ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸು

Team Udayavani, Feb 27, 2018, 3:50 PM IST

omme.jpg

ನನ್ನೊಳಗಿನ ಸಾವಿರ ಭಾವಗಳಿಗೆ ನಿನ್ನ ತಲುಪುವ ಹಾದಿ ಕಾಣುತ್ತಿಲ್ಲ. ನೂರಾರು ಹಾದಿಗಳು ಕಾಣುತ್ತವೆ, ಆ ಹಾದಿಯಲ್ಲಿ ನೀ ಕಾಣುತ್ತಿಲ್ಲ. ಮನಸು ಬರೀ ತೊಳಲಾಟದ ತೊಗಲು ಗೊಂಬೆಯಂತಾಗಿಹೋಗಿದೆ…

ಒಲವಿನ ಸುಮವೇ,
ಈ ಗೆಳೆತನದ ಗಡಿ ದಾಟಿ, ಒಲವಿನ ಒಳಮನೆಗೆ ಬರುವ ತವಕ ನನ್ನನ್ನು ಎಡೆಬಿಡದೆ ಕಾಡುತ್ತಿದೆ. ಆದರೆ, ಈ ಯೋಚನೆ ಎದೆಯೊಳಗೆ  ಮೂಡುತ್ತಲೇ, ನಿನ್ನ ಗಂಭೀರ ನಿಲುವಿನೊಂದಿಗೆ , ಬಿಗುಮಾನದಿಂದ ತುಂಬಿದ ಮುಖ ನೆನಪಾಗಿ, ಮನದ ಮಾತು ಇವತ್ತು ಮನಸÇÉೇ ಇರಲಿ, ನಾಳೆ ಹೇಳಿದರಾಯೆ¤ಂಬ ನಿರ್ಧಾರಕ್ಕೆ ಬಂದು ಬಿಡುತ್ತೇನೆ. ಇರುಳ ಅಂಗಳದಲ್ಲಿ ನಕ್ಷತ್ರಗಳು ಮುಕ್ತವಾಗಿ ಮಿನುಗುತ್ತವೆ. ಹೈವೇಯಲ್ಲಿ ಯಾವ ಹಂಗೂ ಇಲ್ಲದೇ ವಾಹನಗಳು ಬ್ರೇಕನ್ನೇ ತೋರದಂತೆ ತಮ್ಮ ಗುರಿಯತ್ತ ನುಗ್ಗಿ ಸಾಗುತ್ತವೆ. ರೆಕ್ಕೆ ಬೀಸುವ ಹಕ್ಕಿ ಯಾವ ಗಡಿಯ ತಂಟೆಯಿಲ್ಲದೇ ಸ್ವತ್ಛಂದ ಹಾರಾಟದಲ್ಲಿ ತಲ್ಲೀನಗೊಳ್ಳುತ್ತದೆ. ಬಿಸಿಲ ಝಳಕೆ ಬಸಿರುಗಟ್ಟಿ, ಮಾಕಾರದ ಹನಿಯಾಗಿ ಇಳೆಗೆ ಜೀವಜಲ ಸುರಿಯುವ  ಮೋಡಕ್ಕೆ ಎಷ್ಟೊಂದು ಸ್ವಾತಂತ್ರ್ಯವಿದೆ. ಆದರೆ, ನಂಗೆ ಇದ್ಯಾತರ ಗೊಡವೆಯ ಗೋಡೆ ಅಡ್ಡವೆದ್ದಿದೆ ಗೆಳತಿ? ನನ್ನೊಳಗನ್ನು ನಿನ್ನ ಸನಿಹ ತಲುಪಿಸಲಾಗದ ವೇದನೆ ಅನುಕ್ಷಣವೂ ಕಾಡಿದೆ.

ನನ್ನನ್ನು ಹಗಲುಗಳು ಸುಟ್ಟು ಆವಿಯಾಗಿಸುತ್ತವೆ. ಇರುಳುಗಳು ಶೀತಲಗೊಳಿಸಿ ಹೆಪ್ಪುಗಟ್ಟಿಸುತ್ತವೆ. ನಿನ್ನ ನೋಟ, ನಗು, ಮೌನ, ಮಾತು ಎಲ್ಲವೂ ನನ್ನೊಳಗಿನ ನೆನಪಿನ ಗಡಿಯಾರ ಕಣೇ. ನಿನ್ನನ್ನ ಪ್ರೀತಿಸುತ್ತೇನೆ ಅಂತ ನಿನ್ನೆದುರು ನಿಂತು ಹೇಳ್ಳೋಕೆ ನಂಗೇನು ರೋಗ ಅಂತ ತಿಳಿಯುತ್ತಲೇ ಇಲ್ಲ? ಪ್ರತೀ ಕ್ಷಣವೂ ಹೀಗೆ ನೋಯುತ್ತಲೇ ಉಳಿವ ಜೀವಕ್ಕೆ, ಒಮ್ಮೊಮ್ಮೆ ಎಂಥಾ ಜೀವಸೆಲೆಯುಕ್ಕುವ ಕನಸುಗಳು, ಅಪರಾತ್ರಿಯ ಕಾವಳದಲ್ಲಿ ಬಂದು ಕಾಡುತ್ತವೆ ಗೊತ್ತಾ? ಅಂಥಾ ಕನಸುಗಳಿಗಾದರೂ, ಈ ಜನ್ಮ ಮಿಸಲಿಡಬೇಕು ಅಂತನಿಸಿ ಬಿಡುತ್ತದೆ.

   ನನ್ನಂತರಾಳದÇÉೆದ್ದ ಈ ಬಿರುಗಾಳಿಯ ಸುದ್ದಿಯನ್ನು ನಿಂಗೆ ತಲುಪಿಸುವ ಬಗೆಯಂತೂ ತಿಳಿಯುತ್ತಲೇ ಇಲ್ಲ, ಒಮ್ಮೊಮ್ಮೆ ನಿನ್ನ ಕಣ್ಣಲ್ಲಿ ಒಲವಿನ ಬಣ್ಣ ಕಂಡಿದ್ದೇನೆ. ಆಗೆÇÉಾ ನಾನು ನನ್ನ ಅರಿವಿಗೇ ಬಾರದೇ, ಮೌನದ ಕದವಿಕ್ಕಿಕೊಂಡು, ನೀ ಬಾಗಿಲ ಬಡಿಯಲೆಂದು ಮುಗಿಯದ ನಿರೀಕ್ಷೆಯ ಪ್ರತೀಕ್ಷೆಯೊಂದನ್ನು ತೊಟ್ಟವನಂತೆ ಕಾಯುತ್ತಾ ಕುಳಿತುಬಿಟ್ಟಿದ್ದೇನೆ. ಸಾವಿರ ಜನ್ಮಗಳಾದರೂ ಕಾಯುವ ಸಂಯಮಿಯಂತೆ ನನ್ನೆದುರು ದಿಗಿಲುಭರಿತ ಬಿಡಿಸಲಾರದ ಬೇಲಿಯೊಂದನು ಕಟ್ಟಿ ಹೋದವಳು ನೀನು. ಇಬ್ಬರೂ ಹೀಗೆ ದ್ವೀಪಗಳಾಗಿ ಉಳಿದುಹೋದರೆ, ಮೌನ ಸುರಿಯುವ ಈ ನಿತ್ಯದ ಕತ್ತಲೆಗೆ ದೀಪ ಹಚ್ಚಿ, ಎದೆಯ ಮಾತಿಗೆ ಬೆಳಕಿನ ಬಣ್ಣ ಬಳಿದು, ಬದುಕಿನ ಹಾದಿಯನ್ನು ನಿಚ್ಚಳಗೊಳಿಸಿಕೊಳ್ಳುವ ಬಗೆಯಾದರೂ ಹೇಗೆಂದು ಹೇಳೆ ಹುಡುಗಿ?

    ನನ್ನೊಳಗಿನ ಸಾವಿರ ಭಾವಗಳಿಗೆ ನಿನ್ನ ತಲುಪುವ ಹಾದಿ ಕಾಣುತ್ತಿಲ್ಲ. ನೂರಾರು ಹಾದಿಗಳು ಕಾಣುತ್ತವೆ, ಆ ಹಾದಿಯಲ್ಲಿ ನೀ ಕಾಣುತ್ತಿಲ್ಲ. ಮನಸು ಬರೀ ತೊಳಲಾಟದ ತೊಗಲು ಗೊಂಬೆಯಂತಾಗಿಹೋಗಿದೆ. ಸೂತ್ರ ಹಿಡಿದವನ್ಯಾರೋ ಒಬ್ಬ ನನ್ನೊಳಗೇ ಅವಿತು ಕುಳಿತು. ನಿನ್ನ ಒಲವಿನತ್ತ ನನ್ನ ಚಿತ್ತ ಗಟ್ಟಿಸಿ, ನಿನ್ನತ್ತ ಹೊರಟಾಗೆÇÉಾ ದಾರಿ ತಪ್ಪಿಸಿ, ನನ್ನನ್ನು ಒಬ್ಬಂಟಿಯಾಗಿಸಿ ಇನ್ನೂ ನಗುತ್ತಲೇ ಇ¨ªಾನೆ. ನಿನ್ನನ್ನು ತಲುಪುವ ದಾರಿ ನಿನ್ನ ಜೇನು ಬಣ್ಣದ ಕಣ್ಣಿನಾಳದÇÉೇ ಇದೆಯೇನೋ ಗೆಳತಿ. ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸು. ನಿನ್ನ ಹೃದಯಕ್ಕಿಳಿದು ಅÇÉೆÇÉಾದರೂ ನಾ ಇದ್ದೇನಾ ಹುಡುಕಿಕೊಳ್ಳುತ್ತೇನೆ.
   
ಒದ್ದಾಟದ ಒಬ್ಬಂಟಿ
-ಜೀವ ಮುಳ್ಳೂರು

ಟಾಪ್ ನ್ಯೂಸ್

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.