ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಡ್ರಾ ಪ್ರಕಟ

Team Udayavani, Feb 23, 2018, 6:10 AM IST

Saina-Nehwal–800-A.jpg

ಬರ್ಮಿಂಗ್‌ಹಂ: ಮುಂದಿನ ತಿಂಗಳು ಬರ್ಮಿಂಗ್‌ಹಮ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಶಿಪ್‌ನ ಡ್ರಾ ಪ್ರಕಟಗೊಂಡಿದೆ. ಭಾರತದ ತಾರೆ ಸೈನಾ ನೆಹ್ವಾಲ್‌ ತೈವಾನಿನ ತೈ ಜು ಯಿಂಗ್‌ ಅವನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಪಿ.ವಿ. ಸಿಂಧು ಥೈಲ್ಯಾಂಡಿನ ಪೋನೌìವೀ ಚೋಚುವೊಂಗ್‌ ವಿರುದ್ಧ ಆಡಲಿದ್ದಾರೆ.

ವಿಶ್ವ ನಂ. 11ನೇ ಆಟಗಾರ್ತಿ ಸೈನಾ 2015ರ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ವರೆಗೂ ಪ್ರವೇಶಿಸಿದ್ದರು. ಕಳೆದ ತಿಂಗಳು ಇಂಡೋನೇಶ್ಯ ಓಪನ್‌ನಲ್ಲಿ ವಿಶ್ವ ನಂ.1 ಆಟಗಾರ್ತಿ ತೈ ಜು ಅವರಿಂದ ಪರಾಭವಗೊಂಡಿದ್ದರು. ಇಂಗ್ಲೆಂಡ್‌ ಟೂರ್ನಿಯಲ್ಲಿ ತೈ ಜು ವಿರುದ್ಧ ಸೇಡು ತೀರಿಸಿಕೊಳ್ಳಲು ಸೈನಾಗೆ ಅವಕಾಶವೊಂದು ಸಿಕ್ಕಂತಾಗಿದೆ.

ಇನ್ನೊಂದೆಡೆ ಸಿಂಧು ಮೊದಲ ಸುತ್ತಿನಲ್ಲಿ ಸುಲಭ ಜಯ ಸಾಧಿಸುವ ನಿರೀಕ್ಷೆಯಿದೆ. ಆದರೆ 2ನೇ ಸುತ್ತಿನಲ್ಲಿ ಅಮೆರಿಕದ ಬೀವೆನ್‌ ಜಾಂಗ್‌ ಜಾಂಗ್‌ ಎದುರಾಗುವ ಸಾಧ್ಯತೆಯಿದ್ದು, ಕಠಿನ ಹೋರಾಟವನ್ನು ನಿರೀಕ್ಷಿಸಲಾಗಿದೆ. ಬೀವೆನ್‌ ಜಾಂಗ್‌ “ಇಂಡಿಯಾ ಓಪನ್‌’ ಫೈನಲ್‌ನಲ್ಲಿ ಸಿಂಧು ಅವರಿಗೆ ಸೋಲುಣಿಸಿದ್ದರು. ಹೀಗಾಗಿ ಸಿಂಧು ಮುಂದೆಯೂ ಸೇಡಿನ ಅವಕಾಶವೊಂದಿದೆ.

ಪುರುಷರ ವಿಭಾಗ
ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ 3ನೇ ಶ್ರೇಯಾಂಕಿತ ಕೆ. ಶ್ರೀಕಾಂತ್‌ ಫ್ರೆಂಚ್‌ ಆಟಗಾರ ಬ್ರೈಸ್‌ ಲಿವರ್ದೆಜ್‌ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಸಿಂಗಾಪುರ್‌ ಓಪನ್‌ ಚಾಂಪಿಯನ್‌ ಬಿ. ಸಾಯಿ ಪ್ರಣೀತ್‌ ಮತ್ತು ಎಚ್‌.ಎಸ್‌. ಪ್ರಣಯ್‌ ಅವರಿಗೆ ಮೊದಲ ಸುತ್ತಿನಲ್ಲಿ ಕಠಿನ ಸವಾಲು ಎದುರಾಗಿದೆ. ಪ್ರಣೀತ್‌ ಮಾಜಿ ವಿಶ್ವ ನಂ. 1 ಆಟಗಾರ ಕೊರಿಯಾದ ಸನ್‌ ವಾನ್‌ ಹೊ ಅವರೆದುರು ಕಣಕ್ಕಿಳಿಯಲಿದ್ದಾರೆ. ಇತ್ತ ವಿಶ್ವ ನಂ. 11 ಆಟಗಾರ ಪ್ರಣಯ್‌ ಅವರಿಗೆ ಚೈನೀಸ್‌ ತೈಪೆಯ 8ನೇ ಶ್ರೇಯಾಂಕಿತ ಚೌ ಟಿನ್‌ ಚೆನ್‌ ಪ್ರತಿಸ್ಪರ್ಧಿಯಾಗಿದ್ದಾರೆ.

ಡಬಲ್ಸ್‌ ವಿಭಾಗದಲ್ಲಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ರಾಜ್‌ ರಾಂಕಿ ರೆಡ್ಡಿ ಜೋಡಿ, ಜಪಾನಿನ ತಕುರೊ ಹೊಕಿ-ಯುಗೊ ಕೊಬಾಯಶಿ ಜೋಡಿಯೆದುರು ಸೆಣಸಾಡಲಿದೆ. ಪ್ರಣವ್‌ ಜೆರ್ರಿ ಛೋಪ್ರ-ಎನ್‌. ಸಿಕ್ಕಿ ರೆಡ್ಡಿ ಜೋಡಿ ಜರ್ಮನ್‌ನ ಮಾರ್ವಿನ್‌ ಎಮಿಲ್‌ ಸೀಡೆಲ್‌-ಲಿಂಡ ಎಫ್ಲರ್‌ ಜೋಡಿ ವಿರುದ್ಧ ಸೆಣಸಲಿದೆ.

ಮನು ಅತ್ರಿ-ಬಿ. ಸುಮಿತ್‌ ರೆಡ್ಡಿ  ಇಂಗ್ಲೆಂಡ್‌ ಜೋಡಿ ಮರ್ಕ್ನೂಸ್‌ ಎಲ್ಲಿಸ್‌-ಕ್ರಿಸ್‌ ಲ್ಯಾಂಗ್ರಿಜ್‌ ಎದುರು ಸ್ಪರ್ಧೆಗಿಳಿದರೆ, ಮಹಿಳಾ ವಿಭಾಗದ ಅಶ್ವಿ‌ನಿ ಪೊನ್ನಪ್ಪ-ಸಿಕ್ಕಿ ಜೋಡಿ ಜಪಾನಿನ ಮಿಸಾಕಿ ಮಾಟ್ಸುಟೊಮೊ ಮತ್ತು ಅಯಕಾ ತಕಾಹಶಿ ಜೋಡಿಯನ್ನು ಎದುರಿಸಲಿದೆ. ಮಹಿಳಾ ಡಬಲ್ಸ್‌ನ ಉದಯೋನ್ಮುಖ ಜೋಡಿ ಜಕ್ಕಂಪುಡಿ ಮೇಘನಾ ಮತ್ತು ಪೂರ್ವಿಷಾ ಎಸ್‌. ರಾಮ್‌ 5ನೇ ಶ್ರೇಯಾಂಕಿತ ಜಪಾನ್‌ ಆಟಗಾರ್ತಿಯರಾದ ಶಿಹೋ ತನಾಕಾ ಮತ್ತು ಕೊಹಾರು ಯೊನೆಮೊಟೊ ವಿರುದ್ಧ ಸ್ಪರ್ಧಿಸಲಿದ್ದಾರೆ.

ಟಾಪ್ ನ್ಯೂಸ್

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

Ranji Trophy: ಕರ್ನಾಟಕ ಬಿಗಿ ಹಿಡಿತ; ಕೆ. ಶ್ರೀಜಿತ್‌ ಶತಕ

Ranji Trophy: ಕರ್ನಾಟಕ ಬಿಗಿ ಹಿಡಿತ; ಕೆ. ಶ್ರೀಜಿತ್‌ ಶತಕ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.