ನಟಿ ಶ್ರೀದೇವಿ ಪಾರ್ಥಿವ ಶರೀರ ಇಂದು ದುಬೈನಿಂದ ಮುಂಬಯಿಗೆ
Team Udayavani, Feb 26, 2018, 11:02 AM IST
ಮುಂಬಯಿ : ನಾಲ್ಕು ದಶಕಗಳ ಚಿತ್ರರಂಗದಲ್ಲಿ ಮಿಂಚಿ ಮೊನ್ನೆ ಶನಿವಾರ ತನ್ನ 54ರ ಹರೆಯದಲ್ಲಿ ನಿಧನ ಹೊಂದಿದ ಹಿಂದಿ ಚಿತ್ರರಂಗದ ಮತ್ತು ಲಕ್ಷಾಂತರ ಅಭಿಮಾನಿಗಳ ಕಣ್ಮಣಿ, ಚಾಂದಿನಿ, ನಟಿ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಇಂದು ಸೋಮವಾರ ದುಬೈನಿಂದ ಮುಂಬಯಿಗೆ ವಿಮಾನದಲ್ಲಿ ತರಲಾಗುವದು ಎಂದು ಆಕೆಯ ಶೋಕತಪ್ತ ಕುಟುಂಬ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಶ್ರೀದೇವಿಯ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಆಕೆಯ ಅಂತಿಮ ದರ್ಶನ ಪಡೆಯಲು ಆಕೆಯ ನಿವಾಸದತ್ತ ಧಾವಿಸುತ್ತಿರುವ ದೃಶ್ಯ ಇಂದು ಮುಂಬಯಿಯಲ್ಲಿ ಕಂಡುಬಂತು.
ನಟ, ನಿರ್ಮಾಪಕ ಬೋನಿ ಕಪೂರ್ ಅವರ ಪತ್ನಿಯಾಗಿರುವ 54ರ ಹರೆಯದ ನಟಿ ಶ್ರೀದೇವಿ ಅವರು ಕಳೆದ ಶನಿವಾರ ದುಬೈನಲ್ಲಿ ಹೃತಿðಯೆ ನಿಂತು ನಿಧನ ಹೊಂದಿದ್ದರು. ತನ್ನ ಸೋದರ ಸಂಬಂಧಿ ಮೋಹಿತ್ ಮಾರ್ವಾ ಅವರ ವಿವಾಹಕ್ಕೆಂದು ಶ್ರೀದೇವಿ ತನ್ನ ಕುಟುಂಬದವರೊಂದಿಗೆ ದುಬೈಗೆ ಬಂದಿದ್ದರು.
ಅತ್ಯಂತ ಆಕಸ್ಮಿಕವಾಗಿ ನಿಧನ ಹೊಂದುವ ಸ್ವಲ್ಪ ಹೊತ್ತಿಗೆ ಮೊದಲು ನಟಿ ಶ್ರೀದೇವಿ ಮತ್ತು ಪತಿ ಬೋನಿ ಕಪೂರ್ ಅವರು ಡಿನ್ನರ್‌ಗಾಗಿ ಹೊರಗೆ ಹೋಗಲು ದಿನಾಂಕವನ್ನು ಯೋಜಿಸುತ್ತಿದ್ದರು. ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ ಬಳಿಕ ಶ್ರೀದೇವಿ ವಾಶ್‌ರೂಮಿಗೆ ಹೋಗಿದ್ದರು.
15 ನಿಮಿಷವಾದರೂ ಆಕೆ ಹೊರಬಾರದಿದ್ದಾಗ ಬೋನಿ ಕಪೂರ್ ಬಾಗಿಲು ಬಡಿದರು. ಆಗಲೂ ಒಳಗಿನಿಂದ ಉತ್ತರ ಬಾರದಿದ್ದಾಗ ಅವರು ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಬಾತ್ ಟಬ್‌ನಲ್ಲೇ ಶ್ರೀದೇವಿ ಕುಸಿದು ಬಿದ್ದಿರುವುದನ್ನು ಕಂಡರು. ಆಕೆಯನ್ನು ಎಬ್ಬಿಸಲು ಪ್ರಯತ್ನಿಸಿದರು.
ಆದರೆ ಆಕೆ ನಿಷ್ಕ್ರಿಯಳಾಗಿರುವುದನ್ನು ಕಂಡು ತಮ್ಮ ಸ್ನೇಹಿತನನ್ನು ಕರೆಸಿಕೊಂಡರು. ಸಾವು ಸಂಭವಿಸಿರುವ ಶಂಕೆಯಲ್ಲಿ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
ನಟಿ ಶ್ರೀದೇವಿಯ ನಿಧನಕ್ಕೆ ಬಾಲಿವುಡ್ ಮಾತ್ರವಲ್ಲದೆ ಇತರ ಚಿತ್ರರಂಗಗಳ ಅನೇಕ ತೀವ್ರ ಶೋಕ, ಆಘಾತ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
Mumbai: ಬಾಲಿವುಡ್ ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವಕೀಲ ಛತ್ತೀಸ್ ಗಢದಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.