ಬರಿಗಾಲಲ್ಲಿ ವಿಂಧ್ಯಗಿರಿ ಹತ್ತಿಳಿದ ದೇವೇಗೌಡ
Team Udayavani, Feb 25, 2018, 6:00 AM IST
ಹಾಸನ: ಶ್ರವಣಬೆಳಗೊಳದ ವಿಂಧ್ಯಗಿರಿಯನ್ನೇರಲು ಡೋಲಿ ನಿರಾಕರಿಸಿ ಮೆಟ್ಟಲುಗಳನ್ನತ್ತಿ ಶ್ರೀ ಬಾಹುಬಲಿಮೂರ್ತಿಗೆ
ಶನಿವಾರ ಮಹಾಮಸ್ತಕಾಭಿಷೇಕ ನೆರವೇರಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶಕ್ತಿ ಮೀರಿ ಭಕ್ತಿಯ ಪರಾಕಾಷ್ಠೆ ಮೆರೆದರು. 85ರ ಇಳಿವಯಸ್ಸಿನಲ್ಲೂ ಬರಿಗಾಲಿನಲ್ಲಿ ಬೆಟ್ಟ ಹತ್ತಿ, ಇಳಿದು ಈ ಬಾರಿಯ ಮಹಾಮಸ್ತಕಾಭಿಷೇಕದಲ್ಲಿ ದಾಖಲೆ ನಿರ್ಮಿಸಿದರು.
ಮಧ್ಯಾಹ್ನ 12.8ಕ್ಕೆ ವಿಂಧ್ಯ ಗಿರಿಯ ಪಶ್ಚಿಮದ ಪ್ರವೇಶದ್ವಾರದ ಬಳಿ ಪತ್ನಿ ಚನ್ನಮ್ಮ ಅವರೊಂದಿಗೆ ಕಾರಿನಲ್ಲಿ ಬಂದಿಳಿದ ದೇವೇಗೌಡರಿಗೆ ಡೋಲಿಗಳನ್ನು ಕಾಯ್ದಿರಿಸಲಾಗಿತ್ತು. ಅದರೆ ಡೋಲಿ ಹತ್ತಲು ನಿರಾಕರಿಸಿ ಮೆಟ್ಟಲುಗಳನ್ನು ಹತ್ತಿಯೇ ಬಾಹುಬಲಿಗೆ ಅಭಿಷೇಕ ನೆರವೇರಿಸುವುದಾಗಿ ಹೇಳಿದಾಗ ಅವರ ಅಂಗರಕ್ಷಕರು, ಜೆಡಿಎಸ್ ಮುಖಂಡರು ಅವಕ್ಕಾದರು. ಅಂಗರಕ್ಷಕನ ಹೆಗಲ ಮೇಲೆ ಮಾಮೂಲಿನಂತೆ ಕೈ ಹಾಕಿಕೊಂಡು ಮೆಟ್ಟಿಲೇರಲು ಆರಂಭಿಸಿದರು.
ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಅವರೂ ದೇವೇಗೌಡರಿಗೆ ಭುಜ ಕೊಟ್ಟು ಸಹಕರಿಸಿದರು.85ರ ಹರೆಯದಲ್ಲೂ 412 ಮೆಟ್ಟಿಲುಗಳನ್ನು ಬರಿಗಾಲಲ್ಲಿ ಹತ್ತಿ ನನಗಿನ್ನೂ ದೈಹಿಕ ಶಕ್ತಿ ಕುಂದಿಲ್ಲ. ಹೋರಾಟ ಮಾಡಬಲ್ಲೆ ಎಂಬ ಸಂದೇಶ ರವಾನಿಸಿದರು. ದೇವೇಗೌಡರ ಪತ್ನಿ ಚನ್ನಮ್ಮ ಅವರು ಡೋಲಿಯಲ್ಲಿ ಪತಿಯನ್ನು ಹಿಂಬಾಲಿಸಿದರು.
ಮೆಟ್ಟಿಲು ಹತ್ತುವಾಗ ಒಮ್ಮೆ ನಿಂತು ಸುಧಾರಿಸಿಕೊಂಡ ಅವರು, ಮತ್ತೂಮ್ಮೆ ಕೆಲ ಕ್ಷಣ ಕುಳಿತು ಲಘು ವಿರಾಮ ಪಡೆದು ಮುಂದೆ ಸಾಗಿದರು. ವೈದ್ಯರು ತಪಾಸಣೆಗೆಮುಂದಾದರೂ ನಿರಾಕರಿಸಿ ಬೆಟ್ಟದ ತುದಿ ಏರಲಾರಂಭಿಸಿದರು.
ಆದರೂ ಒತ್ತಾಯಕ್ಕೆ ಮಣಿದು ಬೆಟ್ಟದ ತುದಿಯಲ್ಲಿರುವ ತಾತ್ಕಾಲಿಕ ಆಸ್ಪತ್ರೆಯಲ್ಲಿ ತಪಾಸಣೆಗೆ ಸಹಕರಿಸಿದರು. ತಪಾಸಣೆ ನಡೆಸಿದಾಗ ರಕ್ತದೊತ್ತಡ, ಸಕ್ಕರೆ ಅಂಶ ಸಹಜವಾಗಿತ್ತು. ಓಆರ್ಎಸ್ ಅನ್ನು ಕುಡಿಯಲು ನೀಡಿದಾಗಲೂ ನಿರಾಕರಿಸಿದ ಗೌಡರು,
ಬಾಹುಬಲಿ ಮೂರ್ತಿಗೆ ಅಭಿಷೇಕ ನೆರವೇರಿಸುವವರೆಗೆ ನೀರನ್ನೂ ಕುಡಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮಧ್ಯಾಹ್ನ 12.45 ನಿಮಿಷಕ್ಕೆ ಗೊಮ್ಮಟೇಶ್ವರನ ನೆಲೆ ತಲಪಿದ ಗೌಡರು 37 ನಿಮಿಷದಲ್ಲಿ ವಿಂಧ್ಯಗಿರಿಯನ್ನೇರಿ ದಾಖಲೆ ನಿರ್ಮಿಸಿದರು.
ಅನಂತರ ಲಿಫ್ಟ್ನಲ್ಲಿ ಅಟ್ಟಣಿಗೆಯನ್ನೇರಿ ಬಾಹುಬಲಿ ಮೂರ್ತಿಗೆ ಕ್ಷೀರಾಭಿಷೇಕ ನೆರವೇರಿಸಿ ಧನ್ಯತಾಭಾವ ಮೆರೆದರು. ಶ್ರೀ
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶಾಸಕ ಬಾಲಕಷ್ಣ, ಜೆಡಿಎಸ್ ಮುಖಂಡ, ಹಿರಿಯ ವಕೀಲ ಎಸ್.ಎಲ್. ಭೋಜೇಗೌಡ, ಚನ್ನರಾಯಪಟ್ಟಣ ತಾಲೂಕು ಜೆಡಿಎಸ್ ಮುಖಂಡ ಪರಮದೇವರಾಜೇಗೌಡ ಮತ್ತಿತರರು ದೇವೇಗೌಡರೊಂದಿಗಿದ್ದರು.
ನಂತರ ಬೆಟ್ಟ ಇಳಿಯಲು ವ್ಯವಸ್ಥೆ ಮಾಡಿದ್ದ ಡೋಲಿ ಏರಲು ನಿರಾಕರಿಸಿದ ಗೌಡರು, ಮಾಧ್ಯಮ ಪ್ರತಿನಿಧಿಗಳು, ಜೆಡಿಎಸ್
ಮುಖಂಡರೊಂದಿಗೆ ಮಾತನಾಡುತ್ತಾ ಸರಾಗವಾಗಿ ಮೆಟ್ಟಲು ಇಳಿಯುತ್ತಿದ್ದರೆ, ಪತ್ನಿ ಚನ್ನಮ್ಮ ಅವರು ಡೋಲಿಯಲ್ಲಿ ಕುಳಿತು
ಗೌಡರನ್ನು ಹಿಂಬಾಲಿಸಿದರು. ಬೆಟ್ಟದ ಬುಡದ ಪ್ರವೇಶ ದ್ವಾರದ ಬಳಿ ನಿಂತಿದ್ದ ಕೆಲ ಜೆಡಿಎಸ್ ಮುಖಂಡರನ್ನು ಮಾತನಾಡಿಸುತ್ತಾ ಎಳನೀರು ಕುಡಿದು ಸುಧಾರಿಸಿಕೊಂಡು ಗೌಡರು ಹೊರಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
INDIA ಕೂಟದ ನಾಯಕತ್ವ ಕಾಂಗ್ರೆಸ್ಗೆ ಬೇಡ: ಮಣಿಶಂಕರ್ ಅಯ್ಯರ್
GST: ಪರೀಕ್ಷಾ ಫಾರಂ ಮೇಲೆ ಜಿಎಸ್ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.