ಕಂಪ್ಯೂಟರೀಕರಣಕೆ ಜಾನಪ¨
Team Udayavani, Feb 26, 2018, 11:01 AM IST
ಆಳಂದ: ಕರ್ನಾಟಕದ ಸಮಗ್ರ ಜಾನಪದವನ್ನು ಕಂಪ್ಯೂಟರೀಕರಣಗೊಳಿಸುವ ಯೋಜನೆ ಹೊಂದಲಾಗಿದೆ ಎಂದು ಜಾನಪದ ವಿಶ್ವವಿದ್ಯಾಲಯದ ನೂತನ ಕುಲಪತಿ ಪ್ರೊ| ಡಿ.ಬಿ. ನಾಯಕ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ದಕ್ಷಿಣ ಭಾರತದದ ಭಾಷೆಗಳ ಜಾನಪದ ಸಂಘಟನೆ ತಿರುವನಂತಪುರಂ ಮತ್ತು ಕೇಂದ್ರೀಯ ಭಾರತೀಯ ಭಾಷಾ ಸಂಸ್ಥೆ ಮೈಸೂರು ಜತೆಗೊಡಿ ಆಯೋಜಿಸಿದ್ದ ಜಾಗತಿಕ ಜಾನಪದ ಪ್ರಸ್ತುತ ಸಂಶೋಧನೆ ಕುರಿತ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಜಾನಪದ ಅಧ್ಯಯನವು ವಿಸ್ತಾರವಾಗಿ ಬೆಳೆಯಬೇಕಾಗಿದೆ. ಜಾಗತೀಕರಣ, ತಂತ್ರಜ್ಞಾನ, ಕಂಪ್ಯೂಟರೀಕರಣ ಮತ್ತು ಆಧುನಿಕ ವಿಜ್ಞಾನಗಳ ಬೆಳವಣಿಗೆಯನ್ನು ತನ್ನೊಳಗೆ ಅರಗಿಸಿಕೊಳ್ಳಬೇಕಾಗಿದೆ. ಹಾಗಾದಾಗ ಮಾತ್ರ ಜಾನಪದ ಅಧ್ಯಯನಕ್ಕೆ ಉಜ್ವಲ ಭವಿಷ್ಯವಿದೆ ಎಂದು ಹೇಳಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಏಷ್ಯಾದ ಮೊದಲ ಜಾನಪದ ವಿಶ್ವವಿದ್ಯಾಲಯವಾಗಿದೆ. ಅದರ ಎದುರು ಹಲವಾರು ಸವಾಲುಗಳಿವೆ. ಇವುಗಳನ್ನು ಎದುರಿಸಲು ಕನ್ನಡ ಮತ್ತು ಇತರ ಭಾಷೆಗಳ ಜಾನಪದ ವಿದ್ವಾಂಸರು ಶ್ರಮಿಸಬೇಕಾಗಿದೆ. ಕರ್ನಾಟಕದ ಸಮಗ್ರ ಜಾನಪದವನ್ನು ಕಂಪ್ಯೂಟರೀಕರಣಗೊಳಿಸುವ ಯೋಜನೆಯನ್ನು ಜಾನಪದ ವಿಶ್ವವಿದ್ಯಾಲಯ ಹಾಕಿಕೊಂಡಿದೆ.
ಜತೆಗೆ ಭಾರತೀಯ ಜಾನಪದಗಳ ಅಧ್ಯಯನಕ್ಕೂ ನೆಲೆ ಕಲ್ಪಿಸುವ ಉದ್ದೇಶ ಜಾನಪದ ವಿಶ್ವವಿದ್ಯಾಲಯದ್ದಾಗಿದೆ. ಸಂಪ್ರದಾಯ ಹಾಗೂ ಆಧುನಿಕತೆಯನ್ನು ಆರೋಗ್ಯಕರವಾಗಿ ಬೆಸೆಯುವ ಗುರಿ ವಿಶ್ವವಿದ್ಯಾಲಯದ ಮುಂದಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್.ಎಂ. ಮಹೇಶ್ವರಯ್ಯ ಮಾತನಾಡಿ, ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ಜಾನಪದವನ್ನು ವಿದೇಶಿ ವಿದ್ವಾಂಸರಿಗೆ ಪರಿಚಯಿಸುವ ಮತ್ತು ಹೊಸ ಅಧ್ಯಯನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಈ ಒಂದು ಸಮ್ಮೇಳನ ಆಯೋಜಿಸಲಾಗಿದೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜಾನಪದ ಸಮಾವೇಶಗಳು ಅದರ ಅಧ್ಯಯನಕ್ಕೆ ಹೊಸ ಬಾಗಿಲುಗಳನ್ನು ತೆರೆಯುತ್ತವೆ. ಹಳೆ ಮತ್ತು ಹೊಸ ವಿದ್ವಾಂಸರು ಒಂದೆಡೆ ಸೇರಿ ಪರಸ್ಪರ ಚರ್ಚಿಸಿ ಮುಂದುವರೆಯುವುದು ಯಾವುದೇ ಅಧ್ಯಯನ ಕ್ಷೇತ್ರಕ್ಕೆ ಅಗತ್ಯವಾಗಿದೆ ಎಂದು ಹೇಳಿದರು. ಪ್ರೊ| ಸರಸ್ವತಿ ವೇಣುಗೋಪಾಲ, ಪ್ರೊ| ಕೈಲಾಸ ಪಟ್ನಾಯಕ್, ಪ್ರೊ| ಭಕ್ತವತ್ಸಲರೆಡ್ಡಿ, ಡಾ| ನಸೀಮುದ್ಧೀನ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.