ಅತ್ಯಾಚಾರ-ಕೊಲೆ ಆರೋಪಿಗಳಿಬ್ಬರನ್ನು ಕೊಂದ ಉದ್ರಿಕ್ತ ಗುಂಪು
Team Udayavani, Feb 20, 2018, 11:34 AM IST
ಇಟಾನಗರ : ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯಲ್ಲಿ ಉದ್ರಿಕ್ತ ಗುಂಪೊಂದು ಪೊಲೀಸ್ ಠಾಣೆಯೊಳಗಿದ್ದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಹೊರಗೆಳೆದು ಮಾರಣಾಂತಿಕ ಹಲ್ಲೆ ನಡೆಸಿ ಚಚ್ಚಿ ಸಾಯಿಸಿದ ಘಟನೆ ವರದಿಯಾಗಿದೆ.
ಅಸ್ಸಾಮಿನ ಟೀ ಪ್ಲಾಂಟೇಶನ್ ಕಾರ್ಮಿಕರಾದ 32ರ ಹರೆಯದ ಸಂಜಯ್ ಸೋಬೋರ್ ಮತ್ತು 25ರ ಹರೆಯದ ಜಗದೀಶ್ ಲೋಹಾರ್ ಎಂಬವರನ್ನು ಉದ್ರಿಕ್ತ ಸಮೂಹ ಪೊಲೀಸ್ ಠಾಣೆಯಿಂದ ಹೊರಗೆಳೆದು ಮಾರ್ಕೇಟ್ ಚೌಕಕ್ಕೆ ಒಯ್ದು ಅಲ್ಲಿ ಪೊಲೀಸರ ಎದುರೇ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಚಚ್ಚಿ ಸಾಯಿಸಿದರೆಂದು ವರದಿ ತಿಳಿಸಿದೆ. ಕೊಲೆ ಮತ್ತು ಅತ್ಯಾಚಾರದ ಆರೋಪಿಗಳಾಗಿರುವ ಈ ಇಬ್ಬರ ಶವಗಳನ್ನು ಉದ್ರಿಕ್ತ ಜನರು ಅನಂತರ ಮಾರ್ಕೆಟ್ ಪ್ರದೇಶದಲ್ಲಿ ಒಂದೆಡೆ ಬಿಸುಟರು.
ಆರೋಪಿಗಳಿಬ್ಬರ ಶವಗಳನ್ನು ಅನಂತರ ಉದ್ರಿಕ್ತ ಸಮೂಹ ಬೆಂಕಿ ಹಚ್ಚಿ ಸುಡಲು ಯತ್ನಿಸಿತಾದರೂ ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ಅಲ್ಲಿಗೆ ಧಾವಿಸಿ ಅವರನ್ನು ತಡೆಯುವಲ್ಲಿ ಸಫಲರಾದರು.
ಘಟನೆಯ ಹಿನ್ನೆಲೆಯಾಗಿ ಐದೂವರೆ ವರ್ಷ ಪ್ರಾಯದ ಬಾಲಕಿಯು ವಾಕ್ರೋ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಿಂದ ಕಳೆದ ಫೆ.12ರಂದು ನಾಪತ್ತೆಯಾಗಿದ್ದಳು.
ಅದಾಗಿ ಬಾಲಕಿಯ ಸಂಬಂಧಿಕ ಬಾಲಕಿಯ ಶಿರಚ್ಛೇದಿತ, ವಿರೂಪಗೊಳಿಸಲಾದ ಶವವನ್ನು ಸಮೀಪ ನಾಮ್‌ಗೊ ಗ್ರಾಮದ ಅರಣ್ಯದಲ್ಲಿ, ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಪತ್ತೆ ಹಚ್ಚಿದರು.
ಇದನ್ನು ಅನುಸರಿಸಿ ಪೊಲೀಸರು ಕೊಲೆ, ಅತ್ಯಾಚಾರ ಆರೋಪಿಗಳಾಗಿರುವ ಸೋಬಾರ್ ಮತ್ತು ಲೋಹಾರ್ ನನ್ನು ಬಂಧಿಸಿದರು. ತಾವು ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಎಸಗಿದ್ದು ಹೌದೆಂಬುದನ್ನು ಇವರು ಪೊಲೀಸರಲ್ಲಿ ಒಪ್ಪಿಕೊಂಡರು.
ಕಳೆದ ಭಾನುವಾರ ಈ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.
ಈ ಇಬ್ಬರು ಅತ್ಯಾಚಾರ – ಕೊಲೆ ಆರೋಪಿಗಳನ್ನು ಚಚ್ಚಿ ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ ಉದ್ರಿಕ್ತ ಸಮೂಹವನ್ನು ತಡೆಯುವಲ್ಲಿ ವಿಫಲರಾದ ಕಾರಣಕ್ಕೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ; ಜಿಲ್ಲಾ ಪೊಲೀಸ್ ಸುಪರಿಂಟೆಂಡೆಂಟರನ್ನು ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.