ಮೈಸೂರು ಅಸೋಸಿಯೇಶ‌ನ್‌ ಮುಂಬಯಿ: ಬಂಗಾರ ಹಬ್ಬದ ದತ್ತಿ ಉಪನ್ಯಾಸ

Team Udayavani, Feb 27, 2018, 2:29 PM IST

6.jpg

ಮುಂಬಯಿ: ಸೃಜನಾತ್ಮ ಕಲೆಗಳಲ್ಲಿ ಗಮಕ ಕಲೆಯೂ ಇದೆ. ಆದಿ ಗಮಕಿಗಳಾಗಿ ಲವ-ಕುಶರು ಗುರುತಿಸಲ್ಪಡುತ್ತಿದ್ದು, ಈ ಗಮಕ ಕಲೆ ಪ್ರಾಚೀನ ಕಾಲದಿಂದ ಕಿವಿಯಿಂದ ಕಿವಿಗೆ ಸಾಗುತ್ತ ಬಂದಿದೆ. ಅದೂ ಈಗಲೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ಮೊಟ್ಟ ಮೊದಲ ಗಮಕ ಸಮ್ಮೇಳನ ಮುಂಬಯಿಯಲ್ಲಿ ಜರಗಿದ್ದು, ಮುಂಬಯಿ ಕನ್ನಡಿಗರಿಗೆ ತುಂಬ ಹೆಮ್ಮೆಯ ಸಂಗತಿ. ಗಮಕ ವಾಚನ ಮಾಡುವಾಗ ರಾಗಗಳ ಬಳಕೆಯನ್ನು ಬಹು ಎಚ್ಚರಿಕೆಯಿಂದ ಉಪಯೋಗಿಸಬೇಕು. ಹಾವಭಾವಗಳು  ಹಿತಮಿತವಾಗಿರಬೇಕು. ಹೀಗೆ ಕುಮಾರವ್ಯಾಸನ, ಪಂಪರನ್ನು, ವಾಲ್ಮೀಕಿಯ ಕಾವ್ಯಗಳನ್ನು ಎತ್ತಿಕೊಂಡು ಹಾವಭಾವ, ರಾಗಗಳಿಂದ ಸುಶ್ರಾವ್ಯವಾಗಿ ಗಮಕ ವಾಚಿಸಿದಾಗ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಬಹುದು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ, ಪ್ರಸಿದ್ಧ ಗಮಕಿ ಡಾ| ಎಂ. ಎ. ಜಯರಾಮ ರಾವ್‌ ತಿಳಿಸಿದರು.

ಫೆ. 24 ರಂದು  ಸಂಜೆ ಮಾಟುಂಗಾ ಪೂರ್ವ ಮೈಸೂರು ಅಸೋಸಿಯೇಶನ್‌ನ ಕಿರು ಸಭಾಗೃಹದಲ್ಲಿ ಮೈಸೂರು ಅಸೋಸಿಯೇಶ‌ನ್‌ ಮುಂಬಯಿ ಮತ್ತು ಮುಂಬಯಿ ವಿವಿ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮೈಸೂರು ಅಸೋಸಿಯೇಶ‌ನ್‌ ಬಂಗಾರ ಹಬ್ಬದ ದತ್ತಿ ಉಪನ್ಯಾಸ-2018 ರಲ್ಲಿ “ಸೃಜನಶೀಲತೆಯನ್ನು ಬೆಳೆಸುವ ಪರಿ’ ವಿಚಾರವಾಗಿ ಅವರು ಉಪನ್ಯಾಸ ನೀಡಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,  ಮುಂಬಯಿಯಲ್ಲಿ ಕನ್ನಡ ಸೇವೆಯಲ್ಲಿ ತೊಡಗಿರುವ ಸಂಘಟನೆಗಳಲ್ಲಿ ಮೈಸೂರು ಅಸೋಸಿಯೇಶನ್‌ ಸಂಸ್ಥೆಯೂ ಒಂದು. ಈ ಸಂಸ್ಥೆ ಅನೇಕ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡಪ್ರೇಮ ಬಿಂಬಿಸುತ್ತಿದೆ. ಗಮಕಿ ವಿದ್ವಾಂಸ ಜಯರಾಮರ ಮಹಾಭಾರತದ ಕರ್ಣ ಕೃತಿ ಬಿಡುಗಡೆ ಹಾಗೂ ಅವರಿಂದ ಸೃಜನಶೀಲತೆ ಬೆಳೆಸುವ ಪರಿ ಕುರಿತು ಉಪನ್ಯಾಸ ಕೇಳುವುದೇ ನಮ್ಮ-ನಿಮ್ಮೆಲ್ಲರವ ಭಾಗ್ಯ. ಕನ್ನಡದ ಫೌÅಡ ಕಾರ್ಯಗಳನ್ನು ಜನ ಸಾಮಾನ್ಯರಿಗೆ ತಲುಪುವಂತೆ ಶ್ರಮಿಸಿದ ಗಮಕಿ ವಿದ್ವಾಂಸರಲ್ಲಿ ಜಯರಾಮರೂ ಒಬ್ಬರು ಎಂದರು.

ಮೈಸೂರು ಅಸೋಸಿಯೇಶ‌ನ್‌ನ ಅಧ್ಯಕ್ಷೆ ಕು| ಕಮಲಾ ಕಾಂತರಾಜ್‌ ಸ್ವಾಗತಿಸಿ  ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ, ಪ್ರಸಿದ್ಧ ಗಮಕಿ ಡಾ| ಎಂ. ಎ. ಜಯರಾಮ ರಾವ್‌ ರಚಿತ “ಮಹಾಭಾರತದ ಕರ್ಣ’ ಕೃತಿ ಬಿಡುಗಡೆಗೊಳಿಸಿ ಉಪನ್ಯಾಸಕರನ್ನು ಗೌರವಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಡಾ| ಕೆ. ರಘುನಾಥ್‌, ನಾಗರತ್ನ ಎಸ್‌. ಮಂಡ್ಯ, ರುದ್ರಮೂರ್ತಿ ಪ್ರಭು, ಸೌಮ್ಯಾ ಕೆ. ಪ್ರಸಾದ್‌, ಕೆ. ಗೋವಿಂದ ಭಟ್‌, ದಿನಕರ ಎನ್‌. ಚಂದನ್‌, ಅಹಲ್ಯಾ ಬಲ್ಲಾಳ್‌, ಡಾ| ಹಾ. ಸು. ಶ್ರೀನಿವಾಸ್‌, ಜಿ. ಎಚ್‌. ರಂಗನಾಥ್‌ ರಾವ್‌, ಮಂಹು ದೇವಾಡಿಗ, ಡಾ| ಅಂಬರೀಶ್‌ ಪಾಟೀಲ, ಪದ್ಮಜಾ ಪಿ. ಮಣ್ಣೂರ್‌, ಶಕುಂತಳಾ ಆರ್‌. ಪ್ರಭು, ದುರ್ಗಪ್ಪ ಯು. ಕೋಟಿಯವರ್‌, ರಮಾ ಉಡುಪ, ಮೈಸೂರು ಅಸೋಸಿಯೇಶ‌ನ್‌ನ ಪ್ರಬಂಧಕ ಬಿ. ಕೆ. ಮಧುಸೂದನ್‌ ಸೇರಿದಂತೆ ಅನೇಕ ಸಾಹಿತ್ಯಾಭಿಮಾನಿಗಳು ಮತ್ತು ಗಮಕಾಭಿಮಾನಿಗಳು ಉಪಸ್ಥಿತರಿದ್ದರು.  ಮುಂಬಯಿ  ಕನ್ನಡ  ವಿಭಾಗದ ವೈ. ಮಧುಸೂದನ ರಾವ್‌ ಕಾರ್ಯಕ್ರಮ ನಿರ್ವಹಿಸಿದರು. 

ಮೈಸೂರು ಅಸೋಸಿಯೇಶ‌ನ್‌ನ ಪ್ರಧಾನ ಕಾರ್ಯದರ್ಶಿ ಡಾ| ಗಣಪತಿ ಎಸ್‌. ಶಂಕರಲಿಂಗ   ವಂದಿಸಿದರು. 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.