ಭಟ್ಕಳ -ಹೊನ್ನಾವರ ಶಾಸಕ ಮಂಕಾಳ ವೈದ್ಯರ ಕೊಲೆಗೆ ಯತ್ನ

Team Udayavani, Feb 27, 2018, 6:00 AM IST

Congress-MLA-Mankala-Vaidya.jpg

ಹೊನ್ನಾವರ: ಭಟ್ಕಳ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಮಂಕಾಳ ವೈದ್ಯರ ಹತ್ಯೆಗೆ ಯತ್ನ ನಡೆದಿದ್ದು, ನಾಡಬಾಂಬ್‌ ಎಸೆದು ಹತ್ಯೆ ಮಾಡಲು ಯತ್ನಿಸಿದ ವ್ಯಕ್ತಿಯ ಕೈಯಲ್ಲೇ ಸ್ಫೋಟಗೊಂಡಿದ್ದರಿಂದ ಆರೋಪಿಯ ಕೈ ಛಿದ್ರವಾಗಿದೆ. ತೀವ್ರ ಗಾಯಗೊಂಡ ಆರೋಪಿ ಖೈತಾನ್‌ ರೈಮಂಡ್‌ನ‌ನ್ನು ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾನುವಾರ ತಡರಾತ್ರಿ ಶರಾವತಿ ದಂಡೆಯಲ್ಲಿನ ಹೊಸಾಡ ಗ್ರಾಮದ ರಂಗನಿಮೋಟಾ ಬಳಿ ಶರಾವತಿ ಯುವಕ ಸಂಘ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯ ಏರ್ಪಡಿಸಿತ್ತು. ರಾತ್ರಿ 9 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಶಾಸಕ ಮಂಕಾಳ ವೈದ್ಯ ಅವರು ತಡವಾಗಿ ಬಂದಿದ್ದರಿಂದ ರಾತ್ರಿ 11:15ಕ್ಕೆ ಆರಂಭವಾಯಿತು. ಕಾರ್ಯಕ್ರಮ ನಡೆಯುತ್ತಿರುವಾಗಲೇ ವೇದಿಕೆಯ ಹಿಂಭಾಗದ ಬೇಲಿಯ ಆಚೆ ಭಾರೀ ಪ್ರಮಾಣದ ಸೊ#ಧೀಟದ ಸದ್ದು ಕೇಳಿ ಬಂದಿದೆ. ಶಬ್ದ ಕೇಳಿದಾಕ್ಷಣ ಸ್ಥಳದಲ್ಲಿದ್ದ ಎಸ್‌ಐ ಆನಂದಮೂರ್ತಿ ದೌಡಾಯಿಸಿದ್ದಾರೆ. ನಾಡಬಾಂಬ್‌ ಕೈಯಲ್ಲೇ ಸ್ಫೋಟಗೊಂಡಿದ್ದರಿಂದ ಬಲಗೈ ಛಿದ್ರವಾಗಿ ನರಳುತ್ತಿದ್ದ ಖೈತಾನ್‌ ರೈಮಂಡ್‌ (24) ಪೊಲೀಸರನ್ನು ನೋಡುತ್ತಿದ್ದಂತೆ ಬಾವಿ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ, ಪೊಲೀಸರು ಆತನನ್ನು ಬಂಧಿಸಿ ತೀವ್ರ ರಕ್ತಸ್ರಾವವಾಗುತ್ತಿದ್ದರಿಂದ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಹೊನ್ನಾವರ ಮೂಲದ ಆರೋಪಿ ಖೈತಾನ್‌ಗೆ ಘಟನೆ ನಡೆದ ಹೊಸಾಡ ಗ್ರಾಮದಲ್ಲಿ ಬಂಧುಗಳಿದ್ದಾರೆ. ಸಭೆ ನಡೆಯುವ ಸ್ಥಳದ ಹಿಂದೆ ಆತ ಏಕೆ ಬಂದ, ಎಲ್ಲಿ ಸ್ಫೋಟ ಮಾಡಬಯಸಿದ್ದ, ಆತ ಓಡಾಡಿದ ಬೈಕ್‌ನ ಗುರುತು, ಘಟನೆಯ ನಂತರ ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಯ ಬಳಿ ಓಡಿದ್ದು ಏಕೆ, ಬಳಸಿದ ಸ್ಫೋಟಕ ಯಾವುದು, ಆತನ ಉದ್ದೇಶ ಏನು, ಬಲಗೈಯಿಂದ ಸ್ಫೋಟಕ ಎಸೆಯುವ ಮೊದಲೇ ಸ್ಫೋಟಿಸಿತೆ ಎಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ. ಸೊ#ಧೀಟಕದ ಕುರಿತು ತನಿಖೆ ನಡೆಸಲು ತಜ್ಞರು ಮಂಗಳೂರಿನಿಂದ ಆಗಮಿಸಿದ್ದಾರೆ. 

ಈ ಕುರಿತು ಭಾನುವಾರ ರಾತ್ರಿಯೇ ಗಣಪತಿ ಮಾದೇವ ಅಂಬಿಗ ಅವರಿಂದ ದೂರು ದಾಖಲಿಸಿಕೊಂಡ ಪೊಲೀಸರು ಕಲಂ 307, ಕಲಂ 338-120(ಬಿ) ಸಹಿತ 34 ಐಪಿಸಿ ಹಾಗೂ ಸ್ಫೋಟಕ ದುರ್ಬಳಕೆ ಮಾಡಿದ ಕಲಂ 98/1884 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್ಪಿ ತನಿಖಾ ತಂಡದೊಂದಿಗೆ ಆಗಮಿಸಿದ್ದು ಸ್ಥಳದ ಸಾಕ್ಷé, ವಿಧಿ ವಿಜ್ಞಾನ ಪ್ರಯೋಗಾಲಯದ ಅಭಿಪ್ರಾಯ, ಆರೋಪಿಯ ತನಿಖೆ ಆದ ಮೇಲೆ ಅಧಿಕೃತವಾಗಿ ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆ.

ಸೇತುವೆ ನಿರ್ಮಾಣ ಕಿತ್ತಾಟ ಕಾರಣವೇ?
ಶರಾವತಿ ನದಿಗೆ ಸೇತುವೆ ನಿರ್ಮಾಣ ಆಗಬೇಕು ಎಂದು ಹಲವು ಸಂಘಟನೆಗಳು ಮೂರು ದಶಕದಿಂದ ಪ್ರಯತ್ನಿಸುತ್ತಿದ್ದವು. ಸ್ಥಳೀಯರು ಸೇತುವೆ ಹೋರಾಟ ಸಮಿತಿ ರಚಿಸಿಕೊಂಡಿದ್ದರು. ಸೇತುವೆ ಮಂಜೂರಾಗಿದೆ ಎಂದು ಲೋಕೋಪಯೋಗಿ ಇಲಾಖೆಯಿಂದ ಪತ್ರ ಸಹ ಬಂದಿತ್ತು. ಹೋರಾಟ ಸಮಿತಿಯ ಹಿರಿಯ ಸದಸ್ಯರೊಬ್ಬರು ಇತ್ತೀಚೆಗೆ ನಿಧನರಾಗಿದ್ದಾರೆ. ಇನ್ನೊಬ್ಬ ಹೋರಾಟಗಾರರು ವಿದೇಶದಲ್ಲಿದ್ದು ಪತ್ರಿಕಾ ಹೇಳಿಕೆ ನೀಡುತ್ತಿದ್ದರು. ಇನ್ನೊಬ್ಬರು ಪಂಚಾಯತ್‌ ಚುನಾವಣೆಯಲ್ಲಿ ಸೋತು ಸೇತುವೆ ಸ್ಥಳಾಂತರ ಮಾಡಿದ್ದಕ್ಕೆ ಶಾಸಕರ ಮೇಲೆ ಕಿಡಿಕಾರುತ್ತಾ ಮನಬಂದ ಹೇಳಿಕೆ ನೀಡುತ್ತಿದ್ದರು. ಘಟನೆಗೆ ಇದೂ ಒಂದು ಕಾರಣ ಇರಬಹುದೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಿಂಸೆಯನ್ನು ಖಂಡಿಸುತ್ತೇನೆ: ವೈದ್ಯ
ಸೋಮವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮಂಕಾಳ ವೈದ್ಯ, ಹಿಂಸೆಯನ್ನು ನಾನು ಖಂಡಿಸುತ್ತೇನೆ. ಇಂತಹದರಿಂದ ಯಾರಿಗೂ ಪ್ರಯೋಜನವಿಲ್ಲ. ರಾಜಕೀಯವಾಗಿ ವಿರೋಧಿಗಳಿರುವುದು ಸಹಜ, ಅದು ರಾಜಕೀಯಕ್ಕೆ ಮಾತ್ರ ಸೀಮಿತ. ನಾನು ಶರಾವತಿ ಕೊಳ್ಳಕ್ಕೆ ಮಾತ್ರವಲ್ಲ ನನ್ನ ಮತಕ್ಷೇತ್ರಕ್ಕೆ ಹಿಂದೆಂದು ಕಾಣದಷ್ಟು ಶಾಶ್ವತ ಕೆಲಸ ಮಾಡಿದ್ದೇನೆ. ನನ್ನ ವೇಗ ಕೆಲವರಿಗೆ ಹಿಡಿಸದೇ ಇರಹಬುದು. ಮಾವಿನಕುರ್ವೆಗೆ ಒಂದು ಸೇತುವೆ ಮಂಜೂರು ಮಾಡಿಸಿದ್ದೆ. ಊರಿನವರು ಎರಡು ಗುಂಪಾಗಿ ಅಲ್ಲಿ ಇಲ್ಲಿ ಎಂದು ವಾದಿಸಿದ ಕಾರಣ ಸೇತುವೆ ರದ್ದಾಗಬಾರದೆಂದು ಭಟ್ಕಳ ತಾಲೂಕಿಗೆ ಸ್ಥಳಾಂತರಿಸಿದೆ. ಈಗಲೂ ಸೇತುವೆ ಮಾಡುವುದು ಅಸಾಧ್ಯವೇನಲ್ಲ. ಕೆಲವರು ಹೇಳುವಂತೆ ಈ ಕಾರಣಕ್ಕಾಗಿ ನನ್ನ ಮೇಲೆ ನಾಡಬಾಂಬ್‌ ಎಸೆಯುವ ಪ್ರಯತ್ನ ಮಾಡಿದರೆ ಪ್ರಯೋಜನವಿಲ್ಲ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ ಕಾರಣ ದೇವರು ಉಳಿಸಿದ್ದಾನೆ. ಎಸೆಯಲು ಬಂದವನ ಕೈ ತುಂಡಾಗಿದೆ. ಸಿಕ್ಕಿಬಿದ್ದಿದ್ದಾನೆ. ಪೊಲೀಸರ ಮೇಲೆ ಭರವಸೆ ಇದೆ. ಅವರು ತನಿಖೆ ನಡೆಸುತ್ತಾರೆ ಎಂದರು.

ಭಟ್ಕಳದ ರಕ್ತಸಿಕ್ತ ಅಧ್ಯಾಯಕ್ಕೆ ಮತ್ತೂಂದು ಸೇರ್ಪಡೆ
ಭಟ್ಕಳ:
ಭಟ್ಕಳದ ರಕ್ತಸಿಕ್ತ ಅಧ್ಯಾಯಕ್ಕೆ ಶಾಸಕ ಮಂಕಾಳ ವೈದ್ಯರ ಹತ್ಯೆಗೆ ಯತ್ನ ಕೂಡ ಸೇರ್ಪಡೆಗೊಂಡಿದೆ. 1996, ಏ.10 ರಂದು ಇಲ್ಲಿನ ಶಾಸಕರಾಗಿದ್ದ ಡಾ| ಚಿತ್ತರಂಜನ್‌ ಅವರನ್ನು ಹತ್ಯೆ ಮಾಡುವ ಮೂಲಕ ಕರಾಳ ರಾಜಕೀಯ ತೆರೆದುಕೊಂಡಿತ್ತು. ಅವರ ಕೊಲೆ ಸುಳಿವು ಹುಡುಕುವಲ್ಲಿ ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ಕೂಡಾ ವಿಫಲವಾಗಿದ್ದು ತನಿಖೆ ಇನ್ನೂ ಮುಂದುವರಿದಿದೆ. ತನಿಖೆಯಲ್ಲಿಯೇ ಸುಮಾರು 22 ವರ್ಷ ಗತಿಸಿದ್ದು ಇನ್ನೂ ತನಕ ಯಾವುದೇ ಸುಳಿವು ಸಿಕ್ಕಿಲ್ಲ.

1991 ಹಾಗೂ 1993ರಲ್ಲಿ ಕೋಮು ಗಲಭೆಗಳು ನಡೆದು ಅಪಾರ ಹಾನಿಯಾಗಿದ್ದರು ಕೂಡಾ ಇದಕ್ಕೂ ರಾಜಕೀಯಕ್ಕೂ ನೇರ ಸಂಪರ್ಕ ಇದ್ದಿರಲಿಲ್ಲ. 1996ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಶಾಸಕ ಡಾ.ಚಿತ್ತರಂಜನ್‌ ಅವರನ್ನು ಹತ್ಯೆಗಯ್ಯುವ ಮೂಲಕ ರಕ್ತಸಿಕ್ತ ರಾಜಕೀಯಕ್ಕೆ ಮತ್ತೆ ಮುನ್ನುಡಿ ಬರೆದಂತಾಗಿತ್ತು. ಜಿಲ್ಲೆಯಲ್ಲಿಯೇ ಶಾಸಕರ ಪ್ರಥಮ ಕೊಲೆಯಾದರೆ ನಂತರ ಕಾರವಾರದ ಶಾಸಕ ವಸಂತ ಅಸ್ನೋಟಿಕರ್‌ ಹತ್ಯೆಯಾಗುವ ಮೂಲಕ ಇಬ್ಬರು ಬಲಿಯಾದಂತಾಗಿತ್ತು. ಈಗ ಮತ್ತೆ ಶಾಸಕ ಮಂಕಾಳ ವೈದ್ಯ ಹತ್ಯೆಗೆ ಸಂಚು ನಡೆದಿತ್ತೇ ಎನ್ನುವ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕಾಗಿದೆ.

ಟಾಪ್ ನ್ಯೂಸ್

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

Leopard: ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ.. ಸೆರೆ ಹಿಡಿಯಲು ಆಗ್ರಹ

Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ

Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ

Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ

Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Belagavi: Siblings clash over marijuana

Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Leopard: ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ.. ಸೆರೆ ಹಿಡಿಯಲು ಆಗ್ರಹ

Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…

Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ

Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Belagavi: Siblings clash over marijuana

Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

22-uv-fusion

TEENAGE: ಹುಚ್ಚುಕೋಡಿ ಮನಸ್ಸಿಗೂ ಕಡಿವಾಣ ಬೇಕಿದೆ

21-uv-fusion

Ashram: ಹಿರಿಯ ಜೀವಗಳ ಶುಭಾಶೀರ್ವಾದ -ಸಾರ್ಥಕ ಭಾವ

Leopard: ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ.. ಸೆರೆ ಹಿಡಿಯಲು ಆಗ್ರಹ

Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…

20-uv-fusion

UV Fusion: ಪ್ರತೀ ಕ್ಷಣವೂ ಜೀವಿಸುವುದನ್ನು ಕಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.