ಮ್ಯೂಚುವಲ್ ಫಂಡ್‌ನಲ್ಲಿ ಮುಳುಗಿದ ಬಿಡಿಎ ಹಣ!
Team Udayavani, Feb 24, 2018, 12:48 PM IST
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ ಸಾವಿರಾರು ಕೋಟಿ ಹಣವನ್ನು ಅನಧಿಕೃತವಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ನಷ್ಟ ಉಂಟುಮಾಡಿದ ಆರೋಪದ ಹಿನ್ನೆಲೆಯಲ್ಲಿ ಮೂವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅವರ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಶಿಫಾರಸು ಮಾಡಿದೆ.
ಬಿಡಿಎ ಹಣಕಾಸು ಸಮಿತಿ ಸದಸ್ಯರಾಗಿದ್ದ ಸಂದೀಪ್ ದಾಶ್, ಎಂ.ಎನ್. ಶೇಷಪ್ಪ ಮತ್ತು ಬಿ. ಗಂಗಣ್ಣ ತಮ್ಮ ಅಧಿಕಾರಾವಧಿಯಲ್ಲಿ ಪ್ರಾಧಿಕಾರದ 4,046.45 ಕೋಟಿ ರೂ.ಗಳನ್ನು ಮ್ಯೂಚುವಲ್ ಫಂಡ್‌ಗೆ ಅನಧಿಕೃತವಾಗಿ ಹೂಡಿಕೆ ಮಾಡಿದ್ದಾರೆ. ಇದರಿಂದ ಪ್ರಾಧಿಕಾರಕ್ಕೆ 192.41 ಕೋಟಿ ರೂ. ನಷ್ಟ ಉಂಟಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜತೆಗೆ ಅವರೆಲ್ಲರ ಆಸ್ತಿಗಳನ್ನು “ಪ್ರಾಪರ್ಟಿ ಅಟ್ಯಾಚ್‌ಮೆಂಟ್’ ಮಾಡಿ, ಹಣ ವಸೂಲಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ತಿಳಿಸಿದೆ.
ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ 2014-15ನೇ ಸಾಲಿನ ಮಹಾ ಲೆಕ್ಕಪರಿಶೋಧಕರ (ಸಾಮಾನ್ಯ ಮತ್ತು ಸಾಮಾಜಿಕ ವಲಯ) ವರದಿಯಲ್ಲಿನ “ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮ್ಯೂಚುವಲ್ ಫಂಡ್‌ಗಳಲ್ಲಿ ಮಾಡಿದ ಹೂಡಿಕೆಗಳು’ ಕುರಿತು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯಲ್ಲಿ ಈ ಶಿಫಾರಸು ಮಾಡಲಾಗಿದೆ.
ಯಾರ್ಯಾರು ಎಷ್ಟೆಷ್ಟು ಹೂಡಿಕೆ?: ಸಂದೀಪ್ ದಾಶ್ 2,202.90 ಕೋಟಿ ರೂ., ಶೇಷಪ್ಪ 567.55 ಕೋಟಿ ಹಾಗೂ ಗಂಗಣ್ಣ 133 ಕೋಟಿ ರೂ.ಗಳನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಅನಧಿಕೃತವಾಗಿ ಹೂಡಿಕೆ ಮಾಡಿದ್ದಾರೆ. ಈ ಹೂಡಿಕೆಗಳಿಂದ 2015ರ ಜುಲೈ ಅಂತ್ಯಕ್ಕೆ ಪ್ರಾಧಿಕಾರಕ್ಕೆ 192.41 ಕೋಟಿ ರೂ. ನಷ್ಟವಾಗಿದೆ. ದಲ್ಲಾಳಿಗಳ ಮೂಲಕ ಮಾಡಲಾಗಿದ್ದ ಈ ಹೂಡಿಕೆಗಾಗಿ ಮ್ಯೂಚುವಲ್ ಫಂಡ್ ಕಂಪನಿಗಳು 50.71 ಕೋಟಿ ಕೋಟಿ ರೂ. ಕಮೀಷನ್ ನೀಡಿವೆ. ಈ ಹಣವನ್ನು ಹಣಕಾಸು ಸದಸ್ಯರು ಬೇನಾಮಿ ಮೂಲಗಳಿಗೆ ತಲುಪಿಸಿದ್ದಾರೆ ಎಂದೂ ಸಮಿತಿ ಅನುಮಾನ ವ್ಯಕ್ತಪಡಿಸಿದೆ.
1999-2014ರ ಅವಧಿಯಲ್ಲಿ ಬಿರ್ಲಾ ಸನ್‌ಲೈಫ್, ಐಎನ್‌ಜಿ ಆಂಡ್ ಅಲೈಯನ್ಸ್ ಮ್ಯೂಚುವಲ್ ಫಂಡ್ಸ್, ಎಚ್‌ಡಿಎಫ್ಸಿ, ಜೂರಿಚ್ ಆಂಡ್ ಮೋರ್ಗನ್ ಸ್ಪಾನ್ಲಿ, ಎಚ್‌ಎಸ್‌ಬಿಸಿ ಮ್ಯೂಚುವಲ್ ಫಂಡ್, ಪ್ರಿನ್ಸಿಪಲ್, ಟಾಟಾ, ಸುಂದರಂ, ಜೆಎಂ, ಎಸ್‌ಬಿಐ, ತಾರಸ್, ಢಾಯಿಷೆ, ಯುಟಿಐ, ಬಿಎನ್‌ಪಿ ಪರಿಭಾಸ್ ಆಂಡ್ ಎಬಿಎನ್ ಆನ್ರೋ ಸೇರಿದಂತೆ 13 ಕಂಪೆನಿಗಳಿಗೆ ಹಣ ಹೂಡಿಕೆ ಮಾಡಲಾಗಿದೆ.
ಮೌಖೀಕ ಸೂಚನೆ; ಹಣ ವರ್ಗಾವಣೆ!: ಬಿಡಿಎ ಹಣಕಾಸು ಸದಸ್ಯರ ಮೌಖೀಕ ಆದೇಶದ ಮೇಲೆಯೇ ಅಂತರಬ್ಯಾಂಕ್‌ಗಳಿಗೆ ಕನಿಷ್ಠ 60 ಕೋಟಿಯಿಂದ ಗರಿಷ್ಠ 1,324.45 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ! 1999-2014ರ ಅವಧಿಯಲ್ಲಿ ಹಣಕಾಸು ಸದಸ್ಯರ ಮೌಖೀಕ ಸೂಚನೆಗಳ ಆಧಾರದ ಮೇಲೆ ವಿವಿಧ ಬ್ಯಾಂಕ್‌ಗಳು ಚಾಲ್ತಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿವೆ. ಆದರೆ, ಈ ಬಗ್ಗೆ ಬ್ಯಾಂಕ್‌ಗಳಿಗೆ ಅಧಿಕಾರ ನೀಡಿರುವ ಬಗ್ಗೆ ಬಿಡಿಎನಲ್ಲಿ ಯಾವುದೇ ದಾಖಲೆಗಳಿಲ್ಲದಿರುವುದನ್ನು ಸಿಎಜಿ ಪತ್ತೆ ಮಾಡಿದ್ದು, ಇದನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಉಲ್ಲೇಖೀಸಿದೆ.
ಅದಲು-ಬದಲು: ಸುಮಾರು 3.07 ಕೋಟಿ ರೂ. ಮೊತ್ತದ ಬ್ಯಾಂಕರ್‌ಗಳ ಚೆಕ್ ಅನ್ನು ಬಿಡಿಎ ಬದಲಿಗೆ ಬಿಎಂಆರ್‌ಸಿಎಲ್ ಪರವಾಗಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿರುವುದು ಕಂಡುಬಂದಿದೆ. ಆದರೆ, ಈವರೆಗೂ ಪ್ರಾಧಿಕಾರಕ್ಕೆ ಈ ಹಣ ಹಿಂಪಾವತಿ ಆಗಿಲ್ಲ. 2007ರ ಜೂನ್‌ನಲ್ಲಿ ಪ್ರಿನ್ಸಿಪಲ್ ಮ್ಯೂಚುವಲ್ ಫಂಡ್‌ನಲ್ಲಿ ಬಿಡಿಎಗೆ ಸೇರಿದ 3.07 ಕೋಟಿ ಹಣವನ್ನು ಹಣಕಾಸು ಸದಸ್ಯ ದಾಶ್, ಬಿಎಂಆರ್‌ಸಿಎಲ್ ಪರವಾಗಿ ಹೂಡಿಕೆ ಮಾಡಿದ್ದಾರೆ. 2015ರ ಅಂತ್ಯದವರೆಗೂ ಈ ಹಣ ಹಿಂಪಾವತಿ ಆಗಿಲ್ಲ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಹಣ ವಸೂಲಾತಿ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.