ಅಧಿವೇಶನ ಗದ್ದಲದಲ್ಲಿ ಅಂತ್ಯಗೊಳ್ಳಲು ಸಿಎಂ ಕಾರಣ
Team Udayavani, Feb 24, 2018, 8:15 AM IST
ಬೆಂಗಳೂರು: ಆಯವ್ಯಯಗಳ ಅಂದಾಜು ಮೇಲಿನ ಚರ್ಚೆಗೆ ಉತ್ತರ ನೀಡುವಾಗ ರಾಜ್ಯ ಸರ್ಕಾರವನ್ನು ಸಮರ್ಥಿಸಿಕೊಳ್ಳಲು
ಸಾಧ್ಯವಾಗದೆ ಮುಖ್ಯಮಂತ್ರಿಗಳು ರಾಜಕೀಯ ಭಾಷಣ ಮಾಡಿದ್ದೇ 14ನೇ ವಿಧಾನಸಭೆಯ ಕೊನೆಯ ಅಧಿವೇಶನ ಗದ್ದಲದಲ್ಲಿ ಅಂತ್ಯಗೊಳ್ಳಲು ಕಾರಣವಾಗಿದ್ದು, ಈ ಬೆಳವಣಿಗೆಗೆ ಮುಖ್ಯಮಂತ್ರಿಗಳೇ ನೇರ ಹೊಣೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸುವಾಗ ಗುರು ವಾರವೂ ಕೇಂದ್ರ ಸರ್ಕಾರದ ವಿರುದಟಛಿ ಅನಗತ್ಯ ಆರೋಪ ಮಾಡುವ ಮೂಲಕ ವಿಷಯಾಂತರ ಮಾಡಿದ್ದರು. ಆದರೂ ಶುಕ್ರವಾರ ಆಯವ್ಯಯಗಳ ಅಂದಾಜು ಮೇಲಿನ ಚರ್ಚೆಗೆ ಉತ್ತರ ನೀಡುವಾಗ ನಾವು ತಾಳ್ಮೆಯಿಂದಲೇ ಇದ್ದೆವು. ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಆರಂಭವಾಗಿ ಒಂದು ಗಂಟೆಯಾದರೂ ಉತ್ತರ ಸಿಗಲಿಲ್ಲ. ಬದಲಾಗಿ
ಮತ್ತೆ ಕಾಂಗ್ರೆಸ್‌ನ ಕೆ.ಎನ್.ರಾಜಣ್ಣ ಮತ್ತಿತರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟಿ ಕೇಂದ್ರ ಸರ್ಕಾರದ ವಿರುದಟಛಿ ಆರೋಪ
ಮುಂದುವರಿಸಿದರು. ಇದರಿಂದಾಗಿ ಮುಖ್ಯಮಂತ್ರಿಗಳಿಗೆ ಉತ್ತರ ನೀಡಲು ನೈತಿಕತೆ ಇಲ್ಲದೆ ರಾಜಕೀಯ ಮಾಡುವ ಉದ್ದೇಶವಿದೆ ಎಂಬುದು ಸ್ಪಷ್ಟವಾಗಿ ಬಿಜೆಪಿ ಧರಣಿ ನಡೆಸಬೇಕಾಯಿತು ಎಂದು ಹೇಳಿದರು.
ಇದು 14ನೇ ವಿಧಾನಸಭೆಯ ಕೊನೆಯ ಅಧಿವೇಶನ. ಹೀಗಾಗಿ ಮುಖ್ಯಮಂತ್ರಿಗಳು ಸದನದ ಗೌರವ ಉಳಿಸಲು ಪ್ರಯತ್ನಿಸಬೇಕಿತ್ತು. ಆದರ ಬದಲಾಗಿ ತಮ್ಮ ನಡವಳಿಕೆಯಿಂದ ಸದನದ ಗೌರವಕ್ಕೆ ಧಕ್ಕೆ ತಂದರು. ಆಯವ್ಯಯಗಳ ಅಂದಾಜು ಮೇಲಿನ ಚರ್ಚೆಗೆ ಉತ್ತರ ನೀಡುವ ಬದಲು ಪ್ರಧಾನಿ ಮೋದಿ ವಿರುದಟಛಿ ಟೀಕೆ, ಕೇಂದ್ರ ಸರ್ಕಾರವನ್ನು 90 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಆರೋಪಿಸುವುದರಲ್ಲೇ ಕಾಲ ಕಳೆದರು. ಆ ಮೂಲಕ ಸದನದ ನಡಾವಳಿ ದಾರಿತಪ್ಪಲು ಅವಕಾಶ ಮಾಡಿಕೊಟ್ಟರು ಎಂದು ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸ್ಪಷ್ಟನೆ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.