ಲಂಕಾದಲ್ಲಿ ತೆಲುಗು ಜನಾಂಗ
Team Udayavani, Feb 22, 2018, 12:07 PM IST
ಹೊಸದಿಲ್ಲಿ: ನೆರೆಯ ಶ್ರೀಲಂಕಾದಲ್ಲಿ ಆಂಧ್ರ ಪ್ರದೇಶದ ರಾಜ್ಯಭಾಷೆಯಾಗಿರುವ ತೆಲು ಗನ್ನು ಮಾತನಾಡುವ ಬುಡಕಟ್ಟು ಜನಾಂಗವೊಂದು ಪತ್ತೆಯಾಗಿದ್ದು, ಭಾರತದ ಅನೇಕ ಸಂಶೋಧಕರನ್ನು ಆಕರ್ಷಿಸಿದೆ. “ಅಹಿಕುಂಟಕ’ ಎಂದು ಕರೆಯಲ್ಪಡುವ ಈ ಜನಾಂಗವು ತೆಲುಗು ಭಾಷೆಯನ್ನು ಶತಮಾ ನಗಳಿಂದ ಬಳಸುತ್ತಿರುವುದಾಗಿ “ದ ಹಿಂದೂ’ ಪ್ರಕಟಿಸಿದ ವರದಿಯನ್ನಾಧರಿಸಿ, ಇದೀಗ, ಆಂಧ್ರಪ್ರದೇಶ ಸರಕಾರ ಈ ಬಗ್ಗೆ ಶಾಸ್ತ್ರೀಯ ಅಧ್ಯಯನ ಮಾಡಲು ಮುಂದಾಗಿದೆ.
ಈ ಬಗ್ಗೆ ವಿವರಣೆ ನೀಡಿರುವ ಆಂಧ್ರ ಕ್ರಿಯಾಶೀಲತೆ ಹಾಗೂ ಸಾಂಸ್ಕೃತಿಕ ಆಯೋಗದ (ಎಪಿಸಿಸಿಸಿ) ಮುಖ್ಯಸ್ಥ ವೈಜೈ ಭಾಸ್ಕರ್, ಶತಮಾನಗಳಿಂದ ಲಂಕಾದಲ್ಲಿ ಜೀವಿಸುತ್ತಿರುವ ಅಹಿಕುಂಟಕ ಎಂಬ ತೆಲುಗು ಭಾಷಿಕರ ಬುಡಕಟ್ಟು ಜನಾಂಗದಲ್ಲಿ ಈಗ ಕೆಲವೇ ನೂರು ಮಂದಿ ಮಾತ್ರ ಉಳಿದಿದ್ದಾರೆ. ಇವರು, ವೃತ್ತಿಯಲ್ಲಿ ಹಾವಾಡಿಗರಾಗಿದ್ದು, ಲಂಕಾದಲ್ಲಿ ಅಸ್ಪೃಶ್ಯರಂತೆ ಬದುಕುತ್ತಿದ್ದಾರೆ. ಇವರು, ಲಂಕಾದ ಮೂಲ ನಿವಾಸಿಗಳಾಗಿದ್ದು, ಭಾರತದಿಂದ ವಲಸೆ ಹೋದವರಲ್ಲ ಎಂಬುದು ತಿಳಿದುಬಂದಿದೆ. ಇದು ತೆಲುಗು ಭಾಷೆಯ ಉಗಮದ ಪರಿಕಲ್ಪನೆಗೆ ಹೊಸ ಆಯಾಮ ಕಲ್ಪಿಸಿದ್ದು, ಇದರ ಅಧ್ಯಯನಕ್ಕಾಗಿ ಆಂಧ್ರ ಸರಕಾರದ ಮಾನವ ಶಾಸ್ತ್ರಜ್ಞರು, ಭಾಷಾ ತಜ್ಞರು ಸದ್ಯದಲ್ಲೇ ಶ್ರೀಲಂ ಕಾಕ್ಕೆ ಪ್ರವಾಸ ಹೋಗಲಿದ್ದಾರೆ. ಅಧ್ಯಯನ ತಂಡದ ಸದಸ್ಯರನ್ನು ಆಂಧ್ರ ಹಾಗೂ ತೆಲಂಗಾಣ ಸರಕಾರಗಳು ಆರಿಸಲಿವೆ” ಎಂದಿದ್ದಾರೆ.
ಇದಲ್ಲದೆ, “1817ರಲ್ಲಿ ಬ್ರಿಟಿಷರು ಶ್ರೀಲಂಕಾ ವನ್ನು ವಶಪಡಿಸಿಕೊಳ್ಳುವ ಮುನ್ನ ಇದ್ದ ಆ ದೇಶದ ಕೊನೆಯ ರಾಜ, ತೆಲುಗು ಮೂಲದವ ಆಗಿದ್ದರಿಂದ ಈ ಹಿನ್ನೆಲೆಯಲ್ಲಿ, ಅಹಿಕುಂಟಕ ಜನಾಂ ಗದ ಅಧ್ಯಯನ ಮಾಡ ಲಾಗುವುದು” ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.