ಪುಟ್ಟ ಕತೆ: ಪದಗಳು, ಖಾಲಿಗಳು
Team Udayavani, Feb 25, 2018, 8:20 AM IST
ಶಾಲೆಯಲ್ಲಿ ವಾರದ ಕೊನೆಯ ದಿನ ಪ್ರಬಂಧವನ್ನು ಓದಬೇಕಿತ್ತು. ಪ್ರಬಂಧ ಬರೆಯುವುದು ಹೇಗೆ, ಯಾರಾದರೂ ಹಿರಿಯರಲ್ಲಿ ಬರೆಸೋಣ ಎಂದು ನಮ್ಮ ಈ ಕಥಾನಾಯಕ ಬಗೆದ. ಇವತ್ತಲ್ಲ, ನಾಳೆ ಬರೆಸಿದರಾಯಿತು ಎಂದು ನಿರ್ಧರಿಸಿದ, ಸಹಜವಾಗಿ.
ಹಾಗೂಹೀಗೂ ಮುನ್ನಾದಿನ ಸಂಜೆಯವರೆಗೂ ಕ್ಷಣಗಳನ್ನು ಮುಂದೂಡಿದ. ಸಂಜೆ ಆಟದ ಪೀರಿಯೆಡ್ ಮುಗಿಯಿತು. ಇನ್ನೇನು ಜನಗಣಮನ ಹಾಡಿಯೂ ಆಯಿತು. ಎಲ್ಲರೂ ಶಾಲೆಯಿಂದ ಹೊರಗೆ ಧಾವಿಸಿ ಮನೆಯ ದಾರಿ ಹಿಡಿದರು. ಇವನು, ಒಂದು ಹಾಳೆಯ ತಲೆಯಲ್ಲಿ ಪ್ರಬಂಧದ ಶೀರ್ಷಿಕೆಯನ್ನು ಗೀಚಿ, ಯಾರಾದರೂ ಅದರ “ದೇಹವನ್ನು’ ಬರೆದುಕೊಡ “ಬಲ್ಲವರು’ ಇದ್ದಾರೆಯೇ ಎಂದು ಅತ್ತಿತ್ತ ಹುಡುಕಾಡಿದ.
ಸಮಾಜದ ಮೇಷ್ಟ್ರ ಬಳಿ ಹೋಗಿ, “ಸರ್, ಒಂದು ಪ್ರಬಂಧ ಬರೆದುಕೊಡಿ’ ಎಂದು ಕೇಳಿದರೆ, “ನೀನು ಲಾಸ್ಟ್ ಮೂಮೆಂಟ್‌ವರೆಗೆ ಎಲ್ಲಿಗೆ ಹೋಗಿದ್ದೆ? ಈಗ ನನಗೆ ಪುರುಸೊತ್ತಿಲ್ಲ, ನಡಿ’ ಎಂದು ಬೈದು ಅವನನ್ನು ಓಡಿಸಿದರು.
ಮನೆಗೆ ಹೋಗಿ ನೆರೆಮನೆಯ ಮೀನಾಳಲ್ಲಿ ಕೇಳಿದ. ಅವಳು ಫೈನಲ್ ಇಯರ್ ಎಂ.ಎ. ಓದುತ್ತಿದ್ದಳು. “”ನನಗೆ ನಾಳೆ ಎಕ್ಸಾಮ್ ಇದೆ. ಟೈಮಿಲ್ಲ” ಎಂದಳು.
ಇವನು ನೇರವಾಗಿ ಅಮ್ಮನ ಬಳಿಗೆ ಬಂದು “ಬರೆದುಕೊಡು’ ಎಂದು ಹಾಳೆಯೊಡ್ಡಿದ. ಅವಳು ನಕ್ಕಳು.
ಎರಡು ಖಾಲಿ ಪುಟಗಳನ್ನು ಹಿಡಿದು ಎಲ್ಲ ಕಡೆ ಅಲೆದರೂ ಪ್ರಯೋಜನವಿಲ್ಲ. ತಾನೇ ಏನಾದರೂ ಬರೆದು ಬಿಡುವುದೆಂದು ಯೋಚಿಸಿದ. ರಾತ್ರಿಯಾಯಿತು. “ಬೆಳಗ್ಗೆ ಬೇಗ ಎಬ್ಬಿಸು’ ಎಂದು ಅಮ್ಮನಲ್ಲಿ ಹೇಳಿ ಚಾಪೆ ಬಿಡಿಸಿ ಮಲಗಿದ.
ಬೆಳಗ್ಗೆ ಅಮ್ಮ ಎಬ್ಬಿಸಿದಳು. ಕಣ್ಣುಜುತ್ತ ಎದ್ದ. ಏನಾದರೂ ಬರೆಯೋಣ ಎಂದು ಕುಳಿತ. ಏನೂ ಹೊಳೆಯಲಿಲ್ಲ. ಇನ್ನೇನು ಕೆಲವೇ ಗಂಟೆಗಳಲ್ಲಿ ಶಾಲೆಯಲ್ಲಿ ಪ್ರಬಂಧ ಓದಬೇಕು. ಏನು ಮಾಡುವುದು! ಏನಾದರಾಗಲಿ ಎಂದು ತಿಳಿದ ಒಂದಷ್ಟು ಪದಗಳನ್ನು ಹಾಳೆಯ ಮೇಲೆ ಇಟ್ಟ. ತಿಳಿಯದ ಕಡೆ ಹಾಗೇ ಜಾಗ ಬಿಟ್ಟ.
ಪದಗಳು ಸ್ವಲ್ಪ , ಇನ್ನು ಸ್ವಲ್ಪ ಖಾಲಿಗಳು !
ಒಂದಿಷ್ಟು ಶಬ್ದಗಳು, ಒಂದಷ್ಟು ನಿಶ್ಶಬ್ದಗಳು!
ಮಾತುಗಳು, ಮಾತುಗಳಿಗೆ ಅರ್ಥ ತುಂಬುವ ಮೌನಗಳು!
ಅಷ್ಟು ವ್ಯಾಕರಣ, ಇಷ್ಟು ಅಂತಃಕರಣ.
.
ಪ್ರಬಂಧ ರೆಡಿಮಾಡಿದ ಖುಷಿಯಲ್ಲಿ ಶಾಲೆಗೆ ಹೋದ.
ನೋಟ್ಸ್ ಪುಸ್ತಕದ ಮಧ್ಯದಲ್ಲಿಟ್ಟಿದ್ದ ಹಾಳೆಯನ್ನು ಹುಡುಕಾಡಿದ. ಸಿಕ್ಕಿತು. ತೆರೆದ.
ಛೆ ! ನೋಡಿದರೆ ಅದರಲ್ಲಿ ಪ್ರಬಂಧವಿರಲಿಲ್ಲ.
ಒಂದು ಸುಂದರ ಕವನವಿತ್ತು. ಅದನ್ನೇ ಹಾಡಿದ.
ಬಹುಮಾನ ಬಂತೋ ಗೊತ್ತಿಲ್ಲ; ಬಾರದಿದ್ದರೂ ಅಡ್ಡಿಯಿಲ್ಲ ಎಂಬ ಸಂತೃಪ್ತಿ ಭಾವ ಮಾತ್ರ ಅವನಲ್ಲಿ ಎದ್ದು
ತೋರುತ್ತಿತ್ತು.
ಪಾರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.