ಪಂಚಭೂತಗಳಲ್ಲಿ ವೀರಯೋಧ ಲೀನ


Team Udayavani, Feb 20, 2018, 11:54 AM IST

vij-2.jpg

ವಿಜಯಪುರ: ವಿಜಯಪುರದ ಉತ್ನಾಳ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಆವರಿಸಿದ್ದ ಸ್ಮಶಾನ ಮೌನ ಸೋಮವಾರ ಸ್ಮಶಾನ ಮೌನ ಸ್ಪೋಟಗೊಂಡು ಗ್ರಾಮಕ್ಕೆ ಗ್ರಾಮವೇ ಕಣ್ಣೀರು ಹಾಕುತ್ತಿತ್ತು. ಎಲ್ಲರ ಬಾಯಲ್ಲಿ ಇಂಥ ಮಗ ಮತ್ತೆ ಹುಟ್ಟಿ ಬರ್ತಾನೇನೋ ಎಂಬ ಪ್ರಶ್ನೆ ಮೂಡಿದ್ದರೆ, ಯುವಕರು ವೀರಜವಾನ್‌ ಅಮರ ರಹೇ, ಭಾರತ ಮಾತಾಕಿ ಜೈ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.

ಉತ್ನಾಳ ಗ್ರಾಮದ ವೀರಯೋಧ ಕಾಶೀನಾಥ ಕಲ್ಲಪ್ಪ ತಳವಾರ ಎಂಬ ಯೋಧನ ಶವ ಆಂಬ್ಯುಲೆನ್ಸ್‌ನಲ್ಲಿ ಸೋಮವಾರ ಬೆಳಗ್ಗೆ ತವರೂರಿಗೆ ಆಗಮಿಸುತ್ತಲೇ ಉತ್ನಾಳ ಮಾತ್ರವಲ್ಲ ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅಸಂಖ್ಯ ಜನರ ಕಣ್ಣಾಲಿಗಳು ತುಂಬಿಕೊಂಡಿದ್ದವು. ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ಮನೆ ಮಾಡಿದ್ದ ಸ್ಮಶಾನ ಮೌನ ಕಾಶೀನಾಥ ಅವರ ಕಳೆಬರ ಕಾಣುತ್ತಲೇ ಕಣ್ಣೀರ ಕೋಡಿಯ ಸ್ಪೋಟವಾಗಿತ್ತು. ಮನೆಗೆ ಆಸರಾಗಿದ್ದ ಮಗ ರಾಷ್ಟ್ರಧ್ವಜ ಹೊದ್ದು ಮಲಗಿದ್ದನ್ನು ಕಂಡು ತಾಯಿ ಬಸವ್ವ, ಅಪ್ಪ ಕಲ್ಲಪ್ಪ, ಒಡಹುಟ್ಟಿದವರ ರೋಧನ ಮುಗಿಲು ಮುಟ್ಟಿತ್ತು. ಪತಿ ತನ್ನನ್ನು ಅಗಲಿದ ಸುದ್ದಿ ತಿಳಿದ ದಿನದಿಂದಲೇ ಇಬ್ಬರು ಮುಗ ಮಕ್ಕಳನ್ನು ಕಟ್ಟಿಕೊಂಡು ಭವಿಷ್ಯ ಕಳೆಯುವ ಚಿಂತೆಯಲ್ಲಿ ಪತ್ನಿ ವಿಜಯಲಕ್ಷ್ಮಿ ಗರಬಡಿದವರಂತೆ ಕಂಗಾಲಾಗಿ ಕುಳಿತಿದ್ದರು.

ಇತ್ತ ಅಪ್ಪನನ್ನು ಶಾಸ್ವತವಾಗಿ ಕಳೆದುಕೊಂಡ ಯಾವ ಪರಿವೆಯೂ ಇಲ್ಲದೇ ಯೋಧ ಕಾಶೀನಾಥ ಅವರ ಪುಟ್ಟ ಮಕ್ಕಳಾದ ಶ್ರೀನಿಧಿ ಹಾಗೂ ಸಮೃದ್ಧಿ ಅವರು ಅಪ್ಪನಿಗೆ ಅಂತಿಮ ವಿದಾಯ ಹೇಳುವಾಗ ಇತರರ ಆಕ್ರಂದನದಿಂದ ತಾವೂ ಅಳಲು ಆರಂಭಿಸಿದ್ದು ನೆರೆದವರ ಕರುಳು ಹಿಂಡುವಂತಿತ್ತು.

ಪುಣೆ ಮೂಲಕ ವಿಜಯಪುರ ಮಾರ್ಗವಾಗಿ ರಸ್ತೆ ಮಾರ್ಗವಾಗಿ ಉತ್ನಾಳದ ತನ್ನೂರ ಧಿಧೀರಮಗನ ಕಳೆಬರ ಬರುವ ಸುದ್ದಿ ತಿಳಿಯುತ್ತಲೇ ನೂರಾರು ಯುವಕರು ಮೂಲು ದೂರದಿಂದ ದ್ವಿಚಕ್ರ ವಾಹನದಲ್ಲಿ ಭವ್ಯ ಸ್ವಾಗತ ಕೋರಿದರು. ಗ್ರಾಮದ ಎಲ್ಲೆಲ್ಲೂ ಕಾಶೀನಾಥ ಅವರ ಕಟೌಟ್‌ ನಿರ್ಮಿಸಿದ್ದ ಯುವಕರು, ನಂತರ ಗ್ರಾಮದಲ್ಲಿ ಕಾಶೀನಾಥ ಅವರ ಪಾರ್ಥೀವ ಶರೀರವನ್ನು ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಿದರು.

ನಂತರ ಅಂತಿಮ ಸಂಸ್ಕಾರಕ್ಕೆ ನಿಗದಿ ಆಗಿದ್ದ ಕಾಶೀನಾಥ ಬಾಲ್ಯವನ್ನು ಕಳೆದ ಹಾಗೂ ಅಕ್ಷರ ಜ್ಞಾನ ಪಡೆದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೇ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮೆರವಣಿಗೆಯ ಬಳಿಕ ಸಾರ್ವಜನಿಕ ದರ್ಶನಕ್ಕೆ ಇರಿಸಿಸಲಾಗಿತ್ತು. ಸೇನಾಧಿಕಾರಿಗಳ  ತೃತ್ವದಲ್ಲಿ ಶಿಷ್ಟಾಚಾರದ ಗೌರವ ಸಲ್ಲಿಸಿ ಕುಶಾಲತೋಪುಗಳನ್ನು ಸಿಡಿಸಲಾಯಿತು.

ಬಳಿಕ ಪತಿಯ ಶವದ ಬಳಿ ಬಂದ ವಿಜಯಲಕ್ಷ್ಮಿ ಅವರು ಕಂಬನಿಯನ್ನು ಕಣ್ಣಲ್ಲಿ ಅರಳಿಸಿಕೊಂಡು ಶಲ್ಯೂಟ್‌ ಹೊಡೆಯುತ್ತಲೇ ನೆರೆದವರು ಹೃದಯಗಳು ಕಲಕಿ ಹೋದವು. ಪುಟ್ಟ ಮಕ್ಕಳು ಅಪ್ಪನಿಗೆ ಅಂತಿಮ ದರ್ಶನ ಹಾಗೂ ವಿದಾಯ ಹೇಳುವಾಗ ಮಕ್ಕಳನ್ನು ಕಂಡ ಜನರು ಅಯ್ಯೋ ವಿಯೇ ಎಂದು ಶಪಿಸುತ್ತಿದ್ದರು.

ಕರುಳ ಕುಡಿಯನ್ನು ಕಳೆದುಕೊಂಡ ಅಪ್ಪ, ಅವ್ವ ಅವರೂ ಧೀರ ಮಗನಿಗೆ ಅಂತಿಮ ಶಲ್ಯೂಟ್‌ ಮಾಡಿದರೆ, ಅಣ್ಣ-ಮ್ಮಂದಿರು, ಅಕ್ಕ-ತಂಗಿಯರು, ಬಂಧುಗಳು ಕೂಡ ಅಂತಿಮ ದರ್ಶನ ಪಡೆಯುವಾಗ ಆಕ್ರಂದ ಮುಗಿಲು ಮುಟ್ಟಿತ್ತು.

ನಂತರ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು ಪುಷ್ಟನಮನ ಸಲ್ಲಿಸಿದರು. ಕಾಶೀನಾಥ ಅವರಿಗೆ ಜಿಲ್ಲೆಯ ಹಲವು ಕಡೆಗಳಿಂದ ಆಗಮಿಸಿದ್ದ ಜನರು ಊರ ಜನರೊಂದಿಗೆ ಸೇರಿ ಅಂತಿಮ ದರ್ಶನ ಪಡೆದರು. ಬಳಿಕ ಯೋಧ ಕಾಶೀನಾಥ ಅವರು ತವರಿನ ಶಾಲಾ ಆವರಣದಲ್ಲಿ ಪಂಚಭೂಗಳಲ್ಲಿ ಲೀನವಾಗಿ, ಶಾಸ್ವತ ನಿದ್ರೆಗೆ ಜಾರಿದರು.

„ಜಿ.ಎಸ್‌.ಕಮತರ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.