ಕ್ರೂರಿಯಾಗುತ್ತಿದೆ. ಇಲ್ಲಿ ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲ. ಹತ್ತು ಸಾವಿರ ರೂ. ಸುಪಾರಿ ಪಡೆದು ಕೊಲೆ ಮಾಡುವವರಿದ್ದಾರೆ. ಬರೀ ಐದು ಸಾವಿರ ರೂ.ಗೆ ಕಿಡ್ನಾಪ್‌ ಮಾಡುವವರಿದ್ದಾರೆ. ದುಡ್ಡು ಕೊಡ್ತೀನಿ, ಒಂದು ಹುಡುಗಿಯನ್ನು ರೇಪ್‌ ಮಾಡಬೇಕು ಅಂದರೆ ಅದಕ್ಕೂ ತಯಾರಿರುವವರಿದ್ದಾರೆ. ಇದನ್ನೆಲ್ಲ ಮಾಡಿ ಅವರು ಸಾಧಿಸುವು ದೇನು? ಅದು ಹೋಗಲಿ, ಇವರಿಂದ ಇಂತಹ ಕೆಲಸ ಮಾಡಿಸು ವವರು ಎಂಥ ನೀಚರಿರಬಹುದು? ಸೇಡು, ಅಧಿಕಾರ, ಭಯೋ ತ್ಪಾದನೆ, ಮಾಟ ಮಂತ್ರ ಹೇಗೆ ಈ ಕೆಲಸಗಳಿಗೆ ನೂರೆಂಟು ನೆಪಗಳಿರ ಬಹುದು. ಆದರೆ ನಾಗರಿಕ ಸಮಾಜ ಎಂದು ಕರೆಸಿಕೊ ಳ್ಳುವ ವ್ಯವಸ್ಥೆಯಲ್ಲಿ ಇಂತಹ ಅನಾಗರಿಕ ಚಟುವಟಿಕೆಗಳನ್ನು ಸರ್ಕಾರ ಹಾಗೂ ಪೊಲೀಸ್‌ ವ್ಯವಸ್ಥೆ ಹೇಗೆ ಸಹಿಸಿಕೊಳ್ಳುತ್ತದೆ?

ಬಿನ್‌ ಲಾಡೆನ್‌, ವೀರಪ್ಪನ್‌ ಥರದವರು ತಮ್ಮ ಹಠಕ್ಕೆ ಎಷ್ಟೋ ಜನರನ್ನು ಬಲಿ ತೆಗೆದುಕೊಂಡರು. ಕೊನೆಗೆ ಕೆಟ್ಟ ವ್ಯಕ್ತಿಯಾಗಿಯೇ ಸತ್ತರು. ಅವರು ಏನು ಸಾಧಿಸಿದಂತಾಯಿತು? ಇವರ ಕತೆ ಹಾಗಿರಲಿ, ಯಾವತ್ತೂ ಮರೆಯಲ್ಲಿದ್ದುಕೊಂಡೇ ಮನುಷ್ಯರ ವ್ಯಾಪಾರ ಮಾಡುತ್ತಿರುವ ಅನೇಕ ದೊಡ್ಡ ಕುಳಗಳು ನಮ್ಮ ನಡುವೆಯೇ ಇವೆ. ಅವೆಷ್ಟೋ ಮಕ್ಕಳು, ಹುಡುಗಿಯರನ್ನು ಅವು ದುಡ್ಡಿನಾಟಕ್ಕೆ ಬಳಸಿಕೊಳ್ಳುತ್ತವೆ. ಬೀದಿಯಲ್ಲಿರುವ ಸಣ್ಣ ಪುಟ್ಟ ವ್ಯಕ್ತಿಗಳು ಇಂತಹ ದೊಡ್ಡ ದಂಧೆ ಮಾಡಲು ಸಾಧ್ಯವೇ ಇಲ್ಲ. ಇವೆಲ್ಲಕ್ಕೂ ಚೈನ್‌ ಲಿಂಕ್‌ ಇದೆ. ಇವುಗಳಿಗೆ ದೊಡ್ಡ ವ್ಯಕ್ತಿಗಳ ಬೆಂಬಲವೂ ಇರುತ್ತದೆ.

ಗುಪ್ತಗಾಮಿನಿ ಅನೈತಿಕ ದಂಧೆ
ಉತ್ತರ ಕರ್ನಾಟಕದ ಬಡ ಹಿಂದುಳಿದ ಕುಟುಂಬಗಳಲ್ಲಿ ಈಗಲೂ ಹೆಣ್ಣು ಮಗು ಹುಟ್ಟಿದ ಕೆಲವೇ ವರ್ಷಗಳಲ್ಲಿ ಅದನ್ನು ಹಣಕ್ಕೆ ಮಾರುವಂತಹ ಪದ್ಧತಿಯಿದೆ. ಮಾರಾಟವಾದ ಮಕ್ಕಳನ್ನು ಬೇರೆ ರಾಜ್ಯಕ್ಕೆ ಸಾಗಿಸಲಾಗುತ್ತದೆ. ಮಗು ದೇವದಾಸಿಗಳ ಮನೆ ಯಲ್ಲಿ ಬೆಳೆದರೆ ಅದೇ ವಾತಾವರಣಕ್ಕೆ ಹೊಂದಿ ಕೊಳ್ಳುತ್ತಾಳೆಂದು ಚಿಕ್ಕವಯಸ್ಸಿನ ಮಕ್ಕಳನ್ನು ಹೇಳದೆ ಕೇಳದೆ ಮಾರಾಟ ಮಾಡ್ತಾರೆ. ಕೆಲ ಶ್ರೀಮಂತರು ಹೆಸರಿಗೆ ಮದುವೆ ಅಂತ ಮಾಡಿಕೊಂಡು ಅತ್ಯಾಚಾರ ಮಾಡುತ್ತಾರೆ. ಮದುವೆ ಆದ ಮೇಲೂ ಹೆಂಡತಿ ಯನ್ನು ಮಾರುವವರಿದ್ದಾರೆ. ಈ ರೀತಿಯ ವ್ಯವಹಾರ ಕೇವಲ ಬಡವರ ಮನೆಗಳಲ್ಲಿ ಮಾತ್ರವಲ್ಲ. ಶ್ರೀಮಂತರಲ್ಲೂ ನಡೆಯುತ್ತಿದೆ.

ವೇಶ್ಯಾವಾಟಿಕೆಗೆ ಹೆಣ್ಣು ಮಕ್ಕಳನ್ನು ಸಾಗಿಸುವುದು ಹಿಂದಿನ ಕಾಲದಿಂದಲೂ ನಡೆದು ಬಂದಿದೆ. ಆದರೆ ಮನುಷ್ಯರನ್ನು ಅಪ ಹರಿಸಿ ಅವರ ಅಂಗಗಳನ್ನು ಬೇರೆ ದೇಶಗಳಿಗೆ ಮಾರಿಕೊಳ್ಳುವುದು, ಭಿಕ್ಷೆ ದಂಧೆಗೆ ಬಿಡುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ.

ಇವುಗಳನ್ನು ನೋಡಿದರೆ ಮೊದಲಿಗೆ ನಮ್ಮ ಮನಸ್ಸಿನಲ್ಲಿ ಏಳುವ ಪ್ರಶ್ನೆ – ನಾವು ಎಲ್ಲಿ ಬದುಕುತ್ತಿದ್ದೇವೆ? ಇದು ಮನುಷ್ಯರಿರುವ ಲೋಕವೋ ಅಥವಾ ರಾಕ್ಷಸರಿರುವ ಲೋಕವೋ? ಭೂಗತ ಲೋಕ ವೆಂಬುದು ಏಳು ಸುತ್ತಿನ ಕೋಟೆ. ಅದರೊಳಗೆ ಒಮ್ಮೆ ಸೇರಿಕೊಂಡವರು ಹೊರಬರುವುದು ಕಷ್ಟ. ಯಾವತ್ತೋ ದಾರಿತಪ್ಪಿ ಅಲ್ಲಿಗೆ ಹೋದವರು ನಂತರ ಮಾನಸ್ಸು ಬದಲಾಯಿಸಿ ಪ್ರಾಮಾ ಣಿಕರಾಗಬೇಕು ಅಂದುಕೊಂಡರೆ ಅದಕ್ಕೆ ಆಸ್ಪದ ನೀಡದೆ ಅವರನ್ನು ಬ್ಲ್ಯಾಕ್‌ ಮೇಲ್‌ ಮಾಡಿ ಅಲ್ಲೇ ಉಳಿಸಿಕೊಳ್ಳಲಾಗುತ್ತದೆ. ಇದಕ್ಕೂ  ನಮಗೂ ಸಂಬಂಧವಿಲ್ಲ ಎಂದು ನಾವು ನಮ್ಮ ಪಾಡಿಗೆ ಕುಳಿತು ಕೊಳ್ಳುವಂತಿಲ್ಲ. ನಾಳೆ ಅಚಾನಕ್ಕಾಗಿ ನಮ್ಮ ಮೇಲೂ, ನಮ್ಮ ಮಕ್ಕಳ ಮೇಲೂ ಇವರ ಕಣ್ಣು ಬಿದ್ದರೆ ಏನು ಗತಿ? ಆದರೆ ಜನ ಸಾಮಾನ್ಯರಾದ ನಮ್ಮ ಕೈಲಿ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಅಧಿಕಾರಸ್ಥರು ಮಾಡಬಹುದು, ಆದರೆ ಅವರಿಗೆ ಇವೆಲ್ಲ ಬೇಕಿಲ್ಲ. ಏಕೆಂದರೆ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಸರಕಾರದಿಂದ ರಕ್ಷಣೆಯಿದೆ.

ಎಲ್ಲಕ್ಕಿಂತ ಮನುಷ್ಯತ್ವ ದೊಡ್ಡದು ಎಂಬುದು ನಮ್ಮೆಲ್ಲರ ಮನಸ್ಸಿನಲ್ಲೂ ಸದಾ ಜಾಗೃತವಾಗಿರಬೇಕಾದ ಯೋಚನೆ. ಮಾನವೀಯತೆ ಹಾಗೂ ನೈತಿಕತೆಗೆ ಬೆಲೆ ನೀಡದಿದ್ದರೆ ನಾವು ಮನುಷ್ಯ ರಾಗುವುದಿಲ್ಲ ಎಂಬುದು ನಮ್ಮನ್ನು ಸದಾ ಎಚ್ಚರಿಸುತ್ತಿರ ಬೇಕು. ಇಲ್ಲವಾದರೆ ಹಣದ ಆಸೆಯ ಮುಂದೆ ನಾವು ಯಾವುದೋ ದುರ್ಬಲ ಕ್ಷಣದಲ್ಲಿ ಅಪರಾಧ ಲೋಕಕ್ಕೆ ಅಥವಾ ಅನೈತಿಕ ವ್ಯವಹಾರಕ್ಕೆ ಕೈಹಾಕಿಬಿಡುವ ಅಪಾಯವಿದೆ. ಹಣ ಮುಖ್ಯ ಆದರೆ ಅದಕ್ಕಿಂತ ನಾವು ಸಚ್ಚಾರಿತ್ರ್ಯವಂತರಾಗಿ ಬದುಕುವುದು ಮುಖ್ಯ.

ಟಾಪ್ ನ್ಯೂಸ್

Hunasu-Accident

ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

KSRTC

Ticket Price Hike: ನಾಲ್ಕು ನಿಗಮಗಳ ಬಸ್‌ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

1-us

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

puttige-6-

Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

1-ksde

CPCRI; ಅಡಿಕೆ ಉತ್ಪನ್ನ ಬಗ್ಗೆ ಸಂಶೋಧನೆ

Vimana 2

Air India Express; ಮಂಗಳೂರು-ಪುಣೆ ನೇರ ವಿಮಾನ ಆರಂಭ

Hunasu-Accident

ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.