ವಿಲನ್ ಅಲ್ಲ ವಿರೋಧಿ
Team Udayavani, Feb 27, 2018, 11:02 AM IST
“ಯಜಮಾನ’ ಚಿತ್ರದಲ್ಲಿ ಧನಂಜಯ್ ವಿಲನ್ ಪಾತ್ರ ಮಾಡುತ್ತಿದ್ದಾರಾ? ಯಾವಾಗ “ಯಜಮಾನ’ ಚಿತ್ರದಲ್ಲಿ ಧನಂಜಯ್ ನಟಿಸುತ್ತಿದ್ದಾರೆ ಎಂದು ಸುದ್ದಿಯಾಯಿತೋ, ಆಗಿಂದ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಇಷ್ಟಕ್ಕೂ ಚಿತ್ರದಲ್ಲಿ ಧನಂಜಯ್ ಅವರ ಪಾತ್ರವೇನು ಎಂದರೆ, “ವಿಲನ್ ಅನ್ನೋಕ್ಕಿಂತ ವಿರೋಧಿಯ ಪಾತ್ರ’ ಎನ್ನುತ್ತಾರೆ ಅವರು.
ಸದ್ಯ “ಟಗರು’ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಕೇಳಿಬರುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಖುಷಿಯಾಗಿರುವ ಧನಂಜಯ್, ನಾಳೆಯಿಂದ “ಯಜಮಾನ’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಮೈಸೂರಿಗೆ ಹೊರಟಿದ್ದಾರೆ. ದರ್ಶನ್ ಅವರೆದುರು ನಟಿಸುವುದಕ್ಕೆ ಎಕ್ಸೆ„ಟ್ ಆಗಿರುವ ಅವರು, “ಆ ಚಿತ್ರದಲ್ಲಿ ಹಳ್ಳಿಯಲ್ಲಿ ದರ್ಶನ್ ಅವರ ವಿರೋಧಿಯ ಪಾತ್ರವನ್ನು ನಾನು ಮಾಡುತ್ತಿದ್ದೇನೆ.
ವಿಲನ್ ಎನ್ನುವುದಕ್ಕಿಂತ ಸ್ವಲ್ಪ ನೆಗೆಟಿವ್ ಶೇಡ್ ಇರುವ ಪಾತ್ರ ಅದು. ಯಾಕೆ ವಿರೋಧ ಮಾಡುತ್ತೀನಿ ಎನ್ನುವುದನ್ನು ಚಿತ್ರದಲ್ಲೇ ನೋಡಬೇಕು’ ಎನ್ನುತ್ತಾರೆ ಅವರು. ಇನ್ನು “ಟಗರು’ ಚಿತ್ರದ ಬಗ್ಗೆ ಅವರಿಗೆ ಸತತವಾಗಿ ಪ್ರತಿಕ್ರಿಯೆಗಳು ಬರುತ್ತಿವೆಯಂತೆ. “ಮೊದಲ ಪ್ರದರ್ಶನದಿಂದ ಇಲ್ಲಿಯವರೆಗೂ ಸತತವಾಗಿ ನನ್ನ ಪಾತ್ರದ ಬಗ್ಗೆ ಟ್ವೀಟ್ ಮಾಡುತ್ತಲೇ ಇದ್ದಾರೆ. ನನ್ನ ಮೊಬೈಲ್ ನಂಬರ್ ಅದ್ಯಾರು ಕೊಟ್ಟರೋ ಗೊತ್ತಿಲ್ಲ.
ಅದೆಷ್ಟೋ ಜನ ಫೋನ್ ಮಾಡಿ ಪಾತ್ರದ ಬಗ್ಗೆ, ಅಭಿನಯದ ಬಗ್ಗೆ ಮಾತಾಡುತ್ತಿದ್ದಾರೆ. ಒಬ್ಬ ನಟನಾಗಿ ಅದೊಂದು ಧನ್ಯತಾ ಭಾವ. ನಾನು ಬೆಂಗಳೂರಿಗೆ ಬಂದು 10 ವರ್ಷ ಆಯ್ತು. ಒಂದು ದಶಕದ ಜರ್ನಿಯಲ್ಲಿ, “ಟಗರು’ ಒಂದು ಅದ್ಭುತ ಅಧ್ಯಾಯ. ಹೂವಿನ ಜೊತೆಗೆ ನಾರು ಸ್ವರ್ಗ ಸೇರಿತು ಅನ್ನೋ ಹಾಗೆ, “ಟಗರು’ ಚಿತ್ರತಂಡದಿಂದ ನನ್ನ ಬಗ್ಗೆಯೂ ಇವತ್ತು ಜನ ಮಾತಾಡುತ್ತಿದ್ದಾರೆ. ಆ ತಂಡಕ್ಕೆ ನಾನು ಯಾವತ್ತೂ ಆಭಾರಿ’ ಎನ್ನುತ್ತಾರೆ ಧನಂಜಯ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.