ಸಿಂಹಾಚಲಂ ಸಂಪಿಗೆ


Team Udayavani, Feb 24, 2018, 5:48 PM IST

4.jpg

ಯುವಶಕ್ತಿ ತಂಡವು ಇತ್ತೀಚೆಗೆ ರಂಗಶಂಕರದಲ್ಲಿ ಮೊದಲ ಪ್ರದರ್ಶನವಾಗಿ ಅಭಿನಯಿಸಿದ “ಸಿಂಹಾಚಲಂ ಸಂಪಿಗೆ’ ಎಂಬ ವಿಶಿಷ್ಟ ನಾಟಕವು ಹಲವು ಕಾರಣಗಳಿಂದ ಮಹತ್ವದ್ದಾಗಿತ್ತು.

   ಒಂದು ಗಂಟೆಗಿಂತ ಹೆಚ್ಚು ಕಾಲ ಪ್ರೇಕ್ಷಕರನ್ನು ಹಿಡಿದು ಕೂರಿಸುವುದೇ ದೊಡ್ಡ ಸಾಹಸವಾಗಿರುವಾಗ, ಈ ಪ್ರಯೋಗವು ಎರಡು ತಾಸು ನೋಡುಗರನ್ನು ರಂಜಿಸಿತು. ಅತ್ಯಂತ ಲವಲವಿಕೆಯ ನಿರೂಪಣೆಯೇ ಇಲ್ಲಿನ ವಿಶೇಷ ಸೆಳೆತ. 

   ಶ್ರೀ ರಮಣ ಅವರ ತೆಲುಗಿನ ಕಥೆಗಳನ್ನು ವಸುಧೇಂದ್ರ ಅವರು “ಮಿಥುನ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಬಳ್ಳಾರಿ ಪರಿಸರಕ್ಕೆ ಒಗ್ಗುವಂತೆ, ಇವೆಲ್ಲಾ ಕನ್ನಡದ್ದೇ ಕಥೆಗಳು ಎಂಬಂತೆ ಅವರು ಅನುವಾದಿಸಿದ್ದಾರೆ. ಅದರಲ್ಲಿನ ನಾಲ್ಕು ಕಥೆಗಳನ್ನು ಆಯ್ದು ರಂಗರೂಪಕ್ಕೆ ತಂದು ನಿರ್ದೇಶಿಸಿದವರು ಯುವಶ್ರೀ ತಂಡದ ನಿರ್ದೇಶಕ ಶಂಕರ್‌ ಗಣೇಶ್‌. ಪೋಲಿಕಿಟ್ಟಿ, ರೋಮಿಯೊ ಲವ್ಸ್‌ ಅನಾರ್ಕಲಿ, ಮಾವಿನಗುಡಿ ಕಾಲೊನಿ ನಾಟಕಗಳನ್ನು ಯಶಸ್ವಿಯಾಗಿ ನಿರ್ದೇಶಿಸಿ ಭರವಸೆ ಮೂಡಿಸಿದ್ದ ಶಂಕರ್‌ ಗಣೇಶ್‌, “ಸಿಂಹಾಚಲಂ ಸಂಪಿಗೆ’ಯಲ್ಲಿ ಇನ್ನಷ್ಟು ಪಕ್ವಗೊಂಡಿದ್ದಾರೆ. ಮೂಲ ಕಥೆಗೆ ನ್ಯಾಯ ಒದಗಿಸುವಂತೆ ನಾಟಕ ರೂಪಿಸಿದ ಇವರ ಜಾಣ್ಮೆಗೆ ಶರಣು. ಸಂಬಂಧವೇ ಇಲ್ಲದ ಕಥೆಗಳ ಎಳೆಯನ್ನು ಜೋಡಿಸಿ ನಾಟಕ ರೂಪಿಸುವುದು ಸಾಮಾನ್ಯ ಸಂಗತಿಯಲ್ಲ. ಪ್ರತಿ ಫ್ರೆàಂನಲ್ಲೂ ಶಂಕರ್‌ರ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಸ್ವತಃ ವಸುಧೇಂದ್ರರೇ ತಮ್ಮ ಕಥೆಗಳ ರಂಗರೂಪವನ್ನು ಕಂಡು ಸಂತೋಷಪಟ್ಟಿದ್ದಾರೆ. 

    ಅಡುಗೆಯ ಸ್ವಾದವನ್ನು ಒಗ್ಗರಣೆ ಹೇಗೆ ಹೆಚ್ಚಿಸುತ್ತದೋ ಹಾಗೆ ಸಣ್ಣ ಸಣ್ಣ ಭಾವನೆಗಳು, ಆಸೆಗಳು, ಕನಸುಗಳು, ಹತಾಶೆಗಳು ಬದುಕಿಗೆ ಸ್ವಾದ ನೀಡುತ್ತವೆ. ಇಂಥ ಸಣ್ಣ ಸಣ್ಣ ವಿಷಯಗಳಿಗೆ ಒತ್ತು ನೀಡುವ ಮಿಥುನ, ಬಂಗಾರದ ಕಡಗ, ಸೋಡಾಗೋಲಿ, ಧನಲಕ್ಷ್ಮಿಯ ಕಥೆಗಳನ್ನು ಆಯ್ದುಕೊಂಡು ಈ ನಾಟಕವನ್ನು ಹೆಣೆಯಲಾಗಿದೆ. ಯಾವುದೇ ಅತಿರೇಕಗಳಿಲ್ಲದ, ತಿಳಿಯಾದ ಅನುಭವ ನೀಡುವುದರಿಂದ ಈ ನಾಟಕ ಆಪ್ತವೆನಿಸುತ್ತದೆ. ಎಲ್ಲಿಯೂ ವಿಚಾರದ ಹೊರೆಯಿಂದ ನಾಟಕ ಕುಸಿಯುವುದಿಲ್ಲ. ಸಂಭಾಷಣೆಗಳು ಭಾಷಣವಾಗದಂತೆ, ಪಾತ್ರಗಳು ಫಿಲಾಸಫ‌ರ್‌ಗಳಾಗದಂತೆ ಎಚ್ಚರ ವಹಿಸಲಾಗಿದೆ.

   ನಾಟಕದುದ್ದಕ್ಕೂ ಬಳ್ಳಾರಿ ಕನ್ನಡದ ಬಳಕೆ ಇದೆ. ಮಧ್ಯೆ ಮಧ್ಯೆ ಬಳಸಿರುವ ತೆಲುಗು ಮಾತು, ಹಳೆಯ ತೆಲುಗು ಹಾಡುಗಳು, ಮೂಲ ಕಥೆ ತೆಲುಗಿನದ್ದು ಎಂದು ನೆನಪಿಸುತ್ತವೆ. ನೇಟಿವಿಟಿಗೆ ಒತ್ತು ನೀಡಿರುವುದು, ವಾಸ್ತವತೆಗೆ ಹತ್ತಿರವಿರುವುದು ಇಲ್ಲಿನ ಮುಖ್ಯವಾದ ಅಂಶ. ಸಂಗೀತವಂತೂ ಎಷ್ಟು ಸೊಗಸಾಗಿದೆಯೆಂದರೆ, ನಮ್ಮ ಲಹರಿಯನ್ನು ಹಗುರವಾಗಿ ಆವರಿಸುವಷ್ಟು. ನೆರಳು- ಬೆಳಕಿನ ವಿನ್ಯಾಸವೂ ಒಪ್ಪವಾಗಿದೆ. ರಂಗಪರಿಕರ, ಪ್ರಸಾದನದಲ್ಲಿ ಎಲ್ಲೆಡೆಯೂ ರಾಜಿಯಾಗದ ಅಭಿರುಚಿ ಎದ್ದು ಕಾಣುವಂತಿತ್ತು. 

    ನಾಲ್ಕು ಕಥೆಗಳಿದ್ದರೂ ತೆರೆಯ ಮೇಲಿದ್ದುದು ಹನ್ನೊಂದೇ ಕಲಾವಿದರು. ಸೂತ್ರಧಾರನಾಗಿ ಕಾಣಿಸಿಕೊಂಡು ನಾಟಕದುದ್ದಕ್ಕೂ ಹಲವು ಪಾತ್ರಗಳನ್ನು ನಿರ್ವಹಿಸಿದ ಅನಿರುದ್ಧ್ ವೇದಾಂತಿಯ ಅಭಿನಯ ಅದ್ಭುತ. ಧ್ವನಿ ಮತ್ತು ಆಂಗಿಕಾಭಿನಯದಲ್ಲಿ, ನಟನೆಗಾಗಿಯೇ ಹುಟ್ಟಿರುವಂತೆ ಕಾಣುವ ಈತ ರಂಗಭೂಮಿಯಲ್ಲಿ ಬಹಳ ಕಾಲ ನೆಲೆ ನಿಲ್ಲಬಲ್ಲ ಪ್ರತಿಭೆ. “ಬಂಗಾರದ ಕಡಗ’ದಲ್ಲಿ ವೃದ್ಧ ವಿಧವೆಯ ಪಾತ್ರ ನಿರ್ವಹಿಸಿದ ನಟ ವಿಜಯ್‌ ಕುಲಕರ್ಣಿಯವರ ಬಾಡಿ ಲಾಂಗ್ವೇಜ್‌ ಸೊಗಸಾಗಿತ್ತು. ಗೌರಿಯವರ ಮಾಗಿದ ಅನುಭವವೂ ನೆನಪಿನಲ್ಲಿ ಉಳಿಯುವಂಥದ್ದು.  ಸೋಡಾ ಮಾರುವ ನಾಯ್ಡು, ಸೋಡಾಗೋಲಿಗಾಗಿ ಹಂಬಲಿಸುವ ಹುಡುಗ, ಧನಲಕ್ಷ್ಮಿಯ ಚಾಣಾಕ್ಷತನ ಪ್ರೇಕ್ಷಕರ ಮನಸೂರೆಗೊಂಡವು. ರಂಗದ ಹಿಂದೆ ಶ್ರಮಿಸಿರುವ ರಘು ಶಿರಸಿ, ವಿಜಯ್‌ ಬೆಣಚ, ಹೇಮಂತ್‌, ಸುಜಯ್‌ ಅವರ ಕೊಡುಗೆಯೂ ದೊಡ್ಡದೇ.

   ವ್ಯಾವಹಾರಿಕ ಜಗತ್ತಿನಲ್ಲಿ ಮನುಷ್ಯ ಸಂಬಂಧಗಳು ಕೃತಕವಾಗಿ ಹೋದ ಈ ಸಂದರ್ಭದಲ್ಲಿ, “ಸಿಂಹಾಚಲಂ ಸಂಪಿಗೆ’ ಮನಸ್ಸುಗಳ ನಡುವೆ ಗಾಢಸಂಬಂಧ ಬೆಳೆಯುವ ಕುಸುರಿ ಕೆಲಸ ಮಾಡುತ್ತದೆ. ಇಡೀ ನಾಟಕದಲ್ಲಿ ಜೀವನಪ್ರೀತಿಯ ಉತ್ಸಾಹವೊಂದು ಪುಟಿದಾಡುತ್ತಿದೆ. 

– ಡಾ.ಎಚ್‌.ಎಸ್‌. ಸತ್ಯನಾರಾಯಣ

ಟಾಪ್ ನ್ಯೂಸ್

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

2-bng-crime

Bengaluru Crime: ಅತಿಯಾಗಿ ಮೊಬೈಲ್‌ ಬಳಸಿದಕ್ಕೆ ಪ್ರೇಯಸಿ ಹತ್ಯೆ?

Maharashtra; Gondia bus accident: PM announces compensation

Maharashtra; ಗೊಂಡಿಯಾ ಬಸ್‌ ಅಪಘಾತ: 11ಕ್ಕೇರಿದ ಸಾವಿನ ಸಂಖ್ಯೆ, ಪರಿಹಾರ ಘೋಷಿಸಿದ ಪ್ರಧಾನಿ

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Man arrested for giving Coast Guard information to Pakistan for Rs 200

Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

4-bng

Bengaluru: ಒಂಟಿ ಮಹಿಳೆಯರನ್ನು ಟಾರ್ಗೆಟ್‌ ಮಾಡಿ ಸರಗಳ್ಳತನ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

Bangladeshದಲ್ಲಿ ಮುಂದುವರಿದ ಸಂಘರ್ಷ, ಮೂರು ಹಿಂದೂ ದೇವಾಲಯ ಧ್ವಂಸ

BGT 2024-25: Australia’s leading pacer ruled out of Adelaide Test

BGT 2024-25: ಅಡಿಲೇಡ್‌ ಟೆಸ್ಟ್‌ ನಿಂದ ಹೊರಬಿದ್ದ ಆಸ್ಟ್ರೇಲಿಯಾದ ಪ್ರಮುಖ ವೇಗಿ

3-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ : 2 ವಿದ್ಯಾರ್ಥಿಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.