ಕರ್ನಾಟಕ ಸಂಘ ಕಲಾಭಾರತಿ ವಿನೂತನ ಪ್ರಯೋಗ


Team Udayavani, Feb 27, 2018, 3:39 PM IST

7.jpg

ಮುಂಬಯಿ: “ಕಾವ್ಯೇಷು ನಾಟಕಂ ರಮ್ಯಂ’ ಮತ್ತು “ಕೇಳುವ ಸೂರಿಗಳು ಜಂಗಮಜನಾರ್ದನರು’ ಎಂಬ ಉಕ್ತಿಗಳು. ಬಹುಶಃ ದೃಶ್ಯ ಮತ್ತು ಶ್ರವ್ಯ ಕಾವ್ಯಗಳ ಹೆಗ್ಗಳಿಕೆಗೆ ನೀಡಲಾಗಿರುವ ಅತ್ಯುತ್ತಮ ವರ್ಣನೆಗಳಾಗಿವೆ. ನಾಟಕದಲ್ಲಿ ಕಲಾವಿದರ ಸಂಭಾಷಣೆ, ಅವರ ಅಭಿನಯ, ಚಲನ-ವಲನ, ರಂಗ ವಿನ್ಯಾಸ, ಬೆಳಕಿನ ವಿನ್ಯಾಸ, ವಸ್ತ್ರ ವಿನ್ಯಾಸ ಮೊದಲಾದವುಗಳು ಪ್ರೇಕ್ಷಕನನ್ನು ಇಡಿಯಾಗಿ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ. ಈ ಎಲ್ಲ ಪರಿಕರಗಳಲ್ಲೂ ಅತಿ ಮುಖ್ಯವಾಗುವುದು ಸಂಭಾಷಣೆಯೇ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.

ರಂಗದ ಮೇಲಿನ ಸಕಲ ವಿನ್ಯಾಸಗಳು ಎಷ್ಟೇ ಮನೋಹರವಾಗಿದ್ದರೂ ನಾಟಕದ ಸಂಭಾಷಣೆಗಳು ಪ್ರಭಾವ ಪೂರ್ಣವಾಗಿಲ್ಲ ಎಂದಾದಲ್ಲಿ ನಾಟಕವು ವಿಫಲವಾದಂತೆಯೇ. ಇಲ್ಲಿ ಸಂಭಾಷಣೆಯ ಭಾಷೆ, ಸಾಹಿತ್ಯ ಮತ್ತು ಅವುಗಳನ್ನು ಪ್ರಕಟಗೊಳಿಸುವ ಪ್ರಕ್ರಿಯೆಗಳು ಪ್ರಮುಖವಾಗುತ್ತವೆ. ರಂಗದ ವಿನ್ಯಾಸಗಳು ನಾಟಕದ ಸಾಹಿತ್ಯಕ್ಕೆ, ಅದರ ಭಾವ ಪ್ರಕಟನೆೆಗೆ ಪೂರಕವಾಗಿ ನಿಲ್ಲುತ್ತವೆಯೇ ಹೊರತು, ಅವೇ ಪ್ರಮುಖವಲ್ಲ. ಹಾಗಾಗಿ ದೃಶ್ಯಕಾವ್ಯವಾದ ನಾಟಕದಲ್ಲೂ ಶ್ರವ್ಯಕ್ಕೇ ಮೊದಲ ಸ್ಥಾನ. ಶ್ರವ್ಯಕ್ಕೆ ಈ ಪ್ರಾಮುಖ್ಯತೆ ಇರುವುದರಿಂದಲೇ ನಾಟಕದ ತಯಾರಿಯಲ್ಲಿ ಮೊದಲಿಗೆ ಕಲಾವಿದರು ಹಲವು ದಿನಗಳ ಕಾಲ ಕೇವಲ ಸಂಭಾಷಣೆಯನ್ನು ಅಭ್ಯಸಿಸುವುದು. ಸಂಭಾಷಣೆಗಳಲ್ಲಿನ ಭಾವೋತ್ಪತ್ತಿ, ರಸೋತ್ಪತ್ತಿ, ನಡುವಣದ ಮೌನ, ಕಂಠದ ಏರಿಳಿತಗಳು ರಸಿಕನನ್ನು ಏಕಾಗ್ರತೆಯತ್ತ ಕೊಂಡೊಯ್ಯುವಂಥವು. ರಸಿಕನು ತನ್ನ ಅಸ್ತಿತ್ವವನ್ನು ಮರೆತು ಕಲೆಯಲ್ಲಿ ಒಂದಾಗಿ ಹೋಗುವಂತೆ ಮಾಡುವುದು ನಾಟಕದಲ್ಲಿನ ಸಂಭಾಷಣೆಗಳು. ಆ ಏಕಾಗ್ರತೆಯ ಹಂತವೇ ಒಂದು ಕಲೆಯ ಸಾರ್ಥಕ್ಯದ ಹಂತ.

ಕಲಾ ಭಾರತಿಯ ಒಂದು ವಿನೂತನ ಪ್ರಯೋಗ ಇಂತಹ ಒಂದು ಸಂಭಾಷಣೆಯ ಹಂತವನ್ನೇ ಮುಖ್ಯವಾಹಿನಿಯಲ್ಲಿ ತಂದು ವೇದಿಕೆಯಲ್ಲಿ ಪ್ರಸ್ತುತಪಡಿಸಿ ರಸಿಕರನ್ನು ಏಕಾಗ್ರತೆಯತ್ತ ಕೊಂಡೊಯ್ಯುವ ಒಂದು ಪ್ರಯತ್ನ ಇತ್ತೀಚೆಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಡೆಯಿತು. ಯಾವುದೇ ರಂಗ ವಿನ್ಯಾಸಗಳಿಲ್ಲದೇ ಕೇವಲ ನಾಟಕವನ್ನು ಓದುತ್ತಾ ಪ್ರೇಕ್ಷಕರನ್ನು ಸೆರೆಹಿಡಿದುಕೊಂಡವರು, ಕರ್ನಾಟಕ ಸಂಘ ಮುಂಬಯಿಯ ಕಲಾ ಭಾರತಿ ತಂಡದವರು.

ಮಹಾಕವಿ ಕಾಳಿದಾಸನ ಖಾಸಗಿ ಬದುಕಿನ ಬಗೆಗೆ ಬೆಳಕು ಚೆಲ್ಲುವ ಮೋಹನ್‌ ರಾಕೇಶರ ಹಿಂದಿ ನಾಟಕವಾದ “ಆಷಾಢ್‌ ಕಾ ಏಕ್‌ ದಿನ್‌’ ಇದರ ಕನ್ನಡಾವತರಣವಾದ “ಆಷಾಢದ ಒಂದು ದಿನ’ ನಾಟಕದ (ಅನುವಾದ  ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ) ಮೂರನೇ ಅಂಕವನ್ನು ಪ್ರಸ್ತುತಪಡಿಸಿ, ಕನ್ನಡ ರಂಗ ಭೂಮಿಯಲ್ಲಿ ವಿರಳವಾಗಿ ನಡೆಯುವ ಈ ಬಗೆಯ ಪ್ರಯೋಗವನ್ನು ಈ ಕಲಾವಿದರು ಯಶಸ್ವಿಯಾಗಿ ನಡೆಸಿಕೊಟ್ಟರು.

ಡಾ| ಭರತ್‌ ಕುಮಾರ್‌ ಪೊಲಿಪು ಇವರ ನಿರ್ದೇಶನದಲ್ಲಿ ಪ್ರಸ್ತುತಪಡಿಸಲಾದ ಈ ನಾಟಕದ ಕಾಳಿದಾಸನ ಪಾತ್ರವನ್ನು ಮೋಹನ್‌ ಮಾರ್ನಾಡ್‌, ಮಲ್ಲಿಕಾಳ ಪಾತ್ರವನ್ನು ಅಹಲ್ಯಾ ಬಲ್ಲಾಳ್‌, ವಿಲೋಮನ ಪಾತ್ರವನ್ನು ಅವಿನಾಶ್‌ ಕಾಮತ್‌ ಮತ್ತು ಮಾತುಲನ ಪಾತ್ರವನ್ನು ರಾಜೀವ್‌ ನಾಯಕ್‌ ಇವರು ನಿರ್ವಹಿಸಿ ಭಾವಪೂರ್ಣವಾಗಿ ಬಿತ್ತರಿಸಿ ಸಭೆಯನ್ನು ಮಂತ್ರಮುಗ್ಧವನ್ನಾಗಿಸಿದರು. ಪ್ರಯೋಗದ ಮೊದಲಿಗೆ ಅವಿನಾಶ್‌ ಕಾಮತ್‌ ಅವರು ನೀಡಿದ ನಾಟಕದ ವಸ್ತುವಿನ ಕುರಿತಾದ ಪರಿಚಯವು, ಸಂದರ್ಭವನ್ನು ಗ್ರಹಿಸಲು ಸಹಕಾರಿಯಾಯಿತು. ನಾಟಕ ಪ್ರಾರಂಭವಾದ ತುಸು ಹೊತ್ತಿನಲ್ಲೇ ನಾಟಕ ರಂಗದ ಇತರ ಪರಿಕರ ವಿನ್ಯಾಸಗಳ ಆವಶ್ಯಕತೆ ಇಲ್ಲವೆನ್ನುವಷ್ಟು ಈ ಕಲಾವಿದರ ಸಂಭಾಷಣೆಯ ಪ್ರಸ್ತುತಿಯೇ ಸಭಿಕರನ್ನು ಆಕರ್ಷಿಸಿತು. ಮರಾಠಿಯಲ್ಲಿ ಇಂತಹ ಪ್ರಯೋಗಗಳು ಜನಪ್ರಿಯವಾಗಿದ್ದು, ಕನ್ನಡ ರಂಗಭೂಮಿಯಲ್ಲಿ ಇಂಥ ಪ್ರಯೋಗಗಳು ನಿಯಮಿತವಾಗಿ ನಡೆಯುವ ಉದಾಹರಣೆಗಳಿಲ್ಲ. ಸಾಮಾನ್ಯವಾಗಿ ನಾಟಕ ಪ್ರದರ್ಶನಗಳಿಗೆ ತಗಲುವ ಹೇರಳವಾದ ಖರ್ಚು ವೆಚ್ಚಗಳಿಲ್ಲದ, ಈ ರೀತಿಯ ಪ್ರಯೋಗಗಳ ಮೂಲಕ ಪ್ರದರ್ಶನಗಳಿಲ್ಲದೇ ಸೊರಗುತ್ತಿರುವ ನಾಟಕ ಸಾಹಿತ್ಯವನ್ನು ಜೀವಂತವಾಗಿರಿಸಬಹುದಾಗಿದೆ. ಕಲಾವಿದರಿಗೆ ಹೆಚ್ಚಿನ ವೇದಿಕೆಗಳನ್ನು ಇದರಿಂದ ಕಲ್ಪಿಸಿಕೊಡಬಹುದಾಗಿದೆ.

ಹಾಗೆಂದು ಇದನ್ನು ಯಾರೂ, ಎಲ್ಲಿಯೂ ನಿಭಾಯಿಸಬಹುದೆಂದು ತಿಳಿದರೂ ತಪ್ಪಾದೀತು. ಸಾಮಾನ್ಯ ನಾಟಕ ಪ್ರದರ್ಶನಗಳಿಗಿಂತ ಹೆಚ್ಚಿನ ಭಾವ ತನ್ಮಯತೆ, ಏಕಾಗ್ರತೆ ಇಲ್ಲಿ ಆವಶ್ಯಕವಾಗುತ್ತದೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಕಲಾವಿದರು ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ. ಅತ್ಯಂತ ಪರಿಣತ ಮತ್ತು ಸೃಜನಾತ್ಮಕ ನಿರ್ದೇಶಕರು ಮತ್ತು ಕಲಾವಿದರುಗಳು ಮಾತ್ರ ಈ ರೀತಿಯ ಪ್ರಯೋಗಗಳನ್ನು ಯಶಸ್ವಿಗೊಳಿಸಬಲ್ಲರು. ಹಾಗೆಯೇ ಸೂಕ್ಷ್ಮ ಗುಣಗ್ರಾಹಿಗಳಾದ, ಕಲ್ಪನಾಶಕ್ತಿಯುಳ್ಳ ಪ್ರೌಢ ಕೇಳುಗರು ಅಗತ್ಯವಾಗಿ ಇಲ್ಲಿ ಬೇಕಾಗುತ್ತಾರೆ.

ಮುಂಬಯಿ ವಿಶ್ವವಿದ್ಯಾಲಯದಲ್ಲಿ ನಡೆದ ಇತ್ತೀಚಿನ ಈ ಪ್ರಯೋಗದಲ್ಲಿ ಈ ಮೇಲಿನ ಎರಡೂ ಅಂಶಗಳು ಮೇಳೈಸಿತ್ತೆನ್ನಬಹುದು. ಲಭ್ಯ ಸಮಯಾವಕಾಶದಲ್ಲಿ ಅತ್ಯುತ್ತಮ ನಾಟಕ ವಾಚನ ಕಾರ್ಯಕ್ರಮವನ್ನು ನೀಡಿದ ಕಲಾವಿದರಿಗೂ, ನಿರ್ದೇಶಕರಿಗೂ ಅಭಿನಂದನೆಗಳು. ಇಂಥ ಒಂದು ಹೊಸ ಪ್ರಯೋಗಕ್ಕೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ.ಎನ್‌. ಉಪಾಧ್ಯ ಅವರೂ ಅಭಿನಂದನಾರ್ಹರು. ಕಲಾರಂಗದ ಈ ಬಗೆಯ ಹೊಸ ಪ್ರಯೋಗಗಳನ್ನು ಪ್ರೋತ್ಸಾಹಿಸಿ, ಬೆಳೆಸುವ ಹೊಣೆ ನಮ್ಮೆಲ್ಲರದು.

ಲೇಖಕಿ : ಡಾ| ವಿದುಷಿ ಶ್ಯಾಮಲಾ ಪ್ರಕಾಶ್‌ 
ಚಿತ್ರ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.