ಮನುಷ್ಯ ಒಬ್ಬ; ವ್ಯಕ್ತಿತ್ವ ಹತ್ತು
Team Udayavani, Feb 23, 2018, 11:34 AM IST
ಉತ್ತರ ಕರ್ನಾಟಕದ ಮಠದವರೆಲ್ಲಾ ಈಗ ಸಾಯಿಪ್ರಕಾಶ್‌ರನ್ನು ಹುಡುಕಿಕೊಂಡು ಬಂದು ಅವರಿಂದ ಚಿತ್ರ ಮಾಡಿಸುತ್ತಿದ್ದಾರೆ. ಕಳೆದ ವರ್ಷ ಸಾಯಿಪ್ರಕಾಶ್ ಅವರು “ಅಬ್ಬೆ ತುಮಕೂರ ಸಿದ್ಧಿಪುರುಷ ವಿಶ್ವಾರಾಧ್ಯರು’ ಎಂಬ ಚಿತ್ರವನ್ನು ಮಾಡಿದ್ದರು. ಆ ಚಿತ್ರ ಇನ್ನೂ ಬಿಡುಗಡೆಯಾಗಬೇಕಿದೆ. ಅದಕ್ಕೂ ಮುನ್ನವೇ ಇಂಚಗೇರಿ ಮಠದ ಮಹಾದೇವರು ಅವರ ಕುರಿತಾದ “ಕ್ರಾಂತಿಯೋಗಿ ಮಹಾದೇವರು’ ಎಂಬ ಚಿತ್ರವನ್ನು ಶುರು ಮಾಡಿದ್ದಾರೆ.
“ಕ್ರಾಂತಿಯೋಗಿ ಮಹಾದೇವರು’ ಪಾತ್ರವನ್ನು ರಾಮ್‌ಕುಮಾರ್ ನಿರ್ವಹಿಸುತ್ತಿದ್ದು, ಚಿತ್ರ ಕಳೆದ ವಾರ ಸದ್ದಿಲ್ಲದೆ ಶುರುವಾಗಿದೆ. ನಿರ್ಮಾಪಕ ಶ್ರೀಶೈಲ ಗಾಣಿಗೇರ ಅವರು ಬಂದು ಚಿತ್ರ ಮಾಡಿಕೊಡುವುದಕ್ಕೆ ಹೇಳಿದಾಗ, ಮತ್ತೂಂದು ಮಠದ ಚಿತ್ರವಿರಬಹುದು ಎಂದುಕೊಂಡರಂತೆ ಸಾಯಿಪ್ರಕಾಶ್. ಆ ನಂತರ ಇದೊಂದು ಐತಿಹಾಸಿಕ ಚಿತ್ರವಾಗಲಿದೆ ಎಂದನಿಸಿತಂತೆ. “ಇದೊಂದು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಸಿನಿಮಾ.
ಕ್ರಾಂತಿಯೋಗಿ ಮಹಾದೇವರು ಮಠದ ಗುರುಗಳಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್ ಅವರನ್ನು ಭೇಟಿ ಮಾಡಿದ್ದರು. ಬ್ರಿಟಿಷರಿಗೆ ಗೊತ್ತಿಲ್ಲದಂತೆ ಬಂದೂಕಿನ ಫ್ಯಾಕ್ಟರಿ ಶುರು ಮಾಡಿದ್ದರು. ಮಠದ ಭಕ್ತರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿದ್ದರು. ಸರ್ವೋದಯ ಮತ್ತು ಏಕೀಕರಣ ಚಳವಳಿಗಳಲ್ಲಿ ಭಾಗಿಯಾಗಿದ್ದರು. ಸಾವಿರಾರು ಅಂತಜಾìತಿ ವಿವಾಹ ಮಾಡಿಸಿದ್ದರು.
ಹೀಗೆ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದ ಅವರ ಕುರಿತು ಈ ಚಿತ್ರ ಮಾಡುತ್ತಿದ್ದೇನೆ. ಇಲ್ಲಿ ಮಠ, ಬಾಲ್ಯ ಮುಂತಾದ ವಿಷಯಗಳೆಲ್ಲಾ ಕಡಿಮೆ ಇರಲಿವೆ. ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ ಸ್ವರಾಜ್ಯಕ್ಕೆ ಹೇಗೆ ಹೋರಾಟ ಮಾಡಿದರು ಎಂಬುದರ ಕುರಿತು ಚಿತ್ರದ ಕಥೆ ಸಾಗಲಿದೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ’ ಎಂದು ಮಾಹಿತಿಕೊಟ್ಟರು ಸಾಯಿಪ್ರಕಾಶ್.
ಇದು ಒಬ್ಬ ಮನುಷ್ಯನ ಕಥೆಯಾದರೂ, ಹತ್ತು ವ್ಯಕ್ತಿತ್ವದ ಕಥೆಯಾಗಲಿದೆ ಎನ್ನುತ್ತಾರೆ ರಾಮ್‌ಕುಮಾರ್. “ಈ ತರಹ ಸಾಧನೆ ಮಾಡುವುದಕ್ಕೆ 10 ಜೀವಮಾನವಾದರೂ ಬೇಕು. ಆದರೆ, ಕ್ರಾಂತಿಯೋಗಿ ಮಹಾದೇವರು ಒಂದೇ ಜೀವಮಾನದಲ್ಲಿ ಅಷ್ಟೆಲ್ಲವನ್ನೂ ಮಾಡಿದ್ದಾರೆ. ಅವರ ಸಾಧನೆ ಕೇಳಿದ ಮೇಲೆ ಈ ಚಿತ್ರ ಮಾಡಲೇಬೇಕು ಅಂತನಿಸಿತು. ಆಧ್ಯಾತ್ಮಿಕ ಜೀವನದಿಂದ ಸ್ವಾತಂತ್ರ್ಯ ಹೋರಾಟಗಾರರಾಗಿ ಅವರು ಬದಲಾದ ರೀತಿ ನಿಜಕ್ಕೂ ಅದ್ಭುತ.
ಗಾಂಧೀಜಿ ಅವರಿಂದ ಪ್ರೇರೇಪಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಅವರು ಬಂದ ರೀತಿ, ಮೈಲಿಗಟ್ಟಲೆ ಓಡಾಡಿ ಜನರನ್ನು ಅವರು ಸಂಘಟಿಸುತ್ತಿದ್ದ ರೀತಿ ಇವೆಲ್ಲಾ ಬಹಳ ಮುಖ್ಯ. ಇಂಥ¨ªೊಂದು ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಇಂಥ¨ªೊಂದು ಚಿತ್ರಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಸಿಗಲಿ’ ಎಂದು ಹಾರೈಸಿದರು. ಛಾಯಾಗ್ರಾಹಕ ಜೆ.ಜಿ. ಕೃಷ್ಣ ಅವರಿಗೆ ಕಥೆ ಕೇಳಿ ಈ ಚಿತ್ರಕ್ಕೆ ಪ್ರಶಸ್ತಿ ಗಿಟ್ಟಿಸಿಕೊಳ್ಳಬಹುದು ಎಂದನಿಸಿತಂತೆ.
“ಇದು ಮಾಮೂಲಿ ಸಿನಿಮಾ ಅಲ್ಲ. ಬೇರೆ ತರಹದ ಛಾಯಾಗ್ರಹಣ, ಲೈಟಿಂಗ್ ಎಲ್ಲವರೂ ಬೇಕಿದೆ. ಅದಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. “ನನ್ನಾಸೆಯ ಹೂವೇ’ ಚಿತ್ರಕ್ಕೆ 20 ವರ್ಷಗಳ ಹಿಂದೆ ಪ್ರಶಸ್ತಿ ಬಂದಿತ್ತು. ಈ ಚಿತ್ರಕ್ಕೂ ಪ್ರಶಸ್ತಿ ಬರಲಿ ಎಂದು ಮಾಡ್ತಿದ್ದೀನಿ’ ಎಂದರು. ಹಿರಿಯ ನಟ ಶಿವಕುಮಾರ್, ಈ ಚಿತ್ರದಲ್ಲಿ ಮಹಾದೇವರು ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಅವರು ಸಹ ಇದೊಂದು ಒಳ್ಳೆಯ ಚಿತ್ರವಾಗಲಿದೆ ಎಂದರು. “ಕ್ರಾಂತಿಯೋಗಿ ಮಹಾದೇವರು’ ಚಿತ್ರದಲ್ಲಿ ರಾಮ್‌ಕುಮಾರ್ ಮತ್ತು ಶಿವಕುಮಾರ್ ಜೊತೆಗೆ ರಮೇಶ್ ಭಟ್, ಸಿಹಿಕಹಿ ಚಂದ್ರು, ರವಿಚೇತನ್, ಸುಚಿತ್ರಾ, ಗಣೇಶ್ ರಾವ್ ಮುಂತಾದವರು ನಟಿಸುತ್ತಿದ್ದಾರೆ. ಮಾಧವಾನಂದ ಶೆಗುಣಸಿ ಚಿತ್ರಕ್ಕೆ ಕಥೆ ಬರೆದರೆ, ಬಿ. ಬಲರಾಂ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು ಶ್ರೀಶೈಲ ಗಾಣಿಗೇರ ಮತ್ತು ಯಲ್ಲಪ್ಪ ಮಹಿಷವಾಡಿಗಿ ಚಿತ್ರ ನಿರ್ಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Rey Mysterio Sr: ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.