ಭಾರತದ ಗಡಿಯಲ್ಲಿ ವಾಯು ರಕ್ಷಣೆ ಬಲಪಡಿಸುತ್ತಿದೆ ಚೀನ
Team Udayavani, Feb 21, 2018, 10:22 AM IST
ಬೀಜಿಂಗ್: ಡೋಕ್ಲಾಂನಲ್ಲಿ ಕಾಲು ಕೆರೆದುಕೊಂಡು ಬಂದಿದ್ದ ಚೀನ ಈಗ ಮತ್ತೆ ಕ್ಯಾತೆ ಶುರುವಿಟ್ಟುಕೊಂಡಿದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಗುಂಟ ಭದ್ರತೆಯನ್ನು ನೋಡಿಕೊಳ್ಳುವ ತನ್ನ ವೆಸ್ಟರ್ನ್ ಥಿಯೇ ಟರ್ ಕಮಾಂಡ್‌ನ ವಾಯುರಕ್ಷಣಾ ವ್ಯವಸ್ಥೆಯನ್ನು ಮೇಲ್ದ ರ್ಜೆಗೇರಿಸುವ ಮೂಲಕ, ಭಾರತದಿಂದ ಆಗುವ ಅಪಾಯವನ್ನು ಎದುರಿಸಲು ಸಜ್ಜಾಗುತ್ತಿ ದ್ದೇವೆ ಎಂದು ಚೀನ ಹೇಳಿದೆ. ಚೀನದ ಸೇನಾ ತಜ್ಞರೇ ನೀಡಿರುವ ಈ ಹೇಳಿಕೆಯನ್ನು ಅಲ್ಲಿನ ಅಧಿಕೃತ ಮಾಧ್ಯಮವೇ ವರದಿ ಮಾಡಿದೆ.
ಜೆ-10 ಯುದ್ಧವಿಮಾನ ಮತ್ತು ಜೆ-11 ಸಿಂಗಲ್ ಸೀಟರ್ ಯುದ್ಧ ವಿಮಾನ ಹಾರಾಡುವ ಚಿತ್ರವನ್ನೂ ಬಿಡುಗಡೆ ಮಾಡಲಾಗಿದೆ. ಈ ಯುದ್ಧವಿಮಾನಗಳು ವಾಯುಪಡೆಯ ಪಿಎಲ್‌ಎ ವೆಸ್ಟರ್ನ್ ಥಿಯೇಟರ್ ಕಮಾಂಡ್‌ಗೆ ಸೇರಿದ್ದು ಎಂದೂ ಚೀನ ಸೇನೆ ತಿಳಿಸಿದೆ. ಈ ಕಮಾಂಡ್‌ಗೆ ಹೆಚ್ಚಿನ ಬಲ ಒದಗಿಸುವುದು ತುರ್ತು ಅಗತ್ಯವಾಗಿದೆ. ಭಾರತದ ಬಳಿಯಿರುವ ಮೂರನೇ ತಲೆಮಾರಿನ ಯುದ್ಧ ವಿಮಾನಗಳನ್ನು ಪರಿಗಣಿಸಿ, ನಾವು 3.5 ತಲೆಮಾರಿನ
ಜೆಟ್‌ಗಳನ್ನು ನಿಯೋಜಿಸುತ್ತಿದ್ದೇವೆ ಎಂದಿದೆ ಚೀನ.ಉಗ್ರರೊಂದಿಗೆ ಸ್ನೇಹ: ಇನ್ನೊಂದೆಡೆ, ಪಾಕಿಸ್ಥಾನದ ಬಲೂಚಿಸ್ಥಾನ ಪ್ರಾಂತ್ಯ ದಲ್ಲಿರುವ ಬಲೂಚ್ ಉಗ್ರರ ಜತೆಗೆ ಚೀನ ಮಾತುಕತೆ ನಡೆಸುತ್ತಿರುವ ವಿಚಾರವೂ ಬೆಳಕಿಗೆ ಬಂದಿದೆ. ತನ್ನ 60 ಶತಕೋಟಿ ಡಾಲರ್ ವೆಚ್ಚದ ಚೀನ-ಪಾಕಿಸ್ಥಾನ ಆರ್ಥಿಕ ಕಾರಿಡಾರ್ ಯೋಜನೆಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಈ ಮಾತುಕತೆ ನಡೆದಿದೆ ಎನ್ನಲಾಗಿದೆ. ಬಲೂಚ್ ಪ್ರಾಂತ್ಯದಲ್ಲಿ ಚೀನ ಪ್ರಾಬಲ್ಯ ಹೆಚ್ಚಿದರೆ ಭಾರತಕ್ಕೆ ಅಪಾಯವಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.