ವರ್ತಮಾನದ ಸಂತೋಷದಲ್ಲೇ ಬದುಕು: ಅಮ್ಮನ ಅನುಗ್ರಹ ನುಡಿ
Team Udayavani, Feb 22, 2018, 9:56 AM IST
ಮಂಗಳೂರು: ಕಳೆದುಹೋದ ದಿನಗಳನ್ನು ನೆನೆಯುತ್ತ ದುಃಖಪಡುವ ಬದಲು ಇಂದಿನ ದಿನವನ್ನು ಸಂತೋಷದಲ್ಲಿ ಕಳೆಯುವ ಬಗ್ಗೆ ನಿರ್ಧರಿಸಬೇಕು. ಈ ಮೂಲಕ ಜೀವನದಲ್ಲಿ ಸಂತೋಷವನ್ನು ಪಡೆದುಕೊಳ್ಳಲು ಸಾಧ್ಯ ಎಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರು ನುಡಿದರು.
ಮಂಗಳೂರಿನ ಬೋಳೂರಿನ ಅಮೃತಾ ನಂದ ಮಯಿ ಮಠದಲ್ಲಿ ಎರಡು ದಿನ ಆಯೋಜಿಸ ಲಾಗಿದ್ದ “ಅಮೃತ ಸಂಗಮ’ ಕಾರ್ಯಕ್ರಮದ ಕೊನೆಯ ದಿನ ವಾದ ಬುಧವಾರ ಅವರು ಆಶೀರ್ವಚನವಿತ್ತರು.
ಮನಸ್ಸು ನಮ್ಮ ಹಿಡಿತದಲ್ಲಿ ಇಲ್ಲದಿರುವುದರಿಂದ ಎಲ್ಲರಲ್ಲಿಯೂ ಇರುವ ಈಶ್ವರತ್ವ ನಮ್ಮ ಗಮನಕ್ಕೆ ಹಾಗೂ ಅನುಭವಕ್ಕೆ ಬರುತ್ತಿಲ್ಲ. ನಮ್ಮ ಮನಸ್ಸು ನೀರಿನ ಹಾಗೆ ಯಾವತ್ತೂ ಕೆಳಮುಖವಾಗಿರುತ್ತದೆ. ಆದರೆ ಬೋಧ ಬೆಂಕಿಯ ಹಾಗೆ ಮೇಲ್ಮುಖವಾಗಿ ಇರುತ್ತದೆ. ಆದ್ದರಿಂದ ಮನಸ್ಸಿನಲ್ಲಿರುವ ಬೋಧ ವನ್ನು ಜಾಗೃತಿ ಮಾಡಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಮಾನವೀಯತೆ ಸೇವೆ, ಮಮತೆಯ ದಿವ್ಯ ಪ್ರೇಮವು ಸಾಕ್ಷಾತ್ಕಾರಕ್ಕೆ ಮಹಾದ್ವಾರ ಇದ್ದಂತೆ. ಜ್ಞಾನದ ನೆಲೆಯಲ್ಲಿ ಮಮತೆಯೊಂದಿಗೆ ಆಧ್ಯಾತ್ಮಿಕ ಉತ್ಸಾಹ ವರ್ಧಿಸುತ್ತದೆ. ಭಕ್ತಿಯಿಂದ ಮಾತ್ರ ಜ್ಞಾನ ಸ್ಥಿರಗೊಳ್ಳುತ್ತದೆ ಎಂದವರು ವಿವರಿಸಿದರು.
ಕೆಲವರು ಅತಿಯಾಗಿ ಮಾತನಾಡುವವರು ಇರುತ್ತಾರೆ. ಅತಿಯಾಗಿ ಮಾತನಾಡುವವನ ಮನಸ್ಸಿ ನಲ್ಲಿ ಅತಿಯಾದ ಆಲೋಚನೆ ಇರುತ್ತದೆ. ಆದರೆ ಕಡಿಮೆ ಮಾತನಾಡುವವನ ಮನಸ್ಸು ಭಾರ ವಾಗಿರುತ್ತದೆ. ಇದರಿಂದ ಆತ ಖನ್ನತೆಗೆ ಹೋಗ ಬಹುದು. ನಮ್ಮ ಭಾವನೆ ಗಳನ್ನು ಅದುಮಿಟ್ಟು ಕೊಳ್ಳುವುದರಿಂದ ಶಾರೀರಿಕ ಹಾಗೂ ಮಾನಸಿಕ ರೋಗಗಳಿಗೆ ಕಾರಣ ವಾಗಬಹುದು. ಧ್ಯಾನ, ಜಪ, ಪ್ರಾರ್ಥನೆ, ಸತ್ಸಂಗದ ಮೂಲಕ ಕಡಿಮೆ ಮಾಡ ಬಹುದಾಗಿದೆ ಎಂದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಸಮಿತಿ ಗೌರವಾಧ್ಯಕ್ಷ ಡಾ| ಜೀವರಾಜ್ ಸೊರಕೆ, ಕರ್ನಾಟಕ ಸೆಕ್ಯುರಿಟಿ ಸರ್ವೀಸಸ್ ಎಂಡಿ ಟಿ.ಎ. ಅಶೋಕನ್, ಪ್ರಸೂತಿ, ಸ್ತ್ರೀರೋಗ ತಜ್ಞೆ ಡಾ| ಇಂದುಮತಿ, ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್, ಮಲ್ಪೆ ಉದ್ಯಮಿ ರಮೇಶ್ ಕೋಟ್ಯಾನ್, ಪಂಕಜ್ ವಸಾನಿ, ಸಮಿತಿ ಗೌರವಾಧ್ಯಕ್ಷರಾದ ಡಾ| ವೈ.ಸನತ್ ಹೆಗ್ಡೆ, ಡಾ| ಶ್ರುತಿ ಎನ್. ಹೆಗ್ಡೆ, ವಾಮನ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು.
ಸತ್ಸಂಗ-ಭಜನೆ-ಧ್ಯಾನ
ಬೋಳೂರಿನ ಅಮೃತಾನಂದಮಯಿ ಮಠ ದಲ್ಲಿ ಬುಧವಾರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿಶೇಷ ಪೂಜೆ, ಪ್ರವಚನ, ಸತ್ಸಂಗ, ಭಜನೆ, ಧ್ಯಾನ, ಮಾನಸ ಪೂಜೆಗಳು ನೆರವೇರಿದವು. ಯಜ್ಞಶಾಲೆಯಲ್ಲಿ ಅಮ್ಮನವರ ಪ್ರವಚನ ನಡೆಯಿತು. ಜತೆಗೆ ಸಾವಿರಾರು ಭಕ್ತರು ಅಮ್ಮನವರ ಅನುಗ್ರಹ ದರ್ಶನ ಪಡೆದರು. ಮಾತೆಯರು ಅಮ್ಮ ಅವರಿಗೆ ವಿಶೇಷ ಆರತಿ ಬೆಳಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು
Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್ ಕೇಬಲ್ ಕಳವು
Sulya: ಆರಂತೋಡು: ಚಿಕನ್ ಸೆಂಟರ್ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.