ಬಜೆಟ್‌ ಮುಗೀತು, ನಮಗೇನು ಲಾಭ?


Team Udayavani, Feb 26, 2018, 4:05 PM IST

budget.jpg

ಬಜೆಟ್‌ ಎಂದರೆ ಕೇವಲ ಕರ ಭಾರ ಮಾತ್ರವಲ್ಲ. ನಮ್ಮಲ್ಲಿ ಬಹಳಷ್ಟು ಜನರು ಆದಾಯ ಕರದಲ್ಲಿ ಮತ್ತು ಇತರ ಕರಗಳಲ್ಲಿ ಯಾವ ರೀತಿಯ ಹೆಚ್ಚಳ ಉಂಟಾಗಿದೆ ಎನ್ನುವುದರ ಬಗ್ಗೆ ಮಾತ್ರ ಗಮನ ಹರಿಸುತ್ತಾರೆ. ಒಂದು ಬಜೆಟ… ಒಟ್ಟು ಆರ್ಥಿಕತೆಯಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದರತ್ತ ಗಮನ ಹರಿಸುವುದಿಲ್ಲ.  

ಸ್ಥೂಲವಾಗಿ ಈ ವರ್ಷದ ಬಜೆಟ್ಟಿನಿಂದ ಯಾವ ರೀತಿಯ ದೀರ್ಘ‌ಕಾಲಿಕ ಪರಿಣಾಮಗಳನ್ನು ನಿರೀಕ್ಷಿಸಬಹುದು? ಬಜೆಟ್ಟಿನ ಅಲೆ ಇಳಿದ ಮೇಲೂ ಕಂಡು ಬರುವ ಮುಖ್ಯ ಅಂಶಗಳು ಯಾವುವು? ಈ ನಿಟ್ಟಿನಲ್ಲಿ ಬಜೆಟ… 2018 ರನ್ನು ಸೂಕ್ಷ$ವಾಗಿ ಅವಲೋಕಿಸಿದಾಗ ಈ ಕೆಳಗಿನ 5 ಪ್ರಮುಖ ಅಂಶಗಳು ಗೋಚರಿಸುತ್ತವೆ. ಮುಖ್ಯವಾಗುತ್ತವೆ.

1.ವಿತ್ತೀಯ ಕೊರತೆ:
ಈ ವರ್ಷದ ಬಜೆಟ್ಟಿನಲ್ಲಿ ವಿತ್ತೀಯ ಕೊರತೆ ಹೆಚ್ಚಳವಾಗಿದೆ. ಒಂದು ಬಜೆಟ್ಟಿನಲ್ಲಿ ವ್ಯಯವು ಆದಾಯಕ್ಕಿಂತ ಜಾಸ್ತಿಯಿದ್ದರೆ ದುಡ್ಡಿನ ಕೊರತೆ ಉಂಟಾಗುತ್ತದೆ. ವ್ಯಯದ ಪಟ್ಟಿಯಲ್ಲಿರುವ ವಿಚಾರಗಳಿಗೆ ದುಡ್ಡು ಹೊಂದಿಸುವುದು ಕಷ್ಟವಾಗುತ್ತದೆ. ಈ ಕೊರತೆಯನ್ನು ವಿತ್ತೀಯ ಕೊರತೆ ಅಥವಾ ಫಿಸ್ಕಲ… ಡೆಫಿಸಿಟ… ಎನ್ನುತ್ತಾರೆ.  2018 ರ ಬಜೆಟ್‌ನಲ್ಲಿ ಇದು ಜಿಡಿಪಿಯ ಶೇ.3.3ರಷ್ಟು ಆಗಿರುತ್ತದೆ. ರುಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಅದು ರೂ 6.24 ಲಕ್ಷ$ ಕೋಟಿ. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಎಂದು ಹಲವರು ಹೇಳುತ್ತಾರೆ. ಕೈನ್ಸ… ಶಾಸ್ತ್ರದ ಪ್ರಕಾರ ಸಾಲ ಮಾಡಿಯಾದರೂ ಸರಕಾರ ವ್ಯಯ ಮಾಡಿದರೆ ಅದು ದೇಶದಲ್ಲಿ ದುಡ್ಡಿನ ಹರಿವಿಗೆ ಕಾರಣವಾಗಿ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುತ್ತದೆ.

ವಿತ್ತೀಯ ಕೊರತೆ ತಕ್ಕ ಮಟ್ಟಿಗೆ ಒಳ್ಳೆಯದೇ. ಆದರೆ, ಯಾವುದೇ ಕಡಿವಾಣವಿಲ್ಲದೆ ವಿತ್ತೀಯ ಕೊರತೆಯನ್ನು ಹೆಚ್ಚಿಸುತ್ತಾ ಹೋಗುವುದು ಒಳ್ಳೆಯದಲ್ಲ. ಯಾಕೆಂದರೆ, ಒಂದು ಸರಕಾರವು ತನ್ನ ವಿತ್ತೀಯ ಕೊರತೆಯನ್ನು ಸಾಲದ ಮುಖಾಂತರ ತುಂಬಿಸಿಕೊಳ್ಳುತ್ತದೆ. ಸರಕಾರ ಸಾಲ ಮಾಡಿದರೆ ಸದ್ಯದ ಖರ್ಚನ್ನು ಹೇಗೋ ನಿಭಾಯಿಸಬಹುದು ಆದರೆ ಅಂತಹ ಸಾಲದ ಮೇಲೆ ಬಡ್ಡಿ ತೆರಬೇಕಾಗುತ್ತದೆ. ಈ ಬಡ್ಡಿಯ ಭಾಗವೇ ಸರಕಾರದ ಮೇಲೆ ಒಂದು ದೊಡ್ಡ  ಹೊರೆ. ಭಾರತ ಸರಕಾರದ ಒಟ್ಟು ಸಾಲದ ಮೊತ್ತ

130 ಲಕ್ಷ$ ಕೋಟಿ ಮಟ್ಟದಲ್ಲಿದೆ ಹಾಗೂ ಅದು ನಮ್ಮ ಒಟ್ಟು ಆದಾಯದ (ಜಿಡಿಪಿ) ಶೇ.70ರಷ್ಟು ಎಂದು ಅಂದಾಜಿಸಲಾಗಿದೆ. ಇದು ದೇಶಕ್ಕೆ ಒಂದು ದೊಡ್ಡ ಹೊರೆ. 2022-23 ಆಗುವಲ್ಲಿ ಇದನ್ನು 60% ಮಟ್ಟಕ್ಕೆ ಇಳಿಸಬೇಕೆಂಬುದು ಸರಕಾರದ ಇಚ್ಛೆ.  ಆದರೆ ಹಲವಾರು ವರ್ಷಗಳಿಂದ ಇಂತಹ ಇಚ್ಛೆಗಳು ಕೈಗೂಡುತ್ತಿಲ್ಲ. ಸರಕಾರದ ಹಲವಾರು ಯೋಜನೆಗಳಿಗೆ ಅನಿವಾರ್ಯವಾಗಿ ಸಾಲ ಮಾಡಬೇಕಾಗಿ ಬರುತ್ತಿದೆ.

ಈ ವರ್ಷದ ಬಜೆಟ… ಪ್ರಕಾರ ಸರಕಾರವು ತನ್ನ ವಾರ್ಷಿಕ ಆದಾಯದ ಸುಮಾರು ಶೇ.18ರಷ್ಟನ್ನು ಕೇವಲ ಹಿಂದಿನ ಸಾಲದ ಬಡ್ಡಿ ತುಂಬುವುದಕ್ಕೆ ಮಾತ್ರವೇ ವ್ಯಯಿಸುತ್ತದೆ. ಅಂದರೆ ಸರಕಾರದ ರೂ 100 ಆದಾಯದಲ್ಲಿ ರೂ 18 ಕೇವಲ ಬಡ್ಡಿ ಪಾವತಿಯತ್ತ ಹೋಗುತ್ತದೆ. ಹಾಗಾದರೆ ಮುಖ್ಯ ಖರ್ಚಿಗೆ ಉಳಿದದ್ದೇನು ಬಂತು? ಇದು ಅಪಾಯಕಾರಿ. ಆ ಕಾರಣಕ್ಕೆ ವಿತ್ತೀಯ ಕೊರತೆಯನ್ನು ಮಿತವಾಗಿ ಬಳಸಬೇಕು. ಹಾಸಿಗೆ ಇದ್ದುದರಿಂದ ಒಂಚೂರು ಜಾಸ್ತಿ ಮಾತ್ರ ಕಾಲು ಚಾಚಿದರೆ ಸಾಕು. ಮಿತಿ ಮೀರಿ ಕಾಲು ಚಾಚಿ ಮಲಗಬಾರದು.

ಎರಡನೆಯದಾಗಿ, ಒಂದು ಸರಕಾರವು ಅಷ್ಟು ದೊಡ್ಡ ಪ್ರಮಾಣದಲ್ಲಿ ಸಾಲ ತೆಗೆಯಲು ಮಾರುಕಟ್ಟೆಗೆ ಇಳಿದರೆ ಅದರ ಪರಿಣಾಮ ಏನಾಗುತ್ತದೆ ಎನ್ನುವುದನ್ನು ನಾವು ಊಹಿಸಬೇಕು. ರೂ 6.25 ಲಕ್ಷ$ ಕೋಟಿ ಒಂದು ಅಸಾಮಾನ್ಯ ಗಾತ್ರದ ಸಾಲ. ಅಷ್ಟು ಮೊತ್ತ ಬೇಕೆಂದು ಹೊರಟರೆ ಮಾರುಕಟ್ಟೆಯಲ್ಲಿ ಬಡ್ಡಿ ದರ ಏರುತ್ತದೆ. ಇದು ಈ ಬಜೆಟ್ಟಿನ ಇನ್ನೊಂದು ಋಣಾತ್ಮಕ ಅಂಶ. ಏರಿದ ಬಡ್ಡಿದರದಿಂದ ಆರ್ಥಿಕತೆಯಲ್ಲಿ ಸಾಲದ ವೆಚ್ಚ ಏರುತ್ತದೆ. ಅದರಿಂದಾಗಿ ಸರಕುಗಳ ಬೆಲೆ ಏರಿ ಹಣದುಬ್ಬರಕ್ಕೆ ಕಾರಣವಾಗುತ್ತದೆ.  

ಮೂಲಭೂತ ಕ್ಷೇತ್ರ
ಸರಕಾರದ ಆದಾಯ ಒಂದೆಡೆಯಾದರೆ ಅದರ ಖರ್ಚು ಅಥವಾ ವ್ಯಯ ಇನ್ನೊಂದೆಡೆ. ಸರಕಾರದ ಖರ್ಚು ಕೂಡಾ ಬಜೆಟ್ಟಿನ ಒಂದು ಮುಖ್ಯವಾದ ಭಾಗ. ಸರಕಾರದ ಖರ್ಚಿನ ಫ‌ಲವಾಗಿ ಹಲವು ಕ್ಷೇತ್ರಗಳು ಅಭಿವೃದ್ಧಿ ಹೊಂದುತ್ತವೆ. ಮೂಲಭೂತ ಕ್ಷೇತ್ರ ಈ ಬಜೆಟ್ಟಿನ ಒಂದು ಮುಖ್ಯಾಂಶ.  ಹೆ¨ªಾರಿ ಬಂದರು, ರೈಲ್ವೆ, ವಿಮಾನ ಯಾನ, ಫ‌ುಡ್‌ ಪಾರ್ಕ್‌, ವಿದ್ಯುತ್‌,  ನೀರಾವರಿ ಇತ್ಯಾದಿ ಕ್ಷೇತ್ರಗಳಲ್ಲಿ ಹೂಡಿದ ದುಡ್ಡು ಆ ಕೂಡಲೇ ಪ್ರತಿಫ‌ಲ ಕೊಡುವುದಿಲ್ಲ. ನಿಧಾನವಾಗಿ ಪ್ರತಿಫ‌ಲ ಕೊಡುತ್ತದೆ. ಯಾವುದೇ ಕೈಗಾರಿಕೆಯ ಅಥವಾ ಕೃಷಿ ಕ್ಷೇತ್ರದ ಅಭಿವೃದ್ಧಿಗೂ ಮೂಲಭೂತ ಸೌಕರ್ಯ ಅನಿವಾರ್ಯ. ಸರಿಯಾದ ಇನಾøಸ್ಟ್ರಕ್ಚರ್‌ ಇದ್ದರೇನೇ ಅಭಿವೃದ್ಧಿಯ ಹಾದಿ ಸುಗಮವಾಗುತ್ತದೆ. ಈ ಬಾರಿ ಸರಕಾರ ಈ ಕ್ಷೇತ್ರದತ್ತ ಭಾರಿ ಒತ್ತು ನೀಡಿದೆ.  ಸರಿಯಾಗಿ ಈ ದುಡ್ಡು ವಿನಿಯೋಗ ಆದಲ್ಲಿ ಭವಿಷ್ಯದಲ್ಲಿ ಇದು ಫ‌ಲ ಕೊಡುವುದರಲ್ಲಿ ಸಂಶಯವಿಲ್ಲ. ಯಾವುದೇ ಬಜೆಟ್ಟಿನಲ್ಲಿ ದುಡ್ಡು ವಿನಿಯೋಗದ ಬಗ್ಗೆ ಪ್ರಸ್ತಾಪ ಮಾಡುವುದು ಸುಲಭ. ಆದರೆ ಅದು ನಿಜವಾಗಿಯೂ ಅಂತಿಮ ಗುರಿಯನ್ನು ತಲುಪುತ್ತದೆಯೇ ಎನ್ನುವುದು ಮುಖ್ಯ. ಅದರಲ್ಲೂ ಮೂಲಭೂತ ಕ್ಷೇತ್ರದಲ್ಲಿ ಸರಿಯಾಗಿ  ದುಡ್ಡು ವಿನಿಯೋಗ ಆಗುವುದನ್ನು ಬಹಳಷ್ಟು ಜನರು ಸಂಶಯದಿಂದ ನೋಡುತ್ತಾರೆ. ಉದ್ಧೇಶ ಒಳ್ಳೆಯದಿದ್ದು ಈ ದುಡ್ಡು ಸರಿಯಾಗಿ ವಿನಿಯೋಗವಾದರೆ ಈ ಬಜೆಟ್ಟಿನಲ್ಲಿ ಇದೊಂದು ಉತ್ತಮ ಅಂಶ.

ಕೃಷಿ
ಈ ಕ್ಷೇತ್ರದಲ್ಲಿ ಒಂದು ಅತಿ ಮುಖ್ಯವಾದ ವಿಚಾರವನ್ನು ಈ ಬಜೆಟ್ಟಿನಲ್ಲಿ ಪ್ರಸ್ತಾಪಿಸಲಾಗಿದೆ. ಅದು ಏನೆಂದರೆ ಕನಿಷ್ಠ ಬೆಂಬಲ ಬೆಲೆ ಅಥವಾ ಮಿನಿಮಮ… ಸಪೋರ್ಟ್‌ ಪ್ರೈಸ್‌. ಇತರ ಹಲವಾರು ಅಂಶಗಳ ಮಧ್ಯೆ ಇದು ಎದ್ದು ಕಾಣುತ್ತದೆ. ಒಂದು ಬೆಳೆಯ ವೆಚ್ಚದ ಕನಿಷ್ಠ ಒಂದೂವರೆ ಪಾಲು ಬೆಂಬಲ ಬೆಲೆಯನ್ನು ಸರಕಾರವು ನಿಗದಿ ಪಡಿಸುವ ಇರಾದೆಯನ್ನು ಈ ಬಜೆಟ್ಟಿನಲ್ಲಿ ಘೋಷಿಸಲಾಗಿದೆ.  ಇದೊಂದು ಉತ್ತಮ ಹೆಜ್ಜೆ ಎನ್ನುವುದರಲ್ಲಿ ಸಂಶಯವಿಲ್ಲ. ರೈತರಿಗೆ/ಕೃಷಿಕರಿಗೆ ಉತ್ತಮ ಬೆಂಬಲ ಬೆಲೆ ನಿಗಧಿಪಡಿಸಿದರೆ ಅವರ ಆದಾಯ ಹೆಚ್ಚೀತು.

ಆದರೆ ಇದರಲ್ಲಿ ಎರಡು ಪ್ರಮುಖ ಅಂಶಗಳಿವೆ. ಒಂದನೆಯದಾಗಿ ಹೆಚ್ಚುವರಿ ಬೆಂಬಲ ಬೆಲೆ ಗ್ರಾಹಕನಿಗೆ ದುಬಾರಿಯಾಗುತ್ತದೆ. ಕೃಷಿಕರಿಗೆ ಸಹಾಯವಾಗುವ ಈ ಕ್ರಮ ಗ್ರಾಹಕರಿಗೆ ಇಷ್ಟವಾಗಲಾರದು. ಆರ್ಥಿಕತೆಯಲ್ಲಿ ಆಹಾರ ಧಾನ್ಯಗಳ,  ಖಾದ್ಯ ವಸ್ತುಗಳ ಬೆಲೆಯೇರಿಕೆಗೆ ಕಾರಣವಾದೀತು. ಆದರೂ ಈ ಬಜೆಟ… ಅಂಶ ಒಂದು ಮಹತ್ತರವಾದ ಪಾತ್ರವನ್ನು ವಹಿಸಲಿದೆ.   

ಎರಡನೆಯದಾಗಿ ಈ ಬೆಂಬಲ ಬೆಲೆಯನ್ನು ಸರಕಾರ ಯಾವ ರೀತಿ ಲೆಕ್ಕ ಹಾಕುತ್ತದೆ ಎನ್ನುವುದು ಕೂಡಾ  ಮುಖ್ಯವಾಗುತ್ತದೆ. ಕೃಷಿಯ ವೆಚ್ಚವನ್ನು ಹೇಗೆ ಲೆಕ್ಕ ಹಾಕುತ್ತಾರೆ ಎನ್ನುವುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ.

ಆರೋಗ್ಯ ಕ್ಷೇತ್ರ
ಸರ್ವರಿಗೂ ಆರೋಗ್ಯ ಎಂಬ ಭೂಮಿಕೆಯ ಅಡಿಯಲ್ಲಿ ಯೂನಿವರ್ಸಲ… ಹೆಲ್ತ… ಪಾಲಿಸಿಯನ್ನು ಈ ಬಜೆಟ… ಹೊರತರಲು ಯೋಚಿಸುತ್ತಿದೆ. ದೇಶದ ಸುಮಾರು 50 ಕೋಟಿ ಜನರನ್ನು ಇದರಡಿಗೆ ತರುವ ಇರಾದೆ ಇದೆ. ವಾರ್ಷಿಕ ರೂ 5 ಲಕ್ಷ$ದ ಆರೊಗ್ಯ ವಿಮೆಯನ್ನು ಈ ಪಾಲಿಸಿ ಒದಗಿಸುತ್ತದೆ. ಆಯುಷ್ಮಾನ್‌ ಭಾರತ ಯೋಜನೆಯಡಿ ಬರುವ ಈ ಯುನಿವರ್ಸಲ… ಹೆಲ್ತ… ಪಾಲಿಸಿ ಬಡ ಜನತೆಗೆ ಒಂದು ವರದಾನವೇ ಸರಿ. ಏರುತ್ತಿರುವ ಚಿಕಿತ್ಸೆಯ ವೆಚ್ಚಗಳನ್ನು ಹೊಂದಿಸಿಕೊಳ್ಳಲು ಬಡವರಿಂದ ಇಂತಹ ಯೋಜನೆಯ ಹೊರತಾಗಿ ಸಾಧ್ಯವಿಲ್ಲ. ಕಳೆದ ವರ್ಷ ಇಂತಹದ್ದೇ ಒಂದು ಯೋಜನೆಯ ಬಗ್ಗೆ ಮಾತನಾಡಿದ ಸರಕಾರಕ್ಕೆ ಅದನ್ನು ಅನುಷ್ಠಾನಕ್ಕೆ ತರಲಾಗಲಿಲ್ಲ.   ಈ ಬಾರಿಯಾದರೂ ಸರಿಯಾಗಿ ಅನುಷ್ಠಾನಕ್ಕೆ ತಂದಲ್ಲಿ ಇದೊಂದು ಅದ್ಭುತ ಯೋಜನೆ.

ಹಿರಿಯ ನಾಗರಿಕರಿಗೆ
ಹಿರಿಯ ನಾಗರಿಕರಿಗೆ ಈ ಬಜೆಟ್ಟಿನಲ್ಲಿ ಸಾಕಷ್ಟು ರಿಯಾಯಿತಿ ನೀಡಲಾಗಿದೆ. ಇಡೀ ಬಜೆಟ್ಟಿನ ಐದು ಪ್ರಮುಖ ನಿಗಾ ಕ್ಷೇತ್ರಗಳಲ್ಲಿ ಹಿರಿಯ ನಾಗರಿಕರ ರಿಯಾಯಿತಿ ಅತಿಮುಖ್ಯವಾದದ್ದು. ಅಷ್ಟೇ ಅಲ್ಲದೆ, ಇದೊಂದು ವಿಷಯ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಇದು ಆದಾಯ ಕರಕ್ಕೆ ಸಂಬಂಧ ಪಟ್ಟದ್ದು.

–  ಮೆಡಿಕಲ್ ಇನ್ಸೂರೆನ್ಸ್ (ಸೆಕ್ಷನ್ 80ಡಿ):
ಇದು ಆರೋಗ್ಯ ವಿಮೆಗೆ ನೀಡುವ ಪ್ರೀಮಿಯಂ ಮೇಲೆ ಸಿಗುವ ತೆರಿಗೆ ರಿಯಾಯಿತಿ. ಸ್ವಂತ ಹಾಗೂ ಕುಟುಂಬದವರ ವಿಮೆಯ ಮೇಲೆ ರೂ 25000 ಹಾಗೂ ಹೆತ್ತವರ ವಿಮೆಯ ಮೇಲೆ ಇನ್ನೊಂದು ರೂ 25000 ವರೆಗೆ ಕಟ್ಟಿದ ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿದೆ. 60 ದಾಟಿದ ಹಿರಿಯ ನಾಗರಿಕರಿಗೆ ಈ ಮಿತಿ ರೂ 30,000 ಆಗಿದೆ. ವಾರ್ಷಿಕ ಸ್ವಾಸ್ಥ್ಯ ತಪಾಸಣೆಗಾಗಿ ರೂ 5000 ದ ಒಳಮಿತಿಯನ್ನು ಇದು ಹೊಂದಿರುತ್ತದೆ. (80 ವರ್ಷ ದಾಟಿದ ಅತಿಹಿರಿಯ ನಾಗರಿಕರು ವಿಮಾ ಪ್ರೀಮಿಯಂ ಕಟ್ಟದೆ ಇದ್ದಲ್ಲಿ ಈ ಮಿತಿಯನ್ನು ಸಂಪೂರ್ಣವಾಗಿ ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿಸಬಹುದು) ಈ ಬಜೆಟ್ಟಿನಲ್ಲಿ  ಹಿರಿಯ ನಾಗರಿಕರ ಮಿತಿಯನ್ನು ವಾರ್ಷಿಕ ರೂ 30000 ದಿಂದ ರೂ 50000 ಕ್ಕೆ ಏರಿಸಲಾಗಿದೆ. ಕಟ್ಟಿದ ಪ್ರೀಮಿಯಂ ಒಂದಕ್ಕಿಂತ ಜಾಸ್ತಿ ವರ್ಷಗಳಿಗೆ ಅನ್ವಯಿಸುವುದಿದ್ದಲ್ಲಿ ಪ್ರತಿ ವರ್ಷಕ್ಕೆ ಪೋ› ರೇಟಾ ಪ್ರಕಾರ ಮಾತ್ರವೇ ಈ ಸೌಲಭ್ಯ ದೊರಕುತ್ತದೆ.  

ಗಂಭೀರ ಖಾಯಿಲೆಗಳ ಚಿಕಿತ್ಸೆ (ಸೆಕ್ಷನ್‌ 80ಡಿಡಿಬಿ):
ಸ್ವಂತ ಹಾಗೂ ಅವಲಂಭಿತರ ಕ್ಯಾನ್ಸರ್‌, ನ್ಯುರೋ, ಏಡ್ಸ್‌, ಥಲಸೇಮಿಯ, ರೀನಲ…, ಹೀಮೋಫಿಲಿಯಾ ಇತ್ಯಾದಿ ಕೆಲ ಗಂಭೀರ ಖಾಯಿಲೆಗಳ ಚಿಕಿತ್ಸೆಗಾಗಿ ಈ ಮಿತಿಯನ್ನು ಬಳಸಬಹುದು. 60 ದಾಟದ ಜನರಿಗೆ ಇದರ ಮೇಲಿನ ಮಿತಿ ರೂ 40000. ಆದರೆ, 60 ದಾಟಿದವರಿಗೆ ಈ ಮಿತಿ ರೂ 60000 ಹಾಗೂ 80 ದಾಟಿದವರಿಗೆ ಇದು ರೂ 80000. ಈ ಬಜೆಟ್ಟಿನಲ್ಲಿ 60 ದಾಟಿದ ಎÇÉಾ ನಾಗರಿಕರಿಕರಿಗೆ ಈ ಮಿತಿಯನ್ನು ರೂ 100000 ಲಕ್ಷ$ಕ್ಕೆ ಏರಿಸಲಾಗಿದೆ.   

–   ಎಫ್ಡಿ/ಆರ್ಡಿ ಬಡ್ಡಿಗೆ ಕರವಿನಾಯಿತಿ:
 ಹಲವು ವರ್ಷಗಳಿಂದ ನಿವೃತ್ತ ಹಿರಿಯ ನಾಗರಿಕರ ಬೇಡಿಕೆ ಇದಾಗಿತ್ತು. ಇಳಿ ವಯಸ್ಸಿನಲ್ಲಿ ಹೆಚ್ಚಿನವರು ಹೂಡಿಕೆಗೆ ಎಫ್.ಡಿಗಳನ್ನು ಮಾತ್ರವೇ ನಂಬಿರುತ್ತಾರೆ, ಹೆಚ್ಚು ರಿಸ್ಕ್ ತೆಗೆದುಕೊಳ್ಳಲಿಕ್ಕೆ ಹೋಗುವುದಿಲ್ಲ. ಆದರೆ ಎಪ….ಡಿ ಮೇಲಿನ ಬಡ್ಡಿಯ ಪ್ರತಿ ಪೈಸೆಯೂ ಕರಾರ್ಹವಾಗಿತ್ತು – ಯಾವುದೇ ರಿಯಾಯಿತಿ ಇಲ್ಲದೆ. ಸೆಕ್ಷ$ನ… 80ಖಖಅ ಅನುಸಾರ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ಕೇವಲ ಎಸಿº ಖಾತೆಯಲ್ಲಿ ಬರುವ ಬಡ್ಡಿಗೆ ರೂ 10,000 ದ ವರೆಗೆ ಬಡ್ಡಿಯ ಮೊತ್ತದಲ್ಲಿ ಕರ ವಿನಾಯಿತಿ ಇದೆ. ಆದರೆ ಈ ಬಜೆಟ್ಟಿನಲಿ ಕೇವಲ ಹಿರಿಯ ನಾಗರಿಕರಿಗೆ ಮಾತ್ರವೇ (ಎಲ್ಲರಿಗೂ ಅಲ್ಲ) ಅನ್ವಯಿಸುವಂತೆ ಒಂದು ಹೊಸ ಸೆಕ್ಷ$ನ… 80ರ  ಅನುಸಾರ ರೂ 50,000 ದವರೆಗೆ ಬ್ಯಾಂಕ್‌ ಬಡ್ಡಿಯ ಮೇಲೆ ಕರ ವಿನಾಯಿತಿ ನೀಡಲಾಗಿದೆ. ಹಿರಿಯ ನಾಗರಿಕರಿಗೆ ಇನ್ನು ಮುಂದೆ 80ಖಖಅ ಅನ್ವಯವಾಗುವುದಿಲ್ಲ. ಈ ರೂ 50000 ದಲ್ಲಿ ಎಸ….ಬಿ ಬಡ್ಡಿಯ ಜೊತೆಗೆ ಎಫಿx ಮತ್ತು ಆರ್‌.ಡಿಗಳ ಬಡ್ಡಿಯನ್ನೂ ಇದೀಗ ಸೇರಿಸಬಹುದಾಗಿದೆ.  ಅಲ್ಲದೆ, ಈ ತರಗತಿಯ ಬಡ್ಡಿ ಆದಾಯದ ಮೇಲೆ ರೂ 50000 ವರೆಗೆ ಟಿಡಿಎಸ್‌ ಕಡಿತವೂ ಇರುವುದಿಲ್ಲ. ಇದರೊಂದಿಗೆ ಹಿರಿಯ ನಾಗರಿಕರ ಬಹುದಿನದ ಹಂಬಲ ಕೊಂಚ ಮಟ್ಟಿಗಾದರೂ ನಿವಾರಣೆಯಾಯಿತು ಅಂದುಕೊಳ್ಳಬಹುದು.

–    ಪ್ರಧಾನ ಮಂತ್ರಿ ವಯ ವಂದನ ಯೋಜನೆ
ಹಿರಿಯ ನಾಗರಿಕರಿಗಾಗಿ ಹಿಂದೊಮ್ಮೆ  ವರಿಷ್ಠಾ ಪೆನÒನ್‌ ಯೋಜನಾ ಎಂಬ ಹೆಸರಿನಲ್ಲಿ ಜನ್ಮವೆತ್ತಿದ ಈ ಯೋಜನೆಗೆ ಕಳೆದ ವರ್ಷ ಪ್ರಧಾನ ಮಂತ್ರಿ ವಯ ವಂದನ ಯೋಜನಾ ಎಂಬ ಹೊಸ ಹೆಸರಿನಲ್ಲಿ ಪುನರ್ಜನ್ಮ ನೀಡಿದ ಸರಕಾರ ಇದೀಗ ಆ ಯೋಜನೆಯನ್ನು 2020 ಇಸವಿಯವರೆಗೆ ಜಾರಿಯಲ್ಲಿಡುತ್ತಿದೆ. 8% ಬಡ್ಡಿ ನೀಡುವ ಈ ಯೋಜನೆಯು ಎÇÉೈಸಿಯ ಮೂಲಕ ಬಿಕರಿಯಾಗುತ್ತಿದೆ. ಈವರೆಗೆ ಇದ್ದ ತಲಾ ರೂ 7.5 ಲಕ್ಷ$ದ ಹೂಡಿಕಾ ಮಿತಿಯನ್ನು ತಲಾ ರೂ 15 ಲಕ್ಷ$ಕ್ಕೆ ಏರಿಸಲಾಗಿದೆ. 60 ದಾಟಿದ ಎÇÉಾ ಹಿರಿಯ ನಾಗರಿಕರು ಈ ಯೋಜನೆಯ ಫಾಯಿದಾ ತೆಗೆದುಕೊಳ್ಳಬಹುದು.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

12-google-search

Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?

Jaipur: 13 ಮಂದಿಯನ್ನು ಬಲಿ ಪಡೆದ ದುರಂತದಲ್ಲಿ LPG ಟ್ಯಾಂಕರ್ ಚಾಲಕ ಬದುಕುಳಿದಿದ್ದೇ ರೋಚಕ

ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Yearender 2024:ಸುಶೀಲ್‌ ಕುಮಾರ್‌ ಮೋದಿ To ಬಾಬಾ-2024ರಲ್ಲಿ ವಿಧಿವಶರಾದ ರಾಜಕೀಯ ಮುಖಂಡರು

Yearender 2024:ಸುಶೀಲ್‌ ಕುಮಾರ್‌ ಮೋದಿ To ಬಾಬಾ-2024ರಲ್ಲಿ ವಿಧಿವಶರಾದ ರಾಜಕೀಯ ಮುಖಂಡರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.