ಭಾರತದ ಮುಂದೆ ತಲೆತಗ್ಗಿಸಿದ ಕೆನಡಾ ಪ್ರಧಾನಿ
Team Udayavani, Feb 23, 2018, 9:56 AM IST
ಹೊಸದಿಲ್ಲಿ: ಭಾರತ ಒಡೆಯುವ ಶಕ್ತಿಗಳನ್ನು ಬೆಂಬಲಿಸುವುದಿಲ್ಲ ಎಂದು ಬುಧವಾರವಷ್ಟೇ ಆಶ್ವಾಸನೆ ನೀಡಿದ್ದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರಾಡ್ಯೂ ಭಾರೀ ಮುಖಭಂಗಕ್ಕೀಡಾಗಿದ್ದಾರೆ.
ಕೆನಡಾ ನಿವಾಸಿಯಾದ ಜಸ್ಪಾಲ್ ಅತ್ವಾಲ್ ಎಂಬ ಸಿಕ್ಖ್ ಪ್ರತ್ಯೇಕತಾವಾದಿ ಭಾರತ ಪ್ರವಾಸದಲ್ಲಿರುವ ಜಸ್ಟಿನ್‌ಅವರ ಅಧಿಕೃತ ಸಮಾರಂಭಗಳಲ್ಲೇ ಕಾಣಿಸಿಕೊಂಡಿರುವುದು ಮತ್ತು ಆತನಿಗೆ ಜಸ್ಟಿನ್ ಭೋಜನ ಕೂಟಕ್ಕೆ ಆಹ್ವಾನ ನೀಡಿ ರು ವುದೇ ಇದಕ್ಕೆ ಕಾರಣ. ಇದೀಗ ವಿವಾದವಾಗಿ ಮಾರ್ಪಟ್ಟಿದ್ದು, ಇದರ ಪರಿಣಾಮವಾಗಿ, ಭಾರತದಲ್ಲಿರುವ ಕೆನಡಾ ರಾಯಭಾರಿ ನಾದಿರ್ ಪಟೇಲ್ ವತಿಯಿಂದ ಗುರುವಾರ ರಾತ್ರಿ ಏರ್ಪಾಟಾಗಿದ್ದ ರಾತ್ರಿ ಭೋಜನ ಕೂಟಕ್ಕೆ ಅತ್ವಾಲ್‌ಗೆ ನೀಡಲಾಗಿದ್ದ ಆಹ್ವಾನವನ್ನು ರದ್ದುಗೊಳಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಸ್ಟಿನ್, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಮಧ್ಯೆ, ಜಸ್ಟಿನ್ ಕಾರ್ಯಕ್ರಮದಲ್ಲಿ ಅತ್ವಾಲ್ ಭಾಗಿಯಾಗಲು ಕಾರಣ ತಾವೇ ಎಂದು ಕೆನಡಾದ ಸಂಸದ ರಣದೀಪ್ ಸುರಯ್ ಒಪ್ಪಿಕೊಂಡಿದ್ದು, ತಮ್ಮ ನಡೆಗೆ ಕ್ಷಮೆಯನ್ನೂ ಕೋರಿದ್ದಾರೆ.ಇತ್ತ, ಅತ್ವಾಲ್ ಭೇಟಿ ಖಂಡಿಸಿರುವ ಭಾರತೀಯ ವಿದೇಶಾಂಗ ಇಲಾಖೆ, ಅತ್ವಾಲ್‌ಗೆ ಭಾರತದ ವೀಸಾ ದೊರಕಿದ್ದರ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದೆ.
ಯಾರೀತ ಅತ್ವಾಲ್?
ಅತ್ವಾಲ್ ಮೂಲತಃ ಸಿಕ್ಖ್ ಪ್ರತ್ಯೇಕತಾವಾದಿ. ಖಲಿಸ್ತಾನ್ ಉಗ್ರರ ಬೆಂಬಲಿಗ. 1986ರಲ್ಲಿ ಕೆನಡಾಕ್ಕೆ ಭೇಟಿ ನೀಡಿದ್ದ ಆಗಿನ ಪಂಜಾಬ್ ರಾಜ್ಯದ ಸಚಿವ ಮಲ್ಕಿಯತ್ ಸಿಂಗ್ ಸಂಧು ಅವರನ್ನು ಹತ್ಯೆಗೈಯ್ಯುವ ವಿಫಲ ಯತ್ನ ನಡೆಸಿ, ಆ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದ.
ಎಲ್ಲಿ ಬಂದಿದ್ದ ಈತ?
ಜಸ್ಟಿನ್ ಅವರ ದಿಲ್ಲಿ ಸಮಾರಂಭಕ್ಕೆ ಬಂದಿದ್ದ ಅತ್ವಾಲ್, ಮುಂಬಯಿಯ ಕಾರ್ಯಕ್ರಮದಲ್ಲಿ ಜಸ್ಟಿನ್ ಪತ್ನಿ ಸೋಫಿ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ.
ಮಹತ್ವದ ಬೆಳವಣಿಗೆಯಲ್ಲಿ ಅತ್ವಾಲ್‌ರನ್ನು ಉಗ್ರರ ಬ್ಲ್ಯಾಕ್‌ಲಿಸ್ಟ್‌ನಿಂದ ಈ ಹಿಂದೆಯೇ ತೆಗೆದು ಹಾಕ ಲಾಗಿದೆ ಎಂಬ ಅಂಶವೂ ಬಹಿರಂಗವಾಗಿದೆ. ಕೇಂದ್ರ ಗೃಹ ಸಚಿವಾಲಯವೇ ಇವರನ್ನು ತೆಗೆ ದುಹಾಕಿದ್ದು, ಈತ ಭಾರತದಲ್ಲೂ ಸ್ವತ್ಛಂದವಾಗಿ ಓಡಾಡಿಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Decision Awaited: 2025ಕ್ಕೆ ನೀಟ್ ಆನ್‌ಲೈನ್: ಶೀಘ್ರವೇ ನಿರ್ಧಾರ
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ
Noida: ಕಚೇರಿಯಲ್ಲಿ ವೃದ್ಧನನ್ನು ಕಾಯಿಸಿದ ಸಿಬ್ಬಂದಿಗೆ ನಿಂತು ಕೆಲಸ ಮಾಡೋ ಶಿಕ್ಷೆ
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.