ವಿದ್ವತ್ ಗೆ 3ವಾರಗಳ ಚಿಕಿತ್ಸೆ ಬೇಕು, ವೈದ್ಯರು ಹೇಳೋದೇನು?
Team Udayavani, Feb 20, 2018, 5:31 PM IST
ಬೆಂಗಳೂರು:ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ಹಾಗೂ ಗೂಂಡಾಪಡೆಗಳಿಂದ ಮಾರಣಾಂತಿಕವಾಗಿ ಹೊಡೆತಕ್ಕೊಳಗಾಗಿದ್ದ ಉದ್ಯಮಿ ಪುತ್ರ ವಿದ್ವತ್ ಗೆ 3 ವಾರಗಳ ಕಾಲ ಚಿಕಿತ್ಸೆಯ ಅಗತ್ಯವಿದೆ ಎಂದು ಪ್ಲ್ಯಾಸ್ಟಿಕ್ ಸರ್ಜರಿ ಸರ್ಜನ್ ಡಾ.ಆನಂದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಲ್ಲೆಗೊಳಗಾದ ವಿದ್ವತ್ ಕುರಿತು ಪೂರ್ಣ ಮಾಹಿತಿಯನ್ನು(ಇದನ್ನೂ ಓದಿ: ಹ್ಯಾರಿಸ್ ಪುತ್ರ ಪೊಲೀಸ್ ವಶ) ನೀಡಿದ್ದಾರೆ. ಆತನ ಉಸಿರಾಟಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.
ವೈದ್ಯರ ಮಾಹಿತಿಯಲ್ಲಿ ಏನಿದೆ?
ವಿದ್ವತ್ ಗೆ ಮಾರಣಾಂತಿಕವಾಗಿ ಹೊಡೆದ ಪರಿಣಾಮ(ಇದನ್ನೂ ಓದಿ: ಹ್ಯಾರಿಸ್ ಮಗನ ರಂಪಾಟ:ಎಲ್ಲರ ಬಣ್ಣ ಬಯಲು ಮಾಡಿದ ಮಹಿಳೆ! ವಿಡಿಯೋ ವೈರಲ್) ಮೂಗಿನ ಮೂಳೆ ಹಾಗೂ ಬೆನ್ನು ಮೂಳೆ ಮುರಿದಿದೆ. ಕಣ್ಣಿನ ಕೆಳ ಭಾಗದ ಮೂಳೆ ಗೆ ಪೆಟ್ಟಾಗಿದೆ. ಚೆಸ್ಟ್(ಹೃದಯ)ನ 9 ವಾಲ್ ಗಳ ಮೂಳೆ ಮುರಿದಿದೆ. ಕೆನ್ನೆಯ ಬಲಭಾಗದ 5 ಮೂಳೆಗಳು ಫ್ಯ್ರಾಕ್ಚರ್ ಆಗಿದೆ ಎಂದು ಮಲ್ಯ ಆಸ್ಪತ್ರೆಯ ಸರ್ಜನ್ ಡಾ.ಆನಂದ್ ವಿವರಿಸಿದ್ದಾರೆ.
ಮಲ್ಯ ಆಸ್ಪತ್ರೆಗೆ ನಟ ಪುನೀತ್ ಭೇಟಿ:
ಮಲ್ಯ ಆಸ್ಪತ್ರೆಗೆ ನಟ ಪುನೀತ್ ರಾಜ್ ಕುಮಾರ್ ಅವರು ಮಂಗಳವಾರ ಭೇಟಿ ನೀಡಿ ಹಲ್ಲೆಗೊಳಗಾದ ವಿದ್ವತ್ ನ ಆರೋಗ್ಯದ ಬಗ್ಗೆ ವಿಚಾರಿಸಿದರು. ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಲ್ಲೆಗೊಳಗಾದ ವಿದ್ವತ್ ಫ್ಯಾಮಿಲಿ ಫ್ರೆಂಡ್. ಆತನನ್ನು ನಾನು ಚಿಕ್ಕಂದಿನಿಂದಲೇ ನೋಡಿದ್ದೀನಿ. ವಿದ್ವತ್ ನನ್ನ ತಮ್ಮನ ಹಾಗೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದರು. (ವಿದ್ವತ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಪುತ್ರ ಗುರು ರಾಜ್ ಕುಮಾರ್ ಸ್ನೇಹಿತರು).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.