ದಂತ ವೈದ್ಯ ಮತ್ತು ಸುದಂತಯೋಜನ ತಜ್ಞ ವ್ಯತ್ಯಾಸಗಳೇನು ?


Team Udayavani, Feb 25, 2018, 6:00 AM IST

Dentist-750110.jpg

ನೀವು ಏಕೆ ಸುದಂತ ಯೋಜನ 
ಚಿಕಿತ್ಸೆ ಪಡೆಯಬೇಕು?

ಸುದಂತ ಯೋಜನ ಚಿಕಿತ್ಸೆಯ ಗುರಿ ಎಂದರೆ ಸುಂದರ ನಗು ಮತ್ತು ಉತ್ತಮ ಜಗಿತ – ಅರ್ಥಾತ್‌ ಎದುರು ದವಡೆಯ ಹಲ್ಲುಗಳೊಂದಿಗೆ ಸರಿಯಾಗಿ ಸಂಯೋಜನೆ ಹೊಂದುವ ನೇರ, ಸುಂದರವಾದ ಹಲ್ಲುಗಳು. ಉತ್ತಮ ಜಗಿತವು ನಿಮಗೆ ಜಗಿಯುವುದಕ್ಕೆ, ಚೀಪುವುದಕ್ಕೆ ಮತ್ತು ಮಾತನಾಡುವುದಕ್ಕೆ ಅನುಕೂಲ ಮಾಡಿಕೊಡುತ್ತದೆ. ಸುಂದರ ನಗು ಆತ್ಮ ಗೌರವ, ಆತ್ಮವಿಶ್ವಾಸಕ್ಕೆ ಕೊಡುಗೆಯಾಗುವ ಮೂಲಕ ಅನೇಕರಿಗೆ ಒಳ್ಳೆಯ ಭವಿಷ್ಯರೂಪಕವಾಗುತ್ತದೆ. ನಾವು ಇಂದು ಹೆಚ್ಚು ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ಬದುಕುತ್ತಿದ್ದೇವೆ, ಒಳ್ಳೆಯ ನಗು ನಮ್ಮ ವ್ಯಕ್ತಿತ್ವಕ್ಕೊಂದು ಹೊಸ ಹೊಳಪನ್ನು ನೀಡುತ್ತದೆ. 
ಬಹಳಷ್ಟು ಬಾರಿ ಸುದಂತ ಯೋಜನ ಚಿಕಿತ್ಸೆಯು ಸಮಗ್ರ ದಂತ ಆರೈಕೆ ಯೋಜನೆಯ ಭಾಗವಾಗಿರುತ್ತದೆ. ಅಗತ್ಯವಾದಾಗ ಸುದಂತ ಯೋಜನ ಚಿಕಿತ್ಸೆಯೊಂದಿಗೆ ಉತ್ತಮ ಆರೈಕೆಯಿಂದ ಹಲ್ಲುಗಳು ಜೀವನಪರ್ಯಂತ ಚೆನ್ನಾಗಿರುತ್ತವೆ.
 
ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಮಕ್ಕಳು ಅಥವಾ ಹದಿವಯಸ್ಕರಲ್ಲಿ ಚಿಕಿತ್ಸೆಯು ಈಗಾಗಲೇ ಮುಖ ಮತ್ತು ದವಡೆಗಳು ಸಂಪೂರ್ಣ ಬೆಳವಣಿಗೆ ಹೊಂದಿದವರಿಗಿಂತ ಹೆಚ್ಚು ಒಳ್ಳೆಯ ಫ‌ಲಿತಾಂಶವನ್ನು ನೀಡುತ್ತವೆ. 

ನೀವು ಚಿಕಿತ್ಸೆ ಪಡೆಯುತ್ತಿರುವಾಗ ಎಷ್ಟು ಸಮಯಕ್ಕೊಮ್ಮೆ 
ಸುದಂತ ಯೋಜನ ತಜ್ಞ ವೈದ್ಯರನ್ನು ಕಾಣಬೇಕು?

ನಿಮ್ಮ ಚಿಕಿತ್ಸೆಯ ಅವಧಿಯಲ್ಲಿ ಸರಾಸರಿ 5-6 ವಾರಗಳಿಗೆ ಒಮ್ಮೆ ನೀವು ಸುದಂತ ಯೋಜನ ತಜ್ಞ ವೈದ್ಯರನ್ನು ಕಾಣಬೇಕು. ಇದರಿಂದ ನಿಮ್ಮ ಸುದಂತ ಯೋಜನ ತಜ್ಞ ವೈದ್ಯರಿಗೆ ಚಿಕಿತ್ಸೆಯ ಅವಧಿಯಲ್ಲಿ ಅಗತ್ಯ ಬದಲಾವಣೆಗಳು ಪ್ರಗತಿ ಹೊಂದುವಂತೆ ಮಾಡುವುದಕ್ಕೆ, ನಿಮ್ಮ ಚಿಕಿತ್ಸಾ ಪ್ರಗತಿಯ ಮೇಲೆ ಗಮನವಿರಿಸುವುದಕ್ಕೆ ಹಾಗೂ ನಿಮ್ಮ ಹಲ್ಲುಗಳು ಮತ್ತು ವಸಡುಗಳ ಆರೋಗ್ಯದ ಮೇಲೆ ನಿಗಾ ಇರಿಸುವುದಕ್ಕೆ ಸಾಧ್ಯವಾಗುತ್ತದೆ. 

ಸುದಂತಯೋಜನ ತಜ್ಞ ಮಾತ್ರ ನಿಮ್ಮ ನಗುವನ್ನು ಅತ್ಯಂತ ಸುಂದರಗೊಳಿಸಬಲ್ಲ ತರಬೇತಿ, ಅನುಭವ ಮತ್ತು ಚಿಕಿತ್ಸಾ ಆಯ್ಕೆಗಳನ್ನು ಹೊಂದಿರುತ್ತಾನೆ. 

ಎಲ್ಲ ಸುದಂತ ಯೋಜನ ತಜ್ಞರು ದಂತ ವೈದ್ಯರಾಗಿರುತ್ತಾರೆ; ಆದರೆ ದಂತವೈದ್ಯರಲ್ಲಿ ಶೇ. 6 ಮಂದಿ ಮಾತ್ರ ಸುದಂತಯೋಜನ ತಜ್ಞರಾಗಿರುತ್ತಾರೆ. 

ಚಿಕಿತ್ಸೆ ಎಷ್ಟು ಸಮಯ ನಡೆಯುತ್ತದೆ?
ಚಿಕಿತ್ಸೆಯ ಅವಧಿ ನಿರ್ದಿಷ್ಟ ರೋಗಿಯ ವ್ಯಕ್ತಿಗತ ಸಮಸ್ಯೆಯನ್ನು ಅವಲಂಬಿಸಿರುತ್ತದೆ. ಸರಳ ಪ್ರಕರಣಗಳಿಗೆ ಚಿಕಿತ್ಸೆ ನೀಡುವುದಕ್ಕೆ ಕೆಲವು ತಿಂಗಳುಗಳ ಕಾಲಾವಕಾಶ ಸಾಕು; ಇದೇವೇಳೆ ಸಂಕೀರ್ಣ ಜಗಿತ ಸರಿಪಡಿಸುವಿಕೆಯಂತಹ ಚಿಕಿತ್ಸೆಗಳಿಗೆ 2-3 ವರ್ಷ ತಗಲಬಹುದು. ಅತ್ಯಂತ ಕನಿಷ್ಟ ಅವಧಿಯಲ್ಲಿ ನಿಮ್ಮ ಮುಖದಲ್ಲಿ ಆರೋಗ್ಯಯುತವಾದ ಸುಂದರ ನಗುವನ್ನು ಅರಳಿಸುವುದಕ್ಕೆ ಅಗತ್ಯವಾದಂತಹ ಕೌಶಲ ಮತ್ತು ಸಲಕರಣೆಗಳನ್ನು ನಿಮ್ಮ ಸುದಂತ ಯೋಜನ ತಜ್ಞ ವೈದ್ಯರು ಹೊಂದಿರುತ್ತಾರೆ.

ಡಾ| ರಿತೇಶ್‌ ಸಿಂಗ್ಲಾ ,
ಅಸೊಸಿಯೇಟ್‌ ಪ್ರೊಫೆಸರ್‌, ಆಥೊìಡಾಂಟಿಕ್ಸ್‌ ವಿಭಾಗ,
ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ.

ಟಾಪ್ ನ್ಯೂಸ್

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.