ಚಂದ್ರಯಾನ 2ರ ಬಜೆಟ್ ಹಾಲಿವುಡ್ ಚಿತ್ರಕ್ಕಿಂತ ಕಮ್ಮಿ
Team Udayavani, Feb 21, 2018, 9:57 AM IST
ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಕಾಂಕ್ಷೆಯ ಚಂದ್ರಯಾನದ 2ನೇ ಆವೃತ್ತಿಯು ಸದ್ಯದಲ್ಲೇ ಅನುಷ್ಠಾನಗೊಳ್ಳಲಿದ್ದು, ಇದರ ವೆಚ್ಚ, ಹಾಲಿವುಡ್ನ ಸೂಪರ್ ಹಿಟ್ ಚಿತ್ರ “ಇಂಟರ್ಸ್ಟೆಲ್ಲರ್’ಗಿಂತಲೂ ಕಡಿಮೆ ಎಂದು ಹೇಳಲಾಗಿದೆ.
ಖಗೋಳ ವಿಜ್ಞಾನದ ಕಥಾವಸ್ತುವನ್ನೇ ಒಳ ಗೊಂಡಿದ್ದ, 2014ರಲ್ಲಿ ಬಿಡುಗಡೆಯಾಗಿದ್ದ ಇಂಟರ್ಸ್ಟೆಲ್ಲರ್ ಚಿತ್ರ, 1,062 ಕೋಟಿ ರೂ.ಗಳ ವೆಚ್ಚದಲ್ಲಿ ತಯಾರಾಗಿತ್ತು. ಆದರೆ, ಚಂದ್ರಯಾನ -2ರ ಒಟ್ಟಾರೆ ವೆಚ್ಚ 800 ಕೋಟಿ ರೂ. ಆಗಿದೆ ಎಂದು ಝೀ ನ್ಯೂಸ್ ಹೇಳಿದೆ.
ಹಿಂದೆ, 2013ರಲ್ಲಿ ಮಂಗಳ ಯಾನಕ್ಕೆ ಚಾಲನೆ ನೀಡಿದ್ದ ಇಸ್ರೋ, ಆ ಯೋಜನೆಯನ್ನು 470 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಿತ್ತು. ಅದೇ ವರ್ಷ ತೆರೆಗೆ ಬಂದಿದ್ದ, ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಚಿತ್ರವಾದ “ಗ್ರಾವಿಟಿ’ಯ ಬಜೆಟ್ಗಿಂತಲೂ ಕಡಿಮೆ ಇತ್ತು. ಗ್ರಾವಿಟಿ ಚಿತ್ರ 644 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದರೆ, ಮಂಗಳಯಾನದ ವೆಚ್ಚ 470 ಕೋಟಿ ರೂ. ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.