ಬಡವರಿಗೆ ಶೀಘ್ರ ಮನೆ ನೀಡಲು ಒತ್ತಾಯ
Team Udayavani, Feb 27, 2018, 5:08 PM IST
ಸುರಪುರ: ಸರಕಾರ ಜಾರಿಗೆ ತಂದಿರುವ ಅನ್ ಲಿಮಿಟೇಷನ್ ಯೋಜನೆ ಬರುವ ಮಾರ್ಚ್ 8ಕ್ಕೆ ಮುಗಿಯಲಿದೆ. ಅದರೊಳಗೆ ತಾಲೂಕಿನ ಎಲ್ಲ ಮನೆ ರಹಿತರಿಗೆ ಮನೆ ಮಂಜೂರು ಮಾಡಲೆಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಕಾರ ಒತ್ತಾಯಿಸಿದರು. ಪ್ರಾಂತ ರೈತ ಸಂಘದಿಂದ ಸುರಪುರ ತಾಲೂಕು ಪಂಚಾಯತ್ ಕಚೇರಿ ಎದುರು ಮನೆ ರಹಿತರೊಂದಿಗೆ ಹಮ್ಮಿಕೊಂಡ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲೂಕಿನ 9 ಗ್ರಾಪಂಗಳಿಗೆ ಎಸ್ಸಿ ಮತ್ತು ಎಸ್ಟಿ ಜನಾಂಗದ ಮನೆ ಇಲ್ಲದವರಿಗೆ ಮನೆ ನೀಡುವ ಯೋಜನೆಯಾದ ಅನ್ ಲಿಮಿಟೇಷನ್ ಯೋಜನೆ ಅಡಿಯಲ್ಲಿ ಮನೆ ನೀಡಲು ಹಲವು ತಿಂಗಳ ಹಿಂದೆ ಮನವಿ ಸಲ್ಲಿಸಲಾಗಿತ್ತು ಮತ್ತು ಖಾಲಿ ಜಾಗದ ನಂಬರ, ಆಧಾರ ಕಾರ್ಡ್,ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಎಲ್ಲ ದಾಖಲೆಗಳನ್ನು ನೀಡಲಾಗಿದೆ. ಆದರೆ ಯಾವ ಅಧಿಕಾರಿಗಳು ನಮ್ಮ ಬೇಡಿಕೆ ಈಡೇರಿಕೆಗೆ ಗಮನಿಸುತ್ತಿಲ್ಲ. ಗ್ರಾಪಂ ಪಿಡಿಒ ಮತ್ತು ತಾಲೂಕು ಪಂಚಾಯತ್ ಇಒ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸುವುದಾಗಿ ತಿಳಿಸಿದರು.
ಸತ್ಯಾಗ್ರದಲ್ಲಿ ಸಂಘದ ತಾಲೂಕಾಧ್ಯಕ್ಷ ಧರ್ಮಣ್ಣ ದೊರಿ, ಬಸವರಾಜ ಐಕೂರು, ರಾಮನಗೌಡ ಗೂಗಲ್, ಸಂಗಮೇಶ ರುಕ್ಮಾಪುರ, ನಿಂಗಣ್ಣ ಬೈಲಾಪುರ, ಶಬ್ಬಿರಖಾನ ಅಡ್ಡೊಡಗಿ, ಮಲ್ಲನಗೌಡ ಗೌಡಗೇರಾ, ಮುದಕಪ್ಪ ಕುಪಗಲ್, ಚಂದ್ರಾಮಗೌಡ, ಭೀಮಬಾಯಿ ಗೌಡಗೇರಾ, ನಾಗಮ್ಮ, ದೇವಮ್ಮ ಬೈಲಾಪುರ, ಸೊಮವ್ವ ಬಿರಾದಾರ, ಬಸವರಾಜ ಹೊಸಮನಿ, ಸಿದ್ದಲಿಂಗಯ್ಯ ವಗ್ಗಾ, ಹಣಮಂತ್ರಾಯ ಗುಜ್ಜಲ, ಶಿವರಾಯ ದೊರಿ, ಮಹಿಬೂಬ ಸುರಪುರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.