ತ್ರಿವಳಿ ತಲಾಖ್ ಕಾನೂನು ಜಾರಿ ಬೇಡ
Team Udayavani, Feb 25, 2018, 2:39 PM IST
ಬೀದರ: ದೇಶದಲ್ಲಿರುವ ಜ್ವಲಂತ ಸಮಸ್ಯೆಗಳತ್ತ ಇರುವ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಮುಸ್ಲಿಂ ಸಮಾಜದಲ್ಲಿರುವ ತ್ರಿವಳಿ ತಲಾಖ್ ಬಿಲ್ ಮಂಡನೆಗೆ ಸರ್ಕಾರ ಮುಂದಾಗಿದೆ ಎಂದು ಆಲ್ ಇಂಡಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಮೌಲಾನಾ ಅಬು ತಾಲೀಬ್ ರಹಮಾನಿ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್ ಜಾರಿಗೆ ತರುವ ಮೂಲಕ ಹಿಟ್ಲರಿಜ್‌ಂ ಪಾಲಿಸಿ ತರುವ ಪ್ರಯತ್ನ ನಡೆಯುತ್ತಿದೆ. ಇದರಿಂದ ನೂರಾರು ವರ್ಷಗಳಿಂದ ಭಾತೃತ್ವದಿಂದ ಜೀವಿಸುತ್ತಿರುವ ಹಿಂದು ಮುಸ್ಲಿಂರ ಮಧ್ಯೆ ವೈರತ್ವ ತರುವ ಷಡ್ಯಯಂತ್ರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವತಂತ್ರ ಭಾರತದಲ್ಲಿ ವಿವಿಧ ಸಮಾಜದ ಸುಮಾರು 200 ವೈಯಕ್ತಿಕ ಕಾನೂನುಗಳಿವೆ. ಇದರಲ್ಲಿ ಆದಿವಾಸಿ, ನಾಗಾಲ್ಯಾಂಡ್, ಪಾಂಡಿಚೇರಿ, ಗೋವಾ, ಉತ್ತರ ಭಾರತ ಹಾಗೂ ದಕ್ಷಿಣ ಭಾರತಕ್ಕೆ ಬೇರೆ ಬೇರೆ ವೈಯಕ್ತಿಕ ಕಾನೂನುಗಳಿವೆ. ಅದರಲ್ಲಿಯೇ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಕೂಡ ಒಂದಾಗಿದೆ ಎಂದರು.
ದೇಶದಲ್ಲಿ ಎರಡು ಲಕ್ಷ ಮುಸ್ಲಿಂ ಮಹಿಳೆಯರ ತಲಾಖ್ ಪ್ರಕರಣಗಳಿವೆ. ಉಳಿದವರು ಯಾರೆ ಇರಲಿ ಇಲ್ಲಿ ಯಾವುದೇ ಭೇದ ಇಲ್ಲದೆ ಮಹಿಳೆಯರ ಮಾತು ಏಕೆ ಆಡುತ್ತಿಲ್ಲ. ಸಹೋದರತೆಯಿಂದ ಜೀವಿಸುತ್ತಿರುವವರ ಮಧ್ಯೆ ಜಾತಿವಾದಿ ವಾತಾವರಣ ನಿರ್ಮಿಸುತಿದ್ದಾರೆ. ದೇಶದಲ್ಲಿ ತ್ರಿವಳಿ ತಲಾಖ್ ಎಷ್ಟು ಎಂದು ಯಾರು ಹೇಳುತ್ತಿಲ್ಲ, ವಾಟ್ಸ್ ಆ್ಯಪ್, ಇ-ಮೇಲ್ ಮೂಲಕ ಎಷ್ಟು ಎಂಬುವುದನ್ನು ಯಾರು ಹೇಳಿತ್ತಿಲ್ಲ. ಆದರೆ 2017ರ ಒಂದು ಅಂಕಿ ಅಂಶಗಳ ಪ್ರಕಾರ ತ್ರಿವಳಿ ತಲಾಖ್‌ನ 2900 ಮಹಿಳೆಯರಿದ್ದಾರೆ. ಆದರೆ ಕೆಲ ಸುದ್ದಿವಾಹಿನಿಗಳು ನಮ್ಮ ಸಮಾಜಕ್ಕೆ ಕಳಂಕ ತರುವ ಕೆಲಸ ಮಾಡುತಿದ್ದಾರೆ. ಇದರಿಂದ ದೇಶದ ಶಕ್ತಿ ಕುಂದುತ್ತಿದೆ ಎಂದರು.
ತ್ರಿವಳಿ ತಲಾಖ್ ಬಿಲ್ ಯಾವುದೇ ಕಾರಣಕ್ಕೂ ರಾಜ್ಯಸಭೆಯಲ್ಲಿ ಮಂಡನೆ ಮಾಡಬಾರದು. ಇದು ಕಾನೂನು ವಿರೋಧಿಯಾಗಿದೆ. ಈ ಕಾನೂನಿನಡಿ ಯಾರೇ ದೂರು ಸಲ್ಲಿಸಿದರು ಪತಿಗೆ ಮೂರು ವರ್ಷ ಜೈಲು ಹಾಗೂ ಅವಳ ಖರ್ಚು ನೀಡಬೇಕು. ಒಳ್ಳೆಯ ಬಿಲ್ ತಂದರೆ ಅದಕ್ಕೆ ನಾವು ಸ್ವಾಗತಿಸುತ್ತೇವೆ ಎಂದರು.
ಪ್ರಧಾನಿ ಯಾವುದೇ ಪಕ್ಷದವರಾಗಿರಲಿ, ದೇಶದ ಚುನಾಯಿತ ಪ್ರಧಾನಿಗಳಾಗಿರುತ್ತಾರೆ. ಅವರು ದೇಶ ಅಭಿವೃದ್ಧಿಪಡಿಸಬೇಕು. ಯುವಕರಿಗೆ ಉದ್ಯೋಗ, ಜನರ ರಕ್ಷಣೆಯ ಕಡೆಗೆ ಗಮನ ಹರಿಸಬೇಕು. ಆದರೆ, ಯಾವುದೇ ಒಂದು ಧರ್ಮವನ್ನು ಹತೋಟಿಯಲ್ಲಿಡಲು ಮುಂದಾಗಿರುವುದು ಸಂವಿಧಾನದ ಪ್ರಕಾರ ಕಾನೂನು ಬಾಹೀರವಾಗಿದೆ ಎಂದು ಹೇಳಿದರು.
ಪ್ರಮುಖರಾದ ಮೌಲಾನಾ ಮುಫ್ತೀ ಗುಲಾಮ್ ಯಝದಾನಿ, ಸೈಯದ್ ಸುಜಾವೋದ್ದಿನ್, ಮಹ್ಮದ್ ಖಾಲೀದ್ ಇಕ್ಬಾಲ್, ಜಯವಂತ ಅಂಬಣ್ಣ, ವಿಕಾರೋದ್ದಿನ್ ಬಹಮನಿ, ಮೌಲಾನಾ ತಸದ್ದುಕ್ ಇದ್ದರು.
ಅಯೋಧ್ಯೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ನಿರ್ಣಯಕ್ಕೆ ನಾವು ಬದ್ಧರಾಗಿದ್ದು, ನಿರ್ಣಯ ನಮ್ಮ ಪರವಾಗಿರಲಿ ಅಥವಾ ಬರದೆ ಇರಲಿ ಅದಕ್ಕೆ ಮಂಡಳಿ ಸ್ವಾಗತಿಸುತ್ತದೆ. ಇದನ್ನು ಮೂರನೇ ಅವರ ಮಧ್ಯಸ್ಥಿಕೆಯಿಂದ ಬಗೆಹರಿಯುವುದಿಲ್ಲ. ಹಿಂದು-ಮುಸ್ಲಿಂ ಜಾತಿಗಳ ಮಧ್ಯೆ ಒಡಕು ಹಾಕಿ ದೇಶದ ಸಂಪತ್ತು ನಾಶ ಮಾಡಲು ಬಿಡುವುದಿಲ್ಲ. ಶಾಂತಿ ಹಾಗೂ ಕಾನೂನು ಮೂಲಕ ಬಗೆಹರಿಸಬೇಕು. ಯಾವುದೇ ಕಾರಣಕ್ಕೂ ಅಶಾಂತಿಗೆ ಆಸ್ಪದ ನೀಡುವವರು ನಾವಲ್ಲ.
ಮೌಲಾನಾ ಅಬು ತಾಲೀಬ್ ರಹಮಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.