ವಸಿಷ್ಠ ಸಿಂಹ ಮತ್ತೆ ಹೀರೋ
Team Udayavani, Feb 21, 2018, 11:40 AM IST
ನೆಗೆಟಿವ್ ಶೇಡ್‌ನ ಪಾತ್ರಗಳಲ್ಲಿ ಬಿಝಿಯಾಗುತ್ತಿರುವ ವಸಿಷ್ಠ ಸಿಂಹ ಅವರನ್ನು ಹೀರೋ ಮಾಡುವ ಪ್ರಯತ್ನ ನಡೆಯುತ್ತಲೇ ಇದೆ. “ಅಲೋನ್’ ಎಂಬ ಸಿನಿಮಾದಲ್ಲಿ ವಸಿಷ್ಠ ಹೀರೋ ಆದರೂ ಆ ಚಿತ್ರ ಮಾತ್ರ ಹೆಚ್ಚು ಸದ್ದು ಮಾಡಲಿಲ್ಲ. ಹಾಗಾಗಿ, ವಿಲನ್ ಪಾತ್ರಗಳಲ್ಲಿ ವಸಿಷ್ಠ ಬಿಝಿಯಾಗುತ್ತಿದ್ದಾರೆ. ಹೀಗಿರುವಾಗಲೇ ವಸಿಷ್ಠ ಈಗ ಸಿನಿಮಾವೊಂದಕ್ಕೆ ನಾಯಕರಾಗಿದ್ದಾರೆ. ಗುರುವಾರದಿಂದ ಆ ಸಿನಿಮಾದ ಸಾಂಗ್ ರೆಕಾರ್ಡಿಂಗ್ ಆರಂಭವಾಗಲಿದೆ.
ವಸಿಷ್ಠ ಅವರನ್ನು ಹೀರೋ ಮಾಡಲು ಹೊರಟಿರೋದು ನಿರ್ದೇಶಕ ಫಣೀಶ್. ನಿಮಗೆ ಶಿವರಾಜಕುಮಾರ್ ಅವರ “ಅಂದರ್ ಬಾಹರ್’ ನೆನಪಿದ್ದರೆ ಫಣೀಶ್ ಅವರ ಬಗ್ಗೆ ಗೊತ್ತಾಗುತ್ತದೆ. “ಅಂದರ್ ಬಾಹರ್’ ಸಿನಿಮಾ ನಿರ್ದೇಶಿಸಿದ ಫಣೀಶ್ ಈಗ ದೊಡ್ಡ ಗ್ಯಾಪ್‌ನ ನಂತರ ಮತ್ತೆ ಬಂದಿದ್ದಾರೆ. ವಸಿಷ್ಠ ಸಿಂಹ ಅವರನ್ನು ನಾಯಕರನ್ನಾಗಿಸಿ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಟೈಟಲ್ ಅಂತಿಮವಾಗಿಲ್ಲ.
ಯುಗಾದಿ ಸಮಯದಲ್ಲಿ ಶೀರ್ಷಿಕೆ ಅನಾವರಣ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ. ಫಣೀಶ್ ಈ ಬಾರಿ ರೊಮ್ಯಾಂಟಿಕ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಮಾಡಲು ಹೊರಟಿದ್ದಾರೆ. ಚಿತ್ರದ ಕಥೆ ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಸಾಗುತ್ತದೆಯಂತೆ. ಇಂದಿನ ಕಾಲಘಟ್ಟಕ್ಕೆ ಕಥೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಎನ್ನುವುದು ಫಣೀಶ್ ಮಾತು. ಚಿತ್ರಕ್ಕೆ ನಾಯಕಿ ಹಾಗೂ ಪ್ರಮುಖ ಪಾತ್ರಗಳ ಆಯ್ಕೆ ಇನ್ನಷ್ಟೇ ಆಗಬೇಕಿದೆ.
ಚಿತ್ರವನ್ನು ಅನುಗ್ರಹ ಎಂಟರ್‌ಟೈನ್‌ಮೆಂಟ್‌ನಡಿ ಸತೀಶ್, ಜನಾರ್ದನ್ ಹಾಗೂ ಶಶಾಂಕ್ ಸೇರಿ ನಿರ್ಮಿಸುತ್ತಿದ್ದಾರೆ. ನಿರ್ದೇಶಕ ಫನೀಣ್ ಕೂಡಾ ನಿರ್ಮಾಣದಲ್ಲಿ ಸಾಥ್ ನೀಡುತ್ತಿದ್ದಾರೆ. ಚಿತ್ರಕ್ಕೆ ವಿಜಯ್ ಪ್ರಕಾಶ್ ಸಂಗೀತ ನೀಡುತ್ತಿದ್ದಾರೆ. “ಅಂದರ್ ಬಾಹರ್’ ಚಿತ್ರಕ್ಕೂ ವಿಜಯ್ ಪ್ರಕಾಶ್ ಸಂಗೀತ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.