ಶೀಘ್ರ ಬರಲಿದೆ ಎಸಿ ಹೆಲ್ಮೆಟ್
Team Udayavani, Feb 26, 2018, 9:05 AM IST
ಹೈದರಾಬಾದ್: ಸುಡು ಬಿಸಿಲಿನಲ್ಲಿ ಹೇಗಪ್ಪಾ ಈ ಹೆಲ್ಮೆಟ್ ಧರಿಸಿಕೊಂಡು ಹೋಗುವುದು ಎನ್ನುವ ವೇದನೆ ಬಹುತೇಕ ದ್ವಿಚಕ್ರವಾಹನ ಸವಾರರನ್ನು ಕಾಡಿರುತ್ತದೆ. “ಎಸಿ ಹೆಲ್ಮೇಟ್ ಇದ್ದಿದ್ದರೆ…’ ಎಂದು ರಾಗ ಎಳೆದಿರುತ್ತೇವೆ ಕೂಡ. ಆದರೆ ಇದು ಸತ್ಯವಾಗುವ ದಿನ ದೂರ ಉಳಿದಿಲ್ಲ. ಶೀಘ್ರ ದಲ್ಲಿಯೇ ಹವಾನಿಯಂತ್ರಿತ ಹೆಲ್ಮೆಟ್ಗಳೂ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.
ಇದಕ್ಕೆ ಪೂರಕ ಎನ್ನುವಂತೆ ಹೈದರಾಬಾದ್ನ ಸ್ಟಾರ್ಟ್ಅಪ್ ಇದನ್ನು ಸತ್ಯವಾಗಿ ಸಲು ಹೊರಟಿದೆ. 22 ವರ್ಷದ ಮೆಕ್ಯಾನಿ ಕಲ್ ಎಂಜಿನಿಯರ್ ವಿದ್ಯಾರ್ಥಿಗಳಾದ ಕೌಸ್ತುಬ್ ಕೌಂಡಿಲ್ಯ, ಶ್ರೀಕಾಂತ್ ಕೊಮ್ಮುಲಾ ಹಾಗೂ ಆನಂದ್ ಕುಮಾರ್ ಈ ದಾರಿಯಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದ್ದಾರೆ. 2016ರಲ್ಲಿ ಇಲ್ಲಿನ ಬಚುಪಲ್ಲಿ ವಿಎನ್ಆರ್ ವಿಜ್ಞಾನ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿರುವ ಈ ಮೂವರು ಟೆಕ್ಕಿಗಳು ಹವಾನಿಯಂತ್ರಿತ ಹೆಲ್ಮೆಟ್ ವಿನ್ಯಾಸಗೊಳಿಸಿ ಗಮನಸೆಳೆದಿದ್ದಾರೆ.
ಎಸಿ ಹೆಲ್ಮೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಸಂಸ್ಥೆಯ ಸಹ ಸಂಸ್ಥಾಪಕ ಕೌಸ್ತುಬ್ ಮತ್ತು ಸಿಇಒ ಜರ್ಶ್, “”ಹೆಲ್ಮೆಟ್ ಬೆಲೆ ಐದು ಸಾವಿರ ರೂ. ಆಗಿದ್ದು, ಇದರಲ್ಲಿ ಎರಡು ಗಂಟೆ ಎಸಿ ಚಾಲನೆಯಲ್ಲಿ ಇಡುವಂತಹ ಬ್ಯಾಟರಿ ಅಳವಡಿಸಿರಲಾಗುತ್ತದೆ. ಎಂಟು ಗಂಟೆ ಚಾಲನೆಯಲ್ಲಿ ಇಡಬಲ್ಲ ಬ್ಯಾಟರಿ ಅಳವಡಿಕೆಯ ಹೆಲ್ಮೆಟ್ ಬೆಲೆ 5,500 ರೂ. ಆಗಿರಲಿದೆ” ಎಂದು ತಿಳಿಸಿದ್ದಾರೆ.
ಇದೀಗ ಈ ತ್ರಿಮೂರ್ತಿಗಳ ಹೊಸ ಸಾಹಸಕ್ಕೆ ತೆಲಂಗಾಣ ಸರಕಾರ ನೆರವು ನೀಡಿದೆ. ಈಗಾಗಲೇ ಟಾಟಾ ಮೋಟಾರ್ ಹಾಗೂ ಇಂಡಿಯನ್ ನೇವಿ ಒಂದಿಷ್ಟು ಹೆಲ್ಮೆಟ್ಗಳನ್ನು ಖರೀದಿಸಿವೆ. 1000 ಹೆಲ್ಮೆಟ್ಗಳ ತಯಾರಿಕೆ ಗುರಿಯಲ್ಲಿರುವ ಈ ಸಂಸ್ಥೆ ಶೀಘ್ರದಲ್ಲಿಯೇ ಮಾರುಕಟ್ಟೆಗೂ ಬಿಡುವ ಸಿದ್ಧತೆಯಲ್ಲಿದೆ. ಸಂಸ್ಥೆಯೇ ಹೇಳಿಕೊಂಡಂತೆ ಮಾರ್ಚ್ ಅಂತ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.