ಅಕ್ರಮ ವಲಸಿಗರು, ಪಾಕ್ ಛಾಯಾ ಸಮರ: ಜ| ರಾವತ್ ಎಚ್ಚರಿಕೆ
Team Udayavani, Feb 22, 2018, 11:15 AM IST
ಹೊಸದಿಲ್ಲಿ : ಬಾಂಗ್ಲಾದೇಶದಿಂದ ಭಾರತದ ಈಶಾನ್ಯ ರಾಜ್ಯಗಳಿಗೆ ಗಣನೀಯ ಪ್ರಮಾಣದಲ್ಲಿ ಅಕ್ರಮ ವಲಸೆ ನಡೆಯುತ್ತಿರುವುದರ ಹಿಂದೆ ಪಾಕಿಸ್ಥಾನದ ಕೈವಾಡವಿದ್ದು ಈ ಮೂಲಕ ಭಾರತದ ವಿರುದ್ಧ ಛಾಯಾ ಸಮರ ನಡೆಸುತ್ತಿರುವ ಪಾಕಿಸ್ಥಾನಕ್ಕೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.
ಭಾರತದ ಈಶಾನ್ಯ ರಾಜ್ಯಗಳಿಗೆ ಬಾಂಗ್ಲಾ ದೇಶದಿಂದ ದೊಡ್ಡ ಸಂಖ್ಯೆಯಲ್ಲಿ ಅಕ್ರಮ ವಲಸಿಗರನ್ನು ನುಗ್ಗಿಸುವ ಮೂಲಕ ಈಶಾನ್ಯ ಭಾಗಗಳನ್ನು ಒಳಹಾಕಿಕೊಳ್ಳುವ ದುರುದ್ದೇಶ ಪಾಕಿಸ್ಥಾನದ್ದಾಗಿದೆ; ಈ ರೀತಿಯ ಛಾಯಾ ಸಮರ ನಡೆಸುತ್ತಿರುವ ಪಾಕಿಸ್ಥಾನಕ್ಕೆ ಇದು ಭಾರತದ ಎಚ್ಚರಿಕೆಯಾಗಿದೆ ಎಂದು ರಾವತ್ ಮಾಧ್ಯಮವನ್ನು ಉದ್ದೇಶಿಸಿ ಹೇಳಿದರು.
ಪಾಕಿಸ್ಥಾನದ ಈ ಛಾಯಾ ಸಮರಕ್ಕೆ ಚೀನದ ಬೆಂಬಲವಿದ್ದು ಭಾರತದ ಈಶಾನ್ಯ ಭಾಗವನ್ನು ಪ್ರಕ್ಷುಬ್ದವಾಗಿರಿಸುವುದು ಈ ಛಾಯಾ ಸಮರದ ಉದ್ದೇಶವಾಗಿದೆ ಎಂದು ಜನರಲ್ ರಾವತ್ ಹೇಳಿದರು.
ಅಸ್ಸಾಮಿನ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ಜನಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿರುವುದರ ಹಿಂದೆ ಪಾಕಿಸ್ಥಾನದ ಕೈವಾಡವಿದ್ದು ಅದಕ್ಕೆ ಚೀನದ ಬೆಂಬಲ ಇರುವುದು ಸ್ಪಷ್ಟವಿದೆ ಎಂದು ಜನರಲ್ ರಾವತ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Maharastra: ಚುನಾವಣಾ ರ್ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.