ಸೇನೆಗೆ ಬೇಕು 400 ಡ್ರೋನ್
Team Udayavani, Feb 25, 2018, 8:15 AM IST
ಹೊಸದಿಲ್ಲಿ /ಇಟಾನಗರ: ಮುಂದಿನ ಒಂದು ದಶಕದಲ್ಲಿ ಸುಮಾರು 400 ಡ್ರೋನ್‌ಗಳು ಹಾಗೂ ಇತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸೇನೆಗೆ ಬೇಕಾಗುತ್ತವೆ ಎಂದು ರಕ್ಷಣಾ ಸಚಿವಾಲಯ ಊಹಿಸಿದೆ. ಅಲ್ಲದೆ ಉಗ್ರರ ನೆಲೆ ಮತ್ತು ಉಪಗ್ರಹಗಳನ್ನೂ ನಾಶಗೊಳಿಸಬಲ್ಲ ಶಕ್ತಿಶಾಲಿ ಲೇಸರ್‌ಗಳು, ಮೈಕ್ರೋವೇವ್‌ಗಳಂತಹ ಭಾರೀ ಅಸ್ತ್ರಗಳು ಸೇನೆಗೆ ಅಗತ್ಯ ಇರುತ್ತವೆ ಎನ್ನಲಾಗಿದೆ. ಈ ಬಗ್ಗೆ, ತಂತ್ರಜ್ಞಾನ ನಿರೀಕ್ಷೆಗಳು ಮತ್ತು ಸಾಮರ್ಥ್ಯ ಮುನ್ನೋಟ 2018 ಎಂಬ 82 ಪುಟಗಳ ವರದಿ ಸಿದ್ಧಪಡಿಸಲಾಗಿದೆ.
ಸಾಮಾನ್ಯ ಅಗತ್ಯಗಳಾದ ಸಬ್‌ಮರೀನ್, ಯುದ್ಧನೌಕೆ, ಶಸ್ತ್ರಾಸ್ತ್ರಗಳು, ಡಿಸ್ಟ್ರಾಯರ್‌ಗಳ ಜತೆಗೆ ಇತರ ಅತ್ಯಾಧುನಿಕ ಅಸ್ತ್ರಗಳೂ ಅಗತ್ಯವಿರುತ್ತವೆ. ಆಧುನಿಕ ಸನ್ನಿವೇಶದಲ್ಲಿ ಡ್ರೋನ್‌ಗಳು ಅತ್ಯಂತ ಮಹತ್ವದ್ದಾಗಿವೆ. ಸದ್ಯ ಸೇನೆ ಬಳಿ ಇಸ್ರೇಲ್‌ನಿಂದ ಆಮದು ಮಾಡಿ ಕೊಂಡ 200 ಡ್ರೋನ್‌ಗಳಿವೆ. ಇನ್ನೊಂದೆಡೆ ಡಿಆರ್‌ಡಿಒ ಘಾತಕ್ ಡ್ರೋನ್ ಅಭಿವೃದ್ಧಿ ಪಡಿಸುತ್ತಿದೆ. ಈ ವೈಶಿಷ್ಟéದ 30ಕ್ಕೂ ಹೆಚ್ಚು ಡ್ರೋನ್‌ಗಳು ಸೇನೆಗೆ ಬೇಕಾಗುತ್ತವೆ. ಅಲ್ಲದೆ ಸ್ಪೈ ಡ್ರೋನ್‌ಗಳೂ ಅಗತ್ಯವಿರುತ್ತವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಂಶಯಾಸ್ಪದ ವಸ್ತು ಪತ್ತೆ
ಅರುಣಾಚಲ ಪ್ರದೇಶದ ಭಾರತ- ಚೀನ ಗಡಿಯಿಂದ 100 ಕಿ.ಮೀ ದೂರದಲ್ಲಿರುವ ಕಾಮ್ಲೆ ಜಿಲ್ಲೆಯಲ್ಲಿ ಸಂಶಯಾಸ್ಪದ ವಸ್ತುವೊಂದು ಸಿಕ್ಕಿದ್ದು, ಅದರಲ್ಲಿ ಚೀನೀ ಅಕ್ಷರಗಳು ಇರುವುದು ಸ್ಥಳೀಯರ ಆತಂಕವನ್ನು ಹೆಚ್ಚಿಸಿದೆ. ಬಟ್ಟೆಯಂಥ ವಸ್ತುವಿನಿಂದ ಸುತ್ತಲಾಗಿದ್ದ ಸ್ವಲ್ಪ ಸುಟ್ಟಿರುವ ಬಿಳಿ ಪೆಟ್ಟಿಗೆ ಮರದ ಮೇಲೆ ಸಿಲುಕಿತ್ತು. ಇದರ ಮೇಲೆ ಚೀನೀ ಅಕ್ಷರಗಳಿದ್ದವು. ಈ ಕುರಿತು ಮರ ಕಡಿಯುವವರು ಮಾಹಿತಿ ನೀಡಿದರು. ಪೆಟ್ಟಿಗೆಯಲ್ಲಿ ವಿಮಾನಗಳಲ್ಲಿ ಬಳಸುವ ಬ್ಯಾಟರಿ, ಹವಾಮಾನ ಇಲಾಖೆಯಲ್ಲಿ ಬಳಕೆಯಾಗುವಂಥ ವಸ್ತುಗಳು ಇದ್ದವು ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.