ಅರೆಬರೆ ಅನುಷ್ಠಾನ ಆರು ವರ್ಷದ ಕತೆ
Team Udayavani, Feb 26, 2018, 12:03 PM IST
ಬೆಂಗಳೂರು: ಬಿಬಿಎಂಪಿಯಲ್ಲಿ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಮೊತ್ತದ ಬಜೆಟ್ ಮಂಡನೆಯಾಗುತ್ತದೆ. ಆದರೆ, ಬಜೆಟ್‌ನ ಅರ್ಧದಷ್ಟು ಕಾರ್ಯಕ್ರಮಗಳೂ ಅನುಷ್ಠಾನವಾಗದಿರುವುದು ಕಳೆದ ಆರು ವರ್ಷಗಳ ಅಂಕಿ-ಅಂಶಗಳಿಂದ ಸಾಬೀತಾಗಿದೆ.
ಪಾಲಿಕೆಯ ಬಜೆಟ್ ಗಾತ್ರ ಹಿಗ್ಗುತ್ತಿದ್ದರೂ ಅನುಷ್ಠಾನ ಮಾತ್ರ ಇಳಿಮುಖವಾಗುತ್ತಿರುವ, ಇಲ್ಲವೇ ಸ್ಥಿರವಾಗಿರುವುದು ಸ್ಪಷ್ಟವಾಗಿದೆ. 2011-12ನೇ ಸಾಲಿನಲ್ಲಿ ಶೇ. 37ರಷ್ಟಿದ್ದ ಬಜೆಟ್ ಅನುಷ್ಠಾನ ಪ್ರಮಾಣ, ಪ್ರಸಕ್ತ ಸಾಲಿನಲ್ಲಿ (ಮಾರ್ಚ್ 31ಕ್ಕೆ 2017-18ನೇ ಸಾಲಿನ ಹಣಕಾಸು ವರ್ಷದ ಅವಧಿ ಮುಗಿಯಲಿದೆ) ಶೇ. 60ಕ್ಕೆ ಏರಿಕೆಯಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರೆ.
ಆದರೆ ಆಡಳಿತಾಧಿಕಾರಿಗಳ ಅವಧಿ ಇದ್ದ ಆರು ತಿಂಗಳಲ್ಲ ಅವಧಿಯಲ್ಲಿ ಮಾತ್ರ ಬಜೆಟ್ ಅಂಶಗಳ ಅನುಷ್ಠಾನ ಪ್ರಮಾಣ ಶೇ.87.36ರಷ್ಟಿದೆ. ನಂತರದ ಅನುಷ್ಠಾನ ಪ್ರಮಾಣ ಶೇ.60ಕ್ಕೆ ಕಳೆಗೆ ಕುಸಿದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬಿಬಿಎಂಪಿ ಅಧಿಕಾರಿಗಳು ಜಾಹೀರಾತು, ಮಾರುಕಟ್ಟೆ, ಆಪ್ಟಿಕಲ್ ಫೈಬರ್ ಕೇಬಲ್,
ವಾಣಿಜ್ಯ ಪರವಾನಗಿ ಹೀಗೆ ಹತ್ತಾರು ಪಾಲಿಕೆಯ ಆದಾಯದ ಮೂಲಗಳಿಂದ ಸಮಪರ್ಕವಾಗಿ ಆದಾಯ ತರುವಲ್ಲಿ ವಿಫಲವಾಗಿದ್ದಾರೆ.
ಆದರೆ, ಆಸ್ತಿ ತೆರಿಗೆ ಸಂಗ್ರಹ, ರಹಸ್ಯ ಖಾತೆಗಳನ್ನ ರದ್ದುಪಡಿಸಿ ಹಣ ಹಿಂಪಡೆದಿದ್ದು, ಪಾಲಿಕೆಯ ಬ್ಯಾಂಕ್ ಖಾತೆಗಳನ್ನು ಚಾಲ್ತಿಯಿಂದ ಉಳಿತಾಯ ಖಾತೆಗಳಾಗಿ ಪರಿವರ್ತಿಸುವಂತಹ ಕ್ರಮಗಳ ಮೂಲಕ ಪಾಲಿಕೆಯ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದಾರೆ.
ಸುಧಾರಿಸಿದ ಆರ್ಥಿಕ ಪರಿಸ್ಥಿತಿ: ಕಳೆದ ಆರು ವರ್ಷಗಳಿಗೆ ಹೋಲಿಕೆ ಮಾಡಿಕೊಂಡರೆ ಪ್ರಸಕ್ತ ಸಾಲಿನಲ್ಲಿ ಪಾಲಿಕೆಯ ಆರ್ಥಿಕ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದೆ. ಅದರಂತೆ ಪ್ರಸಕ್ತ ಸಾಲಿನಲ್ಲಿ ದಾಖಲೆಯ 3,300 ಕೋಟಿ ರೂ. ಬಿಬಿಎಂಪಿ ರಸೀದಿಗಳು ಹಾಗೂ ಸ್ವಂತ ಆದಾಯದಿಂದ ಸಂಗ್ರಹವಾಗಿದೆ.
ಜತೆಗೆ ಹುಡ್ಕೊà ಬ್ಯಾಂಕ್‌ನಿಂದ ಪಡೆದಿದ್ದ ಸಾಲದ ಪೈಕಿ 465 ಕೋಟಿ ರೂ. ಮರುಪಾವತಿಸಿದ್ದು, ಯಾವುದೇ ರೀತಿಯ ಹೊಸ ಸಾಲಕ್ಕೆ ಮುಂದಾಗಿಲ್ಲ. ಜತೆಗೆ ಬ್ಯಾಂಕ್ ಖಾತೆಗಳನ್ನು ಉಳಿತಾಯ ಖಾತೆಗಳಾಗಿ ಪರಿವರ್ತಿಸಿದರಿಂದ ಪಾಲಿಕೆಗೆ 104 ಕೋಟಿ ರೂ. ಬಡ್ಡಿ ರೂಪದಲ್ಲಿ ಸಂಗ್ರಹವಾಗಿದೆ.
2017-18ರ ಬಜೆಟ್‌ನಲ್ಲಿ ಆದಾಯ ನಿರೀಕ್ಷೆ (ಕೋಟಿ ರೂ.)
-ಆಸ್ತಿ ತೆರಿಗೆ-ಇತರೆ 4199.82
-ಒಎಫ್ಸಿ ಕೇಬಲ್ 350
-ನಗರ ಯೋಜನೆ 461.85
-ಜಾಹೀರಾತು 82.50
-ಘನತ್ಯಾಜ್ಯ ನಿರ್ವಹಣೆ ಕರ 50
-ಕೇಂದ್ರ, ರಾಜ್ಯ ಸರ್ಕಾರದ ಅನುದಾನ 3891.36
ಬಿಬಿಎಂಪಿ ಬಜೆಟ್‌ಗಳ ಅನುಷ್ಠಾನ ವಿವರ
ವರ್ಷ ಬಜೆಟ್ ಗಾತ್ರ ಅನುಷ್ಠಾನ ಶೇಕಡಾವಾರು
-2011-12 9380 3546 37.80
-2012-13 9937 4198 37.65
-2013 -14 8520 4431 42.24
-2014- 15 6500 3402 52.33
-2015- 16 5729 5005 87.36
-2016- 17 9,353 5,611 58
-2017-18 9,816 – 60 (ಅಂದಾಜು)
ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಆಡಳಿತ ಬಿಗಿಯಿಲ್ಲದ ಕಾರಣದಿಂದ ಪ್ರಸಕ್ತ ಸಾಲಿನ ಬಜೆಟ್ ಸಮಪರ್ಕವಾಗಿ ಅನುಷ್ಠಾನಗೊಂಡಿಲ್ಲ. ಬಜೆಟ್‌ನಲ್ಲಿ ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಆದರೆ, ಈವರೆಗೆ ಅವುಗಳನ್ನು ಅನುಷ್ಠಾನಗೊಳಿಸಲು ಮುಂದಾಗದಿರುವುದು ಅವರಿಗೆ ಮಾಡಿದ ವಂಚನೆಯಾಗಿದೆ. ಇದೀಗ ಸರ್ಕಾರದಿಂದ ಅನುದಾನ ನೀಡದಿದ್ದರೂ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ.
-ಪದ್ಮನಾಭರೆಡ್ಡಿ, ವಿಪಕ್ಷ ನಾಯಕ ಬಿಬಿಎಂಪಿ
* ವೆಂ.ಸುನೀಲ್ ಕುಮಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.