ವೀಕೆಂಡ್‌ನ‌ಲ್ಲಿ ಸಿನಿಮೋತ್ಸವಕ್ಕೆ ನುಗ್ಗಿ ಬಂದ ಸಿನಿಪ್ರೇಮಿಗಳು

Team Udayavani, Feb 25, 2018, 10:41 AM IST

film-fest.jpg

ಸಾಮಾನ್ಯವಾಗಿ ಒರಾಯನ್‌ ಮಾಲ್‌ ಎಂದರೆ ಶಾಪಿಂಗ್‌ ಎಂದರ್ಥ. ಅದರಲ್ಲೂ ವೀಕೆಂಡ್‌ ಎಂದರೆ ಒರಾಯನ್‌ ಮಾಲ್‌ನಲ್ಲಿ ಶಾಪಿಂಗ್‌ ಬ್ಯಾಗ್‌ನೊಂದಿಗೆ ಓಡಾಡುವವರೇ ಕಾಣಸಿಗುತ್ತಾರೆ. ಆದರೆ, ಈ ವೀಕೆಂಡ್‌ನ‌ಲ್ಲಿ ಒರಾಯನ್‌ ಮಾಲ್‌ನ ದೃಶ್ಯ ಬದಲಾಗಿತ್ತು. ಶಾಪಿಂಗ್‌ ಬ್ಯಾಗ್‌ಗಿಂತ ಸಿನಿಮಾ ಬ್ರೌಶರ್‌ ಕೈಯಲ್ಲಿ ಹಿಡಿದು, ಕುತೂಹಲದಿಂದ ಸಿನಿಮಾ ಪಟ್ಟಿ ವೀಕ್ಷಿಸುತ್ತಾ, ಸಮಯ ನೋಡುತ್ತಾ ಒರಾಯನ್‌ ಮಾಲ್‌ನ ಟಾಪ್‌ ಫ್ಲೋರ್‌ನತ್ತ ಹೆಜ್ಜೆ ಹಾಕುತ್ತಿದ್ದವರೇ ಜಾಸ್ತಿ. ಅದಕ್ಕೆ ಕಾರಣ ಚಿತ್ರೋತ್ಸವ. 10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ.

 ಹೌದು, ನಿಮಗೆ ಗೊತ್ತಿರುವಂತೆ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ನಗರದ ಒರಾಯನ್‌ ಮಾಲ್‌ನ 11 ಪರದೆಗಳಲ್ಲಿ ಪ್ರದರ್ಶನವಾಗುತ್ತಿದೆ. ದಿನವೊಂದಕ್ಕೆ 45ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ವಿವಿಧ ದೇಶಗಳ ಅಪರೂಪದ ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವುದು ಸಿನಿಮಾಸಕ್ತರ ಖುಷಿಗೆ ಕಾರಣವಾಗಿದೆ. ಆ ಖುಷಿ ಶನಿವಾರ ಒರಾಯನ್‌ ಮಾಲ್‌ನಲ್ಲಿ ಕಾಣುತ್ತಿತ್ತು. ಚಿತ್ರೋತ್ಸವ ಆರಂಭದ ಎರಡು ದಿನಗಳಿಗೆ ಹೋಲಿಸಿದರೆ ಶನಿವಾರ ಚಿತ್ರೋತ್ಸವಕ್ಕೆ ಜನ ನುಗ್ಗಿ ಬಂದಿದ್ದರು. 

ವೀಕೆಂಡ್‌ ಅನ್ನು ಸಿನಿಮಾದಲ್ಲಿ ಕಳೆಯಲು ನಿರ್ಧರಿಸಿದ ಪರಿಣಾಮ ಬೇರೆ ಬೇರೆ ಕ್ಷೇತ್ರದ ಮಂದಿ ಸಿನಿಮೋತ್ಸಕ್ಕೆ ಬಂದಿದ್ದರು. ಹಾಗಾಗಿಯೇ ಸಿನಿಮಾ ಹಾಲ್‌ಗ‌ಳು ತುಂಬಿ ತುಳುಕುತ್ತಿದ್ದವು. ಸರತಿ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ದೃಶ್ಯ ಶನಿವಾರ ಕಂಡು ಬಂತು. ಕೆಲವರಂತೂ ಸತತವಾಗಿ ಐದು ಸಿನಿಮಾಗಳನ್ನು ನೋಡಲು ಸಿದ್ಧರಾಗಿಯೇ ಬಂದಿದ್ದರು.

ಶನಿವಾರದ ಬೆಳಗ್ಗಿನ ಪ್ರದರ್ಶಗಳಲ್ಲಿ ಮುಖ್ಯವಾಗಿ ಇರಾನಿ ಚಿತ್ರ “ಲೀಫ್ ಆಫ್ ಲೈಫ್’, ಜರ್ಮನ್‌ ಚಿತ್ರಗಳಾದ “ದಿ ಫೈನಲ್‌ ಜರ್ನಿ’, ವೆಸ್ಟರ್ನ್’, ಇಸ್ರೇಲ್‌ ಚಿತ್ರ “ದಿ ಕೇಕ್‌ ಮೇಕರ್‌’,  ಟರ್ಕಿ ಚಿತ್ರ “ಯಲ್ಲೋ ಹೀಟ್‌’ಗಳನ್ನು ಕಣ್ತುಂಬಿಕೊಳ್ಳಲು ಸಿನಿಮಾಸಕ್ತರ ಕಾತುರ ಎದ್ದು ಕಾಣುತ್ತಿತ್ತು. “ಜಗತ್ತಿನ ಎಲ್ಲಾ ಭಾಷೆಯ ಚಿತ್ರಗಳನ್ನು ಒಂದೇ ಕಡೆ ಕಣ್ತುಂಬಿಕೊಳ್ಳುವ ಅವಕಾಶ ವರ್ಷಕ್ಕೊಮ್ಮೆ ಬೆಂಗಳೂರು ಚಿತ್ರೋತ್ಸವದ ಮೂಲಕ ಸಿಗುತ್ತಿದೆ.

ಇವತ್ತು ವೀಕೆಂಡ್‌. ವಾರವಿಡೀ ದುಡಿದ ಆಯಾಸವನ್ನು ಒಂದಷ್ಟು ಸಿನಿಮಾಗಳನ್ನು ನೋಡಿ ಕಳೆಯಬೇಕೆಂಬ ಆಸೆಯಿಂದ ಬಂದಿದ್ದೇನೆ’ ಎಂಬುದು ಚಿತ್ರೋತ್ಸವಕ್ಕೆ ಬಂದ ಸಿನಿಮಾ ಪ್ರೇಮಿಯೊಬ್ಬರ ಮಾತು. ಚಿತ್ರೋತ್ಸವದ ಬಗ್ಗೆ ಮಾತನಾಡುವ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ, “ತುಂಬಾ ವರ್ಷಗಳಿಂದ ಬೇರೆ ಬೇರೆ ಚಿತ್ರೋತ್ಸವಗಳನ್ನು ನೋಡುತ್ತಾ ಬಂದಿದ್ದೇನೆ.

ಕಳೆದ 10 ವರ್ಷಗಳಿಂದ ಬೆಂಗಳೂರು ಚಿತ್ರೋತ್ಸವವನ್ನು ನೋಡುತ್ತಿದ್ದೇನೆ. ತುಂಬಾ ಅಚ್ಚುಕಟ್ಟಾಗಿ ನಡೆಸುತ್ತಾ ಬರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಚಿತ್ರೋತ್ಸವ ತುಂಬಾ ಚೆನ್ನಾಗಿ ನಡೆಯುತ್ತಿದೆ. ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡಿ ತರುತ್ತಿದ್ದಾರೆ. ನನ್ನ ನಿರ್ದೇಶನದ “ಮಾರ್ಚ್‌ 22′ ಚಿತ್ರದ ಪ್ರದರ್ಶನ ಕೂಡಾ ಚಿತ್ರೋತ್ಸವದಲ್ಲಿ ಆಗಲಿದೆ’ ಎನ್ನುತ್ತಾರೆ. ಇಂದು ಕೂಡಾ ಚಿತ್ರೋತ್ಸವ ಸಿನಿ ಪ್ರೇಮಿಗಳಿಂದ ಗಿಜಿಗುಡುವ ನಿರೀಕ್ಷೆ ಇದೆ. 

ಟಾಪ್ ನ್ಯೂಸ್

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

BJP-flag

Election Preperation: ಸ್ಥಳೀಯ ಸಂಸ್ಥೆ ಚುನಾವಣೆ: ಇಂದಿನಿಂದ ಬಿಜೆಪಿ ಸರಣಿ ಸಭೆ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Sathish Ninasam: ಅಶೋಕನಿಗೆ ನೀನಾಸಂ ಸತೀಶ್‌ ಸಾಥ್‌

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

BJP-flag

Election Preperation: ಸ್ಥಳೀಯ ಸಂಸ್ಥೆ ಚುನಾವಣೆ: ಇಂದಿನಿಂದ ಬಿಜೆಪಿ ಸರಣಿ ಸಭೆ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.