ಟಿಡಿಎಸ್‌ನಲ್ಲಿ ಕದ್ದರೆ ಎಎಸ್‌ನಲ್ಲಿ ಸಿಕ್ಕಿ ಬೀಳುತ್ತೀರಿ


Team Udayavani, Feb 26, 2018, 8:10 AM IST

Untitled-1.jpg

ಮಾರ್ಚ್‌ 31 ರ ಮೊದಲು ಪ್ರತಿಯೊಬ್ಬರೂ ತಮ್ಮ ಎಲ್ಲ ಕರಾರ್ಹ ಆದಾಯವನ್ನೂ ತೋರಿಸಿ ಕರ ಕಟ್ಟುವುದು ಒಳಿತು. ಫಾರ್ಮ್ 26ಎಎಸ್‌ನಲ್ಲಿ ನಮೂದಿತ ಎಲ್ಲ ಆದಾಯಗಳನ್ನು ಖಂಡಿತವಾಗಿಯೂ ತೋರಿಸಲೇ ಬೇಕು. ಇಲ್ಲವಾದಲ್ಲಿ ಇಲಾ ಖೆಯ ಕಂಪ್ಯೂಟರ್‌ ನೋಟೀಸು ಇಶ್ಯೂ ಮಾಡುವುದು ಶತಸ್ಸಿದ್ಧ.

ಗುರುಗುಂಟಿರಾಯರ ಮನಸ್ಸು ಅದೇಕೋ ಸ್ಥಿಮಿತದಲ್ಲಿಲ್ಲ. ಟೆನ್ಶನ್‌ ವದನರಾಗಿ ರೂಮಿನಲ್ಲಿಯೇ ಅತ್ತಿತ್ತ ಸುತ್ತು ಹಾಕುತ್ತಿ¨ªಾರೆ. ಮಾರ್ಚ್‌ ಸಮೀಪಿಸುತ್ತಿದ್ದು ತಮ್ಮ ಆದಾಯ ತೆರಿಗೆಯ ಬಗ್ಗೆ ಮಂಡೆ ಬಿಸಿ ಏರಲಾರಂಭಿಸಿದೆ. ಇಷ್ಟು ಸಮಯ ಅದು ಹೇಗೋ ಮುಂದೂಡುತ್ತಾ ಬರುತ್ತಿದ್ದು ಇನ್ನು ಮುಂದಕ್ಕೆ ಹಾಕಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಬಂದಿದೆ. ಈಗಲಾದರೂ ಒಂದೆಡೆ ಕುಳಿತು ಶಾಂತಿಯಿಂದ ತಮ್ಮ ಪಿಂಚಣಿ, ಎಫ್ಡಿ ಬಡ್ಡಿ ಇತ್ಯಾದಿಗಳ ಲೆಕ್ಕ ಹಾಕಿ ಒಟ್ಟು ಕರ ಎಷ್ಟು? ಕರ ಉಳಿತಾಯದ ಠೇವಣಿ ಎಷ್ಟು? ಬಾಕಿ ಕರ ಎಷ್ಟು ? ಎಂಬ ಲೆಕ್ಕಾಚಾರವನ್ನು ಶಾಂತ ಮನಸ್ಸಿನಿಂದ ಹಾಕಲೇ ಬೇಕು. ಮೊಳೆಯಾರರತ್ರ ನೇರವಾಗಿ ಕೇಳ್ಳೋಣ ಅಂದರೆ ಅದ್ಯಾಕೋ ಅವರಿಗೆ ಲೆಕ್ಕದಿಂದ ಹೆಚ್ಚು ಬಾವ್‌ ಕೊಟ್ಟು ತಾವು ಸಣ್ಣವರಾಗಲು ಮನಸ್ಸಿಲ್ಲ. ಬಹೂರಾಣಿಯತ್ರ ಕೇಳ್ಳೋಣ ಎಂದರೆ ನಿನ್ನೆ ಮೊನ್ನೆ ಯಾವುದೋ ಸಣ್ಣ ವಿಚಾರಕ್ಕೆ ಅವಳು ಎತ್ತಿದ ಅಪಸ್ವರ ಅವರಿಗೆ ಹಿಡಿಸಲಿಲ್ಲ. ಆ ಪ್ರಯುಕ್ತ ಮನೆಯಲ್ಲಿ ಒಂದು ಸಣ್ಣ ಕೋಲ್ಡ… ವಾರ್‌ ಈಗಾಗಲೇ ನಡೆಯುತ್ತಿದೆ. ಇನ್ನು ಮಗನಾದರೋ ಶುದ್ಧ ಶುಂಠ, ನಾಲಾಯಕ್‌, ಯೂಸ್‌ಲೆಸ್‌ ಅಂತ ತಾವೇ ಸರ್ಟಿಫಿಕೇಟ್‌ ಕೊಟ್ಟು ಊರೆÇÉಾ ಡಂಗುರ ಸಾರಿಯೂ ಆಗಿದೆ. ಇನ್ನು ಅವನನ್ನು ಕೇಳುವುದೇ? ಉಳಿದದ್ದು ಮೊಮ್ಮಗ ಪುಟ್ಟು.

ಅವನಿಗೆ ಇಂಥ ಕೆಲಸಕ್ಕೆ ಇಂತಿಷ್ಟು ಎನ್ನುವ ರೇಟ್‌ ಲಿಸ್ಟ್‌ ಪ್ರಕಾರ ಲಂಚ ಕೊಟ್ಟರೆ ಕಂಪ್ಯೂಟರ್‌ ಆನ್‌ ಮಾಡಿ ಟ್ಯಾಕ್ಸ್‌ ಸಂಬಂಧಿ ವೆಬ್‌ಸೈಟ್‌ ತೋರಿಸಿಯಾನು. ಸದ್ಯಕ್ಕೆ ರಾಯರಿಗೆ ಅದಕ್ಕೂ ಮನಸ್ಸಿಲ್ಲ. ಹಾಗಾಗಿ ರಾಯರು ಟೆನÒನ್‌ ವದನರಾಗಿ, ಗೊಂದಲ ಮನದವ ರಾಗಿ ತಮ್ಮ ರೂಮಿನಲ್ಲಿಯೇ ಶತಪಥ ಸುತ್ತುತ್ತಿ¨ªಾರೆ.
***
ಈ ವಿತ್ತ ವರ್ಷ ಇದೇ ಮಾರ್ಚ್‌ 31 ಕ್ಕೆ ಮುಗಿಯುತ್ತದೆ. ಈ ವಿತ್ತ ವರ್ಷದ ಆದಾಯ ಕರವನ್ನು ಸರಿಯಾಗಿ ಲೆಕ್ಕ ಹಾಕಿ
ಮಾರ್ಚ್‌ 31, 2018 ರ ಒಳಗಾಗಿಯೇ ಕಟ್ಟಬೇಕು ಹಾಗೂ ತತ್ಸಂಬಂಧಿ ಕರ ಉಳಿತಾಯದ ಹೂಡಿಕೆಗಳಿದ್ದರೆ ಅವನ್ನೂ
ಕೂಡಾ ಮಾರ್ಚ್‌ 31 ರ ಒಳಗಾಗಿಯೇ ಮಾಡಿ ಮುಗಿಸಬೇಕು. ಮಾರ್ಚ್‌ 31ರ ಒಳಗಾಗಿ ಕಟ್ಟದ ಕರಕ್ಕೆ ಬಡ್ಡಿ ಬೀಳುತ್ತದೆ ಹಾಗೂ ಮಾರ್ಚ್‌ 31 ರ ಒಳಗಾಗಿ ಮಾಡದ ಹೂಡಿಕೆ ಲೆಕ್ಕಕ್ಕಿಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಅಷ್ಟೆÇÉಾ ಮಾಡಿದ ಬಳಿಕ ರಿಟರ್ನ್ ಫೈಲಿಂಗ್‌ ಮಾಡಲು ಮಾತ್ರವೇ ಜುಲೈ 31ರವರೆಗೆ ಕಾಲಾವಕಾಶ ನೀಡಲಾಗಿದೆ.

ಈ ರೀತಿ ಈ ವಿತ್ತ ವರ್ಷದ ಲೆಕ್ಕ ಚುಕ್ತ ಮಾಡಬೇಕು ಎಂದರೆ ನಮ್ಮ ಎÇÉಾ ಆದಾಯ ಮತ್ತು ಹೂಡಿಕೆಗಳ ಸಂಪೂರ್ಣ ವಿವರ ನಮ್ಮ ಕೈಯಲ್ಲಿ ಇರಬೇಕು. ಹಲವಾರು ಜನರು ಸಂಬಳದ ಆದಾಯ ಮಾತ್ರ ಕರಾರ್ಹ ಅದರ ಮೇಲೆ ಕರ ಕಡಿತ ಹೇಗೂ ಕಂಪೆನಿಯವರೇ ಮಾಡುತ್ತಾರಲ್ಲವೆ? ಇನ್ನು ನಮಗೆ ಮಾಡುವುದು ಏನೂ ಇಲ್ಲ ಎಂದೇ ತಿಳಿದಿ¨ªಾರೆ. ಅಂತವರಿಗೆ ಎಫ್ಡಿ ಇನ್ನಿತರ ಬೇರೆ ಮೂಲಗಳ ಕರಾರ್ಹ ಆದಾಯವೂ ಇರುತ್ತವೆ. ಇನ್ನು ಕೆಲವರಿಗೆ ಅಂತಹ ಕರಾರ್ಹ ಆದಾಯದ ಬಗ್ಗೆ ಅರಿವಿದ್ದರೂ ಅದಕ್ಕೆಲ್ಲ ಮಂಡೆ ಬಿಸಿ ಮಾಡುವ ಅಗತ್ಯವೇ ಇಲ್ಲ; ದಾಲಾ ಆಪುಜಿ ಅಂದುಕೊಂಡು ಎಂಟೆದೆಯ ಬಂಟರಂತೆ ಆರಾಮವಾಗಿ ತಿರುಗಾಡುತ್ತಾರೆ. ಕೇಳಿದರೆ ಯಾವನಿಗೆ ಗೊತ್ತಾಗುತ್ತದೆ?’ ಎನ್ನುವ ಭಂಗಿ; ಸಿಕ್ಕಿ ಬಿದ್ರೆ ಅಲ್ವಾ? ಆಮೇಲೆ ನೋಡೋಣ’ ಎನ್ನುವ ಹಾರಿಕೆಯ ಉತ್ತರ. ಇದು ಶುದ್ಧ ಅಪರಾಧ ಹಾಗೂ ಭ್ರಷ್ಟಾಚಾರದ ಮೇಲೆ ನಾವುಗಳು ಇಟ್ಟಿರುವ ನಂಬಿಕೆಗೆ ಸಾಕ್ಷಿ. ಸ್ವಿಸ್‌ ಬ್ಯಾಂಕಿನಲ್ಲಿ ಇಟ್ಟಿದ್ದು ಮಾತ್ರ ಕಾನೂನುಬಾಹಿರ ಕಪ್ಪು ಹಣ, ನಾವು ಕರ ತಪ್ಪಿಸಿ ಮನೆಯೊಳಗೆ ಇಟ್ಟಿದ್ದು ಜಾಣ್ಮೆಯ ಉಳಿತಾಯ ಎನ್ನುವ ಭೂಪರು ನಮ್ಮಲ್ಲಿ ಹಲವರಿ¨ªಾರೆ.

ಸರಿಯೋ ತಪ್ಪೋ ಎನ್ನುವ ಪ್ರಶ್ನೆ ಆ ಬಳಿಕ. ಆದರೆ ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು ಬಹುತೇಕ ಎಲ್ಲರ ಆಸೆಯೂ ಆಗಿದೆ. ಕರ ಕಾನೂನು ತೆರಿಗೆಯನ್ನು ತಪ್ಪಿಸುವ ಕೆಲವು ಕಾನೂನೀಯ ಹಾದಿಗಳನ್ನು ಕೊಟ್ಟಿದೆ. ಆದರೆ ಕಾನೂನಿನ ಚೌಕಟ್ಟಿನ ಹೊರಗೆ ಹೋಗಿ ತಪ್ಪಿಸಲು ಹವಣಿಸುವುದು ಶುದ್ಧ ತಪ್ಪು ಮತ್ತು ಅದು ಕರ ಕಳ್ಳತನ.

ಅದೇನೇ ಇರಲಿ; ಕರ ಇಲಾಖೆ ಲಾಗಾಯ್ತಿನಿಂದ ಕರ ಚೋರ
ರನ್ನು ಹಿಡಿಯಲು ಬಹುಕೃತ ವೇಷವನ್ನು ಹಾಕುತ್ತಲೇ ಇದೆ. ವಿದ್ಯುನ್ಮಾನ ಮಾಧ್ಯಮ ಬಂದ ಮೇಲೆ ಈ ಕೆಲಸ ತುಂಬಾ ಸುಲಭವಾಗಿಯೂ ನಡೆಯುತ್ತಿದೆ. ಈ ಮೊಳೆಯಾರುÅ ಗುರುಗುಂಟಿರಾಯರನ್ನು ಹಿಡ್ಕೊಂಡು ನಮ್ಮನ್ನೆಲ್ಲ ಸುಮ್ಮನೆ ಹೆದರಿಸುತ್ತಿ¨ªಾರೆ ಮಾರಾಯೆÅ ಅಂತ ವ್ಯಂಗ್ಯವಾಡಿದವರಿಗೆÇÉಾ ವರ್ಷಕ್ಕೊಂದರಂತೆ ಕರ ಇಲಾಖೆಯಿಂದ ನೋಟೀಸುಗಳು ಬರಲಾರಂಭಿಸಿವೆ.

ಎÇÉೆಲ್ಲಿ ಆದಾಯವನ್ನು ಅಡಗಿಸಿ ಕರ ವಂಚನೆ ಮಾಡಿ¨ªಾರೋ ಅವನ್ನೆÇÉಾ ಕರಾರುವಕ್ಕಾಗಿ ನೋಟೀಸಿನಲ್ಲಿ ತೋರಿಸಿ ಅದರ ಬಗ್ಗೆ ವಿವರಣೆಗಳನ್ನು ಕೇಳುತ್ತಲಿ¨ªಾರೆ. ಎಫ್ಡಿ ಬಡ್ಡಿ ಇತರ ಆದಾಯ ಅಲ್ಲದೆ ಬ್ಯಾಂಕುಗಳಲ್ಲಿ ಮಾಡಿದ ದೊಡ್ಡ ಮೊತ್ತದ ಡೆಪಾಸಿಟ್‌, ಹೊರಗಡೆ ಮಾಡಿದ ದೊಡ್ಡ ಮೊತ್ತದ ವ್ಯವಹಾರ/ವೆಚ್ಚ ಇತ್ಯಾದಿಗಳನ್ನು ದಿನಾಂಕ ಸಮೇತ ಉÇÉೇಖೀಸಿ ವಿವರಣೆ ಕೇಳುವ ನೋಟೀಸುಗಳು ಹಲವರಿಗೆ ಬಂದಿವೆ, ಬರುತ್ತಲೇ ಇವೆ.

ಇಷ್ಟು ಹೇಳಿದ ಮೇಲೆ ಕರ ಇಲಾಖೆ ನಿಮ್ಮ ಬಗ್ಗೆ ಮಾಹಿತಿಯನ್ನು ಯಾವ ರೀತಿ ಸಂಗ್ರಹಿಸಿ ಎಲ್ಲಿ ಕೂಡಿಡುತ್ತದೆ ಅನ್ನುವುದನ್ನೂ ಹೇಳ ಲೇಬೇಕು. ಕರ ಇಲಾಖೆಯು ನಿಮ್ಮ ಬಗ್ಗೆ ಕಲೆ ಹಾಕಿದ ಮಾಹಿತಿ ಯನ್ನು ಫಾರ್ಮ್ 26ರಲ್ಲಿ ಶೇಖರಿಸಿಡುತ್ತದೆ ಮತ್ತದು ಪಾರದರ್ಶಕ ವಾಗಿ ನಿಮಗೂ ನೋಡಲು ಜಾಲತಾಣ ದಲ್ಲಿ ಲಭ್ಯ. ಎÇÉಾ ವಿವರಗಳು ಅದರಲ್ಲಿ ಸಿಗದಿದ್ದರೂ ಬಹುತೇಕ ವಿವರಗಳನ್ನು ಅಲ್ಲಿ ಕಾಣಬಹುದು. ಅಲ್ಲಿರುವ ವಿವರಗಳಂತೂ ಕರ ಇಲಾಖೆಗೆ ನೂರಕ್ಕೆ ನೂರು ಶತಮಾನ ತಿಳಿದಿರುತ್ತದೆ!
ಹಾಗಾಗಿ ಕನಿಷ್ಠ ಆ ವಿವರಗಳ ನ್ನಂತೂ ನಿಮ್ಮ ಲೆಕ್ಕಕ್ಕೆ ತೆಗೆದುಕೊಳ್ಳದೆ ಇರಲು ಸಾಧ್ಯವೇ ಇಲ್ಲ.

26ಎಎಸ್‌
ಹೌದು, ಫಾರ್ಮ್ 26ಎಎಸ್‌!! ಕರ ಕಟ್ಟುವವರೂ ಹಾಗೂ ಕರ ಕಳ್ಳತನ ಮಾಡುವವರೂ ಅತ್ಯಗತ್ಯವಾಗಿ ತಿಳಿದುಕೊಳ್ಳಲೇ ಬೇಕಾದ ವಿಚಾರ ಇದು. ಆದಾಯ ತೆರಿಗೆ ಇಲಾಖೆ ಪ್ಯಾನ್‌ ಕಾರ್ಡ್‌ ಮುಖಾಂತರ ಎÇÉಾ ವ್ಯವಹಾರಗಳ ಮೇಲೆ ಕಣ್ಣಿಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ಯಾನ್‌ ಕಾರ್ಡ್‌ ಮುಖಾಂತರ ಸಂಗ್ರಹಿಸಿದ ಮಾಹಿತಿಗಳನ್ನು ವಿಶ್ಲೇಷಿಸಿ ಪ್ರತಿಯೊಬ್ಬರೂ ಕಟ್ಟಿದ ಆದಾಯ ಕರದ ಪಟ್ಟಿಯನ್ನು ಫಾರ್ಮ್ 26 ಎಎಸ್‌ ಎಂಬ ವೈಯಕ್ತಿಕ ಪಟ್ಟಿಯಲ್ಲಿ ನೋಂದಾಯಿಸುತ್ತಾ ಹೋಗುತ್ತದೆ. ನಿಮ್ಮ ಸಂಬಳದಿಂದ, ಬ್ಯಾಂಕ್‌ ಬಡ್ಡಿಯಿಂದ, ಕಮಿಷನ್‌ ಪಾವತಿಯಿಂದ ಕಡಿತವಾದ ಟಿಡಿಎಸ್‌ (ಟ್ಯಾಕ್ಸ್‌ ಡಿಡಕ್ಟೆಡ್‌ ಅಟ್‌ ಸೋರ್ಸ್‌) ಅಲ್ಲದೆ ನೀವು ಸ್ವತಃ ಕಟ್ಟಿದ ಅಡ್ವಾನ್ಸ್‌ ಟ್ಯಾಕ್ಸ್‌ ಮತ್ತು ಸೆಲ#… ಅಸೆಸೆ$¾ಂಟ್‌ ಟ್ಯಾಕ್ಸ್‌ ವಿವರಗಳು ಈ ಫಾರ್ಮ್ 26ಎಎಸ್‌ ನಲ್ಲಿ ದಾಖಲಾಗುತ್ತಾ ಹೋಗುತ್ತದೆ.

ಕರ ಇಲಾಖೆ ಈ ಪಟ್ಟಿಯನ್ನು ಹಿಡಿದುಕೊಂಡು ನೀವು ತುಂಬುವ ಟ್ಯಾಕ್ಸ್‌ ರಿಟರ್ನ್ಸ್ ಅನ್ನು ಕೂಲಂಕಷವಾಗಿ ಪರಿಶೀಲಿ ಸುತ್ತದೆ. ಫಾರ್ಮ್ 26ಎಎಸ್‌ ಪ್ರಕಾರ ಟಿಡಿಎಸ್‌ ಮೂಲಕ ದಾಖಲಾದ ಎÇÉಾ ಆದಾಯಗಳೂ ನಿಮ್ಮ ಟ್ಯಾಕ್ಸ್‌ ರಿಟರ್ನ್ಸ್ ಫೈಲಿಂಗ್‌ನಲ್ಲಿ ಬಂದಿರಬೇಕು ಹಾಗೂ ಟಿಡಿಎಸ್‌ ಅಲ್ಲದೆ ಬಾಕಿ ಉಳಿದ ತೆರಿಗೆಯನ್ನು – ನಿಮ್ಮ ಸ್ಲಾಬ್‌ಗ ಅನ್ವಯವಾಗುವಂತೆ ಕಟ್ಟಿರಬೇಕು. ಈ ರೀತಿ ತಾಳೆಯಾಗದ ಎÇÉಾ ವ್ಯವಹಾರಗಳನ್ನೂ ಆದಾಯ ತೆರಿಗೆ ಇಲಾಖೆ ತನ್ನ ಬೃಹತ್‌ ಕಂಪ್ಯೂಟರಿನ ಸಹಾಯದಿಂದ ಪತ್ತೆ ಹಚ್ಚಿ ವೈಯಕ್ತಿಕ ನೋಟೀಸುಗಳನ್ನು ಕಳೆದ ಕೆಲ ವರ್ಷಗಳಿಂದ ಜಾರಿ ಮಾಡುತ್ತಿದೆ.

15ಜಿ/15ಎಚ್‌
26ಎಎಸ್‌ ಫಾರ್ಮು ಟಿಡಿಎಸ್‌ ಕಡಿತವಾದಾಗ ಮಾತ್ರವೇ ಆದಾಯವನ್ನು ದಾಖಲಿಸಿ ಪಟ್ಟಿಮಾಡುತ್ತದೆ ಎನ್ನುವ ಮೂಲ
ಭೂತ ತತ್ವವನ್ನು ಹಲವು ಬುದ್ಧಿವಂತರು ಮನನ ಮಾಡಿ ಕೊಂಡಿ¨ªಾರೆ. ಹಾಗಾದರೆ ಟಿಡಿಎಸ್‌ ಕಡಿತವಾಗದಂತೆ ನೋಡಿ ಕೊಂಡರೆ ಸಾಕು ಕರ ಇಲಾಖೆಯ ದೃಷ್ಟಿಯಿಂದ ತಪ್ಪಿಸಿ ಕೊಂಡಂತೆಯೇ ಸರಿ ಎನ್ನುವ ಮಹಾ ಸಂಶೋಧನೆಯನ್ನು ಹಲ ವರು ಮಾಡಿಕೊಂಡರು. ಆ ಪ್ರಕಾರ ಬ್ಯಾಂಕುಗಳಲ್ಲಿ ಇಟ್ಟ ಡೆಪಾಸಿಟ್ಟುಗಳಿಗೆ ಟಿಡಿಎಸ್‌ ಕಡಿತವಾಗದಂತೆ ಫಾರ್ಮ್ 15ಜಿ ಅಥವಾ 15ಎಚ್‌ ತುಂಬಿ ಕೊಡಲು ಆರಂಭಿಸಿದರು. ಈ ಫಾರ್ಮು ತುಂಬಿ ಕೊಟ್ಟರೆ ಟಿಡಿಎಸ್‌ ಕಡಿತ ಆಗುವುದಿಲ್ಲ ಎನ್ನುವುದೇನೋ ಸರಿ, ಆದರೆ ಮೂಲಭೂತವಾಗಿ ಕರಾರ್ಹರು ಈ ಫಾರ್ಮನ್ನು ತಮ್ಮ ಕೈಯಿಂದ ಮುಟ್ಟುವಂತೆಯೇ ಇಲ್ಲ. ಈ ಫಾರ್ಮಿನಲ್ಲಿ ನಾನು ಕರಾರ್ಹನಲ್ಲ, ಆದ ಕಾರಣ ನನ್ನ ಬಡ್ಡಿಯ ಮೇಲೆ ಟಿಡಿಎಸ್‌ ಕಡಿತ ಮಾಡಬೇಡಿ ಎಂದು ಬರೆದಿರುತ್ತದೆ. ಅದನ್ನು ಗಾಳಿಗೆ ತೂರಿ ಲಕ್ಷಾಂತರ ಜನರು ಬೇಕಾಬಿಟ್ಟಿ ಈ ಫಾರ್ಮುಗಳನ್ನು ತುಂಬಿ ಬ್ಯಾಂಕುಗಳಲ್ಲಿ ನೀಡಿ¨ªಾರೆ. ಕೆಲವೆಡೆ ಬ್ಯಾಂಕು ಸಿಬ್ಬಂದಿಗಳೇ ಅರಿತೋ ಅರಿಯದೆಯೋ ಈ ರೀತಿ ಮಾಡಲು ಠೇವಣಿದಾರರನ್ನು ಪ್ರೇರೇಪಿಸಿ¨ªಾರೆ. ಯಾರು ಏನೇ ಹೇಳಿದರೂ ಸಹಿ ಹಾಕಿದವನೇ ಅಂತಿಮ ಹೊಣೆಗಾರನಾಗು
ತ್ತಾನೆ ಎನ್ನುವುದನ್ನು ಜನರು ಮರೆಯಬಾರದು. ಈ ರೀತಿ ಟಿಡಿಎಸ್‌ ತಪ್ಪಿಸಿ ಫಾರ್ಮ್ 26 ಎಎಸ್‌ನ ಜಾಲದಿಂದ ತಪ್ಪಿಸಿಕೊಂಡೆ ಎಂದು ಬೀಗುತ್ತಿದ ಲಕ್ಷಾಂತರ ಜನರಿಗೆ ಕೂಡಾ ಒಂದು ಸಣ್ಣ ಆಘಾತ ಕಾದಿದೆ.

26 ಎಎಸ್‌ನ ಹೊಸ ಅವತಾರ
ಯಾವುದೇ ಸದ್ದುಗದ್ದಲವಿಲ್ಲದೆ ಈ ಫಾರ್ಮ್ 26ಎಎಸ್‌ ಎನ್ನುವುದರಲ್ಲಿ ಇಂತಹ ಅತಿ ಜಾಣ್ಮೆಯನ್ನು ಹಿಡಿದು ಹಾಕಲು ಇನ್ನೂ ಒಂದು ಅಂಶ ಅಡಕವಾಗಿದೆ. ಕಳ್ಳ ಚಾಪೆಯ ಕೆಳಗೆ ನುಸುಳಿಕೊಂಡರೆ ಪೋಲೀಸು ರಂಗೋಲಿಯ ಕೆಳಗೆ ನುಸುಳಿ ಕೊಂಡಿ¨ªಾನೆ. ಆ ಪ್ರಯುಕ್ತ ಇತ್ತೀಚೆಗಿನ ದಿನಗಳಲ್ಲಿ 26ಎಎಸ್‌ ಫಾರ್ಮಿನಲ್ಲಿ ಈ ವರೆಗೆ ಅಷ್ಟೊಂದು ಗಂಭೀರವಾಗಿ ಮಾಡಿರದ ಹೊಸತೊಂದು ಮಾಹಿತಿ ನಿಖರಾಗಿ ದಾಖಲಾಗುತ್ತಿದೆ. ಯಾರೆÇÉಾ 15ಜಿ ಅಥವಾ 15ಎಚ್‌ ಫಾರ್ಮ್ ನೀಡಿ ಟಿಡಿಎಸ್‌ ತಪ್ಪಿಸಿಕೊಂಡಿ ¨ªಾರೋ ಆ ಎÇÉಾ ವ್ಯವಹಾರಗಳ ಸಂಪೂರ್ಣ ವಿವರಗಳನ್ನು ಫಾರ್ಮ್ 26ಎಎಸ್‌ ಕಟ್ಟುನಿಟ್ಟಾಗಿ ಹಿಡಿದಿಡಲು ಆರಂಭಿಸಿದೆ. ಈ ಮೊದಲು ಅದರಲ್ಲಿ ಆ ಕಾಲಂ ಇದ್ದರೂ ಸಹ ಅದು ಅಷ್ಟೊಂದು ಸರಿಯಾಗಿ ಭರ್ತಿಯಾಗಿದ್ದಿಲ್ಲ. ಅಂದರೆ ಟಿಡಿಎಸ್‌ ಕಡಿತವಾಗ ದಿದ್ದರೂ ನಿಮ್ಮ ಎÇÉಾ ಎಫ್ಡಿ ಹಾಗೂ ಅವುಗಳ ಬಡ್ಡಿಗಳ ವಿವರ ಈಗ ಕರ ಇಲಾಖೆಯ ಕಂಪ್ಯೂಟರಿನಲ್ಲಿ ಶೇಖರವಾಗಿದೆ. ಅಷ್ಟೇ ಅಲ್ಲದೆ ನಿಮ್ಮ ದೊಡ್ಡ ಮೊತ್ತದ ವ್ಯವಹಾರಗಳು, ಕರ ಇಲಾಖೆಯಿಂದ ಹಿಂಪಡೆದ ಬಡ್ಡಿ ಇತ್ಯಾದಿಗಳೂ ಸಹ ಸ್ಪಷ್ಟವಾಗಿ ದಾಖಲಾಗುತ್ತಿದೆ. ನೀವು ರಿಟರ್ನ್ ಫೈಲ್‌ ಮಾಡುವ ಹೊತ್ತಿಗೆ ಅದನ್ನು ತಾಳೆಹಾಕಿ ನೀವು ಕಟ್ಟಬೇಕಾದ ತೆರಿಗೆಯ ಸರಿಯಾದ ಲೆಕ್ಕವನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೆ ಅದರ ಮೇಲೆ ಪೆನಾಲ್ಟಿ, ಬಡ್ಡಿ ಹಾಗೂ ಕರಾರ್ಹನಲ್ಲವೆಂದು ಸುಳ್ಳು ಡಿಕ್ಲರೇಶನ್‌ ಕೊಟ್ಟ ಕಾರಣಕ್ಕೆ ಒಂದು ಶೋಕಾಸ್‌ ನೋಟೀಸ್‌ ಬರಲಿದೆ.

ಎಲ್ಲಿದೆ ಫಾರ್ಮ್ 26 ಎಎಸ್‌?
26ಅಖ ಎಂಬ ಹೆಸರುಳ್ಳ ಈ ಸೌಲಭ್ಯಕ್ಕೆ www.tdscpc.gov.in ಜಾಲತಾಣಕ್ಕೆ ಹೋಗಿ ರಿಜಿಸ್ಟರ್‌ ಮಾಡಿಕೊಳ್ಳಿ ಹಾಗೂ ನಿಮ್ಮ ವೈಯಕ್ತಿಕ ಫಾರ್ಮ್ 26ಎಎಸ್‌ ಅನ್ನು ಪರಿಶೀಲಿಸಿಕೊಳ್ಳಿ. ಪರ್ಯಾಯವಾಗಿ ಆದಾಯ ತೆರಿಗೆಯ ಜಾಲತಾಣವಾದ www.incometaxindiaefiling.gov.in ಮೂಲಕ ಅಥವಾ ನಿಮ್ಮ ಬ್ಯಾಂಕುಗಳ ಇಂಟರ್ನೆಟ್‌ ಬ್ಯಾಂಕಿಂಗ್‌ ಮೂಲಕವೂ ಈ ತಾಣಕ್ಕೆ ಭೇಟಿ ನೀಡಿ 26ಎಎಸ್‌ ಅನ್ನು ನೋಡಬಹುದು. ನಿಮ್ಮ ಕರ ಲೆಕ್ಕ ಹಾಗೂ ರಿಟರ್ನ್ ಫೈಲಿಂಗ್‌ ಈ ಫಾರ್ಮ್ನೊಂದಿಗೆ ತಾಳೆಯಾಗಲೇ ಬೇಕು. ನಿಮ್ಮ ಟಿಡಿಎಸ್‌, ನೀವು ಕೊಟ್ಟ 15 ಜಿ/ಎಚ್‌ ವಿವರಗಳು ಹಾಗೂ ಇತರ ಎÇÉಾ ಆದಾಯಗಳ ಲಭ್ಯ ವಿವರಗಳೂ ಅಲ್ಲಿರುತ್ತವೆ.

ಎಚ್ಚೆತ್ತುಕೊಳ್ಳಿ
ಮಾರ್ಚ್‌ 31 ರ ಮೊದಲು ಪ್ರತಿಯೊಬ್ಬರೂ ತಮ್ಮ ಎಲ್ಲ ಕರಾರ್ಹ ಆದಾಯವನ್ನೂ ತೋರಿಸಿ ಕರ ಕಟ್ಟುವುದು ಒಳಿತು. ಫಾರ್ಮ್ 26ಎಎಸ್‌ನಲ್ಲಿ ನಮೂದಿತ ಎಲ್ಲ ಆದಾಯಗಳನ್ನು ಖಂಡಿತವಾಗಿಯೂ ತೋರಿಸಲೇ ಬೇಕು. ಇಲ್ಲವಾದಲ್ಲಿ ಇಲಾ ಖೆಯ ಕಂಪ್ಯೂಟರ್‌ ನೋಟೀಸು ಇಶ್ಯೂ ಮಾಡುವುದು ಶತಸ್ಸಿದ್ಧ. ಸುಖಾಸುಮ್ಮನೆ 15ಜಿ/ಎಚ್‌ ನೀಡಿದವರು ಆ ಬಾಬ್ತು ಸರಿಯಾದ ಕರ ಲೆಕ್ಕ ಹಾಕಿ ಈಗಲಾದರೂ ಕರ ಕಟ್ಟುವುದು ಒಳ್ಳೆಯದು. ಕೊನೆ ದಿನಾಂಕ ಕಳೆದರೆ ಬಡ್ಡಿ/ಪೆನಾಲ್ಟಿಗಳ ಭಾರ ಜಾಸ್ತಿಯಾದೀತು. ಕರ ಉಳಿತಾಯಕ್ಕೆ ಹೂಡಿಕೆಯ ಅಗತ್ಯವಿದ್ದರೆ ಅದನ್ನು ಮಾರ್ಚ್‌ 31 ರ ಬಳಿಕ ಮಾಡಲು ಬರುವುದೇ ಇಲ್ಲ.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

12(1

Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್

1-sn

Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.